top of page

ಕಲ್ಯಾಣ ಚಾಳುಕ್ಯರ ಕಲೆ ಮತ್ತು ವಾಸ್ತುಶಿಲ್ಪ: ಜಮಖಂಡಿ ನಗರದ ದೇವಾಲಯಗಳ ಕುರಿತು ಒಂದು ಅಧ್ಯಯನ

ಮಂಜುನಾಥ ಪಾಟೀಲ್ ಉಪನ್ಯಾಸಕರು, ಬಿ.ಹೆಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನಕಾಲೇಜು, ಬಿ.ಎಲ್.ಡಿ.ಇ. ಸಂಸ್ಥೆ, ಜಮಖಂಡಿ, ಬಾಗಲಕೋಟೆ, ಕರ್ನಾಟಕ. ಇಮೇಲ್: patilmanju8@gmail.com ಸಾರಾಂಶ ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರವಾದ ಜಮಖಂಡಿ ನಗರವು ತನ್ನದೇಯಾದ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಈ ಪ್ರದೇಶದ ವಾಯುಗುಣ, ಸುತ್ತಲಿನ ಬೆಟ್ಟಗುಡ್ಡಗಳು ಜನವಸತಿಗೆ ಪ್ರಶಸ್ತವಾಗಿದ್ದು ಪ್ರಾಗಿತಿಹಾಸ ಕಾಲಘಟ್ಟದಿಂದಲೇ ಇಲ್ಲಿ ಜನವಸತಿ ಇದ್ದದ್ದು ತಿಳಿದುಬರುತ್ತದೆ. ಅಂತಹ ಅನೇಕ ಪ್ರಾಗಿತಿಹಾಸ ನೆಲೆಗಳನ್ನು ಜಮಖಂಡಿ ತಾಲೂಕು ಪರಿಸರದಲ್ಲಿ ಶೋಧಿಸಲಾಗಿದೆ. ಇತಿಹಾಸ ಕಾಲಘಟ್ಟಕ್ಕೆ ಸಂಬAಧಿಸಿದAತೆ ಈ ಪ್ರದೇಶದಲ್ಲಿ ಆಳ್ವಿಕೆ ಮಾಡಿದ ಅರಸು

ಮನೆತನಗಳು ತಮ್ಮ ಆಡಳಿತದ ಅನುಕೂಲಕ್ಕಾಗಿ ರಕ್ಷಣೆ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಇಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಪ್ರಮುಖವಾಗಿ ಕರ್ನಾಟಕದಲ್ಲಿ ರಾಜ್ಯಭಾರ ಮಾಡಿದ ಕಲ್ಯಾಣ ಚಾಳುಕ್ಯ ಮತ್ತು ಕಲಚುರಿಗಳ ಪ್ರಭಾವ ಈ ಪ್ರದೇಶದಲ್ಲಿ ಹೆಚ್ಚಾಗಿರುವುದನ್ನು ಇಲ್ಲಿಯ ಶಾಸನಗಳು ಮತ್ತು ಇಲ್ಲಿ ನಿರ್ಮಾಣವಾದ ಶೈವ ದೇವಾಲಯಗಳು ಸ್ಪಷ್ಟಪಡಿಸುತ್ತವೆ. ಈ ಪ್ರಾಚೀನತಮ ದೇವಾಲಯಗಳ ಹೆಸರುಗಳನ್ನು ಗುರುತಿಸುವ ಪ್ರಯತ್ನದ ಜೊತೆಗೆ ಅವುಗಳ ಕಲೆ ಮತ್ತು ವಾಸ್ತುಲಕ್ಷಣಗಳನ್ನು ಹಾಗೂ ಕಾಲಕಾಲಕ್ಕೆ ನಡೆದ ಜೀರ್ಣೋದ್ಧಾರಗಳನ್ನು ಕುರಿತಾಗಿ ಸಮಕಾಲೀನ ಶಾಸನಗಳು ಮತ್ತು ಪುರಾತ್ವೀಯ ಅವಶೇಷಗಳನ್ನು ಇಟ್ಟುಕೊಂಡು ವಿವರಿಸುವ ಪ್ರಯತ್ನವನ್ನು ‘ಜಮಖಂಡಿ ನಗರದ ದೇವಾಲಯಗಳ ಕಲೆ ಮತ್ತು ವಾಸ್ತುಶಿಲ್ಪ’ ಎಂಬ ಲೇಖನದಲ್ಲಿ ಮಾಡಲಾಗಿದೆ. ಪ್ರಮುಖ ಪದಗಳು: ಶಾಸನಗಳ ಹಿನ್ನೆಲೆಯಲ್ಲಿ ಜಮಖಂಡಿ ನಗರದಲ್ಲ್ಲಿ ನಿರ್ಮಾಣವಾದ ಪ್ರಾಚೀನ ದೇವಾಲಯಗಳು ಹಾಗೂ ಅವುಗಳ ಕಲೆ ಮತ್ತು ವಾಸ್ತುಶಿಲ್ಪ ಲಕ್ಷಣಗಳನ್ನು ಕುರಿತು ಚರ್ಚಿಸಲಾಗಿದೆ. * * *

ವಿಸ್ತೃತ ವಿಷಯ ಪ್ರಾಚೀನ ಕಾಲದಿಂದಲೂ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಪ್ರದೇಶವು ಪ್ರಾಗಿತಿಹಾಸ ಕಾಲಘಟ್ಟದಿಂದ ಬೆಳೆದು ಬಂದಿರುವ ಸಂಸ್ಕೃತಿಯನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಈ ಸಂಸ್ಕೃತಿಯ ಅಂಗವಾಗಿಯೇ ಮಧ್ಯ ಹಳೆಶಿಲಾಯುಗ, ನವಶಿಲಾಯುಗ, ತಾಮ್ರಶಿಲಾಯುಗ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಯ ಜನವಸತಿಯ ನೆಲೆಗಳು ಇಲ್ಲಿ ಕಂಡುಬರುತ್ತವೆ. ಈ ಸಂಸ್ಕೃತಿಯ ಕಾಲಘಟ್ಟಕ್ಕೆ ಸಂಬ Aಧಿಸಿದ ಸುಮಾರು ೩೨ ನೆಲೆಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಇಂತಹ ಜನವಸತಿ ನೆಲೆಗಳು ಬೆಳೆದು ಬರಲು ಇಲ್ಲಿಯ ಭೌಗೋಳಿಕ ಪರಿಸರವು ಕಾರಣವಾಗಿದೆ. ಕ್ರಿ. ಪೂ. ಮೂರನೆಯ ಶತಮಾನದಿಂದಲೂ ಕರ್ನಾಟಕವು ಒಂದು ಪ್ರಭುತ್ವ ವ್ಯವಸ್ಥೆಗೆ ಒಳಪಟ್ಟಿತ್ತು. ಆ ಕುರಿತಾಗಿ ಅನೇಕ ಕುರುಹುಗಳು ಲಭ್ಯವಾಗಿವೆ. ಇದಕ್ಕೆ ಪ್ರಸ್ತುತ ಅಧ್ಯಯನ ಕ್ಷೇತ್ರವು ಹೊರತಾಗಿಲ್ಲ. ಕರ್ನಾಟಕದ ಉತ್ತರ ಭಾಗವು ಮೊದಲು ಮರ‍್ಯ ಸಾಮ್ರಾಜ್ಯ ಅನಂತರದ ಖನ್ನಿನ ಶಾತಾವಾಹನರ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಈ ಕುರಿತಾಗಿ ನೇರವಾದ ಕುರುಹುಗಳು ಜಮಖಂಡಿ ತಾಲೂಕು ಪರಿಸರದಲ್ಲಿ ಲಭ್ಯವಾಗಿಲ್ಲ. ಇವರ ಆಡಳಿತಾವಧಿಯಲ್ಲಿ ಒಂದುರಾಜಕೀಯ ಹಾಗೂ ವ್ಯಾಪಕ ಪ್ರಾಂತಿಯ ಆಡಳಿತದ ಭೂಮಿಕೆ ಸಿದ್ಧವಾಯಿತು. ಭಾಷೆ ಸಾಹಿತ್ಯಗಳು ಬೆಳೆಯಲು ಅನುಕೂಲಕರವಾಯಿತು. ಹೀಗೆ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಬಲವಾಗಿ ಬೆಳೆಯುತ್ತಾ ಬಂದುಕ್ರಮೇಣ ಈ ಪ್ರದೇಶದಲ್ಲಿಯೇ ಕದಂಬ, ಬಾದಾಮಿ ಚಾಳುಕ್ಯ ಸಾಮ್ರಾಜ್ಯಗಳು ಉದಯಿಸಿದವು. ಕದಂಬರಕಾಲಘಟ್ಟದಲ್ಲಿ ನರ್ಮದಾ ನದಿಯಿಂದಕಾವೇರಿಯವರೆಗೆ ಈ ಪ್ರದೇಶವು ವಿಸ್ತಾರವಾಗಿತ್ತು. ಬಾದಾಮಿ ಚಾಳುಕ್ಯರ ಅವಧಿಯಲ್ಲಿಅಧ್ಯಯನಕ್ಷೇತ್ರಕ್ಕೆ ಹೊಂದಿಕೊAಡತ್ತಿರುವ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟಗಳು ಪ್ರಮುಖರಾಜಕೀಯ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿ ಬೆಳವಣಿಗೆಯನ್ನು ಹೊಂದಿದ್ದವು. ಹಾಗಾಗಿ ಬಾದಾಮಿ ಚಾಳುಕ್ಯರ ಆಡಳಿತಾವಧಿಯಿಂದ ಈ ಪ್ರದೇಶದಇತಿಹಾಸವು ಸ್ಪಷ್ಟಗೊಳ್ಳುತ್ತದೆ. ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ರಾಷ್ಟçಕೂಟ, ಕಲ್ಯಾಣ ಚಾಳುಕ್ಯ, ಕಲಚುರಿ ಮತ್ತು ಸೇವುಣರ ಆಡಳಿತಕ್ಕೆ ಈ ಪ್ರದೇಶವು ಒಳಪಟ್ಟಿತ್ತು. ಈ ಅವಧಿಯು “ಕರ್ನಾಟಕ ಬಲವು” ಉತ್ಸಾಹಯುತ ಪ್ರಶಂಸೆಗಳಿಸುವAತಹ ಶಕ್ತಿ ಪ್ರದರ್ಶನದ ಮತ್ತು ಯಶಸ್ಸಿನ ಸಂದರ್ಭಗಳಿAದ ತುಂಬಿದೆ. ಸಾಮ್ರಾಜ್ಯ ವಿಸ್ತಾರ, ವಾಣಿಜ್ಯ ಮತ್ತು ಕೃಷಿ ಸಂಪನ್ಮೂಲಗಳನ್ನು ತಮ್ಮ ಕೈವಶ ಪಡಿಸಿಕೊಳ್ಳಬೇಕೆನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಅನೇಕ ರಾಜ ಮನೆತನಗಳ ಮಧ್ಯ ಸಂಘರ್ಷಗಳು ನಡೆದಿವೆ. ಇದೇ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದರಲ್ಲದೆ ಬಹು ದೂರಸ್ಪರ್ಶಿಯಾದ ಪರಿಣಾಮಗಳುಳ್ಳ ಸಾಮಾಜಿಕ ವ್ಯವಸ್ಥೆ ನಿರ್ಮಾಣವಾಗುವಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗಿರುವುದನ್ನು ಕಾಣುತ್ತೇವೆ. ಪ್ರಸ್ತುತ ಭೌಗೋಳಿಕವಾಗಿ ಜಮಖಂಡಿ ತಾಲೂಕು ಎಂದು ವ್ಯಾಪ್ತಿಯನ್ನು ಪಡೆದುಕೊಂಡಿದ್ದರು ಪ್ರಾಚೀನಕಾಲದಲ್ಲಿ ಕುವುಂಡಿ-೩೦೦೦, ತರ್ದವಾಡಿ-೧೦೦೦, ಬೆಳಗಲಿ-೫೦೦, ಜಂಬುಖಂಡಿ-೭೦, ತೇರದಾಳ-೧೨, ತುಂಗಳ-೧೨, ತೊರಗಲೆ-೬೦೦೦ಗಳಂತಹ ಪ್ರಾಚೀನ ಆಡಳಿತ ವಿಭಾಗಗಳಲ್ಲಿ ಹಂಚಿಹೋಗಿತ್ತು ಎಂಬುದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಇಲ್ಲಿಯ ಶಾಸನಗಳು ರಾಜ ಅಥವಾ ಯುವರಾಜರ ನೇರ ಆಡಳಿತವನ್ನು ಉಲ್ಲೇಖಿಸುವುದಿಲ್ಲ ಆದರೆ ಸಾಮಂತರು, ಮಹಾಮಂಡಳೇಶ್ವರರು ಅರಸರಿಗೆ ನಿಷ್ಠರಾಗಿ ಆಡಳಿತ ನಡೆಸುತ್ತಿದ್ದುದು ಶಾಸನಗಳಿಂದ ವ್ಯಕ್ತವಾಗುತ್ತದೆ. ಅಲ್ಲದೇ ಇದು ದಕ್ಷಿಣದಲ್ಲಿ ಏಕರೂಪದ ಆಡಳಿತವನ್ನು ಸೂಚಿಸುತ್ತವೆ. ಉತ್ತರ ಭಾರತಕ್ಕೆಟರ್ಕರ ಆಗಮನವು ಇಲ್ಲಿ ಹಲವು ಶತಮಾನಗಳಿಂದ ಇದ್ದರಾಜಕೀಯ ವ್ಯವಸ್ಥೆಯ ಲಕ್ಷಣವನ್ನೇ ಬದಲಾಯಿಸಿತು. ಅವರ ಪ್ರಭಾವವುದಕ್ಷಿಣದ ಮೇಲೂ ಆಯಿತು. ಅಲ್ಲಾವುದ್ಧೀನ್ ಖಿಲ್ಜಿಯ ಕಾಲದಿಂದ ದಕ್ಷಿಣದ ಮೇಲೆ ನಡೆದ ನಿರಂತರ ದಾಳಿಯ ಪರಿಣಾಮವಾಗಿ ದಕ್ಷಿಣದಲ್ಲಿ ಎರಡು ಬಲಿಷ್ಠ ರಾಜ್ಯಗಳು ದಕ್ಷಿಣದಲ್ಲಿ ಉದಯಿಸಿದವು. ಅವುಗಳೇ ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ರಾಜ್ಯ, ಮುಂದೆ ಬಹಮನಿಗಳ ವಂಶಜರೆAದು ಹೇಳಬಹುದಾದ ವಿಜಯಪುರದ ಆದಿಲ್‌ಶಾಹಿಗಳು ಈ ಪ್ರದೇಶದಲ್ಲಿ ಆಳ್ವಿಕೆಯನ್ನು ನಡೆಸಿದ್ದಾರೆ. