ಡಾ. ಸತ್ಯಪ್ರಕಾಶ್ ಎಂ. ಆರ್.
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ - ೫೭೭೪೫೧, ಶಿವಮೊಗ್ಗ. ಈ-ಮೇಲ್: mrsathyaprakash@gmail.com.
ವಿನಯ್ ಜಿ. ಪಿ.
ಸಂಶೋಧನಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ - ೫೭೭೪೫೧, ಶಿವಮೊಗ್ಗ. ಈ-ಮೇಲ್: vinaygpa@gmail.com
ಸಾರಾಂಶ
ಜಾಗತೀಕರಣದ ಈ ಕಾಲಘಟ್ಟದಲ್ಲಿ, ಪತ್ರಿಕೋದ್ಯಮದ ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಘಟಿಸಿದ ಘಟನೆಯನ್ನು ಕ್ಷಣಾರ್ಧದಲ್ಲಿ ಜಗತ್ತಿಗೆಲ್ಲಾ ತಿಳಿಸುವ ಶಕ್ತಿ, ಸಾಮರ್ಥ್ಯ ಹೊಂದಿರುವ ಮಾಧ್ಯಮಕ್ಷೇತ್ರ, ದಿನದಿನವೂ ಬದಲಾಗುವ ತಂತ್ರಜ್ಞಾನ, ನವಮಾಧ್ಯಮಗಳ ನಾಗಾಲೋಟದ ಬೆಳವಣಿಗೆಗಳ ಇಂದಿನ ದಿನಮಾನಗಳಲ್ಲಿ ಪತ್ರಿಕೆಗಳು ಪ್ರಸ್ತುತವೆ ಎಂಬ ಗಂಭೀರ ಚಿಂತನೆ ಸುಳಿಯದಿರಲು ಸಾಧ್ಯವಿಲ್ಲ. ಪತ್ರಿಕೆಗಳನ್ನು ದೇಶ-ವಿದೇಶಗಳ ವಿಶ್ವಾಸಾರ್ಹ, ನಿಖರ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳುವ ಶೈಕ್ಷಣಿಕ ಪ್ರಕ್ರಿಯೆ ಸಲುವಾಗಿ ಕೂಡ ಬಳಸುತ್ತಿರುವುದು ಬಹುತೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿ ಉಪಯುಕ್ತ ಮಾಹಿತಿ ಮತ್ತು ಸಾಮಾನ್ಯ ಜ್ಞಾನ ಒದಗಿಸುವ ಪತ್ರಿಕೆಗಳು ಜಾಗೃತ ನಾಗರೀಕನನ್ನು ಸೃಷ್ಟಿಸುವಲ್ಲಿ ನಿರ್ವಹಿಸಿರುವ ಪಾತ್ರವನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಈ ಅಧ್ಯಯನವನ್ನು ಕೈಗೊಳ್ಳಲಾಗಿದೆ. ದಿನಪತ್ರಿಕೆಗಳು ಓದುಗರಿಗೆ ಸಾಮಾನ್ಯ ಜ್ಞಾನವನ್ನು ನೀಡುವ ಮೂಲಕ ಶೈಕ್ಷಣಿಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ವಿಶ್ಲೇಷಿಸುವುದು ಅಧ್ಯಯನದ ಪ್ರಮುಖ ಉದ್ದೇಶ. ಆ ಮೂಲಕ ಓದುಗರ ಪ್ರಚಲಿತ ವಿದ್ಯಮಾನಗಳ ಅರಿವಿನ ಮಟ್ಟವನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ದಿನಪತ್ರಿಕೆಗಳು ತನ್ನ ನಿರಂತರ ಓದುಗರಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ಸ್ಪಷ್ಟವಾದ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಪ್ರಾದೇಶಿಕ ಹಂತದಿAದ ಅಂತಾರಾಷ್ಟಿçÃಯ ಮಟ್ಟದವರೆಗೆ ಸುದ್ದಿ, ಲೇಖನ, ಅಂಕಣಗಳಿತ್ಯಾದಿ ಮಾದರಿಗಳ ಮೂಲಕ ಸಮಗ್ರ ಮಾಹಿತಿ ನೀಡುವ ಪತ್ರಿಕೆಗಳನ್ನು ಪ್ರತಿನಿತ್ಯ ಓದುವುದು ಸಾಮಾನ್ಯ ಜ್ಞಾನ ವೃದ್ಧಿಗೆ ಪೂರಕವಾಗಿದೆ ಎಂದು ಅಧ್ಯಯನ ನಿರೂಪಿಸಿದೆ.
