top of page

ಕೊರೊನಾ ಎಂಬ ಮಾಹಿತಿಮಾರಿ: ಸಾಮಾಜಿಕ ಮಾಧ್ಯಮಗಳ ವಿಶ್ವಾಸಾರ್ಹತೆಯ ವಿಶ್ಲೇಷಣೆ

ವಿನಯ್ ಜಿ. ಪಿ. ಸಂಶೋಧನಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ– ೫೭೭ ೪೫೧, ಶಿವಮೊಗ್ಗ, ಕರ್ನಾಟಕ. E-mail: vinaygpa@gmail.com


ಸತ್ಯಪ್ರಕಾಶ್ ಎಂ. ಆರ್. ಸಹ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ– ೫೭೭ ೪೫೧, ಶಿವಮೊಗ್ಗ, ಕರ್ನಾಟಕ. E-mail: mrs@kuvempu.ac.in


ಸಾರಾಂಶ: ಮುದ್ರಣ ಮತ್ತು ಎಲೆಕ್ಟಾçನಿಕ್ ಮಾಧ್ಯಮಗಳ ಮಿತಿಗಳನ್ನು ಮೀರಿದ ಹೊಸಬಗೆಯ ಸಂವಹನ, ಬಹುಮಾಧ್ಯಮ ವಿಷಯವಸ್ತು ಪ್ರಸ್ತುತಿ, ತತ್‌ಕ್ಷಣ ಪ್ರತಿಕ್ರಿಯೆ ನೀಡಬಲ್ಲ ಅವಕಾಶಗಳನ್ನು ಹೊತ್ತುತಂದದ್ದು ನವಮಾಧ್ಯಮ. ವಿಶೇಷತೆಗಳಿಂದಲೇ ಬಳಕೆದಾರರಿಗೆ ಅಪ್ಯಾಯಮಾನವಾದ ಈ ಸಾಮಾಜಿಕ ಮಾಧ್ಯಮ(Soಛಿiಚಿಟ meಜiಚಿ)ದಲ್ಲಿ ಹರಿದಾಡುವ ಮಾಹಿತಿಗಳ ಮೂಲ, ವಿಶ್ವಾಸರ್ಹತೆ ಮತ್ತು ಹೊಣೆಗಾರಿಕೆಗಳ ಅವಶ್ಯಕತೆ, ಪ್ರಾಮುಖ್ಯತೆ ಬಗ್ಗೆ ಬಹುತೇಕರಿಗೆ ಕಾಳಜಿ ಇರಲಿಲ್ಲ. ೨೦೨೦ರ ಆರಂಭದಲ್ಲಿ ಕೋವಿಡ್೧೯ ಮಹಾಮಾರಿ ಜಗತ್ತಿನಾದ್ಯಂತ ಹರಿಡಿದಾಗ ಪ್ರತಿಯೊಬ್ಬರ ಆದ್ಯತೆಯಾದ ಆರೋಗ್ಯ ಕಾಳಜಿ ಜಾಗೃತವಾದದ್ದೇನೊ ಸರಿ. ಜನಸಾಮಾನ್ಯರು ತತ್‌ಕ್ಷಣದ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು, ಓದಿದ್ದು, ಕೇಳಿದ್ದನ್ನು ಆತಂಕದಿAದಲೇ ಹಂಚಿಕೊAಡು ಅವು ಅರೆಸತ್ಯ, ಸುಳ್ಳುಸುದ್ದಿಗಳಾಗಿ ಸುಶಿಕ್ಷಿತರನ್ನು ಕಾಡಿದ್ದು ನವಮಾಧ್ಯಮದ ವ್ಯಾಪ್ತಿ ಮತ್ತು ಪ್ರಭಾವವನ್ನು ಎತ್ತಿತೋರಿಸಿತು. ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ರಾಷ್ಟಿçÃಯ- ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮುಖ್ಯವಾಹಿನಿ ಟಿವಿವಾಹಿನಿಗಳಲ್ಲಿ ಹರಿದಾಡಿದ ಸುಳ್ಳುಸುದ್ದಿಗಳ ಹಿನ್ನೆಲೆ, ಜನಾಂಗೀಯತೆ, ಜಾತಿ-ಧರ್ಮಾಧಾರಿತ ಪಕ್ಷಪಾತಿತನ, ಇದರಿಂದಾದ ಹಾನಿ ಹಾಗೂ ಅವುಗಳನ್ನು ತಡೆಯುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ.


ಮುಖ್ಯಪರಿಕಲ್ಪನೆಗಳು: ನವಮಾಧ್ಯಮ, ಸಾಮಾಜಿಕ ಜಾಲತಾಣಗಳು, ಸುಳ್ಳುಸುದ್ದಿ, ವಿಶ್ವಾಸಾರ್ಹತೆ


ಪೀಠಿಕೆ

ಮಾಹಿತಿ ತಂತ್ರಜ್ಞಾನಗಳ ನಾಗಾಲೋಟದ ಈ ದಿನಮಾನಗಳಲ್ಲಿ ಅವಶ್ಯ ಮಾಹಿತಿಯು ಬೆರಳಂಚಿನಲ್ಲಿ ದೊರೆಯುತ್ತಿರುವುದು ನಮ್ಮ ಅದೃಷ್ಟವೇ ಸರಿ. ಇಂಟರ್‌ನೆಟ್ ಸಂಪರ್ಕವೊAದಿದ್ದರೆ ಪ್ರಪಂಚದೆಲ್ಲೆಡೆಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿಯೇ ಪಡೆಯಬಹುದಾಗಿದೆ. ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದಾಗಿ ಸುದ್ದಿತಾಣಗಳು, ವೆಬ್‌ಪೋರ್ಟಲ್‌ಗಳು, ಮಾಹಿತಿಕೋಶಗಳು, ಆಡಿಯೋ-ವಿಡಿಯೋ ಆಧರಿತ ನವಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ನಮಗೆ ಸಾವಿರಾರು ವಿಷಯವಸ್ತುಗಳನ್ನು ದಿನವಿಡೀ ತಲುಪಿಸುತ್ತಲೇ ಇರುತ್ತವೆ. ದಿನಗಳದಂತೆ ಇದು ಮಾಹಿತಿ ಮಹಾಸ್ಫೋಟವಾಗಿ ಬದಲಾಗಿದೆ.


ವೈವಿಧ್ಯಮಯ ಸಾಮಾಜಿಕ ಜಾಲತಾಣಗಳ ಲಭ್ಯತೆಯಿಂದಾಗಿ ಇಂದು ಪ್ರತಿಯೊಬ್ಬರೂ ತಮ್ಮ ಆಲೋಚನೆ, ಅಭಿಪ್ರಾಯಗಳನ್ನು ಹತ್ತಾರು ಜನರಿಗೆ ಸುಲಭವಾಗಿ ತಲುಪಿಸುವ, ಮಾಧ್ಯಮವಾಗಿ ಹೊರಹೊಮ್ಮುವ ಅಪರೂಪದ ಅವಕಾಶಗಳನ್ನು ಪಡೆದಿದ್ದಾರೆ. ಇದು ಮಾಹಿತಿ ಮಹಾಪೂರಕ್ಕೆ ವೃತ್ತಿಪರರು ಸೃಷ್ಟಿಸಿ, ವಿತರಿಸಿದ ಮಾಹಿತಿಗಳಲ್ಲದೇ, ವೈಯಕ್ತಿಕ ಕೊಡುಗೆಗಳನ್ನು ಸೇರಿಸಿದೆ. ಈ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿದರೇ, ಸಮಾಜದಲ್ಲಿ ಮುಕ್ತವಾಗಿ ವಿಷಯ ತಿಳಿಯುವ, ಹಂಚಿಕೊಳ್ಳುವ ವಿಫುಲ ದಾರಿಗಳನ್ನು ತೆರೆದಿಟ್ಟಿದೆ ಎನ್ನಬಹುದು. ಆದರೆ ದಿನಪತ್ರಿಕೆ, ಟೆಲಿವಿಷನ್ ನ್ಯೂಸ್ ಚಾನೆಲ್‌ಗಳು, ಆನ್‌ಲೈನ್ ಸುದ್ದಿತಾಣಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳು ತಂದು ರಾಶಿ ಹಾಕುತ್ತಿರುವ ಮಾಹಿತಿಯಲ್ಲಿ ಅಗತ್ಯ-ಅನಗತ್ಯ, ಗಟ್ಟಿ-ಜೊಳ್ಳು, ಸುಳ್ಳು-ಸತ್ಯಗಳನ್ನು ಬೇರ್ಪಡಿಸುವುದು, ಅರಿಯುವುದು ನಮಗಿಂದು ಕಷ್ಟಕರವಾಗಿದೆ. ವಿಷಯವೊಂದರ ಸುತ್ತ ಸೃಷ್ಟಿಯಾಗುವ ಇಂತಹ ಪರಿಸ್ಥಿತಿಯನ್ನೇ ಮಾಹಿತಿಮಾರಿ (Iಟಿಜಿoಜemiಛಿ) ಎನ್ನಲಾಗುತ್ತದೆ. ಈ ಸಂದರ್ಭದವು ಸುಳ್ಳು ಸುದ್ದಿಗಳ ಸುಲಭ, ಯತೇಚ್ಛ ಹರಿದಾಟಕ್ಕೆ ದಾರಿಮಾಡಿಕೊಡುತ್ತದೆ.



ಸುಳ್ಳು ಸುದ್ದಿ: ಸುಳ್ಳು ಸುದ್ದಿ (ಈಚಿಞe ಟಿeತಿs) ಎಂದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯೊಂದನ್ನು ಸಾಂಪ್ರದಾಯಿಕ ಅಥವಾ ಆಧುನಿಕ ನವಮಾಧ್ಯಮಗಳ ಮೂಲಕ ದೊಡ್ಡಪ್ರಮಾಣದಲ್ಲಿ ಪಸರಿಸಿ ಓದುಗರನ್ನು ತಪ್ಪುದಾರಿಗೆಳೆಯುವ, ಮೋಸಗೊಳಿಸುವ ಪ್ರಕ್ರಿಯೆಯಾಗಿರುತ್ತದೆ. ಇಂಟರ್‌ನೆಟ್ ಆಧರಿತ ಸಾಮಾಜಿಕ ಸಂಪರ್ಕ ಮಾಧ್ಯಮಗಳು ಈ ಪ್ರಕ್ರಿಯೆಯನ್ನು ಇಂದು ಇನ್ನಿಲ್ಲದಂತೆ ಹೆಚ್ಚಿಸಿವೆ. ಹಿಂದೆ ಸುಳ್ಳುಸುದ್ದಿಗಳನ್ನು ಪೀತ ಪತ್ರಿಕೋದ್ಯಮದ ಭಾಗವಾಗಿಯೂ ನೋಡಲಾಗುತ್ತಿತ್ತು. ಇವು ನಂಬಲರ್ಹವೆAಬAತೆ ಕಾಣುವುದಲ್ಲದೇ, ತೀವ್ರವಾಗಿ ಮನವೊಲಿಸುವಂತಿರುತ್ತವೆ.


ಸುಳ್ಳುಸುದ್ದಿಗಳ ಸೃಷ್ಟಿ ಮತ್ತು ಪ್ರಸರಣೆಯು ಓದುಗರನ್ನು ತಪ್ಪುದಾರಿಗೆಳೆಯುವ ಮೂಲಕ ವ್ಯಕಿ ಅಥವಾ ಸಂಸ್ಥೆಯೊAದಕ್ಕೆ ಹಾನಿಗೀಡುಮಾಡುವ, ಮತ್ತು ರಾಜಕೀಯವಾಗಿ ಅಥವಾ ಆರ್ಥಿಕವಾಗಿ ಲಾಭಗಳಿಸುವ ಉದ್ದೇಶಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ವೈಭವೀಕೃತ, ಅಪ್ರಾಮಾಣಿಕ, ಪೂರ್ಣವಾಗಿ ಸಂಬAಧಿಸದ ಶೀರ್ಷಿಕೆ ಹಾಗೂ ಮಾಹಿತಿಯನ್ನು ಬಳಸಲಾಗಿರುತ್ತದೆ. ಹಲವು ತಜ್ಞರು ಸುಳ್ಳುಸುದ್ದಿ (ಈಚಿಞe ಟಿeತಿs) ಎಂಬ ಪದಬಳಕೆಯು ಅದರ ವ್ಯಾಪ್ತಿಯನ್ನು ರಾಜಕೀಯ ಲಾಭಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ಇಂದು ಸಮಾಜದಲ್ಲಿ ಹಲವು ರೀತಿಯ, ವಿವಿಧ ಉದ್ದೇಶಗಳನ್ನು ಒಳಗೊಂಡ ಸುಳ್ಳುಸುದ್ದಿಗಳು ಹರಿದಾಡುತ್ತಿರುವ ಕಾರಣ ಅವನ್ನು ಒಟ್ಟಾರೆಯಾಗಿ ತಪ್ಪುಮಾಹಿತಿ (ಜಿಚಿಟse iಟಿಜಿoಡಿmಚಿಣioಟಿ) ಎಂದು ಬಳಸುವುದು ಸೂಕ್ತ ಎಂದಿದ್ದಾರೆ. ತಪ್ಪುಮಾಹಿತಿ ಹರಡುವಿಕೆ ತಡೆಯಲು ಹೋರಾಡುತ್ತಿರುವ ಅಂತರಾಷ್ಟಿçÃಯ ಖ್ಯಾತಿಯ ಫಸ್ಟ್ ನ್ಯೂಸ್ ಡ್ರಾಫ್ಟ್ ಸಂಸ್ಥೆಯ ಮುಖ್ಯಸ್ಥೆ ಕ್ಲೆöÊರ್ ವಾರ್ಡ್ಲ್, ಸುಳ್ಳುಸುದ್ದಿ ಬದಲಾಗಿ ಮಾಹಿತಿ ಮಾಲಿನ್ಯ (Iಟಿಜಿoಡಿmಚಿಣioಟಿ ಠಿoಟಟuಣioಟಿ) ಎಂದು ಕರೆದಿದ್ದಾರೆ. ಇದು ತಪ್ಪು ಮಾಹಿತಿ (misiಟಿಜಿoಡಿmಚಿಣioಟಿ), ಉದ್ದೇಶಪೂರ್ವಕ ತಪ್ಪು ಮಾಹಿತಿ (ಜisiಟಿಜಿoಡಿmಚಿಣioಟಿ) ಹಾಗೂ ಅಸಮರ್ಪಕ ಮಾಹಿತಿ (mಚಿಟiಟಿಜಿoಡಿmಚಿಣioಟಿ) ಗಳನ್ನು ಒಳಗೊಳ್ಳುತ್ತದೆ. ಭಾರತದಲ್ಲಿ ಸುಳ್ಳುಸುದ್ದಿಗಳು ಇನ್ನೂ ಸಹ ಪರೋಕ್ಷವಾಗಿ ರಾಜಕೀಯ ಲಾಭ, ಆಸಕ್ತಿಗಳ ಸುತ್ತಲೇ ಸುತ್ತುತ್ತಿರುವುದರಿಂದ ಲೇಖನದಲ್ಲಿ ಸುಳ್ಳುಸುದ್ದಿ ಎಂದೇ ಬಳಸಲಾಗಿದೆ.