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಈ ಕಾಲದರಾಜ್ಯನೀತಿಯು ಹೊಸ ತಿರುವನ್ನು ಪಡೆಯಿತು. ಬೇರೆಯೇಧರ್ಮಕ್ಕೆ ಸೇರಿದ, ಬೇರೆಯೇಆದ ಸಾಂಸ್ಕೃತಿಕ ವರ್ಗವಾದರಾಜಕೀಯ ವೈರಿಗಳು ದಖ್ಖನ್ನಿನ ವ್ಯವಹಾರಗಳಲ್ಲಿ ಸಕ್ರಿಯವಾದ ಆಸಕ್ತಿ ವಹಿಸಿದರು. ಕೃಷ್ಣಾ ಮತ್ತುತುಂಗಭದ್ರಾ ನದಿಗಳ ದೂಅಬ್ ಪ್ರದೇಶದ ಮೇಲೆ ರಾಜಕೀಯ ಪ್ರಭುತ್ವವನ್ನು ಸ್ಥಾಪಿಸುವ ಸಲುವಾಗಿ ಅತ್ಯಂತಉಗ್ರವಾದ ಯುದ್ಧಗಳಲ್ಲಿ ನಿರತರಾದರು. ಅದುರಾಜಕೀಯ ಹೋರಾಟವಾಗಿದ್ದರೂ ಸಹ ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡಿತ್ತು. ಇವರನ್ನುರಾಜಕೀಯಕ್ಷೇತ್ರದಿಂದ ಬದಿಗೆ ಸರಿಸಿ ಮೊಗಲರು ಮತ್ತು ಮರಾಠರು ಈ ಪ್ರದೇಶದರಂಗದ ಮೇಲೆ ಕಾಣಿಸಿಕೊಂಡು ಇಲ್ಲಿನರಾಜಕೀಯ ವ್ಯವಸ್ಥೆಗೆ ಹೊಸ ಬಣ್ಣವನ್ನು ಕೂಡಿಸಿದರು. ಅದಕ್ಕೆಜಮಖಂಡಿತಾಲೂಕು ಪ್ರದೇಶವು ಹೊರತಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಕಾಣಿಸಿಕೊಂಡ ಜಮಖಂಡಿ ಸಂಸ್ಥಾನಿಕರು ಭಾರತಕ್ಕೆ ಸ್ವಾತಂತ್ರö್ಯ ಸಿಗುವವರೆಗೂ ತಮ್ಮ ಅಸ್ತಿತ್ವವನ್ನು ಶತಮಾನಗಳ ಕಾಲ ಜಮಖಂಡಿ ಪರಿಸರದ ಮೇಲೆ ಉಳಿಸಿಕೊಂಡು ಬಂದರು. ಈ ಕುರಿತಾಗಿ ಸಾಹಿತ್ತಿಕ ಆಕರಗಳು, ಶಾಸನಗಳು, ನಾಣ್ಯಗಳು, ದೇವಾಲಯ, ಕೋಟೆ-ಕೋತ್ತಲುಗಳು ಮತ್ತು ಪುರಾತತ್ವೀಯ ಅವಶೇಷಗಳು ಮಾಹಿತಿಯನ್ನುಒದಗಿಸುತ್ತವೆ. ಇಂತಹ ಲಿಖಿತ ಮತ್ತು ಪುರಾತತ್ವ ಆಕರಗಳು ಅಷ್ಟೇ ಅಲ್ಲದೆ ಈ ಪ್ರದೇಶದಇತಿಹಾಸವನ್ನು ಭಿನ್ನವಾದದೃಷ್ಠಿಕೋನದಡಿಯಲ್ಲಿಅಧ್ಯಯನ ಮಾಡಲು ಮೌಖಿಕಕಥನರೂಪದ ಆಧಾರಗಳು ಜೀವಂತ ಸಾಕ್ಷಿಗಳಾಗಿವೆ.ಬಾದಾಮಿ ಚಾಳುಕ್ಯರು ಬಾಗಲಕೋಟೆಜಿಲ್ಲೆಯ ಬದಾಮಿಯನ್ನುರಾಜಧಾನಿಯನ್ನಾಗಿ ಮಾಡಿಕೊಂಡು ಈ ಪ್ರದೇಶದಲ್ಲಿ ಅನೇಕ ದೇವಾಲಯ, ಕೋಟೆಗಳನ್ನು ನಿರ್ಮಿಸಿದ್ದಾರೆ. ಆದರೆಜಿಲ್ಲೆಯ ಪ್ರಮುಖತಾಲೂಕುಕೇಂದ್ರವಾದಜಮಖAಡಿ ಪರಿಸರದಲ್ಲಿಕಲ್ಯಾಣ ಚಾಳುಕ್ಯ ಶೈಲಿಯಲ್ಲಿ ನಿರ್ಮಾಣವಾದ ದೇವಾಲಯಗಳೇ ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಇವರಕಾಲಾವಧಿಯಿಂದಲೇಇಲ್ಲಿ ದೇವಾಲಯಗಳು ಈ ಪ್ರದೇಶದಲ್ಲಿ ನಿರ್ಮಾಣವಾದವೇಅಥವಾ ಈ ಮೂದಲುಇದ್ದ ದೇವಾಲಯಗಳನ್ನು ಜೀರ್ಣೋದ್ಧಾರ ಗೊಳಿಸಿದರೆ, ಸಂಪೂರ್ಣವಾಗಿ ಪುನರ್ ನಿರ್ಮಾಣ ಮಾಡಿದರೆಅಥವಾ ಕಾಲನ ತುಳಿತಕ್ಕೆ ಸಿಕ್ಕು ನಾಶಹೊಂದಿದವೇಎAಬುದು ತಿಳಿದುಬರುವುದಿಲ್ಲ. ಇದಕ್ಕೆ ಶಾಸನಗಳು ಮೌನವಹಿಸುತ್ತವೆ. ಈ ಪ್ರದೇಶದಲ್ಲಿಜೈನ, ವೈಷ್ಣವ ದೇವಾಲಯಗಳು ವಿರಳವಾಗಿದ್ದು, ಶೈವ ದೇವಾಲಯಗಳು ಹೇರಳವಾಗಿವೆ. ಕಾಲಕ್ರಮೇಣಜೀರ್ಣೋದ್ಧಾರವಿಲ್ಲದೆ ಅನೇಕ ದೇವಾಲಯಗಳು ಅವಸಾನದಅಂಚಿನಲ್ಲಿವೆ. ಅವುಗಳಲ್ಲಿ ಏಕಕೂಟ ಮತ್ತುತ್ರಿಕೂಟ ದೇವಾಲಯಗಳು ಈ ಪ್ರದೇಶದಲ್ಲಿಕಂಡುಬರುತ್ತವೆ. ಪ್ರಸ್ತುತ ಲೇಖನದಲ್ಲಿಜಮಖಂಡಿ ನಗರದಲ್ಲಿರುವರಾಮೇಶ್ವರ, ನಂದಿಕೇಶ್ವರ, ಪ್ರಭುಲಿಂಗೇಶ್ವರ, ಕಲ್ಮೇಶ್ವರ, ಮತ್ತುಜಂಭುಲಿAಗೇಶ್ವರ ದೇವಾಲಯಗಳನ್ನು ಅಧ್ಯಯನಕ್ಕೊಳಪಡಿಸಿ ಅವುಗಳ ನಿರ್ಮಾಣದ ಕಾಲ ಹಾಗೂ ಕಲೆ ಮತ್ತು ವಾಸ್ತುಶಿಲ್ಪವನ್ನು ಕುರಿತಾಗಿಚರ್ಚಿಸಲಾಗಿದೆ. ಗ್ರಾಮ: ಜಮಖಂಡಿ ಹೆಸರು: ರಾಮೇಶ್ವರದೇವಾಲಯ ಸ್ಥಳ: ಪಟವರ್ಧನಅರಮನೆ ಹತ್ತಿರ ಅಭಿಮುಖ: ಪೂರ್ವಾಭಿಮುಖ ಸ್ಥಿತಿ: ಉತ್ತಮ ಕಾಲ: ಕಲ್ಯಾಣ ಚಾಳುಕ್ಯ ಜಮಖಂಡಿ ನಗರದ ಪಶ್ಚಿಮಕ್ಕೆ ಎತ್ತರವಾದ ಬೆಟ್ಟದ ಮೇಲೆ ಪಟವರ್ಧನ ಮನೆತನಕ್ಕೆ ಸಂಬAಧಿಸಿದAತೆ ಹಲವಾರು ಅವಶೇಷಗಳು ಕಂಡುಬರುತ್ತವೆ. ಅಲ್ಲಿಅರಮನೆ, ಅಧಿಕಾರಿ ವರ್ಗದವರ ಮನೆಗಳು, ಕೋಟೆ, ಇವರಕಾಲಘಟ್ಟದಲ್ಲಿ ನಿರ್ಮಿಸಿದ ದೇವಾಲಯಗಳು ಹಾಗೂ ಇತರೇ ಅವಶೇಷಗಳನ್ನು ಕಾಣಬಹುದು. ಈ ಅರಮನೆಯ ಹತ್ತಿರವೇ ಪ್ರಾಚೀನಕಾಲಘಟ್ಟಕ್ಕೆ ಸಂಬAಧಿಸಿದAತೆ ರಾಮೇಶ್ವರದೇವಾಲಯವುಕಂಡುಬರುತ್ತದೆ. ದೇವಾಲಯದ ತಳವಿನ್ಯಾಸವನ್ನು ಗಮನಿಸಿದಾಗ ಇದುಏಕಕೂಟ ಮಾದರಿಯದೇವಾಲಯವಾಗಿದ್ದು, ಗರ್ಭಗೃಹ, ಅಂತರಾಳ, ತೆರೆದ ನವರಂಗ ಭಾಗಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವಗರ್ಭಗೃಹದದ್ವಾರವುಚತು ಶಾಖೆಗಳನ್ನು ಹೊಂದಿದ್ದು ಅವು ವಜ್ರ, ವಲ್ಲಿ, ಸ್ತಂಭ ಮತ್ತು ಸಿಂಹ ಶಾಖೆಗಳಾಗಿವೆ. ಪೇದ್ಯಾ ಭಾಗವು ನೀರಾಲಂಕೃತವಾಗಿದೆ. ಲಲಾಟದಲ್ಲಿಗಜಲಕ್ಷಿö್ಮÃ ಶಿಲ್ಪವಿದೆ. ಸ್ತಂಭಶಾಖೆಯು ಪ್ರಧಾನವಾಗಿದ್ದು ಪೀಠ, ವೃತ್ತಾಕಾರದದಂಡ, ತಡಿ, ಮಂಡಿ, ಫಲಕ ಮತ್ತು ಭೊದಿಗೆಗಳನ್ನು ಹೊಂದಿದೆ. ಹೊಸ್ತಿಲಿನ ಮಧ್ಯಭಾಗವು ಪೆಟ್ಟಿಗೆಯರೀತಿ ಮುಂಚಾಚಿದ್ದು ಪದ್ಮದಅಲಂಕರಣೆಯನ್ನು ಹೊಂದಿದೆ. ಪೇದ್ಯಾ ಭಾಗದಲ್ಲಿ ಶಾಖೆಗಳಿಗೆ ಅನುಗುಣವಾಗಿಯಾವುದೇ ಅಲಂಕರಣೆಗಳು ಇಲ್ಲದೆ ನಿರಲಂಕೃತವಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು ಪ್ರಾಚೀನಕಾಲಾವಧಿಯದ್ದಾಗಿದೆ. ಗರ್ಭಗೃಹದಎಡ ಮತ್ತು ಹಿಂಭಾಗದಅAತರ್ಭಿತ್ತಿಯ ಮಧ್ಯದಲ್ಲಿಒಂದು ಅಡಿ ಮುಂಚಾಚಿದAತೆಕಲ್ಲು ಫಳಿಯ ರಚನೆಯಿದೆ. ಗರ್ಭಗೃಹದ ಒಳಭಿತ್ತಿಯಲ್ಲಿ ಅನಲಂಕೃತವಾದ ಭದ್ರತಾ ಸ್ತಂಭಗಳು, ವಿತಾನ ಭಾಗವನ್ನುಕಲ್ಲಿನ ತೊಲೆಗಳ ಜೋಡಣೆಗಳಿಂದ ಮುಚ್ಚಲಾಗಿದೆ. ಮೂರು ಸ್ತರಗಳಲ್ಲಿ ಕಲ್ಲಿನ ತೊಲೆಗಳನ್ನು ಚೌಕದ ಮೂಲೆ ಭಾಗವನ್ನು ಮುಚ್ಚುವಂತೆಜೋಡಿಸಲಾಗಿದೆ. ಹಾಗಾಗಿ ವಿತಾನವು ಸ್ವಲ್ಪ ಒಳಮುಖವಾಗಿ ಏರಿದಂತೆಕAಡುಬರುತ್ತದೆ. ನಂತರ ಮಧ್ಯದಲ್ಲಿಒಂದು ಪದ್ಮದಅಲಂಕರಣೆಯಿರುವ ಶಿಲಾಫಲಕವನ್ನು ಮುಚ್ಚಲಾಗಿದ್ದು ನಾಭಿಚ್ಛಂದದರೀತಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹಕ್ಕೆ ಹೊಂದಿಕೊAಡAತೆಗರ್ಭಗೃಹಕ್ಕಿAತಲೂ ಸ್ವಲ್ಪಚಿಕ್ಕದಾದ ಅಂತರಾಳವಿದೆ. ಮೂಲಃತದಲ್ಲಿಇದುತೆರೆದ ಅಂತರಾಳವಾಗಿದ್ದು ನಂತರಅವಧಿಯಲ್ಲಿಅದಕ್ಕೆದ್ವಾರವನ್ನು ಸೇರಿಸಿ ಮುಚ್ಚಿದ ಅಂತರಾಳವಾಗಿ ಮಾರ್ಪಪಡಿಸಲಾಗಿದೆ. ಇದರ ವಿತಾನ ಭಾಗವು ಸಹ ನಾಭಿಚ್ಛಂದರೀತಿಯಲ್ಲಿದೆ. ಪ್ರಸ್ತುತಗರ್ಭಗೃಹ ಮತ್ತು ಅಂತರಾಳದ ಅಂತರ್ಭಿತ್ತಿಗಳಿಗೆ ಟೈಲ್ಸ್ ಹಾಕಲಾಗಿದೆ.