ಪ್ರಮುಖ ಪದಗಳು: ಸಾಮಾನ್ಯ ಜ್ಞಾನ, ಶೈಕ್ಷಣಿಕ ಸಾಧನ, ದಿನಪತ್ರಿಕೆಗಳು, ಮಾಧ್ಯಮ ಶಿಕ್ಷಣ, ಪ್ರಚಲಿತ ವಿದ್ಯಮಾನಗಳು
* * * * * *
ಪೀಠಿಕೆ
ಸಮಾಜದಲ್ಲಿನ ಆಗುಹೋಗುಗಳು, ಸಾರ್ವಜನಿಕರಿಗೆ ಸಂಬAಧಿಸಿದ ವಿಚಾರಗಳು, ಅಭಿಪ್ರಾಯಗಳನ್ನು, ಆಧುನಿಕ ಪ್ರಚಾರ ಮಾರ್ಗಗಳ ಮುಖೇನ ಕ್ರಮಬದ್ಧವಾಗಿ, ನಂಬಿಕೆಗರ್ಹವಾಗಿ ಪ್ರಸಾರಮಾಡುವ ಸಾಧನವೇ ಪತ್ರಿಕೆಗಳು ಹಾಗೂ ಈ ವೃತ್ತಿಯನ್ನು ಪತ್ರಿಕೋದ್ಯಮ ಎನ್ನುತ್ತೇವೆ. ಸ್ವತಂತ್ರ ಪತ್ರಿಕಾ ಮಾಧ್ಯಮವು ಸಾರ್ವಜನಿಕ ಆಭಿಪ್ರಾಯವನ್ನು ಪ್ರಭುತ್ವಕ್ಕೆ ಕೇಳಿಸುವ ಹಾಗೂ ಜನತೆಯ ಹಕ್ಕು ಭಾಧ್ಯತೆಗಳನ್ನು ಕಾಪಾಡುವ ಸಾಧನವಾಗಿದೆ. ಪತ್ರಿಕೆಗಳು ಪ್ರಪಂಚದ ಕೈಗನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ. ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂದು ಸಮಕಾಲೀನ ವರದಿಗಳ ಮೂಲಕ ಸತ್ಯ ಸಂಗತಿಗಳನ್ನು ವಸ್ತುನಿಷ್ಟವಾಗಿ ಹಾಗೂ ನಿಖರವಾಗಿ ಸಮಾಜಕ್ಕೆ ವರದಿ ಮಾಡುವ ಕಾರ್ಯವನ್ನು ಪತ್ರಿಕೆಗಳು ನಿರ್ವಹಿಸುತ್ತಿದ್ದು, ಮಾಹಿತಿ, ಶಿಕ್ಷಣ ಹಾಗೂ ಮಾರ್ಗದರ್ಶನದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
೧೪೫೫ರಲ್ಲಿ ಜರ್ಮನಿಯಲ್ಲಿ ಗುಟೆನ್‌ಬರ್ಗ್ ಮುದ್ರಣ ಯಂತ್ರ ಕಂಡುಹಿಡಿದ ನಂತರದ ಶತಮಾನದಲ್ಲಿ ಪತ್ರಿಕಾ ಮಾಧ್ಯಮದ ಬೆಳವಣಿಗೆ ವೇಗಪಡೆಯಿತು. ವಿಶ್ವದ ಮೊದಲ ದಿನಪತ್ರಿಕೆ ‘ಡೈಲಿ ಕೌರಂಟ್’ ಲಂಡನ್‌ನಲ್ಲಿ ೧೭೦೨ರಲ್ಲಿ ಪ್ರಕಟವಾಯಿತು. ಈ ಹೊತ್ತಿಗೆ ಯುರೋಪ್‌ನಲ್ಲಾದ ಕೈಗಾರಿಕಾ ಕ್ರಾಂತಿಯು, ಕೇವಲ ಶ್ರೀಮಂತರು, ವಿದ್ಯಾವಂತರಿಗೆ, ಸಮಾಜದ ಮೇಲ್ವರ್ಗದವರಿಗೆ ಸೀಮಿತವಾಗಿದ್ದ ಪತ್ರಿಕೆಗಳನ್ನು ಮಧ್ಯಮವರ್ಗಕ್ಕೂ ತಲುಪುವಂತೆ ಮಾಡಿತು. ನಂತರದ ದಶಕಗಳಲ್ಲಿ ಹೆಚ್ಚೆಚ್ಚು ಪತ್ರಿಕೆಗಳು ಆರಂಭವಾಗುವುದರ ಜೊತೆಗೆ ಅಂತರಾಷ್ಟಿçÃಯ ಮಟ್ಟದ ವಿಚಾರಗಳಿಂದ ಹಿಡಿದು ರಾಷ್ಟಿçÃಯ, ಪ್ರಾದೇಶಿಕ ಮತ್ತು ಸ್ಥಳೀಯ ಮಟ್ಟದವರೆಗಿನ ಸುದ್ದಿಗಳೆಲ್ಲವನ್ನು ತಮ್ಮ ಓದುಗರಿಗೆ ತಲುಪಿಸುತ್ತಾ, ರಾಜಕೀಯ, ವಾಣಿಜ್ಯ, ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರಕ್ರಾಂತಿಗೆ ಕಾರಣವಾದವು. ಐತಿಹಾಸಿಕವಾಗಿ ತಂತ್ರಜ್ಞಾನ ಕೈಗಾರಿಕಾ ಕ್ರಾಂತಿಗೆ ಕಾರಣವಾದರೆ, ಪತ್ರಿಕೆಗಳು ವಿಚಾರ ಕ್ರಾಂತಿಗೆ ನಾಂದಿ ಹಾಡಿದವು.
ಪತ್ರಿಕಾ ಮಾಹಿತಿಯ ಶಕ್ತಿ: ಖ್ಯಾತ ಐರಿಷ್ ಲೇಖಕ, ವಿಮರ್ಶಕ ಜಾರ್ಜ್ ಬರ್ನಾಡ್ ಶಾ ಹೇಳುವಂತೆ, ತಿಳಿದುಕೊಳ್ಳುವ ಹಕ್ಕು, ಬದುಕುವ ಹಕ್ಕಿಗೆ ಸಮನಾದುದು. ಬದುಕಲು ಹಾಗೂ ಜ್ಞಾನ ವೃದ್ಧಿಸಿಕೊಳ್ಳಲು ವಿಚಾರಗಳನ್ನು ತಿಳಿಯುವುದು ಮೂಲಭೂತ ಹಾಗೂ ಷರತ್ತುರಹಿತ ಹಕ್ಕು ಎಂದು ಪರಿಗಣಿಸಬಹುದು ಎಂದಿದ್ದಾರೆ. ಬ್ರಿಟನ್ನಿನ ಸುಪ್ರಸಿದ್ಧ ರಾಜನೀತಿ ಶಾಸ್ತçಜ್ಞ ಹೆರಾಲ್ಡ್ ಜೆ ಲಾಸ್ಕಿಯವರು ವಿಶ್ವಾಸಾರ್ಹವಾದ ಸುದ್ಧಿಯನ್ನು ತಿಳಿಯದ ಜನತೆಯ ಸ್ವಾತಂತ್ರö್ಯವು ಇಂದಲ್ಲ ನಾಳೆ ತಳಹದಿಯಿಲ್ಲದೆ ಮನೆಯನ್ನು ಕಟ್ಟಿಕೊಂಡAತೆ ಎಂದು ಎಚ್ಚರಿಸಿದ್ದಾರೆ. ಬುದ್ಧಿಶಕ್ತಿಯುಳ್ಳ ಜನರನ್ನು ಕಂಡರೆ ಗೌರವವುಂಟಾಗುವ ಹಾಗೆ ಹೆದರಿಕೆಯೂ ಮೂಡುತ್ತದೆ. ಹಾಗೆಂತಲೇ ನೆಪೋಲಿಯನ್ ಹೀಗೆ ಹೇಳುತ್ತಾನೆ; ಸಾವಿರ ಬಂದೂಕಿನ ಕಠಾರಿಗಳಿಗಿಂತ ನಾಲ್ಕು ಪ್ರತಿಕೂಲ ಪತ್ರಿಕೆಗಳಿಗೆ ಭಯಪಡಬೇಕಾಗುತ್ತದೆ. ಪತ್ರಿಕೋದ್ಯಮಿಯು ಗರ್ಜನೆ ಮಾಡುತ್ತಾನೆ, ಖಂಡನೆ ಮಾಡುತ್ತಾನೆ, ಬುದ್ಧಿವಾದವನ್ನು ಹೇಳುತ್ತಾನೆ, ರಾಜರ ಅಥವಾ ಪ್ರಭುತ್ವದ ಪ್ರತಿನಿಧಿಯಾಗುತ್ತಾನೆ ಮತ್ತು ರಾಷ್ಟçಗಳಿಗೆ ವಿವೇಕ ಹೇಳುವ ಶಾಂತಿದೂತನಾಗುತ್ತಾನೆ. ಪ್ರಚಲಿತ ವಿದ್ಯಮಾನಗಳ ಮೇಲೆ ವಿಶ್ವಾಸಾರ್ಹ ಮಾಹಿತಿಯೊಂದಿಗೆ ಬೆಳಕು ಚೆಲ್ಲುವ ಪತ್ರಿಕೆಗಳು, ವಿಶ್ಲೇಷಣೆ ಮತ್ತು ಸಂಪಾದಕೀಯಗಳ ಮೂಲಕ ತಮ್ಮ ನಿಲುವನ್ನು ಬಿಂಬಿಸುತ್ತಾ, ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ.
ವಿಶ್ವಾಸಾರ್ಹ ಸುದ್ದಿ-ಮಾಹಿತಿ, ಮುಕ್ತ ಚರ್ಚೆಗಳು ಸಮಾಜವೊಂದು ಸರಿದಾರಿಯಲ್ಲಿ ನಡೆಯಲು ಸಹಾಯಕವಾಗುವ ಜೊತೆಗೆ ಪ್ರಜಾಪ್ರಭುತ್ವವು ಯಾಶಸ್ವಿಯಾಗಲು ಸಹಕಾರಿ ಎಂದು ಅನೇಕ ತಜ್ಞರು ಆಭಿಪ್ರಾಯಿಸಿದ್ದಾರೆ. ಹೀಗಾಗಿ ದಿನವಿಡೀ ನಡೆದ ಘಟನೆಗಳನ್ನು ಪ್ರಕಟಿಸುವ ವರ್ತಮಾನ ಪತ್ರಿಕೆಗಳು, ಸಾರ್ವಜನಿಕ ಸುದ್ಧಿ ಪ್ರಸಾರದ ಕರ್ತೃ ಹಾಗೂ ಜ್ಞಾನಾಭಿವೃದ್ಧಿಯ ಒಂದು ಅವಶ್ಯ ಸಾಧನ. ಮಾನವನ ಯೋಗಕ್ಷೇಮ ಹೆಚ್ಚುತ್ತಿರುವ ಈ ದಿನಗಳಲ್ಲಿ, ಸಮಾಜದಲ್ಲಿ ಸಾರ್ವಜನಿಕ ಹಿತವನ್ನು ಧ್ಯೇಯವನ್ನಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಚಾಲನಾ ಶಕ್ತಿಗಳೇ ಪತ್ರಿಕೆಗಳು.
ಮಾಧ್ಯಮ ಶಿಕ್ಷಣ: ಮಾಧ್ಯಮವು ಪ್ರಮುಖವಾಗಿ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ಒದಗಿಸುವ ಉದ್ದೇಶಗಳನ್ನು ಹೊಂದಿದೆ. ಉತ್ತಮ ಪತ್ರಿಕೆಯೊಂದು ದಿನನಿತ್ಯದ ಆಗುಹೋಗುಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವ ಮೂಲಕ ಓದುಗರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತದೆ. ಹೀಗಾಗಿಯೇ ಅಮೇರಿಕಾದ ಖ್ಯಾತ ಪತ್ರಿಕೆ ದಿ ವಾಷಿಗ್ಟಂನ್ ಪೋಸ್ಟ್ನ ಪ್ರಕಾಶಕ ಫಿಲಿಪ್ ಗ್ರಹಾಂ, ಸುದ್ದಿಯು ಇತಿಹಾಸದ ಮೊದಲ ಕಚ್ಚಾಪ್ರತಿ ಎಂದು ಬಣ್ಣಿಸಿದ್ದಾನೆ. ದಿನಪತ್ರಿಕಗೆಗಳು ಸುದ್ದಿಗಳ ಜೊತೆಗೆ ವಿಶೇಷ ವರದಿ, ತನಿಖಾ ಬರಹ, ಲೇಖನ, ಅಂಕಣ, ವಿಶ್ಲೇಷಣೆ ಹಾಗೂ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿ, ಸಂಬAಧಪಟ್ಟ ತಜ್ಞರ, ಖ್ಯಾತನಾಮರ ಅಭಿಪ್ರಾಯಗಳನ್ನು ನೀಡಿ ಸಮರ್ಪಕ ವೇದಿಕೆ ಒದಗಿಸುವ ಮುಖಾಂತರ ವಿಷಯಗಳ ಕುರಿತು ಜನರಿಗೆ ಶಿಕ್ಷಣವನ್ನು ನೀಡುತ್ತವೆ. ದೇಶ-ವಿದೇಶಗಳ ರಾಜಕೀಯ, ಕ್ರೀಡೆ, ಕಲೆ, ಸಾಹಿತ್ಯ, ಶಿಕ್ಷಣ, ಆರೋಗ್ಯ, ಪರಿಸರ, ವಾಣಿಜ್ಯ-ವ್ಯವಹಾರ, ವಿಜ್ಞಾನ-ತಂತ್ರಜ್ಞಾನ, ಸಾರಿಗೆ, ಹವಾಮಾನ, ಪ್ರವಾಸ ಸೇರಿದಂತೆ ಹತ್ತು ಹಲವು ವಿಷಯಗಳ ಬೆಳವಣಿಗೆಗಳನ್ನು ಸಮಗ್ರವಾಗಿ ದಾಖಲಿಸುತ್ತಾ, ಸ್ವಯಂ ಕಲಿಕೆಗೆ ಪೂರಕ ಸಾಧನಗಳಾಗಿವೆ. ಒಂದಕ್ಕಿAತ ಹೆಚ್ಚು ಕ್ಷೇತ್ರಗಳ ಆಸಕ್ತಿಗಳನ್ನು ಹೊಂದಿರುವವರಿಗೆ ಸಮಗ್ರ ಮಾಹಿತಿ ಧಾರೆಯೆರೆಯುವ ಮೂಲಕ ಪತ್ರಿಕೆಗಳು ಮಾರ್ಗದರ್ಶನದ ಕಾರ್ಯನಿರ್ವಹಿಸುತ್ತವೆ.