ನಿಯೋಜಿತ ಪ್ರಚಾರ, ವಿಡಂಬನೆ/ಅಪಹಾಸ್ಯ, ತಪ್ಪುದಾರಿಗೆಳೆಯುವ ಶೀರ್ಷಿಕೆಗಳು, ಪಕ್ಷಪಾತಿ ಅಥವಾ ಪೂರ್ವಗ್ರಹಪೀಡಿತ ಮಾಹಿತಿ, ಅಸಡ್ಡೆ ಪತ್ರಿಕೋದ್ಯಮ, ಕ್ಲಿಕ್‌ಬೈಟ್ (ವೆಬ್‌ತಾಣಕ್ಕೆ ಭೇಟಿ ನೀಡುವಂತೆ ಆಕರ್ಷಿಸುವ, ಪ್ರೇರೇಪಿಸುವ ವಿಷಯದ ಕೊಂಡಿ)ಗಳು ಸುಳ್ಳುಸುದ್ದಿಗಳ ಮಾದರಿಗಳಾಗಿರುತ್ತವೆ. ಇಲ್ಲಿನ ಬಹುತೇಕ ಮಾದರಿಗಳ ಅಸ್ಥಿತ್ವವಿರುವುದು ಅಂತರ್ಜಾಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಾಸ್ಪದ. ಸಾಮಾಜಿಕ ಜಾಲತಾಣಗಳ ಮೂಲಕ ಸುಲಭವಾಗಿ ಕನಿಷ್ಠ ಖರ್ಚಿನಲ್ಲಿ ಸುಳ್ಳನ್ನು ಪ್ರಕಟಿಸಿ, ಸಾವಿರಾರು ಜನರಿಗೆ ಆ ಮಾಹಿತಿ ತಲುಪಿಸುವ ಸಾಧ್ಯತೆ ಹಾಗೂ ಇದಕ್ಕೆ ಯಾವುದೇ ಕಾಯಿದೆ-ಕಾನೂನುಗಳ ತೊಡಕಿಲ್ಲದಿರುವುದು ಸುಳ್ಳುಸುದ್ದಿಗಳ ಪ್ರಸರಣೆಗೆ ವಿಫುಲ ಅವಕಾಶಗಳನ್ನು ಒದಗಿಸಿದೆ ಎಂದು ಸುದರ್ಶನ್ ಸಾಹು (೨೦೧೭) ಅಧ್ಯಯನವೊಂದರಲ್ಲಿ ವಿವರಿಸಿದ್ದಾರೆ. ಜೊತೆಗೆ ಜಾಲತಾಣಗಳಲ್ಲಿ ಹೆಚ್ಚಿನ ಲೈಕ್ಸ್ ಪಡೆಯುವ ಹಪಾಹಪಿ, ಇನ್ನೊಬ್ಬರನ್ನು ಇಕ್ಕಟ್ಟಿಗೆ ಸಿಲುಕಿಸಿ ಮಜಾ ನೋಡುವ ಪ್ರವೃತ್ತಿಗೆ, ಅಪಹಾಸ್ಯಗೊಳಿಸಿ ಅವರ ಸಾಮಾಜಿಕ ಮಾನ್ಯತೆ ಕುಂದಿಸಲು, ಕೆಲವೊಮ್ಮೆ ಆರ್ಥಿಕ ಲಾಭಕ್ಕಾಗಿಯೂ ನಡೆಯುತ್ತಿರುವುದುಂಟು. ಸಾಮಾಜಿಕ ಜಾಲತಾಣಗಳು ಈ ಕುಚೋದ್ಯಕ್ಕೆ ಬೃಹತ್ ವೇದಿಕೆಗಳಾಗಿವೆ.

ಸಾಮಾಜಿಕ ಮಾಧ್ಯಮ: ೨೦೨೦ರ ಜನವರಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಶ್ವದ ಸುಮಾರು ಶೇ. ೬೦ರಷ್ಟು ಜನರು ಅಂದರೆ ೪.೫೪ ಬಿಲಿಯನ್ ಮಂದಿ ಇಂಟರ್‌ನೆಟ್ ಬಳಸುತ್ತಿದ್ದಾರೆ. ಅವರಲ್ಲಿ ೩.೮ ಬಿಲಿಯನ್ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ (ವಿ ಆರ್ ಸೊಶಿಯಲ್, ೨೦೨೦). ಇದೇ ಸಂದರ್ಭದಲ್ಲಿ ಭಾರತದ ೬೮.೮ ಕೋಟಿ ಮಂದಿ ಸಕ್ರಿಯವಾಗಿ ಇಂಟರ್‌ನೆಟ್ ಬಳಸುತ್ತಿದ್ದು, ಇವರಲ್ಲಿ ೧೬-೩೯ರ ವಯೋಮಾನದವರ ಪಾಲು ಶೇ. ೭೨ ರಷ್ಟಿದೆ. ಅಂತರ್ಜಾಲ ಬಳಸುವವರಲ್ಲಿ ಶೇ. ೯೦ ರಷ್ಟು ಜನರು ಮೊಬೈಲ್ ಮೂಲಕವೇ ಈ ಸೌಲಭ್ಯ ಉಪಯೋಗಿಸುತ್ತಿದ್ದಾರೆ.


ಸ್ಮಾರ್ಟ್ಫೋನ್ ಹೊಂದಿರುವ ಪ್ರತೀ ಮೂರರಲ್ಲಿ ಎರಡು ಮಂದಿ ಒಂದಿಲ್ಲೊAದು ಸಾಮಾಜಿಕ ಸಂಪರ್ಕತಾಣಗಳಲ್ಲಿ ಖಾತೆ ಹೊಂದಿದ್ದಾರೆAಬುದು ಗಮನಾರ್ಹ. ಒಟ್ಟಾರೆ ೪೦ಕೋಟಿ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ವಾಟ್ಸಾಪ್ ಬಳಕೆ ಹೆಚ್ಚುತ್ತಿರುವುದು ಜಾಲತಾಣಿಗರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಲು ಸಾಕ್ಷಿಯಾಗಿದೆ ಎಂದು ಜಾಗತಿಕ ದತ್ತಾಂಶಗಳನ್ನು ಒದಗಿಸುವ ಸ್ಟಾö್ಯಟಿಸ್ಟ (೨೦೨೦) ವರದಿ ಮಾಡಿದೆ. ಮುಂದುವರಿದು ಭಾರತದ ಪ್ರತೀ ಜಾಲತಾಣಿಗನೂ ಸರಾಸರಿ ೨.೪ಗಂಟೆಗಳನ್ನು ಅವುಗಳ ಮೇಲೆ ವ್ಯಯಿಸುತ್ತಿದ್ದಾನೆ ಹಾಗೂ ಫೇಸ್‌ಬುಕ್, ಯೂಟೂಬ್, ಕೋರಾ, ಇನ್ಸಾ÷್ಟಗ್ರಾಂ ಹಾಗೂ ಟ್ವಿಟ್ಟರ್‌ಗಳು ಜನಪ್ರಿಯತೆಯಲ್ಲಿ ಅಗ್ರ ಸ್ಥಾನಗಳನ್ನು ಗಳಿಸಿವೆ. ಹೀಗೆ ಭಾರತದ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಮತ್ತು ಪ್ರಭಾವಳಿ ದೊಡ್ಡ ಪ್ರಮಾಣದಲ್ಲಿದೆ.


ಜಾಲತಾಣಗಳಲ್ಲಿ ಸುಳ್ಳುಸುದ್ದಿ: ಸುಳ್ಳುಸುದ್ದಿಯ ಪಿಡುಗು ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದಾದ್ಯಂತ ಇದು ವ್ಯಾಪಿಸಿದ್ದು, ಅಂತರಾಷ್ಟಿçÃಯ ಮಟ್ಟದ ರಾಜಕೀಯ, ವಾಣಿಜ್ಯ-ವ್ಯವಹಾರ, ಆರೋಗ್ಯ ಇನ್ನಿತರೆ ಕ್ಷೇತ್ರಗಳ ಮೇಲೆ ತನ್ನ ಕೆಟ್ಟಪರಿಣಾಮವನ್ನು ಈಗಾಗಲೇ ಸಾಬೀತುಪಡಿಸಿದೆ. ೨೦೧೬ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡ ಅಗ್ರ ೨೦ ಸುಳ್ಳುಸುದ್ದಿಗಳು ೮೭ಲಕ್ಷ ಶೇರ್ ಹಾಗೂ ಪ್ರತಿಕ್ರಿಯೆಗಳನ್ನು ಪಡೆದಿದ್ದವು. ಇದೇ ಸಮಯದಲ್ಲಿ ಅಲ್ಲಿಯ ಖ್ಯಾತ ದಿನಪತ್ರಿಕೆಗಳಾದ ದಿ ವಾಷಿಂಗ್ಟನ್ ಪೋಸ್ಟ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ಗಳು ಪ್ರಕಟಿಸಿದ ೨೦ ಸುದ್ದಿಗಳು ೭೩ ಲಕ್ಷ ಪ್ರತಿಕ್ರಿಯೆ ಮತ್ತು ಹಂಚಿಕೆಗಳನ್ನು ಕಂಡಿದ್ದವು. ಇದು ಸುಳ್ಳುಸುದ್ದಿಗಳು ಜಾಲತಾಣಗಳ ಮೂಲಕ ಅಪಾರ ಜನರನ್ನು ತಲುಪುವ, ಅವರ ಗಮನಸೆಳೆಯುವ ಹಾಗೂ ನಂಬಿಸುವ ಸಾಮರ್ಥ್ಯದ ಮೇಲೆ ಬೆಳಕು ಚೆಲ್ಲುತ್ತದೆ.


ಪ್ರತಿಷ್ಟಿತ ಸೈನ್ಸ್ ಪತ್ರಿಕೆ ಪ್ರಕಟಿಸಿದ (ವೊಸೌಗಿ ಮತ್ತು ತಂಡ, ೨೦೧೮) ವರದಿಯೊಂದು, ಟ್ವಿಟ್ಟರ್‌ನಲ್ಲಿ ೨೦೦೬-೨೦೧೭ರ ವರೆಗೆ ಹರಿದಾಡಿದ ತಪ್ಪುಮಾಹಿತಿಗಳ ಕುರಿತು ಅಧ್ಯಯನ ನಡೆಸಿ ಸತ್ಯಕ್ಕಿಂತ ಸುಳ್ಳುಸುದ್ದಿಗೆ ಹೆಚ್ಚು ಜನರನ್ನು ತಲುಪಬಹುದಾದ ಶಕ್ತಿಯಿದೆಯೆಂಬ ಕಟುಸತ್ಯವನ್ನು ಹೊರಗೆಡವಿದೆ. ಅವುಗಳಲ್ಲಿ ಅಗ್ರ ಶೇ. ೦೧ ರಷ್ಟು (ಸುಳ್ಳು)ಸುದ್ದಿಗಳು ವ್ಯಾಪಕವಾಗಿ ಹರಿದಾಡಿ ಒಂದು ಸಾವಿರದಿಂದ ಒಂದು ಲಕ್ಷ ಜನರನ್ನು ತಲುಪಿವೆ. ಆದರೆ ಇದೇ ಸಂದರ್ಭದಲ್ಲಿ ಸತ್ಯಸುದ್ದಿಗಳು ಕೆಲವೊಮ್ಮೆ ಮಾತ್ರ ಸಾವಿರಕ್ಕಿಂತ ಅಧಿಕ ಟ್ವಿಟ್ಟಿಗರಿಂದ ಓದಲ್ಪಟ್ಟಿವೆ ಎಂಬ ಆಘಾತಕಾರಿ ಪ್ರವೃತ್ತಿ ಅಸ್ಥಿತ್ವದಲ್ಲಿರುವುದನ್ನು ತಿಳಿಸಿದೆ.


ವಿದೇಶಗಳ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಹರಿದಾಡಿದರೆ, ಭಾರತದಲ್ಲಿ ಮುಖ್ಯವಾಹಿನಿ ಟಿವಿ ಚಾನೆಲ್‌ಗಳಲ್ಲಿಯೇ ಅವು ಪ್ರದರ್ಶನಗೊಂಡಿವೆ ಎಂಬುದು ದುರದೃಷ್ಟಕರ ಸಂಗತಿ. ಕೇಂದ್ರ ಸರ್ಕಾರ ೨೦೧೬ರಲ್ಲಿ ಸಾವಿರ, ಐದುನೂರು ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದಾಗ, ಹೊಸನೋಟುಗಳಲ್ಲಿ ನ್ಯಾನೋ ಜಿ.ಪಿ.ಎಸ್. ಚಿಪ್ ಇರಿಸಲಾಗಿದ್ದು, ಕಪ್ಪುಹಣ ಸಂಗ್ರಹಕ್ಕಿದು ಕಡಿವಾಣ ಹಾಕಲಿದೆ ಎಂದು ಯಾರೋ ಗಾಳಿಸುದ್ದಿ ಹರಡಿದರು. ‘ತಾವೇ ಮೊದಲು’ ಸುದ್ದಿ ನೀಡುವ ಧಾವಂತದಲ್ಲಿ ಈ ಸುಳ್ಳುಸುದ್ದಿಯನ್ನು ರಾಷ್ಟಿçÃಯ ಜೀ ನ್ಯೂಸ್, ಕನ್ನಡದ ಪಬ್ಲಿಕ್ ಟಿವಿ ಹಾಗೂ ಇತರೆ ಚಾನೆಲ್‌ಗಳು ಪ್ರಸಾರಮಾಡಿ ನಗೆಪಾಟಲಿಗೀಡಾಗಿದ್ದವು. ಕಳೆದ ವರ್ಷ ೨೦೧೯ನ್ನು ಸುಳ್ಳುಸುದ್ದಿಗಳ ವರ್ಷ ಎಂದೇ ಕರೆಯಲಾಗಿರುವುದು ಸುಳ್ಳುಸುದ್ದಿಗಳ ಭರಾಟೆ ತಗ್ಗದಿರುವುದನ್ನು ಸಾಕ್ಷೀಕರಿಸುತ್ತದೆ. ಭಾರತದಲ್ಲಿ ಸುಳ್ಳುಸುದ್ದಿಗಳು ಬಹುತೇಕ ರಾಜಕೀಯದ ಸುತ್ತಮುತ್ತ ಸೃಷ್ಟಿಯದಂತಹವುವಾಗಿವೆ. ಪುಲ್ವಾಮಾ ಹಾಗೂ ಬಾಲಾಕೋಟ್ ದಾಳಿಯ ನಕಲಿ ವಿಡಿಯೋಗಳು, ೨೦೧೯ರ ಲೋಕಸಭಾ ಚುನಾವಣೆ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಜೆಎನ್‌ಯು ಮೇಲಿನ ದಾಳಿ, ಕಠುವಾ ಅತ್ಯಾಚಾರ ಪ್ರಕರಣ ಸಂಬAಧಿ ಸರಣಿ ಸುಳ್ಳುಸುದ್ದಿಗಳು ವರದಿಯಾಗಿವೆ. ಸುಳ್ಳುಸುದ್ದಿಗಳ ನಿಜಬಣ್ಣ ಬಯಲಿಗೆಳೆಯುವ ಖ್ಯಾತ ವೆಬ್‌ತಾಣ ಆಲ್ಟ್ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹ, ಕಳೆದ ವರ್ಷಕ್ಕಿಂತ ಹಲವುಪಟ್ಟು ಅಧಿಕ ಸಂಖ್ಯೆಯ ಸುದ್ದಿಗಳ ನೈಜತೆಯನ್ನು ೨೦೧೯ರಲ್ಲಿ ಪರೀಕ್ಷಿಸಿರುವುದಾಗಿ ಎಕಾನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


ಕೊರೊನಾ ಮತ್ತು ಸುಳ್ಳುಸುದ್ದಿ

ಕಳೆದ ವರ್ಷಾಂತ್ಯದಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಪತ್ತೆಯಾದ ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡಿದ್ದು ಅಂತಾರಾಷ್ಟಿçÃಯ ಮಟ್ಟದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಕೊರೊನಾದಂತೆಯೇ ಜಗತ್ತನ್ನು ಕಾಡುತ್ತಿರುವ ಮತ್ತೊಂದು ವಿಚಾರವೆಂದರೆ ಅದು ಸುಳ್ಳುಸುದ್ದಿಗಳ ಹಾವಳಿ. ವಿಶೇಷವಾಗಿ ಅವೆಲ್ಲವೂ ಮತ್ತದೇ ಕೊರೊನಾ (ಕೊವಿಡ್೧೯) ಸುತ್ತಲೇ ಗಿರಕಿಹೊಡೆಯುತ್ತಿವೆ. ಕೊರೊನಾ ಸಂಬAಧಿ ಸುಳ್ಳುಸುದ್ದಿಗಳು ಅಂತಾರಾಷ್ಟಿçÃಯ ಮಟ್ಟದಿಂದ ಸ್ಥಳೀಯ ಹಂತದವರೆಗೂ ವಿವಿಧ ರೀತಿಯಾಗಿ ಪಸರಿಸುತ್ತಿವೆ. ಆದರೆ ವಿಶ್ವದ ೨೦೯ ದೇಶಗಳ ಜನರ ಜೀವಭಯಕ್ಕೆ ಕಾರಣವಾಗಿರುವ ಕೊವಿಡ್೧೯ ಬಗ್ಗೆ ಹರಡುವ ಸುಳ್ಳುಸುದ್ದಿಗಳ ಪರಿಣಾಮವು ಸಾಮಾನ್ಯ ಸುಳ್ಳುಸುದ್ದಿಗಳ ಪರಿಣಾಮಕ್ಕಿಂತಲೂ ಭೀಕರ.


ಕೊರೊನಾ ರೋಗದಿಂದ ಸಾವನ್ನಪ್ಪಿದ ಅಂಕಿಸAಖ್ಯೆಗಳು, ಸಾವಿನ ರೀತಿನೀತಿಗಳು, ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ, ಇದು ಚೀನಾದ ಜೈವಿಕ ಯುದ್ಧಸಾಧನ, ವೈರಸ್ ನಿವಾರಣೆಗೆ ಮನೆಮದ್ದುಗಳು, ಕೊರೊನಾ ಔಷಧಿ ಸಿದ್ಧವಾಯ್ತು, ಲಾಕ್‌ಡೌನ್ ವಿಸ್ತರಣೆಯಾಯ್ತು, ರೋಗಪೀಡಿತರ ಓಡಾಟದ ಸುಳ್ಳುವಿವರಗಳು, ದೇಶದ ಉನ್ನತ ಹುದ್ದೆಯಲ್ಲಿರುವವರು, ಪ್ರತಿಷ್ಠಿತರು ರೋಗಪೀಡಿತರಾಗಿದ್ದಾರೆ ಎಂಬವು ಸೇರಿದಂತೆ ನೂರಾರು ಸುಳ್ಳುಸುದ್ದಿಗಳು ಬಗೆಬಗೆಯಗಿ ಪ್ರಚಲಿತಗೊಂಡವು. ಸಾರ್ವಜನಿಕರ ಸಾವು-ಬದುಕಿನ ಹೋರಾಟವಾದ ಕಾರಣ ೨೪*೭ ಚಾನೆಲ್‌ಗಳು ಸಹ ನಿರಂತರವಾಗಿ ಕೊರೊನಾ ಜಪಿಸಿದವು. ಬಹುತೇಕ ರಾಷ್ಟçಗಳು ಲಾಕ್‌ಡೌನ್‌ನಲ್ಲಿರುವ ಕಾರಣ ಜನರು ಮೊದಲಿಗಿಂತ ಹೆಚ್ಚಿನ ಸಮಯವನ್ನು ಮಾಧ್ಯಮಗಳ ಮೇಲೆ ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ವ್ಯಯಿಸುತ್ತಿರುವುದು ಈ ಪ್ರವೃತ್ತಿಗೆ ಮತ್ತಷ್ಟು ಇಂಬುನೀಡಿದAತಾಗಿದೆ. ಬುಸಿನೆಸ್ ಟುಡೆ ಪತ್ರಿಕೆ ವರದಿ ಮಾಡಿರುವಂತೆ ಲಾಕ್‌ಡೌನ್ ದಿನಗಳಲ್ಲಿ ಭಾರತೀಯರು ಪ್ರತಿದಿನ ನಾಲ್ಕು ತಾಸು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಇದು ಹಿಂದಿನ ವಾರಗಳಿಗೆ ಹೋಲಿಸಿದಲ್ಲಿ ಶೇ. ೮೭ರಷ್ಟು ಹೆಚ್ಚಿನ ಪ್ರಮಾಣದ್ದಾಗಿದೆ ಎಂಬುದು ಗಮನಾರ್ಹ. ಶೇ. ೭೫ರಷ್ಟು ಮಂದಿ ಫೇಸಬುಕ್, ಟ್ವಿಟ್ಟರ್ ಮತ್ತು ವಾಟ್ಸಾö್ಯಪ್‌ಗಳನ್ನು ಬಳಸುತ್ತಿರುವುದಾಗಿ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಅಂತರ್ಜಾಲದ ಹುಡುಕಾಟವು ಲಾಕ್‌ಡೌನ್‌ನ ಮೊದಲವಾರದಲ್ಲಿ ಶೇ. ೭೨ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಇಂತಹ ಬಿಡುವಿನ ಸಮಯದಲ್ಲಿ ಹರಡುವ ಸುಳ್ಳುಸುದ್ದಿಗಳು ಮತ್ತಷ್ಟು ಸಾವಿರ-ಲಕ್ಷ ಜನರನ್ನು ತಲುಪುವ ಸುಲಭ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.


ಜಾಗತಿಕ ಮಟ್ಟದಲ್ಲಿ ಸುಳ್ಳುಸುದ್ದಿಗಳು: ಕೊರೊನಾ ವೈರಸ್ ಜಗತ್ತಿಗೆಲ್ಲ ಹಬ್ಬಿರುವಂತೆ ಸುಳ್ಳುಸುದ್ದಿಗಳ ಬಾಧೆ ಎಲ್ಲೆಡೆಯೂ ವ್ಯಾಪಕವಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ಏಪ್ರಿಲ್‌ನಲ್ಲಿ ೦೮ರಂದು ಕೊರೊನಾವನ್ನು ಇನ್ಫೋಡೆಮಿಕ್ (ಮಾಹಿತಿಮಾರಿ) ಎಂದು ಕರೆಯಿತು. ಅಂದರೆ ಸಮಸ್ಯೆಯೊಂದರ ಕುರಿತಾಗಿ ವಿಪರೀತ ಮಾಹಿತಿ ಸೃಷ್ಟಿಯಾಗಿ, ಪರಿಹಾರ ಕಂಡುಹಿಡಿಯುವುದೇ ಕಠಿಣವಾಗುವ ಪ್ರಕ್ರಿಯೆಯಾಗಿರುತ್ತದೆ. ಸಂಸ್ಥೆಯ ಮಹಾನಿರ್ದೇಶಕ ಡಾ. ಟ್ರೆಡೊಸ್ ಅಧನೊಮ್ ಘೆಬ್ರೆಯೆಸಸ್, ‘ಕೊರೊನಾ ವೈರಸ್‌ಗಿಂತ ವೇಗವಾಗಿ ಮತ್ತು ಸುಲಭವಾಗಿ ಸುಳ್ಳುಸುದ್ದಿಗಳು ಹರಡುತ್ತಿವೆ. ಹೀಗಾಗಿ ನಾವು ಸಾಂಕ್ರಾಮಿಕ ರೋಗದ ಜೊತೆಗೆ ಸರ್ವವ್ಯಾಪಿ ಸುಳ್ಳುಮಾಹಿತಿ ವಿರುದ್ಧವೂ ಹೋರಾಡಬೇಕಿದೆ’ ಎಂದು ಘೋಷಿಸಿದ್ದಾರೆ. ಕೊವಿಡ್೧೯ನಿಂದ ಗುಣಮುಖರಾಗಲು ವಿವಿಧ ಮದ್ದುಗಳನ್ನು ಸೇವಿಸಬೇಕು ಎಂಬ ಸುದ್ದಿಗಳಿಂದ ಆರಂಭವಾಗಿ, ಆಸ್ಪತ್ರೆಗಳ ಮೇಲೆ ಸೈಬರ್ ದಾಳಿ ನಡೆಸಿ ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಭ ಪಡೆಯುವ ಹುನ್ನಾರಗಳು ಸಹ ನಡೆದಿವೆ ಎಂದು ಡಬ್ಲೂ.ಎಚ್.ಒ. ತಿಳಿಸಿದೆ.