ನವರಂಗಎAದುಕರೆಯಲ್ಪಡುವ ಭಾಗವು ಸುತ್ತಲೂಗೋಡೆಯಿಂದಆವೃತ್ತವಾಗಿರದೆತೆರೆದರೀತಿಯಲ್ಲಿದೆ. ಅರ್ಧಗೋಡೆಯ ಮೇಲೆ ಕಕ್ಷಾಸನರಚನೆಯನ್ನುಕಾಣಬಹುದು. ಅದರ ಹೊರಭಾಗದಲ್ಲಿ ಸೀಮೆಂಟನ್ನು ಲೇಪಿಸಿರುವುದರಿಂದ ಯಾವುದೇ ಅಲಂಕರಣೆಗಳು ಕಂಡುಬರುವುದಿಲ್ಲ. ನವರಂಗ ಭಾಗಕ್ಕೆ ಪ್ರವೇಶಿಸಲು ಮೂರು ದಿಕ್ಕುಗಳಿಗೂ ಸೋಪಾನಗಳಿದ್ದು ಅವು ನೆಲದಲ್ಲಿ ಹೂತು ಹೋಗಿವೆ. ಇವುಗಳಿಗೆ ಹೊಂದಿಕೊAಡು ಇಕ್ಕೆಲಗಳಲ್ಲಿ ಹಸ್ತಹಸ್ತಿಗಳು ಮಾತ್ರಕಂಡುಬರುತ್ತವೆ. ಮಧ್ಯಭಾಗದಲ್ಲಿಅರ್ಧ ಅಡಿ ಎತ್ತರವಾದರಂಗವೇದಿಕೆಯ ಮೇಲೆ ನಾಲ್ಕು ಸ್ತಂಭಗಳಿದ್ದು ಅವು ಪೀಠ, ದಂಡ, ತಡಿ, ಫಲಕ, ಭೋದಿಗೆಗಳನ್ನು ಹೊಂದಿವೆ. ದಂಡ ಭಾಗದಲ್ಲಿಎರಡು ಚೌಕಪಟ್ಟಿಕೆಗಳ ಮಧ್ಯ ವೃತ್ತಾಕಾರವಾಗಿ ೧೮ ಪಟ್ಟಿಕೆಗಳು ಮತ್ತು ಮತ್ತೆಅದರ ಮಧ್ಯ ಪದ್ಮದಅಲಂಕರಣೆಯ ೮ ಪಟ್ಟಿಕೆಗಳು ಇವೆ. ಉಳಿದಂತೆ ಯಾವುದೇ ಅಲಂಕರಣೆಗಳು ಕಂಡುಬರುವುದಿಲ್ಲ. ವಿತಾನದಲ್ಲಿ ನಾಭಿಚ್ಛಂದದಅಲAಕರಣೆಯಿದೆ. ನವರಂಗದ ಮಧ್ಯ ನಂತರಕಾಲಾವಧಿಯ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ನವರಂಗದಲ್ಲಿಕಾರ್ತಿಕೇಯ, ಲಕ್ಷಿö್ಮÃನಾರಾಯಣ, ನಾಗ ಶಿಲ್ಪಗಳಿವೆ. ತೆರೆದಕಕ್ಷಾಸನ ಭಾಗದಲ್ಲಿ ೧೬ ಕಿರು ಸ್ತಂಭಗಳಿದ್ದು ಅವು ಕಿರಿದಾದದಂಡ, ತಡಿ, ಫಲಕ, ಬೋದಿಗೆಗಳನ್ನು ಹೊಂದಿವೆ. ನವರಂಗದ ಹೊರಭಾಗದಲ್ಲಿ ಸುತ್ತಲು ಇಳಿಜಾರದ ಛಾದ್ಯ ಭಾಗಕಂಡುಬರುತ್ತದೆ. ದೇವಾಲಯದ ಹೊರ ಭಿತ್ತಿಯನ್ನು ನಂತರಅವಧಿಯಲ್ಲಿ ಜೀರ್ಣೋದ್ಧಾರಗೊಳಿಸಿದ್ದು ಪ್ರಾಚೀನಕಾಲದ ಶೈಲಿಯನ್ನುಅನುಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಂದರೆಅದರಲ್ಲಿ ಭದ್ರಭಾಗವು ಮುಂಚಾಚಿದ್ದು ಅವುಗಳಲ್ಲಿ ದೇವಕೋಷ್ಠಕದರೀತಿಯ ರಚನೆಗಳನ್ನು ಕಾಣಬಹುದು. ನೂತನವಾಗಿ ಶಿಖರವನ್ನು ರಚಿಸಲಾಗಿದೆ. ಇನ್ನುಳಿದಂತೆ ಯಾವುದೇಅಲಂಕರಣೆ ಭಾಗಗಳು ಕಂಡುಬರುವುದಿಲ್ಲ. ಈ ದೇವಾಲಯದ ಮುಂಭಾಗದಲ್ಲಿಯ ಪ್ರಾಚೀನ ಪುಷ್ಕರಣಿಯಿದ್ದುಅದು ಪಟವರ್ಧನಅರಸರಕಾಲಘಟ್ಟದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ.ಇದೇದೇವಾಲಯದ ಪ್ರಾಂಗಣದಲ್ಲಿದತ್ತಾತ್ರೇಯ, ಲಕ್ಷಿö್ಮÃ ದೇವಾಲಯಗಳಿವೆ. ಅಲ್ಲದೆ ಸುತ್ತಲೂದೇವಾಲಯಕ್ಕೆ ಪ್ರಾಕಾರವನ್ನು ನಿರ್ಮಿಸಿದ್ದು ಹಿಂಬದಿಯಲ್ಲಿ ಪ್ರಾಕಾರಗೋಡೆಗೆ ಹೊಂದಿಕೊAಡು ವಸತಿ ಕೋಣೆಗಳನ್ನು ನಿರ್ಮಿಸಿದ್ದಾರೆ. ಇವೆಲ್ಲವುಗಳು ಪಟವರ್ಧನ ಸಂಸ್ಥಾನಿಕರಕಾಲಘಟ್ಟದವು. ಈ ಮೇಲಿನ ಲಕ್ಷಣಗಳನ್ನು ಗಮನಿಸಿದಾಗ ರಾಮೇಶ್ವರದೇವಾಲಯವುಕಲ್ಯಾಣ ಚಾಳುಕ್ಯರ ಕಾಲಘಟ್ಟದಲ್ಲಿ ನಿರ್ಮಿಸಿದ್ದು ತಿಳಿದುಬರುತ್ತದೆ. ಆದರೆ ಈ ದೇವಾಲಯ ಕೆಲವು ಭಾಗಗಳನ್ನು ಪಟವರ್ಧನಅರಸರಕಾಲದಲ್ಲಿ ಜೀರ್ಣೊದ್ಧಾರಗೊಳಿಸಲಾಗಿದೆ. ಈ ದೇವಾಲಯದಆವರಣದಲ್ಲಿ ಹುಲಿಯನ್ನುಕೊಲ್ಲುತ್ತಿರುವ ಸಳನ ಶಿಲ್ಪವನ್ನು ಹೋಲುವ ಒಂದುತೃಟಿತ ಶಿಲ್ಪವಿದ್ದು ಇದರಆಧಾರದ ಮೇಲೆ ಇದು ಹೋಯ್ಸಳರ ದೇವಾಲಯವೆಂದು ಸ್ಥಳೀಯ ವಿದ್ವಾಂಸರುಅಭಿಪ್ರಾಯ ಪಡುತ್ತಾರೆ. ಆದರೆಇದು ಹೋಯ್ಸಳರ ಕಾಲಘಟ್ಟದದೇವಾಲಯವಾಗಿಲ್ಲದಿರುವುದುದೇವಾಲಯದ ಲಕ್ಷಣಗಳನ್ನು ಗಮನಿಸಿದಾಗ ಗುರುತಿಸಬಹುದು. ಜೊತೆಗೆ ಹೋಯ್ಸಳರು ತುಂಗಭದ್ರಾನದಿಯನ್ನುದಾಟಿ ಈಗಿನ ಧಾರವಾಡ ಹತ್ತಿರಇರುವ ಹೂಲಿಯವರೆಗೆಅವರು ಬಂದಿದ್ದು ಶಾಸನಗಳು ಹಾಗೂ ಇತರೆ ಪುರಾತತ್ವೀಯ ಆಕರಗಳಿಂದ ತಿಳಿದು ಬರುತ್ತದೆ. ಜೊತೆಗೆ ಹುಲಿಯನ್ನುಕೊಲ್ಲುತ್ತಿರುವ ಸಳನ ಶಿಲ್ಪ ಇದು ಹುಲಿಯ ಬದಲಿಗೆ ಸಿಂಹವನ್ನು ಹೋಲುತ್ತದೆ. ಶಿಲ್ಪವು ತೃಟಿತಗೊಂಡಿರುವುದರಿAದ ಸಷ್ಟತೆಇಲ್ಲಆದರೂ ಈ ರೀತಿಯ ಹಲವಾರು ಶಿಲ್ಪಗಳು ಕಲ್ಯಾಣ ಚಾಳುಕ್ಯರ ಕಾಲಘಟ್ಟದಲ್ಲಿಇದ್ದವುಎಂಬುದು ತಿಳಿದುಬರುತ್ತದೆ. ಅಲ್ಲದೆಇಲ್ಲಿರುವ ಶಿಲ್ಪವು ಹೊಯ್ಸಳರ ರಾಜ ಲಾಂಛನವೆAದು ಹೇಳಲು ಯಾವ ಆಧಾರಗಳೂ ಇಲ್ಲ. ಇಲ್ಲಿಕಂಡುಬರುವುದು ಸಿಂಹವನ್ನು ಕೊಲ್ಲುತ್ತಿರುವ ವ್ಯಕ್ತಿಯ ಶಿಲ್ಪ, ಈ ಪ್ರಾಣಿಯದೇಹವನ್ನು ಗಮನಿಸಿದಾಗ ಅದು ಸಿಂಹವೆAದು ಗೊತ್ತಾಗುತ್ತದೆ. ಹುಲಿಯಾಗಿದ್ದರೆ ಮೈಮೇಲೆ ಪಟ್ಟಿಗಳಿರುತ್ತಿದ್ದವು. ಹೊಯ್ಸಳ ಶಿಲ್ಪಿಗಳು ಸೀರೆಯ ನೆರಿಗೆಗಳನ್ನೂ, ಒಡವೆಗಳ ಸೂಕ್ಷö್ಮಕುಸುರಿಯನ್ನೂ ಸಹ ಕಂಡರಿಸಬಲ್ಲ ಅದ್ಭುತಚಾಕಚಕ್ಯತೆಯನ್ನು ಹೊಂದಿದ ಶಿಲ್ಪಿಗಳು. ಅವರು ಹುಲಿಯ ಮೈಮೇಲಿನ ಪಟ್ಟಿಗಳನ್ನೂ ಸಹಾ ಎದ್ದುಕಾಣುವಂತೆ ಬಿಡಿಸುತ್ತಿದ್ದರು. ಹೊಯ್ಸಳರ ರಾಜ ಲಾಂಛನವನ್ನುಕುರಿತಾಗಿ ಶಾಸನಗಳು ಸ್ಪಷ್ಟಪಡಿಸುವಂತೆ ‘ಹುಲಿ’ ಅಥವಾ ‘ಬೆತ್ತದ ಸೆಳೆ’ ಯೊಂದಿಗಿರುವ ‘ಹುಲಿ’ ಹೊಯ್ಸಳರ ರಾಜ ಲಾಂಛನಎAಬುದು ಹೊಯ್ಸಳರ ಹತ್ತಾರು ಶಾಸನಗಳಲ್ಲಿ ದಾಖಲಾಗಿರುವುದನ್ನು ಗಮನಿಸಬಹುದು (ಮಂಜುನಾಥ, ೨೦೦೬). ಈ ರೀತಿಯ ಶಿಲ್ಪಗಳು ವಾಸ್ತವವಾಗಿ ಮೊದಲಿಗೆಕಲ್ಯಾಣ ಚಾಳುಕ್ಯರ ದೇವಾಲಯಗಳಲ್ಲಿಯೇ ಕಂಡುಬರುತ್ತವೆ. ಗುಲಬರ್ಗಾಜಿಲ್ಲೆಯಏವೂರಿನಲ್ಲಿರುವಈಶ್ವರದೇವಾಲಯವುಕಲ್ಯಾಣ ಚಾಳುಕ್ಯರ ದೇವಾಲಯವಾಗಿದ್ದುಅಲ್ಲಿಇಂತಹ ಶಿಲ್ಪ ಇರುವುದನ್ನು ಗಮನಿಸಬಹುದು (ಮಂಜುನಾಥ, ೨೦೦೬). ಹಾಗಾಗಿ ಇಲ್ಲಿಕಂಡುಬರುವ ಶಿಲ್ಪವು ಪೂರ್ಣ ಪ್ರಮಾಣದಲ್ಲಿಇಲ್ಲದೇಇದ್ದರೂ ಸಹ ಇದೊಂದು ಸಿಂಹವನ್ನು ಕೊಲ್ಲುತ್ತಿರುವ ವ್ಯಕ್ತಿಯ ಶಿಲ್ಪವಾಗಿದೆ ಹಾಗಾಗಿ ಇದು ಹೊಯ್ಸಳರ ಕಾಲಘಟ್ಟದದೇವಾಲಯವಾಗಿರದೇ, ದೇವಾಲಯದ ಲಕ್ಷಣಗಳನ್ನು ಆಧರಿಸಿ ಇದೊಂದುಕಲ್ಯಾಣ ಚಾಳುಕ್ಯರ ದೇವಾಲಯವೆಂದು ಹೇಳಬಹುದು. ಗ್ರಾಮ: ಜಮಖಂಡಿ ಹೆಸರು: ಜಂಬುಕೇಶ್ವರದೇವಾಲಯ ಸ್ಥಳ: ನಗರದ ಮಧ್ಯ ಅಭಿಮುಖ: ಉತ್ತರಾಭಿಮುಖ ಸ್ಥಿತಿ: ಉತ್ತಮ ಕಾಲ: ಕಲ್ಯಾಣ ಚಾಳುಕ್ಯ ಜಮಖಂಡಿ ಪ್ರದೇಶದಲ್ಲಿ ವಿಶಾಲವಾದ ತಳ ವಿನ್ಯಾಸದ ಮೇಲೆ ನಿರ್ಮಾಣವಾಗಿರುವ ದೇವಾಲಯಗಳಲ್ಲಿ ಜಂಬುಕೇಶ್ವರದೇವಾಲಯವುಒAದು. ಉತ್ತರಾಭಿಮುಖವಾಗಿ ನಿರ್ಮಾಣವಾದ ಈ ತ್ರಿಕೂಟ ಮಾದರಿಯದೇವಾಲಯ ನಗರದ ಮಧ್ಯದಲ್ಲಿರುವಕೆರೆಯ ಹತ್ತಿರಕಂಡುಬರುತ್ತದೆ. ಮೂರುಗರ್ಭಗೃಹ, ಅದಕ್ಕೆ ಹೊಂದಿಕೊAಡAತೆತೆರೆದ ಅಂತರಾಳಗಳು, ನವರಂಗ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಉತ್ತರಾಭಿಮುಖವಾಗಿರುವ ಮುಖ್ಯಗರ್ಭಗೃಹದದ್ವಾರಬಂಧವುಅರ್ಧ ಅಡಿ ಎತ್ತರದ ಹೊಸ್ತಿಲ ಮೇಲೆ ತ್ರಿಶಾಖೆಯಿಂದಕೂಡಿದ್ದು, ವಜ್ರ, ವಲ್ಲಿ ಮತ್ತು ಸ್ತಂಭಶಾಖೆಗಳನ್ನು ಹೊಂದಿದೆ. ಸ್ತಂಭ ಶಾಖೆಯು ಹೆಚ್ಚು ಮುಂಚಾಚಿದ್ದು, ಕಪೋತದಂತೆ ಮುಂಚಾಚಿರುವ ಭಾಗಕ್ಕೆಆಶ್ರಯವನ್ನುಒದಗಿಸುವರೀತಿಯಲ್ಲಿದೆ. ಮೊದಲ ಶಾಖೆ ದ್ವಾರದ ಮೇಲಿನ ಭಾಗದಲ್ಲೂ ಮುಂದುವರೆದು ಲಲಾಟ ಫಲಕದಲ್ಲಿ ಸಂಧಿಸಿದೆ. ಲಲಾಟದಲ್ಲಿಗಜಲಕ್ಷಿö್ಮÃ ಶಿಲ್ಪವಿದೆ. ಶಾಖೆಗಳ ಪೇದ್ಯಾಭಾಗವುಅಲಂಕಾರರಹಿತವಾಗಿದೆ. ಗರ್ಭಗೃಹದ ಒಳ ಭಿತ್ತಿಯು ನಾಲ್ಕು ಮೂಲೆ ಕಂಬಗಳಿAದ ಕೂಡಿದೆ. ಮತ್ತು ಹಿಂಭಾಗದಲ್ಲಿಒAದು ಅಡಿ ಅಗಲದಕಲ್ಲು ಫಳಿ ಮುಂಚಾಚಿದೆ. ಛತ್ತಿನಲ್ಲಿ ನಾಭಿಚ್ಛಂದವಿದ್ದು ಮಧ್ಯಕಮಲದಅಲಂಕರಣೆಯಿದೆ. ಗರ್ಭಗೃಹದ ಮಧ್ಯದಲ್ಲಿಜಂಬುಕೇಶ್ವರಎAದುಕರೆಯಲ್ಪಡುವ ಪ್ರಾಚೀನ ಶಿಲಿಂಗವನ್ನು ಕಾಣಬಹುದು.