ಸಮಾಜದ ಬಡ, ಶೋಷಿತ ವರ್ಗಗಳಿಗೆ, ಸೌಲಭ್ಯವಂಚಿತರಿಗೆ ಇತರೆ ದುಬಾರಿ ಮಾಧ್ಯಮಗಳನ್ನು ಹೊಂದಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅಗ್ಗವಾಗಿ ದೊರೆಯುವ ಮಾಹಿತಿ ಕಣಜಗಳೇ ಪತ್ರಿಕೆಗಳು. ತಮ್ಮ ಈ ಸಮಾಜಮುಖಿ ನಿಲುವುಗಳಿಂದಾಗಿಯೇ ಮಾಧ್ಯಮ ಕ್ಷೇತ್ರದಲ್ಲಿ ಪತ್ರಿಕೆಗಳಿಗೆ ವಿಶೇಷ ಸ್ಥಾನ. ಪತ್ರಿಕೆಗಳ ಹಿನ್ನೆಲೆ, ಉದ್ದೇಶ, ಕಾರ್ಯ ಹಾಗೂ ಪ್ರಸ್ತುತತೆಯನ್ನು ಆಧರಿಸಿ ಇವಗಳನ್ನು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಕರೆಯಬಹುದು. ಪತ್ರಿಕೆಗಳು ಬೆಳವಣಿಗೆಯಾದಂತೆ ಪ್ರತ್ಯೇಕ ಓದುಗ ಸಮೂಹವೊಂದು ರೂಪುಗೊಂಡಿತು. ಅನೇಕ ಜನರ ಪ್ರತಿನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಪತ್ರಿಕೆಗಳ ಓದುವಿಕೆ ಜನಪ್ರಿಯಗೊಂಡಿತು. ಒಂದು ದೊಡ್ಡ ಜನಸಮುದಾಯವೆ ತನ್ನೆಲ್ಲಾ ಮಾಹಿತಿಯ ಆಗರವನ್ನಾಗಿ ಪತ್ರಿಕೆಗಳನ್ನು ಅವಲಂಬಿಸತೊಡಗಿತು. ಪ್ರಸಿದ್ಧ ಮಾಧ್ಯಮ ತಜ್ಞ ಕೆನಡಾದ ಮಾರ್ಷಲ್ ಮ್ಯಾಕ್‌ಲುಹನ್, "ಜನರು ಪತ್ರಿಕೆಗಳನ್ನು ಕೇವಲ ಓದುವುದಿಲ್ಲ. ಬದಲಾಗಿ ಪ್ರತಿದಿನ ಮುಂಜಾನೆ ಅವುಗಳ ಒಳಗಿಳಿದು ಬಿಸಿಸ್ನಾನ ಮಾಡುತ್ತಾರೆ" ಎಂದಿದ್ದಾರೆ. ಪತ್ರಿಕೆಗಳ ಓದುಗರ ಸಂಖ್ಯೆ ಹೆಚ್ಚಿದಂತೆಲ್ಲಾ ಓದುಗರ ಆಸಕ್ತಿ ಮತ್ತು ಅಭಿರುಚಿಗಳಿಗನುಗುಣವಾಗಿ ಪತ್ರಿಕೆಗಳು ತಮ್ಮ ಆದ್ಯತೆಯನ್ನು ಬದಲಾಯಿಸಿಕೊಂಡು ಓದುಗ ವಲಯವನ್ನು ವಿಸ್ತರಿಸಿಕೊಂಡಿವೆ.
ಪತ್ರಿಕಾ ಮಾಧ್ಯಮದ ಮಹತ್ವ: ೨೦ನೇ ಶತಮಾನದ ಆರಂಭದಿAದಲೂ ರೇಡಿಯೋ, ಟೆಲಿವಿಷನ್ ಮತ್ತು ಕೊನೆಯ ಭಾಗದಲ್ಲಿ ಇಂಟರ್‌ನೆಟ್ ಆಧರಿತ ಕ್ರಾಂತಿಕಾರಿ ನವಮಾಧ್ಯಮಗಳು ಆವಿಷ್ಕಾರಗೊಂಡವು. ಪ್ರತೀ ಮಾಧ್ಯಮವು ಒಂದಕ್ಕಿAತ ಮತ್ತೊಂದು ಹೆಚ್ಚು ವೇಗವಾಗಿ ಜನರಿಗೆ ಸುದ್ದಿ ತಲುಪಿಸಬಲ್ಲ ಸಾಧ್ಯತೆಗಳನ್ನು ತೆರೆದಿಟ್ಟವು. ತದನಂತರವೂ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ ಜನಪ್ರಿಯತೆಯನ್ನು ಸಾರಿದ್ದವು. ಆದರೆ ಇಂಟರ್‌ನೆಟ್ ಯಾವುದೇ ಮಾಹಿತಿಯನ್ನು ಕ್ಷಣಮಾತ್ರದಲ್ಲಿಯೇ ಹಾಗೂ ತನ್ನ ಬಹುಮಾಧ್ಯಮ ಆಧರಿತ ರೂಪದಲ್ಲಿ ಆ ವಿಷಯವಸ್ತುವನ್ನು ನೀಡಬಲ್ಲ ಸಾಮರ್ಥ್ಯದಿಂದಾಗಿ ಪ್ರಬಲ ಪೈಪೋಟಿ ನೀಡುವಂತಾಯಿತು.
ಪತ್ರಿಕೆ, ಟೆಲಿವಿಷನ್, ರೇಡಿಯೋ ಸುದ್ದಿಗಳಿಗಿಂತಲೂ ಇಂಟರ್‌ನೆಟ್ ಪತ್ರಿಕೋದ್ಯಮದ ವಿಷಯಗಳ ವಿಶ್ವಾಸಾರ್ಹತೆ ಬಹಳ ನಾಜೂಕಿನದು ಹಾಗೂ ಇಲ್ಲಿ ವಿಶ್ವಾಸಾರ್ಹತೆ ಕಡಿಮೆ. ಪತ್ರಿಕೆಗಳು ವಿಶ್ವಾಸಾರ್ಹತೆ, ಉತ್ತರದಾಯಿತ್ವದ ಹೆಜ್ಜೆಯೊಂದಿಗೆ ಮುನ್ನಡೆದು ವಿಶ್ಲೇಷಣಾತ್ಮಕ ಹಾಗೂ ಆಳವಾದ ವರದಿಗಳನ್ನು ನೀಡುವತ್ತ ಗಮನವಹಿಸಿದವು. ಮುದ್ರಣ ತಂತ್ರಜ್ಞಾನ, ಪುಟವಿನ್ಯಾಸ, ಮಾರುಕಟೆ ತಂತ್ರಗಳನ್ನು ಅಳವಡಿಸಿಕೊಂಡು ಮತ್ತಷ್ಟು ಓದುಗರನ್ನು ಆಕರ್ಷಿಸಿದವು. ಮಾಹಿತಿ ತಂತ್ರಜ್ಞಾನದ ತೀವ್ರಗತಿಯ ಬೆಳವಣಿಗೆಯೊಟ್ಟಿಗೆ ಹೆಜ್ಜೆಹಾಕಲು ಪತ್ರಿಕೆಗಳು ತಮ್ಮ ವೆಬ್‌ಸೈಟ್‌ಗಳನ್ನು ಆರಂಭಿಸಿವೆ. ಅಳಿವು ಉಳಿವಿನ ಸಮಸ್ಯೆಯ ಸವಾಲುಗಳನ್ನು ದಾಟಿ ಮುದ್ರಣ ಮಾಧ್ಯಮ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಭಾರತದ ಖ್ಯಾತ ಪತ್ರಕರ್ತ ರಾಮ್ (೨೦೧೧) ಅವರು ಭಾರತ ಮತ್ತು ಚೀನಾ ದೇಶಗಳನ್ನು ಜಗತ್ತಿನ ದಿನಪತ್ರಿಕೆ ಲೋಕದ ನಾಯಕರು ಎಂದು ಕರೆದಿದ್ದಾರೆ. ಜಗತ್ತಿನ ಅಗ್ರ ನೂರು ದಿನಪತ್ರಿಕೆಗಳಲ್ಲಿ ಏಷ್ಯಾದ ಈ ಎರಡು ರಾಷ್ಟçಗಳು ಮೂರನೇ ನಾಲ್ಕರಷ್ಟು ಪಾಲು ಹೊಂದಿರುವುದೇ ಇದಕ್ಕೆ ಸಾಕ್ಷಿ. ಹೀಗೆ ತನಗೆದುರಾದ ಅಪಾಯಗಳನ್ನು ಯಶಸ್ವಿಯಾಗಿ ಎದುರಿಸಿದ ಪತ್ರಿಕೆಗಳು ಎದುರಾಗುವ ಊಹಾಪೋಹಗಳಿಂದ ಗಲಿಬಿಲಿಗೊಂಡಿದ್ದ ಸಮಾಜ ಈಗ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿದೆ.
ಸಾಹಿತ್ಯ ವಿಮರ್ಶೆ
ಆಧುನಿಕ ಸಮಾಜದಲ್ಲಿ ಮಾಧ್ಯಮವು ಕೇವಲ ಮಾಹಿತಿ ಪೂರೈಕೆಯ ಸಾಧನವಾಗಿರದೇ, ಒಂದು ವ್ಯವಸ್ಥೆಯೆಂಬAತೆ ಬೆಳೆದುನಿಂತಿದೆ. ಸಂವಹನ ಅಧ್ಯಯನಶಾಸ್ತçದ ಪಿತಾಮಹ ಎಂದೇ ಕರೆಯಲಾಗುವ ಅಮೇರಿಕಾದ ಸಂವಹನ ತಜ್ಞ ವಿಲ್ಬರ್ ಶ್ರಾಮ್ ೧೯೭೦ರಲ್ಲಿ ಮಾಧ್ಯಮವು ಪಹರೆ ಕಾಯುವ, ವೇದಿಕೆ ಒದಗಿಸುವ, ಶಿಕ್ಷಕನ ಕರ್ತವ್ಯವನ್ನು ನಿರ್ವಹಿಸುತ್ತದೆ ಎಂದಿದ್ದಾರೆ. ಪ್ರಮುಖವಾಗಿ ಪಾರಂಪರಿಕವಾದ ಸಾಮಾಜಿಕ ವಿಷಯಗಳನ್ನು ಮುಂದಿನ ತಲೆಮಾರುಗಳಿಗೆ ತಿಳಿಸಿ ಹೇಳಿಕೊಡುವ ಕೆಲಸವನ್ನು ಸಂವಹನ ಮಾಧ್ಯಮಗಳು ಮಾಡುತ್ತವೆ (ಪೂರ್ಣಿಮಾ, ೨೦೦೩). ಲೇಖನಿಯ ಶಕ್ತಿಯ ಮೇಲೆ ಬೆಳೆದುನಿಂತಿರುವ ಮಾಧ್ಯಮವೇ ಪತ್ರಿಕೆ. ಪತ್ರಿಕೆಗಳ ಪ್ರಕಟಣೆಗಳಲ್ಲಿ ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಮತ್ತು ಸಾಹಿತ್ಯಿಕ ಎಂಬ ನಾಲ್ಕು ಬಗೆಯ ಉದ್ದೇಶಗಳನ್ನು ಕಾಣಬಹುದು ಎಂದು ಹತ್ತೊಂಬತ್ತನೆಯ ಶತಮಾನದಲ್ಲಿ ಪತ್ರಿಕೆಗಳ ಕುರಿತು ಶ್ರೀನಿವಾಸ ಹಾವನೂರು ಅಭಿಪ್ರಾಯಪಟ್ಟಿದ್ದರು (ಚಂದ್ರಶೇಖರ್, ೨೦೦೩). ಕಲಿಕೆ ನಿರಂತರ ಪ್ರಕ್ರಿಯೆ, ಓದು ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗ. ಪತ್ರಿಕೆಗಳು ತಮ್ಮ ಓದುಗರಿಗೆ ಮಾಹಿತಿ, ಶಿಕ್ಷಣ, ಮಾರ್ಗದರ್ಶನ ಮಾಡುವ ಜ್ಞಾನ ವಿಸ್ತರಣೆಯಲ್ಲಿ ಮಹತ್ತರವಾದ ಪಾತ್ರ ವಹಿಸಿರುವ ಕುರಿತು ಅನೇಕ ಅಧ್ಯಯನಗಳು ನಡೆದಿವೆ.
ಮಾಧ್ಯಮ ಮತ್ತು ಸಾಮಾನ್ಯ ಜ್ಞಾನ: ಯುವಜನಾಂಗದ ಸಮೂಹ ಮಾಧ್ಯಮಗಳ ಬಳಕೆ ಅಧ್ಯಯನದಲ್ಲಿ (ಮೊಹ್ಸಿನ್ & ಸೊನ್ವಾನೆ, ೨೦೧೩), ಭಾರತದ ಶಿಕ್ಷಿತ ಯುವಸಮುದಾಯದ ಶೇ. ೭೨ರಷ್ಟು ಮಂದಿಗೆ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಮಾಧ್ಯಮಗಳ ಮೂಲಕ ಅರಿಯುವ ಆಸಕ್ತಿ ಹೊಂದಿದೆ. ಶಿಕ್ಷಿತ ಯುವಸಮುದಾಯ ಟೆಲಿವಿಷನ್‌ಗಿಂತ ಪತ್ರಿಕೆಗಳ ಮೇಲೆ ಹೆಚ್ಚಿನ ನಂಬಿಕೆಯಿಟ್ಟಿದೆ ಎಂದು ತಿಳಿದುಬಂದಿದೆ. ಮುಜಮ್ದಾರ್ ಮತ್ತು ಹಸನ್ (೨೦೧೩) ತಂಡದ ಅಧ್ಯಯನದಲ್ಲಿ ಪತ್ರಿಕೆಗಳು ಸಾಮಾನ್ಯ ಜ್ಞಾನ ಭಂಡಾರಗಳಾಗಿದ್ದು, ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿಯೂ ಸಹಾಯಕವಾಗಿವೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಿಸಿದ್ದಾರೆ. ವೃತ್ತಪತ್ರಿಕೆಗಳು ವಿಶ್ವಾಸಾರ್ಹ ಹಾಗೂ ಪ್ರಸ್ತುತ ಮಾಹಿತಿ ನೀಡುವ ಮೂಲಕ ನಂಬಿಕಾರ್ಹ ಮಾಹಿತಿ ಮೂಲಗಳು ಹಾಗೂ ಜ್ಞಾನವೃದ್ಧಿಯ ಪೂರಕ ಸಾಧನಗಳಾಗಿವೆ. ಹೀಗಾಗಿ ಪ್ರತಿದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿರುವುದಾಗಿ ವಿದ್ಯಾರ್ಥಿ ಸಂವಾದಿಗಳು ಬಾನು ಮತ್ತು ತಂಡ ಹಾಗೂ ಸಿವಕುಮಾರ್ ಮತ್ತು ತಮಿಲ್ಸೇಲ್ವನ್ (೨೦೧೫) ಅಧ್ಯಯನದಲ್ಲಿ ತಿಳಿಸಿದ್ದಾರೆ.
ಶರ್ಮ ಮತ್ತು ಸೈನಿ (೨೦೧೯) ಅವರು ಕಾಲೇಜು ವಿದ್ಯಾರ್ಥಿಗಳಲ್ಲಿ ದಿನಪತ್ರಿಕೆ ಓದುವ ಹವ್ಯಾಸ ಕುರಿತ ಅಧ್ಯಯನದಲ್ಲಿ ಹಲವು ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ಅಧ್ಯಯನದ ಶೇ. ೬೮ ಮಂದಿ ಪ್ರತಿದಿನ ಪತ್ರಿಕೆಗಳನ್ನು ಓದುತ್ತಿದ್ದು, ಶೇ. ೪೫ ಮಂದಿ ೨ಪತ್ರಿಕೆಗಳ ಓದುಗರಾಗಿದ್ದಾರೆ. ಶೇ. ೭೨ ರಷ್ಟು ಸಂವಾದಿಗಳು ಮಾತೃಭಾಷೆಯ ಪತ್ರಿಕೆಗಳಿಗೆ ಆದ್ಯತೆ ನೀಡುತ್ತಾರೆ. ಪತ್ರಿಕೆಗಳನ್ನು ಓದುವ ಉದ್ದೇಶವನ್ನು ಪ್ರಶ್ನಿಸಿದಾಗ ಜ್ಞಾನಕ್ಕಾಗಿ (ಶೇ. ೪೫), ಪ್ರಚಲಿತ ವಿದ್ಯಮಾನ ಅರಿಯಲು (ಶೇ. ೨೨) ಎಂದು ತಿಳಿಸಿದ್ದು, ಶೇ. ೯೫ ಸಂವಾದಿಗಳು ದಿನಪತ್ರಿಕೆಗಳು ಮಾಹಿತಿ ಅತ್ಯಮೂಲ್ಯ ಮೂಲಗಳು ಎಂದು ಅಭಿಪ್ರಾಯಿಸಿದ್ದಾರೆ. ಶೇ. ೫೫ ಮಂದಿ ಮುದ್ರಿತ ಪತ್ರಿಕೆ, ಶೇ. ೦೪ ರಷ್ಟು ಮಂದಿ ಇ-ಪತ್ರಿಕೆ ಹಾಗೂ ಶೇ. ೩೯ ಓದುಗರು ಎರಡೂ ಮಾದರಿಯಲ್ಲಿ ಪತ್ರಿಕೆಗಳನ್ನು ಓದುತ್ತಿದ್ದಾರೆ.