ಸುಳ್ಳುಸುದ್ದಿಗಳ ಭೀಕರ ಮುಖ ಇರಾನ್‌ನಲ್ಲಿ ನಡೆದ ಒಂದು ದುರ್ಘಟನೆಯಿಂದ ಬಯಲಾಯಿತು. ಅಲ್ಲಿ ದಿನೇದಿನೇ ಸಾವಿನ ಸಂಖ್ಯೆ ಹೆಚ್ಚುತ್ತಿರುವಾಗ ಜಾಲತಾಣಗಳಲ್ಲಿ ಇಂತಹ ಮಾಹಿತಿಯೊಂದು ಹರಿದಾಡಿತು: ‘ಬ್ರಿಟಿಷ್ ಶಾಲಾಶಿಕ್ಷಕ ಮತ್ತು ಜೊತೆಗಾರರು ಜೇನುತುಪ್ಪ ಹಾಗೂ ವಿಸ್ಕಿ ಕುಡಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ’. ವೈರಸ್‌ನಿಂದ ದೂರವಿರಲು ಶೇ. ೬೦ರಷ್ಟು ಮದ್ಯದ ಅಂಶವನ್ನು ಸೇರಿಸಿ ತಯಾರಿಸಿರುವ ಸ್ಯಾನಿಟೈಸರ್ ಬಳಸುವುದಾದರೆ, ಅಂತಹುದೆ ದ್ರವವಾದ ಮೆಥನಾಲ್ ಕುಡಿಯುವುದು ದೇಹದೊಳಗಿನ ವೈರಸ್ ಸಾಯಿಸಲಬಲ್ಲದು ಎಂದು ಭಾವಿಸಿ, ಅದಾಗಲೇ ಗಾಬರಿಯಲ್ಲಿದ್ದ ಇರಾನಿಯರು ಸೇವಿಸಿದ್ದಾರೆ. ಇದು ೩೦೦ಕ್ಕೂ ಹೆಚ್ಚು ಮಂದಿಯನ್ನು ಸಾವಿನಮನೆಗೆ ದೂಡಿತು ಮಾತ್ರವಲ್ಲದೇ, ಒಂದು ಸಾವಿರದಷ್ಟು ಮಂದಿ ಅಸ್ವಸ್ಥರಾದರು. ಇಂಟರ್‌ನೆಟ್ ಮತ್ತು ಯೂಟೂಬ್‌ಗಳಲ್ಲಿ ಪುಕ್ಕಟೆಯಾಗಿ ಸಿಗುವ ಮನೆಮದ್ದಿನ ಆರೋಗ್ಯ ಸಲಹೆಗಳನ್ನು ಆಗಾಗ ಗಮನಿಸುವ ಜನ, ದೊಡ್ಡರೋಗವೊಂದು ಬಂದು ಅದರ ಸುತ್ತಲೂ ಭಯಗ್ರಸ್ತ ವಾತಾವರಣ ನಿರ್ಮಾಣವಾದಾಗ ಪಾರಾಗುವ ತರಾತುರಿಯಲ್ಲಿ ವಿವೇಚನೆ ಕಳೆದುಕೊಂಡು ಮತ್ತದೇ ಜಾಲತಾಣಗಳ ಮಾಹಿತಿ ಮೊರೆಹೋದ ಪರಿಣಾಮ ಸೃಷ್ಟಿಯಾದ ವಿಷಮ ಪರಿಸ್ಥಿತಿಯಿದು. ಫಿಶ್‌ಟ್ಯಾಂಕ್ ಶುಚಿಗೊಳಿಸುವ ದ್ರವವು ಕೋವಿಡ್೧೯ಗೆ ಮದ್ದು ಎಂಬ ಸಂದೇಶದಿAದ ಅದನ್ನು ಕುಡಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆಯು ವರದಿಯಾಯಿತು. ಸಾಮಾಜಿಕ ಮಾಧ್ಯಮಗಳ ಅನಾಮಿಕತೆಯೊಳಗೆ, ಉತ್ತರದಾಯಿತ್ವರಹಿತವಾಗಿ ಪ್ರತಿಯೊಬ್ಬರೂ ವೈದ್ಯರಾಗಬಹುದಾದ, ಸ್ವತಃ ಮಾಧ್ಯಮವಾಗಬಹುದಾದ ಈ ಕಾಲದಲ್ಲಿ ಘಟಿಸಬಹುದಾದ ಅನಾಹುತಗಳಿವು.


ಡಬ್ಲೂ.ಎಚ್.ಒ. ಕ್ರಮಗಳು: ತಪ್ಪುಮಾಹಿತಿಗಳ ಹತ್ತಾರು ಕಟ್ಟುಕತೆಗಳನ್ನು ಪರೀಕ್ಷಿಸಲು, ಸತ್ಯ ಬಹಿರಂಗಪಡಿಸಲು ಡಬ್ಲೂ.ಎಚ್.ಒ. ಅವಿರತವಾಗಿ ಶ್ರಮಿಸಿದೆ. ಉಷ್ಣವಲಯದ ಅಥವಾ ಅಧಿಕ ತಾಪಮಾನದ ವಾಯುಗುಣವಿರುವ ದೇಶಗಳಲ್ಲಿ ವೈರಸ್ ಹರಡುವುದಿಲ್ಲ, ಮಲೇರಿಯಾದ ಔಷಧಿ ಕ್ಲೋರೋಕ್ವಿನ್‌ನ ಅಧಿಕ ಡೋಸ್, ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಹಾಗೂ ಬೆಳ್ಳುಳ್ಳಿ ಬಳಕೆಯಿಂದ ವೈರಸ್‌ನಿಂದ ದೂರವಿರಬಹುದೆಂಬ ಅರ್ಧಸತ್ಯದ ಸುದ್ದಿಗಳು ಹರಿದಾಡಿದ್ದವು. ಭಾರತದಲ್ಲಿಯೂ ಈ ತಪ್ಪು ಮಾಹಿತಿ ವ್ಯಾಪಕವಾಗಿ ಶೇರ್ ಆಗಿದ್ದು, ನಂತರದ ದಿನಗಳಲ್ಲಿ ತಡವಾಗಿ ಆಯುಷ್ ಇಲಾಖೆಯು ಇವು ರೋಗನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಮಾತ್ರ ಸಹಕಾರಿ ಎಂದು ಕೈಪಿಡಿ ಬಿಡುಗಡೆಗೊಳಿಸಿದ್ದನ್ನು ನೆನೆಯಬಹುದು. ಜೊತೆಗೆ ರೋಗಕ್ಕೆ ತುತ್ತಾಗುವ, ಮರಣ ಹೊಂದುವ ಸಾಧ್ಯತೆಗಳು, ಸಾಕುಪ್ರಾಣಿಗಳಿಂದ ಕೊರೊನಾ ಬರುವುದಿಲ್ಲ ಎಂಬಿತ್ಯಾದಿ ವಿಷಯಗಳ ಕುರಿತು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿ ಇವನ್ನು ನಂಬಬಾರದೆAದು ಮನವಿ ಮಾಡಿತು. ಸಂಸ್ಥೆಯು ವಾಟ್ಸಾಪ್ ಸಂಖ್ಯೆ ಆರಂಭಿಸಿ ಆ ಮೂಲಕ ಇಂಗ್ಲಿಷ್, ಫ್ರೆಂಚ್, ಅರೆಬಿಕ್, ಸ್ಪಾನಿಷ್, ಇಟಾಲಿಯನ್, ಹಿಂದಿ (ಏಪ್ರಿಲ್‌ನಲ್ಲಿ ಆರಂಭಿಸಿತು) ಭಾಷೆಗಳಲ್ಲಿ ಕೊವಿಡ್೧೯ ಸಂಬAಧಿ ಆರೋಗ್ಯ ಸಲಹೆ, ಹೊಸ ಬೆಳವಣಿಗೆಗಳು, ಸೋಂಕಿತರ ಸಂಖ್ಯೆ, ಅಗತ್ಯ ಪ್ರಶ್ನೋತ್ತರಗಳು, ಹಣ ಸಂಗ್ರಹ ಮತ್ತು ಸುದ್ದಿ ಹಾಗೂ ಸುಳ್ಳುಸುದ್ದಿಗಳ ವರದಿಯನ್ನು ನೀಡುತ್ತಲಿತ್ತು. ಸುಳ್ಳುಸುದ್ದಿಗಳನ್ನು ತಡೆಯುವ ತಂಡವೊAದನ್ನು ರಚಿಸಿದ ಡಬ್ಲೂ.ಹೆಚ್.ಓ., ಫೇಸ್‌ಬುಕ್, ಗೂಗಲ್, ಯೂಟೂಬ್, ಪಿಂಟೆರೆಸ್ಟ್, ಟೆನ್ಸೆಂಟ್, ಟಿಕ್‌ಟಾಕ್ ಕಂಪನಿಗಳ ಸಹಕಾರವನ್ನೂ ಪಡೆದು ತಪ್ಪುಮಾಹಿತಿಯ ವಿರುದ್ಧ ಸತತವಾಗಿ ಹೋರಾಡಿತು.


ಆರೋಗ್ಯ ವಿಚಾರದಾಚೆಗೂ ಹಲವು ರೀತಿಯ ಸುಳ್ಳುಸುದ್ದಿಗಳು ಹಬ್ಬಿ, ಜನರನ್ನು ಕಂಗೆಡಿಸಿದ್ದು ಉಂಟು. ಪೋರ್ಚುಗಲ್‌ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಸೇರಿದಂತೆ ಹಲವು ಖ್ಯಾತನಾಮರು ಸುಳ್ಳುಸುದ್ದಿಕೋರರಿಂದ ಕೊರೊನಾ ಪಾಸಿಟಿವ್ ಆದರು, ಸುಳ್ಳುಸುದ್ದಿ ಸಾಲಿನಲ್ಲಿ ಹೆಚ್ಚು ಗಮನಸೆಳೆದದ್ದು ‘ಗೆಳೆಯನೊಬ್ಬನ ವುಹಾನ್‌ನಲ್ಲಿರುವ ಅಂಕಲ್ ಹೇಳಿರುವಂತೆ’ ಹಾಗೂ ‘ರೋಗ ನಿಯಂತ್ರಣ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಗೆಳೆಯನ ತಂದೆ ತಿಳಿಸಿದಂತೆ’ ಎಂಬ ಮುನ್ನುಡಿಯೊಂದಿಗೆ ಆರಂಭವಾದ ಕೊರೊನಾದಿಂದ ಪವಾಡಸದೃಶವಾಗಿ ಗುಣಮುಖರಾದವರು ಅಥವಾ ಸಾಯಲ್ಪಟ್ಟವರು ಎಂಬ ಸರಣಿಕತೆಗಳು. ಇಂತಹ ಸಂದರ್ಭದಲ್ಲಿ ಸುಲಭವಾಗಿ ಗೂಗಲ್ ಮಾಡಿ ಸತ್ಯಾಂಶ ತಿಳಿಯಬಹುದಾದ, ನಂಬಲರ್ಹ ಮೂಲಗಳ ವರದಿಯೊಂದಿಗೆ ತಾಳೆಹಾಕಬಲ್ಲ ಅವಕಾಶಗಳನ್ನು ಜನರು ಬಳಸಿಕೊಳ್ಳದೆ ಮೂರ್ಖರಾಗುತ್ತಾರೆ ಎಂದು ಬ್ರಿಟನ್‌ನ ದಿ ಗಾರ್ಡಿಯನ್ ಪತ್ರಿಕೆಗೆ ಬರೆದ ಲೇಖನದಲ್ಲಿ ವಿಜ್ಞಾನಿ ಹುಗೊ ಮರ‍್ಸಿಯರ್ ಅಭಿಪ್ರಾಯಿಸಿದ್ದಾರೆ.


ಭಾರತದಲ್ಲಿ ಸುಳ್ಳುಸುದ್ದಿಗಳು: ಜಾಗತಿಕ ಮಟ್ಟದಲ್ಲಿ ಭಾರೀ ಪ್ರಚಾರ, ಪ್ರಸರಣೆ ಕಂಡ ಸುಳ್ಳುಸುದ್ದಿಗಳಿಗೆ ೬೮ ಕೋಟಿ ಇಂಟರ್‌ನೆಟ್ ಬಳಕೆದಾರರಿರುವ ಭಾರತ ಮತ್ತೊಂದು ಬಹುನೆಚ್ಚಿನ ತಾಣವಾಗದಿರಲು ಸಾಧ್ಯವೇ? ಇಲ್ಲಿನ ಸುಳ್ಳುಸುದ್ದಿಗಳು ಕೊರೊನಾ ರೋಗ ಮಾತ್ರವಲ್ಲದೇ ರೋಗಗ್ರಸ್ತ ಸಮಾಜದ ಅಸ್ಥಿತ್ವವನ್ನು ಸಾರಿಹೇಳಿದವು. ಲಾಕ್‌ಡೌನ್ ಘೋಷಣೆಯಾದ (ಮಾ. ೨೩) ಮೊದಲ ವಾರ ಕೋವಿಡ್೧೯ ಕಾಯಿಲೆ ಕುರಿತು ಫೋಟೋ, ವಿಡಿಯೋ, ಟೆಕ್ಸ್÷್ಟ ಸಂದೇಶಗಳು, ತಿರುಚಿದ ಆರೋಗ್ಯಮಾಹಿತಿಗಳು ಸಾಗರೋಪಾದಿಯಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಸುಶಿಕ್ಷಿತರಿಂದ ಹಂಚಿಕೆಗೊಳಪಟ್ಟವು. ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ ಹಾಗೂ ಮೇದಾಂತ ಮೆಡಿಸಿಟಿಯ ಡಾ. ನರೇಶ್ ಟೆಹ್ರಾನ್ ಹೆಸರಿನಲ್ಲಿ ಆಡಿಯೊ ಕ್ಲಿಪ್‌ಗಳು ಹರಿದಾಡಿದ್ದು, ಸ್ವತಃ ಡಾ. ದೇವಿಶೆಟ್ಟಿಯವರೇ ಆಡಿಯೋ ತಮ್ಮದಲ್ಲ ಎಂದು ಟ್ವೀಟಿಸಿ ಸ್ಪಷ್ಟನೆ ನೀಡಬೇಕಾಯಿತು.