ಪಶ್ಚಿಮಾಭಿಮುಖವಾಗಿರುವ ಗರ್ಭಗೃಹದದ್ವಾರವು ಮೂರು ಶಾಖೆಗಳನ್ನು ಹೊಂದಿದ್ದುಅದರಲ್ಲಿ ಸ್ತಂಭಶಾಖೆ ಮಾತ್ರ ಸ್ಪಷ್ಟವಾಗಿದ್ದು ಉಳಿದೆರೆಡು ಶಾಖೆಗಳು ನೀರಲಂಕೃತವಾಗಿವೆ. ಲಲಾಟದಲ್ಲಿಗಜಲಕ್ಷಿö್ಮà ಶಿಲ್ಪವಿದೆ. ಪೂರ್ವಾಭಿಮುಖವಾಗಿರುವಗರ್ಭಗೃಹದದ್ವಾರವು ದ್ವಿಶಾಖೆಗಳನ್ನು ಹೊಂದಿದ್ದು, ಅವು ವಜ್ರ ಮತ್ತು ಸ್ತಂಭಶಾಖೆಗಳಾಗಿವೆ. ಈ ಸ್ತಂಭ ಶಾಖೆ ವೃತ್ತಾಕಾರವಾಗಿರದೆ ಭದ್ರತಾ ಸ್ತಂಭಗಳAತೆ ಚಪ್ಪಟೆಯಾಗಿದ್ದುಅಲಂಕೃತವಾಗಿದೆ. ಲಲಾಟದಲ್ಲಿಗಜಲಕ್ಷಿö್ಮÃಯ ಶಿಲ್ಪವಿದೆ. ಈ ಮೂರು ಗರ್ಭಗೃಹಗಳ ವಿತಾನಭಾಗಗಳು ನಾಭಿಚ್ಛಂದದರೀತಿಯಲ್ಲಿಕAಡುಬರುತ್ತವೆ. ಗರ್ಭಗೃಹದ ಮುಂದಿನ ಅರ್ಧಮಂಟಪಅಥವಾತೆರೆದ ಅಂತರಾಳಗಳು ಗರ್ಭಗೃಹಕ್ಕಿಂತಚಿಕ್ಕದಾಗಿವೆ. ಪಶ್ಚಿಮಾಭಿಮುಖವಾಗಿರುವ ಅಂತರಾಳಕ್ಕೆ ನಂತರಅವಧಿಯಲ್ಲಿದ್ವಾರವನ್ನುಕೂರಿಸಲಾಗಿದೆ. ಮೂರು ಅಂತರಾಳಗಳನ್ನು ಒಂದೆಡೆ ಸೇರಿಸುವ ನವರಂಗವು, ವಿಶಾಲವಾಗಿದ್ದು, ಮಧ್ಯದಲ್ಲಿಅರ್ಧ ಅಡಿ ಎತ್ತರವಾದರಂಗವೇದಿಕೆಇದೆ. ವೇದಿಕೆಯ ನಾಲ್ಕು ಮೂಲೆಗಳಲ್ಲಿ ಅಲಂಕೃತ ನಾಲ್ಕು ಸ್ತಂಭಗಳಿದ್ದು ಪೀಠ, ದಂಡ, ತಡಿ, ಫಲಕ, ಬೋದಿಗೆಗಳನ್ನು ಹೊಂದಿವೆ. ಅಲ್ಲದೆದಂಡ ಭಾಗದಎರಡು ಚೌಕಗಳ ಮಧ್ಯ ವೃತ್ತಾಕಾರದ ೧೬ ಮತ್ತು ೮ ಪಟ್ಟಿಕೆಗಳ ರಚನೆಯಿದೆ. ನವರಂಗದ ವಿತಾನದಲ್ಲಿ ನಾಭಿಚ್ಛಂದಅಲAಕರಣೆಯಿದೆ. ಅಲ್ಲದೆ ನವರಂಗದ ಒಳಭಿತ್ತಿಯಲ್ಲಿ ಒಟ್ಟುಎಂಟು ದೇವಕೋಷ್ಠಗಳ ರಚನೆಯನ್ನುಕಾಣಬಹುದು. ನವರಂಗದದ್ವಾರವನ್ನು ಸಹ ನಂತರಅವಧಿಯಲ್ಲಿ ಸೇರಿಸಿದ್ದಾಗಿದೆ. ನವರಂಗಕ್ಕೆ ಹೊಂದಿಕೊAಡAತೆ ಪೂರ್ವದಿಕ್ಕಿನಲ್ಲಿ ವಿಶಾಲವಾದ ಮುಖಮಂಟಪರಚನೆಇದೆ. ಮಧ್ಯದಲ್ಲಿಅರ್ಧ ಅಡಿ ಎತ್ತರವಾದರಂಗವೇದಿಕೆಅದರ ಮೇಲೆ ನಾಲ್ಕು ಸ್ತಂಭಗಳಿAದ ಕೂಡಿದ ಈ ಮುಖಮಂಟಪವುತೆರೆದರಚನೆಯಾಗಿದ್ದು, ಸುತ್ತಲೂಅರ್ಧಗೋಡೆಯ ಮೇಲೆ ಕಕ್ಷಾಸನಅದರ ಹೊರಭಾಗದಲ್ಲಿ ಪದ್ಮಸಾಲು, ಸಂಗೀತ, ನೃತ್ಯಕಾರರ ಉಬ್ಬುಶಿಲ್ಪಗಳಿವೆ. ಪೂರ್ವ, ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಪ್ರವೇಶವನ್ನು ಹೊಂದಿದೆ. ಚೌಕಾಕಾರದ ಮಧ್ಯ ವೇದಿಕೆಯಅಂಚಿನಲ್ಲಿರುವ ಸ್ತಂಭಗಳು ನವರಂಗದಲ್ಲಿರುವ ಸ್ತಂಬಗಳನ್ನು ಹೋಲುತ್ತವೆ. ಇಲ್ಲಿಯ ಸ್ತಂಭಗಳು ಪೀಠ, ದಂಡ, ತಡಿ, ಫಲಕ, ಬೋದಿಗೆಗಳನ್ನು ಹೊಂದಿದ್ದು ಎರಡು ಚೌಕಗಳ ಮಧ್ಯ ೧೬ ಮತ್ತು ೮ ಪಟ್ಟಿಕೆಗಳು ಅದರ ಮಧ್ಯ ವಜ್ರದಅಲಂಕರಣೆಯಿದೆ. ವಿತಾನ ಭಾಗವು ನವರಂಗದAತೆಅಲAಕೃತವಾದ ನಾಭಿಚ್ಛಂದರೀತಿಯಲ್ಲಿದ್ದು ಮಧ್ಯದಲ್ಲಿ ಪದ್ಮದಅಲಂಕರಣೆಯಿದೆ. ಕಕ್ಷಾಸನದ ಮೇಲೆ ನಿಂತ ೧೪ ಕಿರು ಸ್ತಂಭಗಳು ವಿವಿಧ ಮಾದರಿಯಲ್ಲಿವೆ. ದಂಡ, ತಡಿ, ಬೋಧಿಗೆಗಳನ್ನು ಹೊಂದಿದ್ದುದAಡದ ತಳಭಾಗದ ಚೌಕಾಕಾರದ ಪಟ್ಟಿಕೆಯ ಮೇಲೆ ೮ ಪಟ್ಟಿಕೆಗಳನ್ನು ಹೊಂದಿದ್ದ ಬಳೆಗಳ ರಚನೆ ಮತ್ತುಕುಂಭ ಭಾಗದಲ್ಲಿ ಮುಗುಚಿ ಹಾಕಿದ ಪದ್ಮದಅಲಂಕರಣೆಯರಚನೆ, ಅದರ ಮೇಲೆ ಎಂಟು ಎಲೆಗಳ ರಚನೆಯನ್ನುಕಾಣುತ್ತೇವೆ. ಮೂರು ದಿಕ್ಕಿನ ಪ್ರವೇಶಗಳಲ್ಲಿ ಸೋಪಾನಗಳಿದ್ದು. ಇಕ್ಕೆಲಗಳಲ್ಲಿ ಹಸ್ತಹಸ್ತಿಯ ರಚನೆಗಳನ್ನು ಗುರುತಿಸಬಹುದು. ದೇವಾಲಯದ ಮುಖಮಂಟಪವು ಶಿಥಿಲಾವಸ್ಥೆಯಲ್ಲಿದ್ದಾಗ ಅದನ್ನುಜೀರ್ಣೋದ್ಧಾರ ಗೊಳಿಸಲಾಗಿದೆ. ಅಂತಹ ಸಂದರ್ಭದಲ್ಲಿಒಡೆದು ಹೋದ ಭಾಗಗಳನ್ನು ಹೊಸದಾಗಿ ಸೇರಿಸಲಾಗಿದೆ. ದೇವಾಲಯದ ಹೊರಭಿತ್ತಿಯನ್ನು ಸಂಪೂರ್ಣವಾಗಿಜೀರ್ಣೋದ್ಧಾರ ಗೊಳಿಸಲಾಗಿದೆ. ಹಾಗಾಗಿ ಊರ್ಧ್ವಮುಖ ರಚನೆಗಳು ಕಂಡುಬರುವುದಿಲ್ಲ. ಆದರೆ ಸಭಾ ಮಂಟಪದಲ್ಲಿ ಮಾತ್ರಅಧಿಷ್ಠಾನ ಭಾಗವನ್ನುಕಾಣಬಹುದು. ಉಪಾನ ನೆಲದಲ್ಲಿ ಹೂತು ಹೊಗಿದ್ದುಜಗತಿ, ಕುಮುದಅದರ ಮೇಲೆ ಸ್ತರಗಳ ರೀತಿಯಲ್ಲಿ ಮೂರು ಪಟ್ಟಿಕೆಗಳ ರಚನೆಯಿದೆ. ಇಲ್ಲಿ ಆನೆಗಳ ಸಾಲು, ಪದ್ಮಸಾಲು ಹಾಗೂ ಸಂಗೀತ ಮತ್ತು ನೃತ್ಯಕಾರರಅಥವಾ ಮದನಿಕೆಯರಉಬ್ಬು ಶಿಲ್ಪಗಳನ್ನು ಒಳಗೊಂಡ ಪಟ್ಟಿಕೆಗಳ ರಚನೆಯನ್ನುಕಾಣಬಹುದು. ಅಲ್ಲದೆಕಕ್ಷಾಸನದ ಹಿಂಭಾಗದಲ್ಲಿಅಲAಕಾರಿಕವಾಗಿದ್ರಾವಿಡ ಮಾದರಿಯಚಿಕಣಿ ಶಿಲ್ಪಗಳು ಅವುಗಳ ಮಧ್ಯ ಸಿಂಹ ಮತ್ತುಅದರ ಮೇಲ್ಭಾಗದ ಪಟ್ಟಿಕೆಯಲ್ಲಿ ಮದನಿಕೆಯರ ಮತ್ತು ವಲ್ಲಿಅಲಂಕಾರವನ್ನುಕಾಣಬಹುದು. ಶೈವ ಮುನಿಯತಿಯಉಬ್ಬು ಶಿಲ್ಪವು ಕೂಡಾ ಪೂರ್ವಭಾಗದಕಕ್ಷಾಸನ ಹಿಂಬದಿಯಲ್ಲಿಕAಡುಬರುತ್ತದೆ. ಇನ್ನು ನವರಂಗದಎಡ ಭಾಗದಲ್ಲಿ ಹೊರಭಿತ್ತಿಯ ಪ್ರಾಚೀನ ಭಾಗ ಉಳಿದುಕೊಂಡಿದ್ದು ಅಧಿಷ್ಠಾನ ಮತ್ತು ಭಿತ್ತಿ ರಚನೆಗಳು ಕಂಡುಬರುತ್ತವೆ. ಅಧೀಷ್ಠಾನದಲ್ಲಿ ಉಪಾನ, ಜಗತಿ, ಕುಮುದ, ಕಪೋತ ಮತ್ತು ಪ್ರತಿ ಭಾಗಗಳು ಕಂಡುಬರುತ್ತವೆ. ಅಲ್ಲದೆ ಭಿತ್ತಿಯಲ್ಲಿಕುಡ್ಯ ಸ್ತಂಭಗಳಿದ್ದು ಅದರ ಮೇಲೆ ದ್ರಾವಿಡರಚನೆಯಚಿಕಣಿ ಶಿಲ್ಪಗಳಿವೆ. ಇದೇರೀತಿಯರಚನೆಯನ್ನುದೇವಾಲಯದ ಹೊರಭಿತ್ತಿಯು ಹೊಂದಿತ್ತೆAದು ತಿಳಿದುಬರುತ್ತದೆ. ಈ ದೇವಾಲಯಕ್ಕೆ ಸುತ್ತಲೂ ಪ್ರಾಕಾರದರಚನೆಯಿದ್ದು ಪೂರ್ವಾಭಿಮುಖವಾಗಿಒಂದು ಪ್ರವೇಶದ್ವಾರವಿದೆ. ಇದುಇತ್ತಿಚೀನ ನಿರ್ಮಾಣವಾಗಿದೆ. ಇದರ ಮೇಲಿರುವ ಮಕರತೋರಣ ಮಹತ್ವದ್ದಾಗಿದೆ. ಮಧ್ಯ ನಾಟ್ಯ ಭಂಗಿಯಲ್ಲಿರುವ ನಟರಾಜ, ಗಣೆಶ ಮತ್ತುಕಾರ್ತಿಕೇಯನ ಶಿಲ್ಪಗಳಿದ್ದು ಅದರ ಮೇಲೆ ಕೀರ್ತಿಮುಖ ಮತ್ತು ಮಕರತೋರಣವನ್ನುಕಾಣಬಹುದು. ಗ್ರಾಮ: ಜಮಖಂಡಿ ಹೆಸರು: ಕಲ್ಮೇಶ್ವರದೇವಾಲಯ ಸ್ಥಳ: ನಗರದ ಮಧ್ಯ ಅಭಿಮುಖ: ಉತ್ತರಾಭಿಮುಖ ಸ್ಥಿತಿ: ಉತ್ತಮ ಕಾಲ: ಕಲ್ಯಾಣ ಚಾಳುಕ್ಯ ಈ ದೇವಾಲಯವುಕೂಡಾ ನಗರದ ಮಧ್ಯದಲ್ಲಿರುವಕೆರೆಯ ಹತ್ತಿರಕಂಡುಬರುತ್ತದೆ. ಉತ್ತರಾಭಿಮುಖವಾಗಿರುವ ಈ ದೇವಾಲಯತ್ರಿಕೂಟ ಮಾದರಿಯದ್ದಾಗಿದೆ. ಮೂರುಗರ್ಭಗೃಹ, ಅದಕ್ಕೆ ಹೊಂದಿಕೊAಡAತೆತೆರೆದ ಅಂತರಾಳ, ಇವೆಲ್ಲವುಗಳು ಒಟ್ಟಿಗೆಕೂಡಿಸುವ ನವರಂಗ ಮತ್ತು ಮುಖಚತುಷ್ಕಿಯನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅದರದ್ವಾರವು