ಪತ್ರಿಕೆ ಮತ್ತು ಶಿಕ್ಷಣ: ಕೆನಡಾ ಮತ್ತು ಅಮೇರಿಕ ದೇಶಗಳಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ನಡೆಸಲಾಗುತ್ತದೆ. ತರಗತಿಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸ್ಥಳೀಯ ಹಾಗೂ ರಾಷ್ಟçದ ವರದಿಗಳನ್ನು ಓದಲು ಹಾಗೂ ಬಹುಆಯಾಮದಲ್ಲಿ ಪರೀಕ್ಷಿಸಲು ಅವಕಾಶ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಚಿಂತನಾಕ್ರಮ ಬೆಳೆಸಲಾಗುತ್ತದೆ. ಸಂಪಾದಕೀಯ ಪುಟಗಳು ಹೊಸ ಆಲೋಚನೆಗಳು ಹಾಗೂ ಅಭಿಪ್ರಾಯಗಳನ್ನು ಸೃಜಿಸುವ ಪ್ರೇರೇಪಣೆಯನ್ನು ನೀಡಬಲ್ಲವು ಎಂದು ವರದಿಯೊಂದು ಹೇಳುತ್ತದೆ.
ದಕ್ಷಿಣ ಅಮೇರಿಕಾದ ಶಿಕ್ಷಣ ವಿಭಾಗದಲ್ಲಿ ಮುದ್ರಣ ಮಾಧ್ಯಮದ ಪಾತ್ರ (ಮ್ಯಾಥ್ಯೂಸ್, ೨೦೦೦) ಎಂಬ ಲೇಖನದಲ್ಲಿ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಶಾಲೆಗಳಲ್ಲಿ ಶೈಕ್ಷಣಿಕ ಕಲಿಕೆಯ ಅತ್ಯವಶ್ಯ ಭಾಗವಾಗಿ ಬಳಸಲಾಗುತ್ತದೆ ತಿಳಿಸಲಾಗಿದೆ. ಪತ್ರಿಕೆಗಳು ಶಾಲಾ ತರಗತಿ ಹಾಗೂ ಹೊರಗಿನ ನೈಜ ಪ್ರಪಂಚವನ್ನು ನೇರವಾಗಿ ಸಂಪರ್ಕಿಸುತ್ತವೆ ಈ ಮೂಲಕ ಕಲಿಕೆಯಲ್ಲಿ ಸಕ್ರಿಯತೆ ಹಾಗೂ ಸೃಜನಾತ್ಮಕತೆಯನ್ನು ತರುತ್ತವೆ. ಕನಿಷ್ಟ ದರದಲ್ಲಿ ಲಭ್ಯವಾಗುವ ಪತ್ರಿಕೆಗಳು, ಸುದ್ದಿ, ಲೇಖನ ಹಾಗೂ ಅಂಕಣಗಳ ಮೂಲಕ ರಾಜಕೀಯ, ಕ್ರೀಡೆ, ವಿಜ್ಞಾನ, ಪರಿಸರ ಸೇರಿದಂತೆ ಹತ್ತುಹಲವು ವಿಚಾರಗಳನ್ನು ನೀಡುತ್ತಾ ಜಗತ್ತಿನೆಡೆಗೆ ಸಮಗ್ರ ನೋಟ ಒದಗಿಸುತ್ತವೆ ಹಾಗೂ ಓದುಗರನ್ನು ಮಾಹಿತಿ ಭಂಡಾರವನ್ನು ಸತತವಾಗಿ ಪರಿಷ್ಕರಿಸುತ್ತವೆ. ಮಾಹಿತಿಯನ್ನು ಮನರಂಜನೆಯ ಧಾಟಿಯಲ್ಲೂ ತಲುಪಿಸುವ ಮೂಲಕ ಓದನ್ನು ಆಕರ್ಷಕ ಮತ್ತು ಆಸಕ್ತಿಯುತಗೊಳಿಸುತ್ತವೆ.
ದಿನಪತ್ರಿಕೆಗಳು ಜಗತ್ತಿನೆಲ್ಲೆಡೆ ಘಟಿಸುವ ವಿಷಯಗಳನ್ನು ಕೇವಲ ವರದಿ ಮಾಡುವುದಿಲ್ಲ. ಸುದ್ದಿಯೊಂದಕ್ಕೆ ನೀಡುವ ಶೀರ್ಷಿಕೆ, ಸ್ಥಳಾವಕಾಶ, ಚಿತ್ರ ಇತ್ಯಾದಿಗಳು ಸಂಪಾದಕೀಯ ಮಂಡಳಿಯ ಚರ್ಚಿತ, ವೃತಿಪರ ನಿರ್ಧಾರಗಳಾಗಿರುತ್ತವೆ. ಇದು ಕೆಲವೊಂದು ಮೌಲ್ಯಗಳನ್ನು ಒಳಗೊಂಡೆ ಬಂದಿರುತ್ತಾದ್ದರಿAದ ಓದುಗರು ವಿಷಯವನ್ನು ಅರ್ಥೈಸಿಕೊಳ್ಳುವ, ಪ್ರಪಂಚವನ್ನು ಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯೋನ್ಮುಖವಾಗುವಂತೆ ಸಿದ್ಧಗೊಳಿಸುತ್ತದೆ (ಸೆಗಲ್ & ಸ್ಮಿತ್, ೨೦೦೬).