ಕೋವಿಡ್೧೯ ಇರುವಿಕೆ ಖಚಿತಪಡಿಸಿಕೊಳ್ಳಲು ಉಸಿರು ಒಳತೆಗೆದುಕೊಂಡು ೧೦ಸೆಕೆಂಡ್ ಅದನ್ನು ಹಿಡಿದಿಡುವುದು, ವೈರಸ್ ಕೊಲ್ಲಲು ಉಪ್ಪುನೀರಿನಲ್ಲಿ ಗಂಟಲು ಶುಚಿಗೊಳಿಸುವುದು, ಬಿಸಿಲಿನಲ್ಲಿ ನಿಲ್ಲುವುದು, ಬಿಸಿನೀರಿನಲ್ಲಿ ಸ್ನಾನ ಮಾಡುವುದು ಸೇರಿದಂತೆ ಹಲವು ಸುಲಭೋಪಾಯಗಳು ಹರಿದಾಡಿದವು. ಜನರು ನಂಬಿ ಅನುಸರಿಸಿದ್ದೂ ಉಂಟು, ಆದರೆ ವಿಶ್ವ ಆರೋಗ್ಯ ಸಂಸ್ಥೆ ಇವನ್ನು ಅಲ್ಲಗಳೆದಿದ್ದು ಮಾತ್ರ ಹೆಚ್ಚು ಪ್ರಚಾರಕ್ಕೆ ಬರಲೇ ಇಲ್ಲ. ಕೊರೊನಾ ವೈರಾಣುವಿಂದ ಪಾರಾಗಲು ಗೋಮೂತ್ರ ಸೇವನೆ ಸಹಕಾರಿ ಎಂದು ಸಂಘಟನೆಯೊAದು ಹೇಳಿ ಈ ಸಂಬAಧ ದೆಹಲಿಯಲ್ಲಿ ಮಾ.೧೪ರಂದು ಸಮಾರಂಭವನ್ನು ನಡೆಸಿತು. ಕೊವಿಡ್೧೯ಗೆ ಔಷಧಿ ಕಂಡುಹಿಡಿಯಲಾಗಿದೆ ಎಂದು ಜಾಲತಾಣಗಳಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹತ್ತಾರು ಬಾರಿ ವರದಿಯಾದದ್ದು, ಸಂಕಟದ ಸಮಯದಲ್ಲಿ ಭರವಸೆಯ ಎಳೆಯೊಂದಕ್ಕೆ ಹಾತೊರೆದಂತಿತ್ತು.


ಆರ್ಥಿಕತೆಗೆ ಪೆಟ್ಟು: ಫಾರಂ ಕೋಳಿಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ ಎಂದು ಫೆಬ್ರವರಿ ತಿಂಗಳಲ್ಲಿ ವಾಟ್ಸಾಪ್‌ನಲ್ಲಿ ಹರಿದಾಡಿದ ಸುಳ್ಳುಸುದ್ದಿಗಳು ದಿನವೊಂದರಲ್ಲೇ ದೇಶದ ಕುಕ್ಕುಟೋದ್ಯಮದ ಮೇಲೆ ೧.೬ ಬಿಲಿಯನ್‌ಗೂ ಅಧಿಕ ರೂಪಾಯಿಗಳ ನಷ್ಟವುಂಟುಮಾಡಿದ ಬಗ್ಗೆ ಮಾಧ್ಯಮಗಳು ವರದಿ ಮಾಡಿದವು. ಸುದ್ದಿ ಹಬ್ಬಿಸಿದವರ ವಿರುದ್ಧ ವಿಚಾರಣೆ ನಡೆಸಿದ ಮಹಾರಾಷ್ಟçದ ಸೈಬರ್ ಪೋಲಿಸ್ ಅಧಿಕಾರಿ ಜಯರಾಂ ಪೈಗುಡೆ, ‘ಆರೋಪಿಗಳು ಹೆಚ್ಚಿನ ಲೈಕ್ ಪಡೆಯಲು ಯೂಟೂಬ್‌ನಲ್ಲಿ ಈ ಕೆಲಸ ಮಾಡಿದ್ದಾರೆ; ಆದರೆ ಜನರು ಸಾಮಾಜಿಕ ಜಾಲತಾಣಗಳಿಂದಾಗಿ ತಮ್ಮ ಬುದ್ಧಿ ಕಳೆದುಕೊಂಡಿದ್ದಾರೆ’ ಎಂದದ್ದನ್ನು ಇ-ಪತ್ರಿಕೆ ಲೈವ್‌ಮಿಂಟ್ ಉಲ್ಲೇಖಿಸಿದೆ. ಭಾರತದಲ್ಲಿ ಇಂತಹ ಸುಳ್ಳುಸುದ್ದಿಗಳು ಧಾರ್ಮಿಕ ಆಯಾಮ ಪಡೆದು ಮಡಿ-ಮೈಲಿಗೆಗಳು, ಪಾಪಪ್ರಜ್ಞೆಯ ಮಾತು ಸೇರಿ ಮತ್ತಷ್ಟು ಬಲವಾದ ಪ್ರಭಾವಳಿ ಸೃಷ್ಟಿಯಾಗುತ್ತದೆ ಎಂದು ವರ್ತಕರೊಬ್ಬರು ಅಭಿಪ್ರಾಯಪಟ್ಟ್ಟಿದ್ದಾರೆ.


ಕೊರೊನಾ ಸುಳ್ಳುಸುದ್ದಿ ಸೃಷಿಸಿದ ಭಯದ ವಾತಾವರಣವು ೨೦೧೦ರ ನಂತರದಲ್ಲೇ ಮೊದಲಬಾರಿ ಷೇರುಮಾರುಕಟ್ಟೆಯ ಭಾರೀ ಕುಸಿತಕ್ಕೆ ಕಾರಣವಾಯಿತು; ಮೋದಿಯವರೇ ಮಧ್ಯಪ್ರವೇಶಿಸಿ ಇವುಗಳಿಗೆ ಕಿವಗೊಡದಿರಲು ಸಲಹೆಯಿತ್ತರು. ಇದೇ ತೆರನಾಗಿ ಕೊರೊನಾ ಸುಳ್ಳುಸುದ್ದಿಗಳು ಐಸ್‌ಕ್ರೀಂ, ತಂಪುಪಾನೀಯ ಸಂಬAಧಿ ಉದ್ಯಮಗಳನ್ನು ಸಂಕಷ್ಟಕ್ಕೀಡುಮಾಡಿದವು. ಲೆಫ್ಟಿನೆಂಟ್ ಗವರ್ನರ್‌ನಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ಕೊರೊನಾದಿಂದಾಗಿ ರಸ್ತೆಗೆ ಎಸೆಯಲ್ಪಟ್ಟ ಸಾವಿರಾರು ಕೋಳಿಮೊಟ್ಟೆಗಳು ವಾರದ ನಂತರ ಮರಿಗಳಾಗಿವೆ. ಪ್ರಕೃತಿಯ ಸೃಷ್ಟಿ ಮತ್ತು ಜೀವವು ತನ್ನದೇ ಆದ ರಹಸ್ಯ ದಾರಿಗಳನ್ನು ಹೊಂದಿರುತ್ತದೆ’ ಎಂದು ಬರೆದುಕೊಂಡಿದ್ದಕ್ಕೆ ‘ನೀವು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಮೊದಲು ಡಿಲೀಟ್ ಮಾಡಿ’ ಎಂಬ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ದೊರೆತವು. ಫಾರಂ ಕೋಳಿಮೊಟ್ಟೆಗಳು ಫಲವತ್ತತೆ ಸಾಮರ್ಥ್ಯವನ್ನು ಹೊಂದಿರುವುದಿಲ್ಲ, ಮರಿಗಳಾಗುವುದಿಲ್ಲ ಎಂಬ ಸಾಮಾನ್ಯ ಜ್ಞಾನವನ್ನು ಬದಿಗೆ ಸರಿಸುವ ಸುಳ್ಳುಸುದ್ದಿಗಳು ಖ್ಯಾತನಾಮರ ಹಂಚಿಕೆಯ ಠಸ್ಸೆ ಮೂಲಕ ಹರಿದಾಡಿ ಸಾರ್ವಜನಿಕರೆದುರು ಮತ್ತಷ್ಟು ಆಭಾಸವನ್ನು ತಂದಿಡುತ್ತವೆ.


ಅAತಾರಾಷ್ಟಿçÃಯ ಸಂಬAಧದ ಮೇಲೆ ಪರಿಣಾಮ: ಆರಂಭದಲ್ಲಿ ಎಲ್ಲರಲ್ಲಿಯೂ ಸಮಾನವಾದ ಜೀವಭಯಕ್ಕೆ ಕಾರಣವಾಗಿದ್ದ ಕೊರೊನಾ ರೋಗ ಬರುಬರುತ್ತಾ ರಾಜಕೀಯ, ಜನಾಂಗೀಯ, ಸಾಮುದಾಯಿಕ ಮತ್ತು ವರ್ಗವಾರು ಹಿತಾಸಕ್ತಿಗಳೊಂದಿಗೆ ಮಿಳಿತವಾಯಿತು. ಕೊರೊನಾ ವೈರಸ್ ಚೀನಾ ಆಯೋಜಿತ ಜೈವಿಕ ಯುದ್ಧಾಸ್ತç, ವುಹಾನ್ ವೈರಾಲಜಿ ಅಧ್ಯಯನ ಸಂಶೋಧನಾಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದ ಈ ವೈರಸ್ ಸೋರಿಕೆಯಾಗಿದೆ ಎಂಬೆಲ್ಲ ಅಧಿಕೃತ ಮಾಹಿತಿರಹಿತ ಸುದ್ದಿಗಳು ಭಾರತದಲ್ಲಿ ಜಾಲತಾಣಿಗರ ತಲೆಯಲ್ಲಿ ಅನುಮಾನ ಸೃಷ್ಟಿಸಿದವು. ದೊಡ್ಡ ಪ್ರಮಾಣದಲ್ಲಿ ಇದೇ ಅಭಿಪ್ರಾಯವನ್ನು ಹೊಂದಿರುವ ಜನರಿಗೆ ಇದು ಸೂಕ್ಷö್ಮವಾದ ಅಂತಾರಾಷ್ಟಿçÃಯ ಸಂಬAಧಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲ. ಆ ಕ್ಷಣದ ಉದ್ವೇಗದಲ್ಲಿ ಅನಿಸಿದನ್ನು, ಅಂದಾಜಿಸಿದ್ದನ್ನು ದಾಖಲಿಸಿ ಪ್ರಕಟಿಸಿದರೆ, ಮುಂದಿನವರು ಆಲೋಚಿಸಿದೇ ಸಾವಿರ ಸಂಖ್ಯೆಯಲ್ಲಿ ಶೇರ್ ಮಾಡುತ್ತಾರೆ. ಒಂದು ಸುಳ್ಳು ನೂರುಬಾರಿ ಹೇಳಿದಾಗ ಸತ್ಯವಾಗಿ ಹೋಗುವ ಪ್ರಕ್ರಿಯೆಯ ಮುಂದುವರಿದ ಭಾಗವಿದು.


ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯೊಂದರಲ್ಲಿ ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್ ಅನ್ನು ಚೈನೀಸ್ ವೈರಸ್ ಎಂದು ಸಂಬೋಧಿಸಿದರು. ಇದು ಜನಾಂಗೀಯ ದ್ವೇಷದ ನಡೆಯೆಂದು ಖಂಡನೆ ವ್ಯಕ್ತವಾದಾಗ ಆರಂಭದಲ್ಲಿ ಸಮರ್ಥಿಸಿಕೊಂಡರಾದರೂ ನಂತರದ ದಿನಗಳಲ್ಲಿ ಆ ಪದಬಳಕೆ ಕೈಬಿಟ್ಟರು. ಈಶಾನ್ಯ ಭಾರತೀಯರ ಮುಖಚರ್ಯೆ ಚೀನಿಯರಿಗೆ ಹೋಲುವ ಕಾರಣ ಕೊರೊನಾ ವೈರಸ್ ಹರಡುತ್ತಾರೆಂದು ಭಾವಿಸಿ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಿದ ಜನಾಂಗೀಯ ತಾರತಮ್ಯದ ಘಟನೆಗಳು ಬೆಂಗಳೂರು ಸೇರಿ ಹಲವೆಡೆ ವರದಿಯಾದವು. ಸುಳ್ಳುಮಾಹಿತಿ ನಂಬುವ ಮನಸ್ಥಿತಿಗಳು ಜಾಲತಾಣಗಳಾಚೆಗಿನ ನೈಜಪ್ರಪಂಚದ ಪರಿಸ್ಥಿತಿಯಲ್ಲಿ ಸಾಮಾಜಿಕ ವಿಕಾರಗಳನ್ನು ಸೃಷ್ಟಿಸಬಲ್ಲವು ಎಂಬುದಕ್ಕೆ ಇದು ಎಚ್ಚರಿಕೆ ಮತ್ತು ಉದಾಹರಣೆಯಂತಿದೆ.