ಚತುಶಾಖೆಗಳಿಂದ ಕೂಡಿದ್ದಾಗಿದ್ದು ವಜ್ರ, ವಲ್ಲಿ ಮತ್ತು ಸ್ತಂಭಶಾಖೆಗಳನ್ನು ಹೊಂದಿದೆ. ಇನ್ನೊಂದು ನೀರಲಂಕೃತವಾದ ಶಾಖೆಯಾಗಿದೆ. ಲಲಾಟದಲ್ಲಿಗಜಲಕ್ಷಿö್ಮÃಯಉಬ್ಬು ಶಿಲ್ಪವಿದೆ. ಉತ್ತರಾಂಗಭಾಗದಲ್ಲಿದ್ರಾವಿಡ ಮಾದರಿಯಚಿಕಣಿ ಶಿಲ್ಪಗಳನ್ನು ಕಾಣಬಹುದು. ಪೇದ್ಯಾ ಭಾಗವು ನೀರಲಂಕೃತವಾಗಿದ್ದು ಹೊಸ್ತಿಲ ಭಾಗದಲ್ಲಿ ಪದ್ಮದಅಲಂಕರಣೆಯಿದೆ. ಗರ್ಭಗೃಹ ಮತ್ತು ಅಂತರಾಳದ ವಿತಾನದಲ್ಲಿ ನಾಭಿಚ್ಛಂದಅಲAಕರಣೆಯನ್ನುಕಾಣಬಹುದು ಉಳಿದ ಮತ್ತೆರಡು ಗರ್ಭಗೃಹಗಳು ಇದೇರೀತಿಯ ಲಕ್ಷಣಗಳನ್ನು ಹೊಂದಿದ್ದುಯಾವುದೇ ಭಿನ್ನತೆಗಳು ಕಂಡುಬರುವುದಿಲ್ಲ. ಆದರೆ ಪೂರ್ವಾಭಿಮುಖವಾಗಿರುವಗರ್ಭಗೃಹದಲ್ಲಿಇತ್ತೀಚಿನ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇದೇಗರ್ಭಗೃಹದದ್ವಾರಶಾಖೆಯ ಹೂಸ್ತಿಲು ಭಾಗದಎಡಅಂಚಿನಲ್ಲಿಚಿಕ್ಕಕೋಷ್ಠದಲ್ಲಿ ಶೈವ ಮುನಿ ಶಿಲ್ಪವಿದೆ. ಜೊತೆಗೆ ಪಶ್ಚಿಮಾಭಿಮುಖವಾದ ಅಂತರಾಳದಲ್ಲಿ ಮಾತ್ರಎಡಭಾಗದಲ್ಲಿಒಂದುದೇವಕೋಷ್ಠಕವನ್ನುಕಾಣಬಹುದು. ತೆರೆದ ಅಂತರಾಳಗಳ ಪ್ರವೇಶದ ಇಕ್ಕೆಲಗಳಲ್ಲಿ ಕೆಳಗೆ ಚೌಕ, ಮಧ್ಯ ವೃತ್ತಾಕಾರವಾಗಿರುವರುದ್ರಚ್ಛಂದವನ್ನು ಹೋಲುವ ಸ್ತಂಭಗಳಿವೆ. ಅದುಚೌಕಾಕಾರದ ಪೀಠ, ವೃತ್ತಾಕಾರದಲ್ಲಿದಂಡ, ತಡಿ, ಫಲಕ, ಬೋದಿಗೆಗಳನ್ನು ಹೊಂದಿದೆ. ಮೂರು ಅಂತರಾಳಗಳಲ್ಲಿ ಇದೇರೀತಿಯರಚನೆಯ ಸ್ತಂಭಗಳಿವೆ. ನವರAಗ ಭಾಗದ ಮಧ್ಯದಲ್ಲಿಅರ್ಧ ಅಡಿ ಎತ್ತರದ ವೇದಿಕೆಯ ಮೂಲೆ ಭಾಗಗಳಲ್ಲಿ ನಾಲ್ಕು ಸ್ತಂಭಗಳಿವೆ. ಅವು ಪೀಠ, ದಂಡ, ತಡಿ, ಫಲಕ ಮತ್ತು ಬೋದಿಗೆಗಳನ್ನು ಹೊಂದಿವೆ. ದಂಡ ಭಾಗದಲ್ಲಿಎರಡು ಚೌಕಗಳ ಮಧ್ಯ ವೃತ್ತಾಕಾರವಾಗಿ ೧೬ ಮತ್ತು ೮ ಪಟ್ಟಿಕೆಗಳನ್ನು ಹೊಂದಿದೆ. ವಿತಾನದ ಮಧ್ಯದಲ್ಲಿ ನಾಭಿಚ್ಛಂದವಿದ್ದು ಮಧ್ಯ ಪದ್ಮದಳ ಮತ್ತುಅದರ ಮಧ್ಯ ಕದಳಿ ರೀತಿಯ ಮುಂಚಾಚನ್ನು ಹೊಂದಿದೆ. ಅಲ್ಲದೆ ನವರಂಗದ ಒಳಭಿತ್ತಿಯಲ್ಲಿ ೮ ದೇವಕೋಷ್ಠಗಳಿದ್ದು ಅವುಗಳ ಮೇಲೆ ದ್ರಾವಿಡ ಮಾದರಿಯಚಿಕಣಿ ಶಿಖರದ ರಚನೆಯನ್ನುಕಾಣಬಹುದು. ಈ ದೇವಕೋಷ್ಠಗಳಲ್ಲಿ ತೃಟಿತ ಸಪ್ತಮಾತೃಕೆ, ನಾಗ, ಇನ್ನಿತರಇತ್ತೀಚಿನ ಶಿಲ್ಪಗಳನ್ನು ಇಡಲಾಗಿದೆ. ನವರಂಗದಲ್ಲಿಅಲAಕಾರಿಕ ೧೨ ಭದ್ರತಾ ಸ್ತಂಭಗಳಿದ್ದು ಅವು ಹೊರ ಭಾಗದಲ್ಲಿ ಪೀಠ, ದಂಡ, ತಡಿ, ಫಲಕ ಮತ್ತು ಬೋದಿಗೆ ರೀತಿಯರಚನೆಯನ್ನು ಹೊಂದಿವೆ. ನವರಂಗದ ಮಧ್ಯಭಾಗದಲ್ಲಿಇತ್ತಿಚೀನ ನಂದಿ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಮುಖಚತುಷ್ಕಿಯಎರಡು ಬದಿಗೆ ಕಕ್ಷಾಸನಗಳು, ಕಕ್ಷಾಸನದ ವೇದಿಕೆಯ ಮೇಲೆ ವೃತ್ತಾಕಾರದರುದ್ರಚ್ಚಂದವನ್ನು ಹೋಲುವ ಕಿರು ಸ್ತಂಭಗಳಿವೆ. ಜಮಖಂಡಿಯಲ್ಲಿಕAಡುಬರುವಎಲ್ಲ ದೇವಾಲಯಗಳಿಗಿಂತ ಇದು ಪ್ರಾಚೀನದೇವಾಲಯವಾಗಿದೆಎಂಬುದುದೇವಾಲಯದ ಲಕ್ಷಣಗಳ ಆಧಾರದ ಮೇಲೆ ತಿಳಿದು ಬರುತ್ತದೆ. ಪ್ರಸ್ತುತಕಕ್ಷಾಸನದ ಮೇಲೆ ಗೋಡೆಗಳನ್ನು ನಿರ್ಮಿಸಿ, ಮುಖ ಚತುಷ್ಕಿಗೆದ್ವಾರವನ್ನು ಕೂಡಿಸಿದ್ದಾರೆ. ದೇವಾಲಯದ ಮುಕ್ಕಾಲು ಭಾಗವು ನೆಲದಲ್ಲಿ ಹುಗಿದಿರುವುದರಿಂದಊರ್ಧ್ವಮುಖ ವಿನ್ಯಾಸಅಥವಾ ಹೊರವಿನ್ಯಾಸ ಸ್ಪಷ್ಟವಾಗಿಕಂಡುಬರುವುದಿಲ್ಲ. ಇನ್ನು ವಿಮಾನ ಭಾಗವು ಸಂಪೂರ್ಣವಾಗಿ ನಾಶ ಹೊಂದಿದೆ. ದೇವಾಲಯದ ಪಶ್ಚಿಮ ಮತ್ತುದಕ್ಷಿಣ ಭಾಗದಲ್ಲಿ ಮಾತ್ರಅರ್ಧತೆರೆದುಕೊಂಡಿರುವ ಭಿತ್ತಿಕಂಡುಬರುತ್ತದೆ. ಇದರಆಧಾರದ ಮೇಲೆ ಕರ್ಣ ಮತ್ತು ಮಧ್ಯ ಭದ್ರಭಾಗಗಳು ಮುಂಚಾಚಿಕೊAಡಿದ್ದುಇದರ ಮಧ್ಯ ಸಲಿಲಾಂತರಗಳ ರಚನೆಇದೆ. ಭಿತ್ತಿ ಭಾಗದಲ್ಲಿಕಂಡುಬರುವ ಭಿತ್ತಿಪಾದಗಳ (ಕುಡ್ಯಸ್ತಂಭಗಳ) ರಚನೆಗಳಿಂದ ಹೆಚ್ಚು ಅಲಂಕೃತವಾಗಿಕAಡುಬರುತ್ತದೆ. ಇವು ಆಕಾರದಲ್ಲಿದೇವಾಲಯದ ನವರಂಗದ ಸ್ತಂಭಗಳನ್ನು ಹೋಲುತ್ತವೆ. ಅಲ್ಲದೆ ಭಿತ್ತಿಯ ಮಧ್ಯ ಭಾಗದಲ್ಲಿ ಸ್ತಂಭಿಕೆಗಳನ್ನು ಕೆತ್ತಿಅದರ ಮೇಲೆ ದ್ರಾವಿಡ ಪ್ರಾಸಾದ ಮಾದರಿಯಚಿಕಣಿ ಶಿಲ್ಪಗಳನ್ನು ಕೆತ್ತಿರುವುದನ್ನುಕಾಣಬಹುದು. ಪ್ರಸ್ತರ ಭಾಗದಲ್ಲಿಉತ್ತರ ಮತ್ತುಕಪೋತ ಭಾಗಗಳನ್ನು ಕಾಣಬಹುದು. ಅದರ ಮೇಲೆ ಹಾರಅಥವಾ ಶಿಖರ ಭಾಗಗಳು ಇಂದುಕAಡುಬರುವುದಿಲ್ಲ. ಇದೇರೀತಿಯರಚನೆದೇವಾಲಯದ ಉಳಿದ ಭಾಗವು ಹೊಂದಿತ್ತುಎAದು ಹೇಳಬಹುದು. ಗ್ರಾಮ: ಜಮಖಂಡಿ ಹೆಸರು: ಪ್ರಭುಲಿಂಗೇಶ್ವರದೇವಾಲಯ ಸ್ಥಳ: ನಗರದ ಮಧ್ಯ ಅಭಿಮುಖ: ದಕ್ಷಿಣಾಭಿಮುಖ ಸ್ಥಿತಿ: ಉತ್ತಮ ಕಾಲ: ಕಲ್ಯಾಣ ಚಾಳುಕ್ಯ ಪ್ರಭುಲಿಂಗೇಶ್ವರ ಎAದು ಕರೆಯಲ್ಪಡುವ ಈ ದೇವಾಲಯವು ದಕ್ಷಿಣಾಭಿಮುಖವಾಗಿ ನಿರ್ಮಾಣವಾದತ್ರೆöÊಪುರುಷದೇವಾಲಯವಾಗಿದೆ. ಈ ದೇವಾಲಯವುಕೂಡಾ ನಗರದ ಮಧ್ಯಇರುವಕೆರೆಯ ಹತ್ತಿರಕಂಡುಬರುತ್ತದೆ. ಇದುತ್ರಿಕೂಟ ಮಾದರಿಯದೇವಾಲಯವಾಗಿದ್ದು ಮೂರುಗರ್ಭಗೃಹ, ಜಾಲಂಧ್ರವಿನ್ಯಾಸವುಳ್ಳ ಮೂರು ಅಂತರಾಳ, ನವರಂಗ ಭಾಗಗಳನ್ನು ಹೊಂದಿದೆ. ಪ್ರಸ್ತುತದೇವಾಲಯದ ಸುತ್ತಲು ಮನೆಗಳು ನಿರ್ಮಾಣವಾಗಿರುವುದರಿಂದಇAದು ನೆಲದಲ್ಲಿ ಹುಗಿದಿರುವ ಹಾಗೆ ಕಂಡುಬರುತ್ತದೆ. ಹಾಗಾಗಿ ದೇವಾಲಯದ ಹೊರ ಭಾಗದಯಾವುದೇ ಲಕ್ಷಣಗಳು ನಮಗೆ ಕಾಣಿಸುವುದಿಲ್ಲ. ಪೂರ್ವಾಭಿಮುಖವಾಗಿರುವಗರ್ಭಗೃಹದದ್ವಾರವು ತ್ರಿಶಾಖೆಗಳನ್ನು ಹೊಂದಿದ್ದು ವಜ್ರ, ವಲ್ಲಿ ಮತ್ತು ಸ್ತಂಭಶಾಖೆಗಳಾಗಿವೆ. ಲಲಾಟದಲ್ಲಿಗಜಲಕ್ಷಿö್ಮÃಯಉಬ್ಬು ಶಿಲ್ಪವಿದೆ. ಉತ್ತರಾಂಗ ಭಾಗದಲ್ಲಿ ಪದ್ಮದಳಗಳ ಅಲಂಕರಣವಿದೆ. ಮಧ್ಯದಲ್ಲಿಯಾವುದೇ ಶಿಲ್ಪವಿಲ್ಲ. ಅಂತರಾಳಕ್ಕೆ ಜಾಲಂಧ್ರವಿನ್ಯಾಸವನ್ನು ಅಳವಡಿಸಿದ್ದು ಅದರ ಮೇಲ್ಭಾಗದಲ್ಲಿ ಮಕರತೋರಣದಅಲಂಕಾರವಿದೆ. ಪಶ್ಚಿಮಾಭಿಮುಖವಾಗಿರುವ ಗರ್ಭಗೃಹವುಇದೇ ಲಕ್ಷಣಗಳನ್ನು ಹೊಂದಿದೆ. ಆದರೆ ಪೂರ್ವಾಭಿಮುಖವಾಗಿರುವ ಮಕರತೋರಣದಲ್ಲಿ ಸ್ಥಾನಿಕ ಭಂಗಿಯಲ್ಲಿ ಶಂಖ, ಚಕ್ರ, ಗದೆಗಳನ್ನು ಹಿಡಿದ ಮತ್ತುಅಭಯ ಮುದ್ರೆಯಲ್ಲಿರುವ ವಿಷ್ಣುವಿನ ಶಿಲ್ಪವಿದ್ದು ಇದು ವಿಷ್ಣುವಿಗೆ ಸಂಬAಧಿಸಿದ ಗರ್ಭಗೃಹಎಂದು ತಿಳಿದು ಬರುತ್ತದೆ. ಅದೇರೀತಿ ಪಶ್ಚಿಮಾಭಿಮುಖವಾಗಿರುವ ಅಂತರಾಳದ ಮೇಲಿನ ಮಕರತೋರಣದ ಮಧ್ಯಡಮರು, ತ್ರಿಶೂಲಗಳನ್ನು ಹಿಡಿದಿರುವಅಭಯ ಮುದ್ರೆಯನ್ನು ಹೊಂದಿರುವ ನಾಟ್ಯ ಭಂಗಿಯಲ್ಲಿರುವ ನಟರಾಜನ ಶಿಲ್ಪವಿದ್ದು ಶಿವನಿಗೆ ಸಂಬAಧಿಸಿದ ಗರ್ಭಗೃಹವಾಗಿದೆ. ದಕ್ಷಿಣಾಭಿಮುಖವಾಗಿರುವಗರ್ಭಗೃಹವನ್ನು ಮತ್ತುಅದರ ಅಂತರಾಳವನ್ನು ಟೈಲ್ಸ್ ಹಾಕಿದ್ದರಿಂದಯಾವುದೇ ಅಲಂಕಾರಗಳು ಕಂಡುಬರುವುದಿಲ್ಲ. ಆದರೆ ಲಲಾಟದಲ್ಲಿಗಜಲಕ್ಷಿö್ಮ ಶಿಲ್ಪವಿದ್ದು ತೃಟಿತಗೊಂಡಿದೆ. ಉತ್ತರಾಂಗಭಾಗದಲ್ಲಿ ಪದ್ಮದಳ ಅಲಂಕಾರವಿದೆ. ಇದರ ಅಂತರಾಳದ ಮುಂಭಾಗದಲ್ಲಿಯೂ ಸಹ ಮಕರತೋರಣವಿದ್ದು ಈ ತೋರಣದ ಮಧ್ಯ ಸ್ಥಾನಿಕ ಭಂಗಿಯಲ್ಲಿಕೈಯಲ್ಲಿ ಮೊಗ್ಗುಗಳನ್ನು ಹಿಡಿದುಕೊಂಡಿರುವ ಸೂರ್ಯ ಶಿಲ್ಪವಿದ್ದು ಅದರ ಮೇಲೆ ಕೀರ್ತಿಮುಖ ಮತ್ತು ಸುತ್ತಲೂತೋರಣದಅಲಂಕರಾವಿದೆ. ಈ ಗರ್ಭಗೃಹದಲ್ಲಿಇತ್ತೀಚಿಗೆ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವಿದೆ. ಒಟ್ಟಾರೆ ಈ ದೇವಾಲಯದಲ್ಲಿ ಮಧ್ಯ ಸೂರ್ಯ ಇಕ್ಕೆಲಗಳಲ್ಲಿ ವಿಷ್ಣು ಮತ್ತು ಶಿವನಿಗೆ ಸಂಬAಧಿಸಿದ ಗರ್ಭಗೃಹಗಳಿದ್ದು ತ್ರೆöÊಪುರುಷದೇವಾಲಯಎಂದು ಹೇಳಬಹುದು. ನವರಂಗದ ಭಾಗದಲ್ಲಿ ನಾಲ್ಕು ಸ್ತಂಭಗಳಿದ್ದು ಅವು ಪೀಠ, ದಂಡ, ತಡಿ, ಫಲಕ, ಬೋದಿಗೆಗಳನ್ನು ಹೊಂದಿದೆ. ಎರಡು ಚೌಕಗಳ ಮಧ್ಯಎಂಟು ಪಟ್ಟಿಕೆ ಮತ್ತು ವೃತ್ತಾಕಾರದ ಬಳೆಗಳ ರಚನೆಗಳಿವೆ. ವಿತಾನದಲ್ಲಿ ನಾಭಿಚ್ಛಂದವಿದ್ದು ಮಧ್ಯದಲ್ಲಿ ಪದ್ಮಅದರ ಮಧ್ಯ ಮುಕುಳವನ್ನು ಅಲಂಕಾರಿಕವಾಗಿಕೆತ್ತಲಾಗಿದೆ. ನವರಂಗದ ಭಿತ್ತಿಯಲ್ಲಿಒಟ್ಟು ೮ ದೇವಕೋಷ್ಠಗಳಿದ್ದು ಅವುಗಳ ಮೇಲೆ ದ್ರಾವಿಡ ಮಾದರಿಯಚಿಕಣಿ ಶಿಖರ ಮಾದರಿಗಳಿವೆ. ಉಳಿದಂತೆ ದೇವಕೋಷ್ಠದ ಇಕ್ಕೆಲಗಳು ಸ್ತಂಭಗಳಿAದ ಕೂಡಿದ್ದುಒಂದುದೇವಾಲಯದ ವಿನ್ಯಾಸವನ್ನು ತೋರಿಸಿಕೊಡುತ್ತವೆ. ದೇವಾಲಯದ ಒಳಭಿತ್ತಿಯಲ್ಲಿರುವ ಭದ್ರತಾ ಸ್ತಂಭಗಳು ಅಲಂಕಾರಿಕವಾಗಿಲ್ಲ. ದೇವಾಲಯದ ಹೊರ ಭಾಗ ಸಂಪೂರ್ಣವಾಗಿ ನೆಲದಲ್ಲಿ ಹುಗಿದಿರುವುದರಿಂದಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಶಿಖರ ಅಥವಾ ಪ್ರಾಸಾದ ಬಿದ್ದು ಹೋಗಿದೆ. ನವರಂಗದ ಪ್ರವೇಶದ ಲಲಾಟದಲ್ಲಿಗಣೇಶನಉಬ್ಬು ಶಿಲ್ಪವಿರುವ ದ್ವಾರವನ್ನು ನಂತರಅವಧಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಲ್ಲಿಯಾವುದೇ ದ್ವಾರಶಾಖೆಗಳು ಇರುವುದಿಲ್ಲ. ದೇವಾಲಯದ ಲಕ್ಷಣಗಳ ಆಧಾರದ ಮೇಲೆ ಇದುಕಲ್ಯಾಣ ಚಾಳುಕ್ಯ ಅವಧಿಯಲ್ಲಿ ನಿರ್ಮಾಣವಾದದ್ದುಎಂದುಅಭಿಪ್ರಾಯಿಸಬಹುದು. ಗ್ರಾಮ: ಜಮಖಂಡಿ ಹೆಸರು: ನಂದಿಕೇಶ್ವರದೇವಾಲಯ ಸ್ಥಳ: ಕುಂಬಾರಗಲ್ಲಿ ಅಭಿಮುಖ: ಉತ್ತರಾಭಿಮುಖ ಸ್ಥಿತಿ: ಉತ್ತಮ ಕಾಲ: ಕಲ್ಯಾಣ ಚಾಳುಕ್ಯ ಜಮಖಂಡಿ ನಗರದ ಪೂರ್ವಕ್ಕೆಜಮಖಂಡಿಯಿAದ ಮುಧೋಳಗೆ ಹೋಗುವ ರಸ್ತೆಯ ಹತ್ತಿರಇದುಕಂಡುಬರುತ್ತದೆ. ಉತ್ತರಾಭಿಮುಖವಾಗಿರುವತ್ರಿಕೂಟದೇವಾಲಯವಾಗಿದ್ದು ಪ್ರಸ್ತುತಅದು ದ್ವಿಕೂಟದೇವಾಲಯದಂತೆಕAಡುಬರುತ್ತದೆ. ಈಗ ಪಶ್ಚಿಮಾಭಿಮುಖ ಮತ್ತು ಪೂರ್ವಾಭಿಮುಖವಾಗಿರುವ ಗರ್ಭಗೃಹಗಳು ಮಾತ್ರ ಉಳಿದುಕೊಂಡಿದ್ದು. ಉತ್ತರಾಭಿಮುಖಗರ್ಭಗೃಹವನ್ನು ಸಂಪೂರ್ಣವಾಗಿತೆಗೆದು ಹಾಕಿ ಅಲ್ಲಿಗೋಡೆಯನ್ನು ನಿರ್ಮಿಸಿದ್ದಾರೆ. ಉಳಿದೆರಡು ಗರ್ಭಗೃಹಗಳ ಮುಂಭಾಗದಲ್ಲಿರುವ ಅಂತರಾಳಗಳ ಇಕ್ಕೆಲಗಳಲ್ಲಿರುವ ಭಿತ್ತಿಯನ್ನುಒಡೆದುಅಲ್ಲಿದ್ವಾರವನ್ನು ಸೇರಿಸಿ ಉತ್ತರಾಭಿಮುಖ ಮತ್ತುದಕ್ಷಿಣಾಭಿಮುಖವಾಗಿ ಮತ್ತೇರಡು ಗರ್ಭಗೃಹಗಳನ್ನು ನಂತರದಕಾಲಘಟ್ಟದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಆ ಎರಡು ಗರ್ಭಗೃಹಗಳಿಗೆ ಹೊಂದಿಕೊAಡAತೆ ಮತ್ತೇರೆಡೆರಡು ಗರ್ಭಗೃಹಗಳು ಕಂಡುಬರುತ್ತವೆ. ಪೂರ್ವಾಭಿಮುಖವಾಗಿರುವಗರ್ಭಗೃಹದ ಮಧ್ಯದಲ್ಲಿಇತ್ತಿಚೀನ ಶಿವಲಿಂಗವಿದ್ದು ಒಳ ಭಿತ್ತಿಯ ಮೂರು ಭಾಗಗಳಲ್ಲಿ ಮಧ್ಯದಲ್ಲಿಅರ್ಧ ಅಡಿ ಅಗಲದಕಲ್ಲು ಫಳಿಗಳು ಮುಂಚಾಚಿವೆ. ಇದರದ್ವಾರವು ಚತುಶಾಖೆಗಳಿಂದ ಕೂಡಿದ್ದು ವಜ್ರ, ವಲ್ಲಿ, ಸ್ತಂಭ ಮತ್ತು ಸಿಂಹಶಾಖೆಗಳನ್ನು ಹೊಂದಿದೆ. ಸ್ತಂಭಶಾಖೆಯು ಮುಂದುವರೆದುಕಪೋತದAತೆ ಮುಂಚಾಚಿರುವ ಭಾಗಕ್ಕೆ ಹೊಂದಿಕೊAಡಿದೆ. ಇದರ ಲಲಾಟದಲ್ಲಿ ನರಸಿಂಹನ ಉಬ್ಬುಶಿಲ್ಪವಿದೆ. ಹಾಗಾಗಿ ಇದೊಂದು ವಿಷ್ಣುವಿಗೆ ಸಂಬAಧಿಸಿದ ಗರ್ಭಗೃಹವೆಂದು ಹೇಳಬಹುದು. ಅದರಉತ್ತರಾಂಗ ಭಾಗದಲ್ಲಿರೇಖಾನಾಗರ ಶೈಲಿಯಚಿಕಣಿ ಮಾದರಿಗಳು ಮತ್ತುಅದರ ಮಧ್ಯ ಸಿಂಹಗಳ ಉಬ್ಬು ಶಿಲ್ಪಗಳಿವೆ. ಈ ಹಿಂದೆ ವಿವರಿಸಿದ ಹಾಗೆ ಈ ಗರ್ಭಗೃಹದ ಮುಂಭಾಗದಲ್ಲಿ ಅಂತರಾಳಕ್ಕೆ ಹೊಂದಿಕೊAಡು ನಂತರದಅವಧಿಯಲ್ಲಿ ಮತ್ತೇರಡು ಗರ್ಭಗೃಹಗಳನ್ನು ರಚಿಸಿದ್ದಾರೆ. ಇದರ ಉತ್ತರಾಭಿಮುಖಗರ್ಭಗೃಹದಲ್ಲಿ ಸಪ್ತಮಾತೃಕೆಯ ಶಿಲ್ಪವಿದೆ. ಅಂತರಾಳದ ಪ್ರವೇಶದ ಇಕ್ಕೆಲಗಳಲ್ಲಿ ವೃತ್ತಾಕಾರದಎರಡು ಸ್ತಂಭಗಳಿದ್ದು ಚೌಕ, ದಂಡ, ತಡಿ, ಫಲಕ, ಬೋದಿಗೆಗಳನ್ನು ಹೊಂದಿವೆ. ಅದೇ ರೀತಿ ಪಶ್ಚಿಮಾಭಿಮುಖವಾಗಿರುವ ಮತ್ತೊಂದುಗರ್ಭಗೃಹದ ಮಧ್ಯಗಾತ್ರದಲ್ಲಿ ಸ್ವಲ್ಪದೊಡ್ಡದಾದ ನಂದಿಶಿಲ್ಪವನ್ನು ಇಡಲಾಗಿದೆ. ಹಾಗಾಗಿ ಈ ದೇವಸ್ಥಾನಕ್ಕೆ ನಂದಿಕೇಶ್ವರದೇವಾಲಯವೆAದುಕರೆಯುತ್ತಾರೆ. ಗರ್ಭಗೃಹದ ಒಳಭಿತ್ತಿಯಲ್ಲಿ ಮೂರು ಭಾಗದಲ್ಲಿಅರ್ಧ ಅಡಿ ಮುಂಚಾಚಿರುವಕಲ್ಲಿನ ಫಳಿಯ ರಚನೆಯಿದೆ. ಇದರದ್ವಾರವು ಸಹ ತ್ರಿಶಾಖೆಗಳನ್ನು ಹೊಂದಿದ್ದುಅದು ವಜ್ರ, ವಲ್ಲಿ, ಸ್ತಂಭ ಶಾಖೆಗಳಾಗಿವೆ. ಲಲಾಟದಲ್ಲಿಗಜಲಕ್ಷಿö್ಮà ಶಿಲ್ಪವಿದೆ. ಉತ್ತರಾಂಗಭಾಗದಲ್ಲಿದ್ರಾವಿಡ ಮಾದರಿಯ ಚಿಕಣಿಶಿಲ್ಪಗಳಿದ್ದು ಹೊಸ್ತಿಲದಲ್ಲಿ ಪದ್ಮದ ಅಲಂಕರಣೆಗಳಿವೆ. ಪೇದ್ಯಾ ಭಾಗದಲ್ಲಿಯಾವುದೇ ಅಲಂಕರಣೆಗಳು ಇರುವುದಿಲ್ಲ. ಈ ಗರ್ಭಗೃಹಕ್ಕೆ ಹೊಂದಿಕೊAಡAತೆ ಅಂತರಾಳ ಭಾಗದಎರಡು ಭಿತ್ತಿಗಳನ್ನು ತೆಗೆದು ಮತ್ತೆರಡು ಗರ್ಭಗೃಹಗಳನ್ನು ಇಲ್ಲಿಯೂ ನಿರ್ಮಿಸಲಾಗಿದೆ. ಇವು ನಂತರಕಾಲಘಟ್ಟದಲ್ಲಿ ಸೇರ್ಪಡೆಗೊಂಡಿವೆ. ಈ ಗರ್ಭಗೃಹಗಳ ದ್ವಾರವನ್ನುಜಾಲಂಧ್ರದರೀತಿ ವಿನ್ಯಾಸ ಮಾಡಿದ್ದಾರೆ. ಇವುಗಳ ದ್ವಾರದ ಮೇಲ್ಭಾಗದಲ್ಲಿ ಮಕರ ತೋರಣಗಳ ಅಲಂಕಾರಗಳಿವೆ. ನವರAಗದ ಭಾಗದರಂಗವೇದಿಕೆಯನ್ನು ಮುಚ್ಚಿಅದರ ಮೇಲೆ ಟೈಲ್ಸ್ ಹಾಕಲಾಗಿದೆ. ನವರಂಗದ ಮಧ್ಯದ ಸ್ತಂಭಗಳು ಪೀಠ, ದಂಡ, ತಡಿ, ಫಲಕ ಭೋದಿಗೆಗಳನ್ನು ಹೊಂದಿದ್ದುಎರಡು ಚೌಕಗಳ ಮಧ್ಯ ೧೬ ಮತ್ತು ೮ ಪಟ್ಟಿಕೆಗಳ ರಚನೆಗಳಿದ್ದು ಅದರ ಮಧ್ಯ ವಜ್ರದ ಅಲಂಕರಣೆಗಳಿವೆ. ನವರಂಗದ ಭದ್ರತಾ ಸ್ತಂಭಗಳನ್ನು ಅಲಂಕಾರಿಕವನ್ನಾಗಿ ಮಾಡಿದ್ದಾರೆ. ಮತ್ತು ಒಳ ಭಿತ್ತಿಯಲ್ಲಿ ದೇವಕೋಷ್ಠಗಳಿದ್ದು ಅದರ ಮೇಲೆ ದ್ರಾವಿಡ ಮಾದರಿಯ ರಚನೆಗಳಿವೆ. ಇದೇ ನವರಂಗದಈಶಾನ್ಯ ಭಾಗದಲ್ಲಿ ನಂತರಅವಧಿಯಲ್ಲಿದೇವಾಲಯದ ವಸ್ತುಗಳನ್ನು ಇಡಲುಒಂದುಕೋಠಡಿಯನ್ನು ನಿರ್ಮಿಸಿದ್ದು ಅದರದ್ವಾರವು ಪ್ರಾಚೀನಕಾಲಘಟ್ಟದ್ದಾಗಿದೆ. ಅಂದರೆಇಲ್ಲಿ ಮತ್ತೊಂದುಗರ್ಭಗೃಹದದ್ವಾರವನ್ನುತೆಗೆದುಅದಕ್ಕೆ ಸೇರಿಸಲಾಗಿದೆ. ಇದು ಮೂರು ಶಾಖೆಗಳನ್ನು ಹೊಂದಿದ್ದು ವಜ್ರ, ವಲ್ಲಿ ಮತ್ತು ಸ್ತಂಭಶಾಖೆಗಳಿವೆ ಲಲಾಟದಲ್ಲಿ ಸ್ಥಾನಿಕ ಭಂಗಿಯಲ್ಲಿ ಶಂಖ, ಚಕ್ರ, ಗದೆ ಹಿಡಿದಿರುವ ಮತ್ತುಅಭಯ ಮುದ್ರೆಯಲ್ಲಿ ನಿಂತ ವಿಷ್ಣುವಿನ ಶಿಲ್ಪವಿದೆ. ದೇವಾಲಯದ ಮುಖ ಮಂಟಪವನ್ನು ಜೀರ್ಣೋದ್ಧಾರಗೊಳಿಸಿದ್ದರು ಸಹ ಅದಕ್ಕೆ ಪ್ರಾಚೀನದ್ವಾರವನ್ನು ಸೇರಿಸಲಾಗಿದೆ. ಇದುಕೂಡಾತ್ರಿಶಾಖೆಯನ್ನು ಹೊಂದಿದ್ದು ವಜ್ರ, ವಲ್ಲಿ, ಸ್ತಂಭ ಶಾಖೆಗಳು ಕಂಡುಬರುತ್ತವೆ. ಲಲಾಟದಲ್ಲಿಗಜಲಕ್ಷಿö್ಮà ಶಿಲ್ಪವಿದೆ. ಉತ್ತರಾಂಗ ಭಾಗದಲ್ಲಿರೇಖಾನಾಗರ ಮಾದರಿಯಚಿಕಣಿ ಶಿಲ್ಪಗಳಿದ್ದು, ಮಧ್ಯ ಸಿಂಹ ಶಿಲ್ಪಗಳಿವೆ. ದ್ವಾರದಉತ್ತರಾಂಗಭಾಗದಲ್ಲಿಇರುವರೇಖಾನಾಗರ ಮಾದರಿಯಚಿಕಣಿ ಶಿಲ್ಪಗಳಿದ್ದ ಭಾಗವನ್ನು ಹಾಕಿ ಹೊಸ್ತಿಲನ್ನಾಗಿ ಮಾಡಿಕೊಂಡಿದ್ದಾರೆ. ದೇವಾಲಯ ಬಹುತೇಕಜೀರ್ಣೋದ್ಧಾರಗೊಂಡಿರುವುದರಿAದ ಮೂಲ ಲಕ್ಷಣಗಳು ಗೊಂದಲಕ್ಕೆಎಡೆಮಾಡಿಕೊಡುತ್ತವೆ. ಇಲ್ಲಿಒಟ್ಟು ನಾಲ್ಕು ದ್ವಾರಶಾಖೆಗಳಿದ್ದು ಎರಡರಲ್ಲಿ ನರಸಿಂಹ ಮತ್ತು ವಿಷ್ಣುವಿನ ಉಬ್ಬು ಶಿಲ್ಪಗಳಿದ್ದು ಉಳಿದೆರಡರಲ್ಲಿ ಗಜಲಕ್ಷಿö್ಮà ಶಿಲ್ಪಗಳಿವೆ. ಪ್ರಸ್ತುತ ನಂದಿಕೇಶ್ವರಎAದುಕರೆಯುವದೇವಾಲಯವು ಮೂಲತಃದಲ್ಲಿ ವೈಷ್ಣವ ದೇವಾಲಯವಾಗಿತ್ತೋಎನ್ನುವಷ್ಟರ ಮಟ್ಟಿಗೆ ಸಂದೇಹಗಳಿಗೆ ಎಡೆ ಮಾಡಿಕೊಡುತ್ತದೆ. ದೇವಾಲಯದಆವರಣದ ಪ್ರವೇಶದ್ವಾರದಗೋಡೆಯಲ್ಲಿದೇವಾಲಯಕ್ಕೆಅಭಿಮುಖವಾಗಿ ಸುಖಾಸೀನ ಭಂಗಿಯಲ್ಲಿ ಕುಳಿತಿರುವ ಸ್ತಿçÃ, ಪುರುಷ ಕುಬ್ಜ ಶಿಲ್ಪಗಳಿವೆ. ದ್ವಿಬಾಹುವನ್ನು ಹೊಂದಿರುವ ಶಿಲ್ಪಗಳು ಪುಷ್ಟವಾದ ಮೈಕಟ್ಟು, ಉನ್ನತ ಸ್ತನಗಳು, ಕಿವಿಯಲ್ಲಿಚಕ್ರದ ಓಲೆಗಳಿದ್ದು, ದಪ್ಪಗಿನದುಂಡಾದದೇಹ ಮತ್ತು ಮುಖವನ್ನು ಹೊಂದಿವೆ. ಇದರಲ್ಲಿ ಪುರುಷ ಶಿಲ್ಪ ಸಾಕಷ್ಟು ತೃಟಿತಗೊಂಡಿದೆ. ಶಿಲ್ಪ ಲಕ್ಷಣಗಳನ್ನು ನೋಡಿದಾಗ ಇವು ಕ್ರಿ.ಶ. ೧೨ ಮತ್ತು ೧೩ನೆಯ ಶತಮಾನದಕಾಲಘಟ್ಟಕ್ಕೆ ಸಂಬAಧಿಸಿದವುಗಳಾಗಿವೆ ಎಂದುಅಭಿಪ್ರಾಯಿಸಬಹುದು. ಸ್ತಿçà ಶಿಲ್ಪ ಬಲ ಕೈಯಲ್ಲಿಖಡ್ಗವನ್ನು, ಎಡಕೈಯಲ್ಲಿತ್ರಿಶೂಲವನ್ನು ಹಿಡಿದಿರುವಂತೆಕAಡುಬರುತ್ತವೆ. ಇವು ಭೈರವ ಮತ್ತು ಭೈರವಿ ಶಿಲ್ಪಗಳೆಂಬುದು ತಿಳಿದುಬರುತ್ತದೆ. ಜೊತೆಗೆ ಈ ಎರಡು ಶಿಲ್ಪಗಳು ಜೈನಯಕ್ಷ ಮತ್ತುಯಕ್ಷಿಯರನ್ನು ಹೋಲುವುದರಿಂದ ಇವು ಜೈನಧರ್ಮಕ್ಕೆ ಸಂಬAಧಿಸಿದ ಶಿಲ್ಪಗಳೆಂದು ಹೇಳಬಹುದಾದರೂಜಮಖಂಡಿ ನಗರದಲ್ಲಿಕ್ರಿ.ಶ. ೧೩ನೆಯ ಶತಮಾನದ ಪೂರ್ವದಲ್ಲಿಜೈನಧರ್ಮದಕುರಿತಾಗಿಯಾವುದೇ ಕುರುಹುಗಳು ಕಂಡುಬರುವುದಿಲ್ಲ. ಜಮಖಂಡಿ ಪ್ರಮುಖಅಗ್ರಹಾರವಾಗಿತ್ತಲ್ಲದೆಇಲ್ಲಿ ಶೈವ ಮತ್ತು ವೈಷ್ಣವಕ್ಕೆ ಸಂಬAಧಿಸಿದAತೆ ಅನೇಕ ಕುರುಹುಗಳು ಇಲ್ಲಿಕಂಡುಬರುವುದರಿAದ ಇವು ಭೈರವ ಮತ್ತು ಭೈರವಿ ಶಿಲ್ಪಗಳು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಇದೇದೇವಾಲಯದಆವರಣದಲ್ಲಿಎರಡುತೃಟಿತಗೊಂಡ ವೀರಗಲ್ಲುಗಳು ಕಂಡುಬರುತ್ತವೆ. ಶಾಸನೋಕ್ತವಾಗಿರುವ ವೀರಗಲ್ಲು ಕಳಚುರ್ಯ ವಂಶದರಾಯಮುರಾರಿ ಸೋವಿದೇವನಕಾಲದ್ದಾಗಿದ್ದುಕ್ರಿ.ಶ. ೧೧೭೫ಕ್ಕೆ ಸರಿಹೊಂದುತ್ತದೆ. ಶಾಸನ ತೃಟಿತಗೊಂಡಿರುವುದರಿAದ ಹೆಚ್ಚಿನ ವಿಷಯಗಳು ತಿಳಿದುಬರುವುದಿಲ್ಲ. ಈ ವೀರಗಲ್ಲುವಿನಲ್ಲಿಎರಡು ಪಟ್ಟಿಕೆಗಳು ಮಾತ್ರ ಉಳಿದಿದ್ದು ಕೆಳ ಪಟ್ಟಿಕೆಗಳು ಒಡೆದು ಹೋಗಿವೆ. ಪ್ರಸ್ತುತ ಉಳಿದಿರುವ ಕೆಳ ಪಟ್ಟಿಕೆಯಲ್ಲಿಅಪ್ಸರೆಯರು ಬಂದು ವೀರನನ್ನುತಮ್ಮ ಹೆಗಲ ಮೇಲೆ ಕೈ ಹಾಕಿಕೊಂಡು ಸ್ವರ್ಗಕೆಕರೆದುಕೊಂಡು ಹೋಗುತ್ತಿರುವ ಸನ್ನಿವೇಶವನ್ನುತೋರಿಸಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಮಧ್ಯ ಶಿವಲಿಂಗವಿದ್ದು ಬಲಭಾಗದಲ್ಲಿ ಶೈವ ಮುನಿ ಪೂಜೆಯಲ್ಲಿ ನಿರತನಾಗಿರುವಂತೆ, ಇವನ ಹಿಂಭಾಗದಲ್ಲಿ ನಂದಿ ಶಿಲ್ಪ, ಶಿವಲಿಂಗದ ಎಡ ಭಾಗದಲ್ಲಿ ಕೈ ಮುಗಿದು ಕುಳಿತಿರುವ ವೀರನಉಬ್ಬು ಶಿಲ್ಪಗಳನ್ನು ಅಲಂಕಾರಿಕವಾಗಿಕೆತ್ತಲಾಗಿದೆ. ಇದೇದೇವಾಲಯದಲ್ಲಿರುವ ಮತ್ತೊಂದು ವೀರಗಲ್ಲುಐದು ಪಟ್ಟಿಕೆಗಳನ್ನು ಹೊಂದಿದ್ದು ಮೇಲಿನ ಪಟ್ಟಿಕೆ ಸಂಪೂರ್ಣವಾಗಿಒಡೆದು ಹೋಗಿದೆ. ಉಳಿದ ಪಟ್ಟಿಕೆಗಳು ಹೆಚ್ಚು ತೃಟಿತಗೊಂಡಿರುವುದರಿAದ ಸ್ಪಷ್ಟವಾಗಿಯಾವುದೇ ವಿಷಯಗಳು ತಿಳಿದುಬರುವುದಿಲ್ಲ. ಇಲ್ಲಿರುವ ನಾಲ್ಕು ಪಟ್ಟಿಕೆಗಳ ವೀರಗಲ್ಲಿನಲ್ಲಿಅತ್ಯಂತ ಕೆಳಗಿನ ಮತ್ತು ಮೂರನೇ ಪಟ್ಟಿಕೆಯಲ್ಲಿ ವೀರನು ಹೋರಾಡುತ್ತಿರುವಂತೆಚಿತ್ರಿಸಲಾಗಿದೆ. ಎರಡು ಹಾಗೂ ನಾಲ್ಕನೆಯ ಪಟ್ಟಿಕೆಯಲ್ಲಿ ವೀರಮರಣವನ್ನು ಹೊಂದಿದ ವೀರನನ್ನುಅಪ್ಸರೆಯರು ಬಂದು ಸ್ವರ್ಗಕ್ಕೆಕರೆದುಕೊಂಡು