ಸಾಮುದಾಯಿಕ ಸನ್ನಿ: ಕೊವಿಡ್೧೯ ಲಾಕ್‌ಡೌನ್ ಸಂದರ್ಭವು ಜಾಲತಾಣಗಳ ಮನರಂಜನಾತ್ಮಕ ವಿಷಯವಸ್ತುಗಳು, ಅರೆಸತ್ಯ ಮತ್ತು ಸುಳ್ಳುಸುದ್ದಿಗಳ ಪ್ರಪಂಚದಲ್ಲಿ ಮುಳುಗಿದ್ದವರ ಬೌದ್ಧಿಕ ಮನಸ್ಥಿತಿಯನ್ನು ಹೊರಗೆಡವಿತು. ದೇಶದ ಜನರನ್ನು ಕೊರೊನಾ ಸಂಕಷ್ಟದಿAದ ಕಾಪಾಡುತ್ತಿರುವ ಆಸ್ಪತ್ರೆಗಳ ಆರೋಗ್ಯಸಿಬ್ಬಂದಿಯ ಅವಿರತ ಶ್ರಮಕ್ಕೆ ಮಾ. ೨೨ ಮತ್ತು ಏ. ೦೫ ರಂದು ಚಪ್ಪಾಳೆ ತಟ್ಟಲು ಹಾಗೂ ದೀಪ ಹಚ್ಚುವ ಮುಖೇನ ಧನ್ಯವಾದ ತಿಳಿಸಲು ಪ್ರಧಾನಮಂತ್ರಿ ಮೋದಿಯವರು ಕರೆಕೊಟ್ಟರು. ಮೊದಲ ದಿನ ಸಾಮಾಜಿಕ ಅಂತರ (Soಛಿiಚಿಟ ಜisಣಚಿಟಿಛಿiಟಿg)ಅನ್ನು ಗಾಳಿಗೆ ತೂರಿ ಮೆರವಣಿಗೆ, ನೃತ್ಯಗಳನ್ನು ಮಾಡಿದ ಜನತೆ, ಎರಡನೇ ಬಾರಿ ಮತ್ತದೇ ಪಂಜಿನ ಮೆರವಣಿಗೆ, ‘ಗೋ ಕೊರೊನಾ ಗೋ’ ಘೋಷಣೆಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು! ಜಾಗತಿಕ ಮಹಾಮಾರಿಯೊಂದನ್ನು ಭಾರತದಲ್ಲಿ ಸಾರ್ವಜನಿಕ ಹಬ್ಬವೆಂಬAತೆ ಸಂಭ್ರಮಿಸಿದ್ದು ಅಂತಾರಾಷ್ಟಿçÃಯ ಮಾಧ್ಯಮಗಳಲ್ಲಿ ವರದಿಯಾಗಿ ನಗೆಪಾಟಲೀಗೀಡುಮಾಡಿತು. ಜಾಲತಾಣಗಳಲ್ಲಿ ದೀಪದ ಬೆಳಕಾದ ಕುಜ (ಅಗ್ನಿ ತತ್ವ) ತನ್ನ ವೈರಿ ರಾಹು ಅಂದರೆ ವೈರಸ್‌ನ್ನು ಕೊಲ್ಲುತ್ತಾನೆ ಎಂಬ ವಿಶೇಷಾರ್ಥಗಳನ್ನು ಕೂಡಿಸಿ ಸಂದೇಶಗಳನ್ನು ಹಂಚಲಾಯಿತು! ವೈರಿಸಂಹಾರವಾದ ನಂತರ ನಮಗೆ ಲಾಕ್‌ಡೌನ್‌ನಿಂದ ಬಿಡುಗಡೆ ಏಕಿಲ್ಲ ಎಂದು ಯಾರೂ ಯಾಕೋ ಕೇಳಿಕೊಳ್ಳಲೇ ಇಲ್ಲ. ಕೊವಿಡ್೧೯ ಕುರಿತ ಸೂಕ್ಷö್ಮ ಆರೋಗ್ಯ ಮಾಹಿತಿಗಳು, ಎಚ್ಚರಿಕೆ ಕ್ರಮಗಳನ್ನು ಅರಿಯದೆ ನಡೆದುಕೊಂಡ ರೀತಿಗೆ ಸ್ವತಃ ಪ್ರಧಾನಿಯವರು ಬೇಸರವ್ಯಕ್ತಪಡಿಸಿದರು.


ಮೊದಮೊದಲು ಎಲ್ಲರನ್ನೂ ಸಮಾನವಾಗಿ ಕಾಡುತ್ತಿದ್ದ ಕೊರೊನಾ ಕೆಲವೇ ದಿನಗಳಲ್ಲಿ ಕೋಮುತಾರತಮ್ಯದ ‘ವಿಷ’ಯವಾಯಿತು. ಡಬ್ಲೂ.ಹೆಚ್.ಒ. ಜ. ೩೦ರಂದು ಕೊರೊನಾ ರೋಗವನ್ನು ಅಂತಾರಾಷ್ಟಿçÃಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ (PಊಇIಅ) ಎಂದು ಘೋಷಿಸಿತು ಹಾಗೂ ಅದೇ ದಿನ ಭಾರತದಲ್ಲಿ ಮೊದಲ ಪ್ರಕರಣ ದಾಖಲಾಯಿತಾದರೂ ಸರ್ಕಾರ ಯಾವುದೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಲಿಲ್ಲ. ಇಂತಹ ಸಂದರ್ಭದಲ್ಲೇ ಮಲೇಶಿಯಾ ನಂತರ ದೆಹಲಿಯಲ್ಲಿ ಪೂರ್ವನಿಯೋಜಿತ ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶ ಮಾ. ೧೩-೧೫ರ ವರೆಗೂ ನಡೆದಿದ್ದು, ಆಯೋಜಕರ ಉದಾಸೀನದಿಂದಾಗಿ ಕೊರೊನಾ ಪೀಡಿತ ದೇಶಗಳ ಸದಸ್ಯರು ಇಲ್ಲಿ ಭಾಗವಹಿಸಿದ್ದರು. ದೆಹಲಿ ಸರ್ಕಾರ ೨೦೦ಕ್ಕಿಂತ ಹೆಚ್ಚು ಜನರ ಒಂದೆಡೆ ಸೇರುವುದನ್ನು ಮಾ. ೧೩ರಂದೇ ನಿಷೇಧಿಸಿದ ದಿನ ದೇಶದಲ್ಲಿ ಅದಾಗಲೇ ೫೦ ಪಾಸಿಟಿವ್ ಪ್ರಕರಣಗಳಿದ್ದವು ಹಾಗೂ ಬೇರೆಯ ಧಾರ್ಮಿಕ ಸಮಾರಂಭಗಳು ನಡೆಯುತ್ತಲಿದ್ದವು. ಜಮಾತ್‌ನಲ್ಲಿ ಹೊರದೇಶಗಳ ಪ್ರತಿನಿಧಿಗಳಿಂದ ಹರಡಿದ ಕೊರೊನಾ ಭಾರತದ ಪಾಸಿಟಿವ್ ಕೇಸ್‌ಗಳಲ್ಲಿ ಶೇ. ೨೫ಕ್ಕಿಂತ ಹೆಚ್ಚಿನ ಪಾಲು ಪಡೆದದ್ದು ಸಮುದಾಯದ ಮುದ್ರೆ ಬೀಳಲು ಕಾರಣವಾಯಿತು. ಟಿವಿ ಚಾನೆಲ್‌ಗಳಲ್ಲಿ ಈ ಕುರಿತು ಊದ್ದೇಶಪೂರ್ವಕ ಭಯಮಿಶ್ರಿತ ಒಮ್ಮುಖ ವಿವರಣೆಯ ಸರಣಿ ಕಾರ್ಯಕ್ರಮಗಳು ಪ್ರಸಾರವಾದದ್ದು, ಮುಸ್ಲಿಂ ಸಮುದಾಯದ ಮೇಲೆ ಸರಣಿ ಸುಳ್ಳುಸುದ್ದಿಗಳನ್ನು ಹರಡಲು ವೇದಿಕೆ ಒದಗಿಸಿಕೊಟ್ಟಿತು. ಕಳೆದ ನಾಲ್ಕು ವರ್ಷಗಳಲ್ಲಿ ಸುಳ್ಳುಸುದ್ದಿಗಳ ಸಲುವಾಗಿ ದೇಶದಲ್ಲಿ ಡಜನ್‌ಗೂ ಹೆಚ್ಚು ಜನರ ಕೊಲೆಯಾಗಿರುವುದನ್ನು ನಾವು ಕಂಡಿದ್ದೇವೆ.


ಹಳೆಯ, ಸಂಬAಧವಿಲ್ಲದ ವಿಡಿಯೋ, ಫೋಟೋಗಳಿಗೆ ಮುಸ್ಲಿಮರು ಹೋಂ ಕ್ವಾರಂಟೈನ್ ಮುರಿದು ತಿರುಗಾಡುತ್ತಿದ್ದಾರೆ, ಆಹಾರ ಪೊಟ್ಟಣಗಳ ಮೇಲೆ ಉಗುಳುತ್ತಿದ್ದಾರೆ, ಪಾತ್ರೆಗಳನ್ನು ನೆಕ್ಕುತ್ತಿದ್ದಾರೆ, ಮಸೀದಿಯಲ್ಲಿ ಸಾಮೂಹಿಕವಾಗಿ ಸೀನುತ್ತಾ ಸೋಂಕು ಹರಡುತ್ತಿದ್ದಾರೆ ಎಂಬ ಬರಹಗಳೊಂದಿಗೆ ವ್ಯಾಪಕವಾಗಿ ಸುಳ್ಳುಸುದ್ದಿಗಳನ್ನು ಹಬ್ಬಿಸಲಾಯಿತು. ಪರಿಣಾಮವಾಗಿ ಮುಸ್ಲಿಮರ ಮೇಲೆ ಹಲ್ಲೆಗಳು, ಗ್ರಾಮಗಳಿಗೆ ಪ್ರವೇಶ ಬಹಿಷ್ಕಾರ, ಮುಸ್ಲಿಂ ವರ್ತಕರ ಮೇಲೆ ಗೂಂಡಾಗಿರಿ ಮಾಡಿದ ಘಟನೆಗಳು ನಡೆದವು. ಇದಕ್ಕಿಂತ ಹೆಚ್ಚಾಗಿ ಸಮುದಾಯವೊಂದರ ವಿಶ್ವಾಸಾರ್ಹತೆಯನ್ನೇ ತಳಬುಡವಿಲ್ಲದ ಸುಳ್ಳು ಸಂದೇಶಗಳು ಅನೈತಿಕಗೊಳಿಸಿದ್ದು ಖೇದಕರ ಸಂಗತಿ ಹಾಗೂ ಈ ದ್ವೇಷಮಯ ಮಾದರಿಯು ಭವಿಷ್ಯದಲ್ಲಿ ಸಮಾಜಕ್ಕೆ ಕಂಟಕಪ್ರಾಯವಾಗಲಿದೆ ಎಂಬುದನ್ನು ನೆನಪಿನಲ್ಲಿಡಬೇಕು.


ಸಾಮಾಜಿಕ ಅಂತರದ ಮಹತ್ವ ತಿಳಿಸಲು ಜನತಾ ಕರ್ಫ್ಯೂಗೆ ಕರೆನೀಡಿದರೆ, ೧೨ ಗಂಟೆಗಳಾಚೆಗೆ ವೈರಸ್ ಬದುಕಲಾರದು, ಅದಕ್ಕಾಗಿ ಕರ್ಫ್ಯೂ ಹೇರಲಾಗಿದೆ, ಚಪ್ಪಾಳೆ ಮತ್ತು ಘಂಟೆಗಳ ಸದ್ದಿಗೆ ಸೃಷ್ಟಿಯಾದ ಕಾಸ್ಮಿಕ್ ಶಬ್ದ ತರಂಗಗಳಿAದಾಗಿ ಕೊರೊನಾ ತತ್ತರಿಸಿದ್ದನ್ನು ಅಮೇರಿಕಾದ ನಾಸಾ ತನ್ನ ಸ್ಯಾಟಲೈಟ್‌ಗಳಲ್ಲಿ ಸೆರೆಹಿಡಿಯಲಾಗಿದೆ ಎಂದೆಲ್ಲಾ ವ್ಯಾಖ್ಯಾನಿಸಿದ್ದು ವಿಜ್ಞಾನಕ್ಕೆ ಸವಾಲೆಸೆಯುವಂತಿದ್ದವು. ಕೊರೊನಾ ಸುಳ್ಳುಸುದ್ದಿಗಳು ಸರ್ಕಾರ, ರಾಜಕಾರಣಿಗಳು ಮತ್ತು ಆಡಳಿತ ವರ್ಗವನ್ನು ಬಾಧಿಸದೇ ಬಿಟ್ಟಿಲ್ಲ. ಹಳೆಯ ಫೋಟೋಗಳನ್ನು ಬಳಸಿ ದೇಶ ಕೋವಿಡ್೧೯ ಸಂಕಷ್ಟದಲ್ಲಿದ್ದಾಗ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಿಂಗ್ ಮನೆಗೆಲಸದಲ್ಲಿ ತೊಡಗಿದ್ದಾರೆಂದು, ಏ. ೦೫ರಂದು ಪಟಾಕಿ ಹಚ್ಚಿದ್ದರಿಂದ ಸೋಲಾಪುರ್ ವಿಮಾನನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಮಧ್ಯಪ್ರದೇಶದ ಮುಸ್ಲಿಂ ಎಸ್.ಪಿ.ಯೊಬ್ಬರು ಲಾಕ್‌ಡೌನ್ ದಿನಗಳಲ್ಲಿ ಹಿಂದೂ ಅರ್ಚಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ, ಅಮೇರಿಕಾ, ಯು.ಕೆ.ಗಳು ಮೋದಿಯವರನ್ನು ಕೊರೊನಾ ಕಾರ್ಯಪಡೆ ಮುಂದಾಳತ್ವ ವಹಿಸುವಂತೆ ಕೋರಿವೆ, ಲಾಕ್‌ಡೌನ್ ಉಲ್ಲಂಘಿಸಿ ಸುತ್ತಾಡುತ್ತಿರುವ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಸೇರಿದಂತೆ ಹತ್ತುಹಲವು ಸುದ್ದಿಗಳು ತಮ್ಮ ನಾಯಕರ, ಪಕ್ಷಗಳ, ಕೋಮಿನ ಪರ-ವಿರೋಧಗಳ ಹಿತಾಸಕ್ತಿಯೊಳಗೆ ಹಂಚಿಕೆಯಾದದ್ದು ಜನರನ್ನು ಯಾವುದು ಸತ್ಯ? ಯಾವುದು ಸುಳ್ಳುಸುದ್ದಿ? ಎಂಬುದನ್ನು ನಿರ್ಧರಿಸಲಾಗದಷ್ಟು ಗೊಂದಲ ಪರಿಸ್ಥಿತಿಗೆ ದೂಡಿತು.


ಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್ ಆಯುರ್ವೇದಿಕ್ ಔಷಧ ವಿಧಾನದಿಂದ ಕೊರೊನಾ ಮುಕ್ತರಾಗಿದ್ದಾರೆ ಎಂದು ಆಯುಷ್ ಇಲಾಖೆ ಸಚಿವರು ಟ್ವೀಟಿಸಿದ್ದನ್ನು ಬಳಸಿ ಮುಖ್ಯವಾಹಿನಿ ಮಾಧ್ಯಮಗಳು ವರದಿಮಾಡಿದ್ದು, ನಂತರ ಇದು ಸುಳ್ಳೆಂದು ಸಾಬೀತಾಯಿತು. ಲಾಕ್‌ಡೌನ್ ಮುಂದುವರಿಕೆ ಕುರಿತಾಗಿ ಹಿಂದಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡುವಾಗ ಕೇಂದ್ರದ ಮಂತ್ರಿಯೊಬ್ಬರು ಡಬ್ಲೂ.ಹೆಚ್.ಒ. ಹೊರಡಿಸಿರುವ ಮೂರು ಹಂತದ ಲಾಕ್‌ಡೌನ್ ಉತ್ತಮವಾಗಿದೆ ಎಂಬ ತಪ್ಪು ಮಾಹಿತಿಯನ್ನು (ಸುಳ್ಳೆಂದು ಆ ಸಂಸ್ಥೆಯೇ ದೃಢಪಡಿಸಿದ ನಂತರವೂ) ಬಳಸಿದ್ದು ವ್ಯಾಪಕ ಆಕ್ಷೇಪಕ್ಕೆ ಕಾರಣವಾಯಿತು. ಕೊನೆಗೆ, ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ಪ್ರತೀ ಪೋಸ್ಟ್ಗಳನ್ನು ಕಣ್ಗಾವಲಿನಲ್ಲಿರಿಸಿದೆ ಎಂದು ಜಾಲತಾಣಗಳಲ್ಲಿಯೇ ಹರಿದಾಡಿದ್ದು, ಭಾರತದಲ್ಲಿ ಸುಳ್ಳುಸುದ್ದಿಗಳು ಸರ್ಕಾರ ಹಾಗೂ ಸಾಮುದಾಯಿಕ ಹಂತಗಳಲ್ಲಿ ಇನ್ನಿಲ್ಲದಂತೆ ಸೇರಿಹೋಗಿರುವುದನ್ನು ದೃಢಪಡಿಸಿತು.


ಸರ್ಕಾರ ಮತ್ತು ಜಾಲತಾಣಗಳ ಕ್ರಮಗಳು

ಕೋವಿಡ್-೧೯ ಸುತ್ತಲೂ ತಲೆಯೆತ್ತಿದ ವಿಧವಿಧವಾದ ಸುಳ್ಳುಸುದ್ದಿಗಳನ್ನು ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆಯು ಅದನ್ನು ಮಾಹಿತಿಮಾರಿ ಎಂದು ಕರೆದದ್ದು ಸರಿಯಾಗಿಯೇ ಇದೆ. ಮಿಥ್ಯಗಳನ್ನು ತೊಡೆದುಹಾಕಲು ತಂಡವೊAದನ್ನು ರಚಿಸಿ ಫೇಸ್‌ಬುಕ್, ಗೂಗಲ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ದೈತ್ಯರ ಸಹಕಾರ ಪಡೆದು ನಿಖರ, ವಿಶ್ವಾಸಾರ್ಹ ಮಾಹಿತಿಗಳನ್ನು ದಿನವಿಡೀ ನೀಡುತ್ತಾ ಬರುತ್ತಿದೆ. ಈ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಂಬುಗೆಯನ್ನು ಉಳಿಸಬೇಕಿದೆ ಎಂದು ಅದು ಕರೆಕೊಟ್ಟಿದೆ.


ಭಾರತ ಸರ್ಕಾರವು ಮಾರ್ಚ್ ತಿಂಗಳ ಮಧ್ಯಾವದಿಯಲ್ಲಿಯೇ ಫೇಸ್‌ಬುಕ್, ಯೂಟ್ಯೂಬ್, ಟಿಕ್‌ಟಾಕ್, ಟ್ವಿಟ್ಟರ್ ಹಾಗೂ ಶೇರ್‌ಚಾಟ್‌ಗಳಲ್ಲಿ ಹರಡಬಹುದಾದ ತಪ್ಪುಮಾಹಿತಿಗಳನ್ನು ತಡೆಯಲು ಕಠಿಣ ಕ್ರಮಕೈಗೊಳ್ಳಬೇಕೆಂದು, ಆಕ್ಷೇಪಾರ್ಹ ಸಂದೇಶಗಳನ್ನು ತೆಗೆದುಹಾಕಲು ಸೂಚನೆಗಳನ್ನು ನೀಡಿತು. ಆದಾಗ್ಯೂ ವಾಟ್ಸಾಪ್‌ನಂತಹ ಬಳಕೆದಾರನಿಗೆ ಖಾಸಗಿತನ ನೀಡುವ ತಾಣಗಳಲ್ಲಿ ತಪ್ಪುದಾರಿಗೆಳೆವ, ಕೋಮುದ್ವೇಷದ ಸುಳ್ಳುಸುದ್ದಿಗಳು ಹರಿದಾಡುವಿಕೆ ಕಡಿಮೆಯಾಗಲಿಲ್ಲ. ಸುಪ್ರೀಂಕೋರ್ಟ್ ಮಾರ್ಚ್ ಅಂತ್ಯದಲ್ಲಿ ಕೊವಿಡ್೧೯ಗಿಂತ ಅದರೆಡೆಗಿನ ಭಯ, ದಿಗಿಲುಗಳೇ ಆತಂಕಕಾರಿಯಾಗಿವೆ ಎಂದಿತು. ಮಹಾರಾಷ್ಟçವೊಂದರಲ್ಲೇ ಗಾಳಿಸುದ್ದಿ ಹಬ್ಬಿಸುವವರ ವಿರುದ್ಧ ೫೧ ಕೇಸ್‌ಗಳನ್ನು ದಾಖಲಿಸಲಾಗಿದೆ. ಸುಳ್ಳುಸುದ್ದಿಗಳಿಗೆ ಕಡಿವಾಣ ಹಾಕಿ ಸಾರ್ವಜನಿಕ ನಂಬುಗೆಯನ್ನು ಪುರ್ನಸ್ಥಾಪಿಸಲು ಸರ್ಕಾರವು ಜಾಗೃತಿ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯೇ ಅಧಿಕವಾಗಿದೆ. ಪ್ರಾಥಮಿಕ ಹಂತದಲ್ಲಿ ಕೊರೊನಾ ಪಾಸಿಟಿವ್ ಮಾಹಿತಿಯನ್ನು ನೀಡಲು ಆರೋಗ್ಯ ಇಲಾಖೆಯ ವೆಬ್‌ಪೇಜ್ ಆರಂಭಿಸಿತು, ಆರೋಗ್ಯಸೇತು ಆಪ್ಲಿಕೇಶನ್ ಮೂಲಕ ವಿಶ್ವಾಸಾರ್ಹ ಮಾಹಿತಿ ಪಡೆಯಲು ಕೋರಿತು. ಅಷ್ಟರಲ್ಲಾಗಲೇ ಸುಳ್ಳುಸುದ್ದಿಗಳು ಭಾರೀ ಸಂಚಲನ ಸೃಷ್ಟಿಸಿದ್ದವು.


ಕರ್ನಾಟಕ ಮಾದರಿ: ಕರ್ನಾಟಕ ಸರ್ಕಾರದ ಮಾಹಿತಿ ಇಲಾಖೆಯು ಡಾಕ್ಟರ್‌ಗಳು, ಮಾನಸಿಕ ತಜ್ಞರು, ಅಧಿಕಾರಿಗಳನ್ನೊಳಗೊಂಡ ೫೦ ಸದಸ್ಯರ ‘ಜನಸ್ನೇಹಿ’ ಎಂಬ ಪಡೆಯೊಂದನ್ನು ರಚಿಸಿ ಕೊವಿಡ್೧೯ ಸುಳ್ಳುಸುದ್ದಿಗಳ ವಿರುದ್ಧ ಹೋರಾಡಿತು. ತಳಮಟ್ಟದಲ್ಲಿ ಕೊರೊನಾ ವಾರಿರ‍್ಸ್ಗಳನ್ನು ನೇಮಿಸಿ, ರಾಜ್ಯದ ಮೂಲೆಮೂಲೆಗಳಿಂದ ಅಗತ್ಯ ಮಾಹಿತಿ ತರಿಸಿಕೊಂಡು ಜನರ ಪ್ರಶ್ನೆಗಳಿಗೆ ಟೆಲಿಗ್ರಾಂ ಅಪ್ಲಿಕೇಶನ್ ಮೂಲಕ ಉತ್ತರಿಸಿ ಕಾನೂನುಸುವ್ಯವಸ್ಥೆ ಕಾಪಾಡುವ, ಸಮಾಧಾನವೀಯುವ ಶ್ಲಾಘನೀಯ ಕೆಲಸ ಮಾಡಿತು. ಜಯನಗರ ಮಲ್ಲೇಶ್ವರಂ ಸಂಪೂರ್ಣ ಬಂದ್, ಮದ್ದೂರಿನ ಬಸ್ಸಿನಲ್ಲಿ ಕೊರೊನಾ ಸೋಂಕಿತ ಪ್ರಯಾಣಿಸಿದ್ದಾನೆ, ಬಿಬಿಎಂಪಿ ಔಷಧ ಸಿಂಪಡಿಸುತ್ತದೆ ಎಂಬಿತ್ಯಾದಿ ಸಂದೇಶಗಳ ನಿಜಬಣ್ಣವನ್ನು ಕೆಲವೇ ಗಂಟೆಗಳಲ್ಲಿ ಈ ಪಡೆ ಬಯಲಿಗೆಳೆಯಿತು. ವರದಿಯೊಂದರ ಪ್ರಕಾರ ವಾರವೊಂದರಲ್ಲೇ ಐದು ಸಾವಿರ ತಪ್ಪುಮಾಹಿತಿ, ಸುಳ್ಳುಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಿ ಜನಸ್ನೇಹಿ ಪಡೆ ಉತ್ತರ ನೀಡಿದೆ.


ಜಾಗೃತ ಪ್ರಜ್ಞೆಯೇ ಪರಿಹಾರೋಪಾಯ

ಜನರ ನಡುವೆ ಜನರಿಂದಲೇ ಹರಡುವ ಕೊವಿಡ್೧೯ ಹಾಗೂ ಸುಳ್ಳುಸುದ್ದಿಗಳ ಸಂದರ್ಭಗಳನ್ನು ನಿಭಾಯಿಸಲು ಸರ್ಕಾರಿ ವ್ಯವಸ್ಥೆಯಾಚೆಗೆ ಜನಜಾಗೃತಿಯನ್ನೇ ಮದ್ದಾಗಿಸಬೇಕಿದೆ. ಸುಳ್ಳುಸುದ್ದಿಯ ಕಾಟ ಇಂದು ಸೃಷ್ಟಿಯಾದದ್ದಲ್ಲ ಅಥವಾ ಮುಗಿಯುವುದೂ ಅಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಸಂವಹನ ತಜ್ಞರು ವ್ಯವಸ್ಥಿತ ಪ್ರಜ್ಞೆಯೊಂದನ್ನು ಬೆಳಸಬೇಕಿದೆ. ವಿದೇಶಗಳಲ್ಲಿ ಇದನ್ನು ಮಾಹಿತಿ ಸಾಕ್ಷರತೆ ಎಂದು ಕರೆಯಲಾಗುತ್ತದೆ. ಸುಳ್ಳುಸುದ್ದಿ ಅರಿಯಲು ವ್ಯಕ್ತಿಯೊಬ್ಬ ತನ್ನ ಸಾಮಾನ್ಯ ಪ್ರಜ್ಞೆ ಬಳಸಿದರೆ ಸಾಕಾಗುತ್ತದೆ. ಅ ನಿಟ್ಟಿನಲ್ಲಿ ಪ್ರಮುಖ ಅಂಶಗಳು ಇಂತಿವೆ: ನಮಗೆ ತಲುಪಿದ ಮೆಸೇಜ್/ ಪೋಸ್ಟ್ನ ಮೂಲ ಅಥವಾ ರಚಿಸಿದವರ ಮಾಹಿತಿಯನ್ನು ಗಮನಿಸಬೇಕಾಗುತ್ತದೆ. ಸಂದೇಶದಲ್ಲಿರಬಹುದಾದ ವಾದವೊಂದು ತರ್ಕರಹಿತ, ಸತ್ಯಕ್ಕೆ ದೂರವೆಂಬ ಗುಮಾನಿ ಬಂದರೆ ಗೂಗಲ್‌ನಲ್ಲಿ ಅಥವಾ ಇತರೆ ಸರ್ಚ್ ಇಂಜಿನ್‌ಗಳಲ್ಲಿ ಅದೇ ವಿಷಯವನ್ನು ಟೈಪಿಸಿ ಶೋಧಿಸಿ ನೋಡುವುದು ಒಳಿತು. ಅತಿಯಾದ ಭಾವಾವೇಷಕ್ಕೆ ಕಾರಣವಾಗಬಲ್ಲ ವಿಷಯವಸ್ತುಗಳನ್ನು ಒಳಗೊಂಡ ಸಂದೇಶಗಳು ಬಂದಾಗ ಫಾರ್ವರ್ಡ್ ಮಾಡದಿರುವುದು ಅಥವಾ ನಾಲ್ಕಾರು ಬಾರಿ ಪರೀಕ್ಷಿಸಬೇಕಾಗುತ್ತದೆ.