ಹೋಗುವ ಉಬ್ಬು ಶಿಲ್ಪಗಳಿವೆ. ಅದೇರೀತಿ ವಿತಾನ ಭಾಗದಲ್ಲಿಕಂಡುಬರುವ ಪದ್ಮದ ಶಿಲಾಫಲಕವನ್ನು ದೇವಾಲಯದಆವರಣದಲ್ಲಿಅದು ಮಧ್ಯದಲ್ಲಿ ಪದ್ಮದಳವನ್ನು ಹೊಂದಿದ್ದು, ಅದರ ಸುತ್ತಲೂ ಹನ್ನೇರಡು ರಾಶಿಗಳನ್ನು ಸೂಚಿಸುವ ಸಂಕೇತಗಳಿವೆ. ಗ್ರಾಮ: ಜಮಖಂಡಿ ಹೆಸರು: ಆಂಜನೇಯದೇವಾಲಯ ಸ್ಥಳ: ಊರಮಧ್ಯ ಅಭಿಮುಖ: ದಕ್ಷಿಣಾಭಿಮುಖ ಸ್ಥಿತಿ: ಉತ್ತಮ ಕಾಲ: ಕಲ್ಯಾಣ ಚಾಳುಕ್ಯ ನಗರದ ಮಧ್ಯದಲ್ಲಿಕಂಡುಬರುವಆAಜನೇಯದೇವಸ್ಥಾನಏಕಕೂಟ ಮಾದರಿಯದ್ದಾಗಿದ್ದುಗರ್ಭಗೃಹ ಮತ್ತು ಸಭಾಮಂಟಪವನ್ನು ಹೊಂದಿದೆ. ದೇವಾಲಯದಗರ್ಭಗೃಹದಲ್ಲಿಅಂದಾಜು ೫ ಅಡಿ ಎತ್ತರವಾದಆಂಜನೆಯ ಶಿಲ್ಪವಿದ್ದು ಇದು ನಂತರಕಾಲಾವಧಿಗೆ ಸಂಬAಧಿಸಿದ ಶಿಲ್ಪವಾಗಿದೆ. ಆದರೆಗರ್ಭಗೃಹವು ಪ್ರಾಚೀನಕಾಲಘಟ್ಟದೆಂದು ತಿಳಿದುಬರುತ್ತದೆ. ಇದರದ್ವಾರ ಬಂಧವು ಚತುಶಾಖೆಗಳಿಂದ ಕೂಡಿದ್ದುಅದು ವಜ್ರ, ವಲ್ಲಿ, ಸ್ತಂಭ ಮತ್ತುಗಣಧಾರಿ ಪಟ್ಟಿಕೆಗಳನ್ನು ಹೊಂದಿದೆ. ಲಲಾಟದಲ್ಲಿ ನರಸಿಂಹನ ಉಬ್ಬು ಶಿಲ್ಪವಿದ್ದು ಮೂಲತಃಇದೊಂದು ವೈಷ್ಣವ ದೇವಾಲಯವಾಗಿತ್ತೆಂದು ಹೇಳಬಹುದು. ಉತ್ತರಾಂಗಭಾಗದಲ್ಲಿರೇಖಾನಾಗರ ಶೈಲಿಯಚಿಕಣಿ ಶಿಲ್ಪಗಳನ್ನು ಹೊಂದಿದೆ. ಇದರ ಮುಂಭಾಗದ ಸಭಾಮಂಟಪವನ್ನು ಜಿರ್ಣೋದ್ಧಾರಗೊಳಿಸಿದ್ದು, ಕಲ್ಯಾಣ ಚಾಳುಕ್ಯ ಶೈಲಿಯಎಂಟು ಸ್ತಂಭಗಳು ಇಲ್ಲಿವೆ ಇವು ಪೀಠ, ದಂಡ, ತಡಿ, ಫಲಕಗಳನ್ನು ಹೊಂದಿದ್ದುಎರಡು ಚೌಕಗಳ ಮಧ್ಯ ೧೬ ಮತ್ತು ೮ ಪಟ್ಟಿಕೆಗಳ ರಚನೆಗಳಿವೆ. ಕೆಲವು ಸ್ತಂಭಗಳ ದಂಡ ಭಾಗವುಎರಡು ಚೌಕ ಪೆಟ್ಟಿಗೆಗಳ ಮಧ್ಯ ವೃತ್ತಾಕಾರವಾಗಿವೆ. ಈ ದೇವಾಲಯ ಸ್ತಂಭಗಳು ಮತ್ತುಗರ್ಭಗೃಹ ಮತ್ತುಅದರ ಶಾಖೆಗಳನ್ನು ಗಮನದಲ್ಲಿಟ್ಟುಕೊಂಡುಅದೊAದುಕಲ್ಯಾಣ ಚಾಳುಕ್ಯರ ದೇವಾಲಯವೆಂದು ಹೇಳಬಹುದು. ಇನ್ನುಳಿದಂತೆ ದೇವಾಲಯ ಸಂಪೂರ್ಣವಾಗಿಆಧುನಿಕವಾಗಿ ಜೀರ್ಣೋದ್ಧಾರಗೊಳಿಸಲಾಗಿದೆ. ಜಮಖಂಡಿನಗರದಲ್ಲಿಕAಡುಬAದಿರುವಎಲ್ಲದೇವಾಲಯಗಳು ದ್ರಾವಿಡ ಮಾದರಿಯರಚನಾವಿನ್ಯಾಸವನ್ನು ಹೊಂದಿವೆ. ಮತ್ತು ಮೂರ್ತಿಶಿಲ್ಪಗಳು ಸೂಕ್ಷö್ಮಕೆತ್ತನೆಗಳಿಂದ ಕೆಲವು ಸರಳ ಶೈಲಿಯಲ್ಲಿ ನಿರ್ಮಾಣವಾಗಿವೆ.ಈ ಮೇಲೆ ಚರ್ಚಿಸಲಾದದೇವಾಲಯಗಳು ಷಡ್ವರ್ಗಗಳನ್ನು ಹೊಂದಿದ್ದರೂ ಪ್ರಸ್ತುತದಲ್ಲಿದೇವಾಲಯದಅಧಿಷ್ಠಾನ, ಭಿತ್ತಿ ಮತ್ತುಕಪೋತ ಭಾಗಗಳು ಮಾತ್ರ ಉಳಿದುಕೊಂಡು ಬಂದಿವೆ.ಗ್ರೀವ, ಶಿಖರ ಹಾಗೂ ಸ್ತೊಪಿಗಳು ಸಂಪೂರ್ಣವಾಗಿ ನಾಶಹೊಂದಿವೆ. ಅಲ್ಲದೇ ಪ್ರಾಚೀನಕಾಲಾವಧಿಯಲ್ಲಿ ಹಲವಾರು ದೇವಾಲಯಗಳು ಜಮಖಂಡಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದರು ಸಹ ಅವುಗಳಲ್ಲಿ ಕೆಲವು ಅವಶೇಷಗಳು ಸಿಗದಷ್ಟು ನಶಿಸಿ ಹೋಗಿವೆ.ಇನ್ನೂ ಕೆಲವು ದೇವಾಲಯಗಳು ಅವನತಿಯ ಹಂತದಲ್ಲಿವೇಅAತಹ ದೇವಾಲಯಗಳ ರಕ್ಷಣೆ ನಮ್ಮೇಲ್ಲರ ಮೇಲಿದೆ. ಒಟ್ಟಾರೆಯಾಗಿಇಲ್ಲಿಯ ದೇವಾಲಯಗಳುಕಲೆ ಮತ್ತು ವಾಸ್ತುಶಿಲ್ಪ ಲಕ್ಷಣಗಳಲ್ಲಿ ಶ್ರೀಮಂತಿಕೆಯನ್ನು ಪಡೆದಿದ್ದುಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿವೆ ಎಂಬುದುಅಧ್ಯಯನದಿAದ ತಿಳಿದುಬರುತ್ತದೆ. ಪರಾಮರ್ಶನ ಗ್ರಂಥಗಳು ಮAಜುನಾಥ, ಎಂ. ಜಿ. (೨೦೦೬). ಹೊಯ್ಸಳರ ರಾಜಲಾಂಛನ ಯಾವುದು? ಪುನರ್ ಪರಿಶೀಲನೆ, ಇತಿಹಾಸದರ್ಶನ, ಸಂ. s೨೧. ಬೆಂಗಳೂರು: ಕರ್ನಾಟಕ ಇತಿಹಾಸ ಅಕಾಡೆಮಿ ಆಧಾರ ಗ್ರಂಥಗಳು ಅಪರ್ಣ, ಕೂ. ಸ. (೧೯೯೯). ದೇವಾಲಯ ವಾಸ್ತುಶಿಲ್ಪ ಪರಿಚಯ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಕಲಬುರ್ಗಿ, ಎಂ. ಎಂ. (೧೯೯೯). ಪ್ರಾಚೀನಕರ್ನಾಟಕದ ಆಡಳಿತ ವಿಭಾಗಗಳು. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಕುಲಕರ್ಣಿ, ಡಿ.ಜಿ. (೨೦೦೮). ಹಾವೇರಿಜಿಲ್ಲೆಯತ್ರಿಕೂಟ ದೇವಾಲಯಗಳು, ಕರ್ನಾಟಕಇತಿಹಾಸ ಸಂಶೋಧನಾ ಮಂಡಲ, ಧಾರವಾಡ. ಕೊಪ್ಪಾ, ಎಸ್. ಕೆ. (೧೯೯೦). ತರ್ದವಾಡಿ ನಾಡು ಒಂದು ಅಧ್ಯಯನ. ಇಚಿಡಿ: ಪ್ರತಿಭಾ ಪ್ರಕಾಶನ. ಗೋಪಾಲ, ಬಾ. ರಾ. (೧೯೮೦) ಕರ್ನಾಟಕದ ವಾಸ್ತುಶಿಲ್ಪ. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ. ಗೋಪಾಲರಾವ್, ಎಚ್. ಎಸ್. (೧೯೯೩). ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ. ಮೈಸೂರು: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ. ಚನ್ನಬಸಪ್ಪ, ಕೆ. (೨೦೦೯). ಜಮಖಂಡಿ ಶಾಸನೋಕ್ತ ದೇವಾಲಯಗಳು. ಧಾರವಾಡ: ಅಪ್ರಕಟಿತ ಎಂ.ಫಿಲ್. ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ. ಚನ್ನಬಸವಯ್ಯ ಹಿರೇಮಠ, (೨೦೧೪). ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಚಿದಾನಂದಮೂರ್ತಿ, ಎಮ್. (೧೯೬೬). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. ಮೈಸೂರು: ಮೈಸೂರು ವಿಶ್ವವಿದ್ಯಾಲಯ. ದೇವರಕೊಂಡಾರೆಡ್ಡಿ ಮತ್ತು ಇತರರು, (ಸಂ.)., (೨೦೦೬). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ: ೦೯, ಬಾಗಲಕೋಟೆ ಜಿಲ್ಲೆ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಪ್ರಭಾಕರ, ಎಂ. ಎನ್. (೨೦೧೧). ದೇವಾಲಯ ವಾಸ್ತು. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಮಟೋಳಿ, ಎಸ್. ಬಿ. (೨೦೦೮). ಜಮಖಂಡಿಯ ಇತಿಹಾಸ ದರ್ಪಣ. ತುಂಗಳ: ಗೆಳೆಯರ ಬಳಗ. ಮುನಿಸ್ವಾಮಿ, ಆರ್. (ಮು.ಸಂ.), (೧೯೯೯). ವಿಜಾಪುರ ಜಿಲ್ಲಾ ಗ್ಯಾಸೆಟಿಯರ್. ಬೆಂಗಳೂರು: ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಇಲಾಖೆ. ಮಂಜುನಾಥ ಎಸ್. ಪಾಟೀಲ, (೨೦೧೯). ಜಮಖಂಡಿ ತಾಲೂಕಿನ ಇತಿಹಾಸ ಮತ್ತು ಪುರಾತತ್ವ. ಬೆಂಗಳೂರು: ಚೇತನ ಬುಕ್ ಹೌಸ್.

bottom of page