ಸತ್ಯ ಅಥವಾ ವಾಸ್ತವ ವಿಷಯವನ್ನು ಪರೀಕ್ಷಿಸಲು ಇಂದು ಆನ್‌ಲೈನ್‌ನಲ್ಲಿ ಹತ್ತಾರು ಉಚಿತ ಫ್ಯಾಕ್ಟ್ಚೆಕಿಂಗ್ ವೆಬ್‌ಸೈಟ್‌ಗಳಿವೆ. ಪ್ರಮುಖವಾಗಿ ಇಂಟರ್‌ನ್ಯಾಷನಲ್ ಫ್ಯಾಕ್ಟ್ಚೆಕಿಂಗ್ ನೆಟ್‌ವರ್ಕ್ (ಐ.ಎಫ್.ಸಿ.ಎನ್.)ನ ಮಾನ್ಯತೆ ಪಡೆದಿರುವ ಆಲ್ಟ್ನ್ಯೂಸ್, ದಿ ಕ್ವಿಂಟ್‌ನ ವೆಬ್‌ಕೂಫ್, ನ್ಯೂಸ್‌ಚೆಕರ್.ಇನ್, ಫ್ಯಾಕ್ಟ್ ಕ್ರೆಸೆಂಡೊ, ಇಂಡಿಯಾ ಟುಡೇ ಫ್ಯಾಕ್ಟ್ಚೆಕರ್, ಬೂಮ್ ಫ್ಯಾಕ್ಟ್ಚೆಕರ್, ಸ್ಕೂಪ್‌ವೂಫ್, ಫ್ಯಾಕ್ಟ್ಚೆಕರ್.ಇನ್, ಫ್ಯಾಕ್ಟಿ÷್ಲ, ಸೇರಿದಂತೆ ಹತ್ತಾರು ಆನ್‌ಲೈನ್ ತಾಣಗಳಿವೆ. ಈ ಎಲ್ಲ ಸಂಸ್ಥೆಗಳು ವಾಟ್ಸಾಪ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದು, ಅವುಗಳಿಗೆ ವಿಷಯ ತಲುಪಿಸಿದಲ್ಲಿ, ಪರೀಕ್ಷಿಸಿ ಸತ್ಯ ಪ್ರಕಟಿಸುತ್ತವೆ. ಇತ್ತೀಚೆಗೆ ಆಲ್ಟ್ನ್ಯೂಸ್ ಹಾಗೂ ಇತರೆ ಕೆಲವು ಸಂಸ್ಥೆಗಳು ಭಾರತೀಯ ಭಾಷೆಗಳಲ್ಲಿಯೂ ಈ ಕೆಲಸ ಆರಂಭಿಸಿವೆ. ಸತ್ಯಸಂಗತಿ ತಿಳಿಯಲು ಮತ್ತಷ್ಟು ಸುಲಭವಾದ ಮಾರ್ಗವೆಂದರೆ ಮುಖ್ಯವಾಹಿನಿ ದಿನಪತ್ರಿಕೆಗಳಲ್ಲಿ ಮರುದಿನ ಆ ಸುದ್ದಿ ಪ್ರಕಟವಾಯಿತೇ ಇಲ್ಲವೇ ಎಂಬುದನ್ನು ಪರೀಕ್ಷಿಸುವುದು; ಅಲ್ಲಿ ಸುದ್ದಿಯೊಂದಕ್ಕೆ ಮೂರು ಹಂತದಲ್ಲಿ ಗೇಟ್‌ಕೀಪರ್‌ಗಳಿದ್ದು ಸುಳ್ಳುಸುದ್ದಿಗಳಿಗೆ ಅವಕಾಶವಿರುವುದಿಲ್ಲ.


ಬಹುತೇಕ ಸುಳ್ಳುಸುದ್ದಿಗಳಲ್ಲಿ ವ್ಯಾಕರಣ, ಚಿಹ್ನೆಯ ದೋಷಗಳಿರುವುದನ್ನು ಗಮನಿಸುವ ಆರೋಗ್ಯಕರ ಸಂಶಯದ ದೃಷ್ಟಿಕೋನ ಹೊಂದಿರುವುದು ತಪ್ಪುಮಾಹಿತಿ ಗುರುತಿಸಲು ಇರುವ ಉತ್ತಮ ಉಪಾಯ. ಇದನ್ನೇ ಹಿರಿಯರು ‘ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂದದ್ದು. ಇಲ್ಲವಾದಲ್ಲಿ ಸುಮಾರು ೪೦ಕೋಟಿ ಜಾಲತಾಣಗಳ ಬಳಕೆದಾರರಿರುವ ದೇಶದಲ್ಲಿ, ಕೊರೊನಾ ವೈರಸ್‌ನಂತಹ ಸಂಕಷ್ಟಗಳು ಮಾಹಿತಿಮಾರಿಯಾಗಿ ಪರಿವರ್ತಿತವಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಮುಂದುವರಿದು ದೇಶದ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸೌಹಾರ್ದತೆ, ಸ್ವಾಸ್ಥö್ಯಗಳನ್ನು ಹಾಳುಗೆಡವಿ ಕಂದಕಗಳನ್ನು, ದೂರಗಾಮಿ ಪರಿಣಾಮಗಳನ್ನು ಬೀರುತ್ತ್ತದೆ. ಇದನ್ನು ಬಹಳ ಹಿಂದೆಯೇ ಅರಿತಿದ್ದ ಕುವೆಂಪು ಅವರು ‘ಜನತೆಯಲ್ಲಿ ವೈಚಾರಿಕ ಜಾಗೃತಿಯನ್ನು ಪ್ರಚೋದಿಸದಿದ್ದರೆ, ವೈಜ್ಞಾನಿಕ ಮನೋಧರ್ಮವನ್ನು ಮೂಡಿಸದಿದ್ದರೆ ಅವರು ಎಂದಿನAತೆ ಪ್ರಾಣಿಗಳಂತೆ ಬದುಕು ನಡೆಸುತ್ತಾರೆ; ಅಂಥವರಿರುವ ತನಕ ದೇಶಕ್ಕೆ ಸುಖವಿಲ್ಲ; ವಿಚಾರ ವೇದಿಕೆಗಳ ಮೂಲಕ ಅವರನ್ನು ವಿಚಾರ ಪಥದಲ್ಲಿ ಕೊಂಡೊಯ್ಯಬೇಕು’, ಎಂದು ವಿದ್ಯಾವಂತ ಯುವಸಮುದಾಯವನ್ನು ಒತ್ತಾಯಿಸಿದ್ದರು. ಪ್ರತಿಯೊಂದನ್ನು ಪ್ರಶ್ನಿಸಿ, ಪರೀಕ್ಷಿಸಿ, ನಿಕಷಕ್ಕೊಳಪಡಿಸಿ ನಂತರವೇ ಒಪ್ಪಿಕೊಳ್ಳಿ ಎಂಬ ಕುವೆಂಪು ಕರೆ ಕೊರೊನಾ ಮಾಹಿತಿಮಾರಿ ಹಾಗೂ ಸುಳ್ಳುಸುದ್ದಿಗಳ ಈ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ಪ್ರಸ್ತುತವೆಂದೆನಿಸುತ್ತದೆ.



ಪರಾಮರ್ಶನ

ಇರೆಟೊನ್, ಸಿ. & ಪೊಸೆಟ್ಟಿ, ಜೆ. (೨೦೧೮). ಜರ್ನಲಿಸಂ, ಫೇಕ್‌ನ್ಯೂಸ್ & ಡಿಸ್‌ಇನ್ಫಾರ್ಮೆಶನ್. ಪ್ಯಾರಿಸ್: ಯುನೆಸ್ಕೊ.

ಖಂಡೆಕರ್, ಒ. (೨೦೨೦). ಹೌ ವಾಟ್ಸಾಪ್ ಪಾರ್ವಡ್ಸ್ ಆನ್ ಕೊರೊನಾವೈರಸ್ ಬ್ರೋಕ್ ದಿ ರೂ. ಒನ್ ಟ್ರಿಲಿಯನ್ ಇಂಡಿಯನ್ ಪೌಲ್ಟಿç ಇಂಡಸ್ಟಿç. ಲೈವ್‌ಮಿಂಟ್ ವರದಿ: ಮಾರ್ಚ್ ೨೧, ೨೦೨೦.

ಕೆಂಪ್, ಎಸ್. (೨೦೨೦). ಡಿಜಿಟಲ್ ೨೦೨೦: ೩.೮ ಬಿಲಿಯನ್ ಪೀಪಲ್ ಯೂಸ್ ಸೊಶಿಯಲ್ ಮೀಡಿಯಾ. ವಿ ಆರ್ ಸೋಶಿಯಲ್ ವೆಬ್‌ತಾಣ: ವಿಆರ್‌ಸೋಶಿಯಲ್.ಕಾಂ

ಚತುರ್ವೇದಿ, ಎ. (೨೦೧೯). ೨೦೧೯- ದಿ ಇಯರ್ ಆಫ್ ಫೇಕ್‌ನ್ಯೂಸ್. ಎಕಾನಾಮಿಕ್ ಟೈಮ್ಸ್ ಪತ್ರಿಕೆ, ಡಿಸೆಂಬರ್ ೨೦, ೨೦೧೯.

ದಿವಂಜಿ, ಎಸ್. (೨೦೨೦). ಡಿಜಿಟಲ್ ಪಾಪುಲೇಶನ್ ಇನ್ ಇಂಡಿಯಾ ಆಸ್ ಆಫ್ ಜನವರಿ ೨೦೨೦. ಸ್ಟಾö್ಯಟಿಸ್ಟ ವೆಬ್‌ತಾಣ: ಸ್ಟಾö್ಯಟಿಸ್ಟ.ಕಾಂ

ದೇ. ಜವರೇಗೌಡ (೨೦೧೪). ವಿಚಾರ ಕ್ರಾಂತಿಗೆ ಕುವೆಂಪು ಕರೆ. ಬೆಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು.

ಮರ‍್ಸಿಯರ್, ಹೆಚ್. (೨೦೨೦). ಫೇಕ್ ನ್ಯೂಸ್ ಇನ್ ದಿ ಟೈಮ್ ಆಫ್ ಕೊರೊನಾ ವೈರಸ್: ಹೌ ಬಿಗ್ ಇಸ್ ದಿ ತ್ರೆಟ್? ದಿ ಗಾರ್ಡಿಯನ್ ಪತ್ರಿಕೆ, ಮಾರ್ಚ್ ೩೦, ೨೦೨೦.

ವೊಸೌಗಿ, ಎಸ್., ರಾಯ್, ಡಿ. & ಅರಲ್, ಎಸ್. (೨೦೧೮). ದಿ ಸ್ಪೆçಡ್ ಆಫ್ ಟ್ರು ಅಂಡ್ ಫಾಲ್ಸ್ ನ್ಯೂಸ್ ಆನ್‌ಲೈನ್. ಸೈನ್ಸ್, ೩೫೯ (೬೩೮೦), ೧೧೪೬-೧೧೫೧.

ವಿಶ್ವ ಆರೋಗ್ಯ ಸಂಸ್ಥೆ ವೆಬ್‌ತಾಣ: ಡಬ್ಲೂö್ಯಹೆಚ್‌ಒ.ಇಂಟ್

ಸುದಾAಶು, ಎಸ್. (೨೦೧೭). ಮೀಡಿಯಾ, ಎಥಿಕ್ಸ್, ಅಂಡ್ ಫೇಕ್ ನ್ಯೂಸ್: ಡಿಮಾನಿಟೈಸೇಶನ್ ಇನ್ ಫೋಕಸ್. ನ್ಯಾಷನಲ್ ಮೀಡಿಯಾ ಕಾನ್ಕೆ÷್ಲÃವ್, ೩-೪ ಮೇ ೨೦೧೭, ಭುವನೇಶ್ವರ, ಓಡಿಶಾ.


bottom of page