ವೃತ್ತಪತ್ರಿಕೆಗಳ ಮೂಲಕ ವಿಜ್ಞಾನ ಶಿಕ್ಷಣ ಕುರಿತ ಅಧ್ಯಯನದಲ್ಲಿ (ವಿನಯ್ & ಸತ್ಯಪ್ರಕಾಶ್, ೨೦೧೯), ವಿಜ್ಞಾನ ಸಂವಹನವು ಶಾಲಾತರಗತಿಗಳ ವಿಜ್ಞಾನ ವಿಷಯಕ್ಕೆ ಹೆಚ್ಚಿನ ಮಾಹಿತಿ ಪೂರೈಸುವ ಮೂಲಕ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ. ಆದರೆ ಪತ್ರಿಕೆಗಳ ವರದಿ ವಿಧಾನವು ಮತ್ತಷ್ಟು ಮಾಹಿತಿಯುಕ್ತ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಓಳಗೊಳ್ಳಬೇಕಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಓದುವ ಪ್ರವೃತ್ತಿಯ ಮೇಲೆ ನವಮಾಧ್ಯಮಗಳ ಪ್ರಭಾವ (ಕವಿತಾ, ೨೦೧೭) ಎಂಬ ಅಧ್ಯಯನವು ತಿಳಿಸುವುಂತೆ, ಅಧ್ಯಯನಕ್ಕೊಳಪಟ್ಟ ಶೇ. ೬೬ ಸಂವಾದಿಗಳು ದಿನಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಓದುತ್ತಾರಾದರೂ, ಶೇ. ೩೨ ಮಂದಿ ಮಾಹಿತಿಗಾಗಿ ಮತ್ತು ಶೇ. ೨೧ ಮಂದಿ ಶಿಕ್ಷಣ ಸಂಬAಧಿ ವಿಷಯ ಪಡೆಯಲು ಬಳಸುತ್ತಿದ್ದಾರೆ. ಈ ಎರಡು ಉದ್ದೇಶಗಳು ಶೇ. ೫೩ರಷ್ಟು ಪಾಲು ಹೊಂದಿವೆ.
ಹಿAದಿ ದಿನಪತ್ರಿಕೆಗಳ ಓದುಗರ ಮೇಲಿನ ಅಧ್ಯಯನವು ಶೇ. ೮೦ರಷ್ಟು ವಿದ್ಯಾರ್ಥಿಗಳು ಮುದ್ರಿತ ದಿನಪತ್ರಿಕೆಯನ್ನು ಓದುತ್ತಿದ್ದು, ಶೇ. ೧೦೦ರಷ್ಟು ಸಂವಾದಿಗಳು ಶಿಕ್ಷಣ ಸಂಬAಧಿ ವಿಚಾರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಹಾಗೂ ಪತ್ರಿಕೆಯ ಸುದ್ದಿ ಗುಣಮಟ್ಟ ಹೆಚ್ಚಾಗಬೇಕೆಂದು ಅಭಿಪ್ರಾಯಿಸಿದ್ದಾರೆ (ಪಾಂಡೆ, ೨೦೧೯). ಶಿವಮೊಗ್ಗ ಟೈಮ್ಸ್ ಎಂಬ ಸ್ಥಳೀಯ ಪತ್ರಿಕೆಯ ಓದುಗರ ಉದ್ದೇಶಗಳ ಕುರಿತ ಅಧ್ಯಯನದಲ್ಲಿ ಪ್ರಮುಖವಾಗಿ ಶಿಕ್ಷಣದ ಉದ್ದೇಶಕ್ಕಾಗಿ ಪ್ರತಿನಿತ್ಯ ಪತ್ರಿಕೆ ಓದುವುದಾಗಿ ಸಂವಾದಿಗಳು ತಿಳಿಸಿದ್ದು, ಇಂತಹ ಮತ್ತಷ್ಟು ಮಾಹಿತಿ ಒದಗಿಸಲು ಕೋರಿದ್ದಾರೆ ಹಾಗೂ ಹೆಚ್ಚಿನ ಯುವ ಓದುಗರು ಸಂಪಾದಕೀಯ ಬರಹಗಳು ಮಾಹಿತಿಯುಕ್ತ ಆಸಕ್ತಿಕರವಾಗಿರುತ್ತವೆ ಎಂದಿದ್ದಾರೆ (ಮಲ್ಲಿಕ್ & ಗೋವಿಂದ್, ೨೦೧೮).
ಅಧ್ಯಯನದ ಮಹತ್ವ
ಜಾಗತೀಕರಣದ ಈ ಕಾಲಘಟ್ಟದಲ್ಲಿ, ಪತ್ರಿಕೋದ್ಯಮದ ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಘಟಿಸಿದ ಘಟನೆಯನ್ನು ಕ್ಷಣಾರ್ಧದಲ್ಲಿ ಜಗತ್ತಿಗೆಲ್ಲಾ ತಿಳಿಸುವ ಶಕ್ತಿ, ಸಾಮರ್ಥ್ಯ ಹೊಂದಿರುವ ಮಾಧ್ಯಮಕ್ಷೇತ್ರ, ದಿನದಿನವೂ ಬದಲಾಗುವ ತಂತ್ರಜ್ಞಾನ, ನವಮಾಧ್ಯಮಗಳ ನಾಗಾಲೋಟದ ಬೆಳವಣಿಗೆಗಳ ಇಂದಿನ ದಿನಗಳಲ್ಲಿ ಪತ್ರಿಕೆಗಳು ಪ್ರಸ್ತುತವೆ? ಎಂಬ ಗಂಭೀರ ಚಿಂತನೆ ಸುಳಿಯದಿರಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳ ಮುಂದೆ, ಇಂಟರ್‌ನೆಟ್ ಪ್ರಭಾವದೆದುರು ದಿನಪತ್ರಿಕೆಗಳ ಪಾತ್ರ ಅಥವಾ ಮಹತ್ವ ಗೌಣವಾಗುತ್ತಿದೆಯೆ? ಎಂಬ ಪ್ರಶ್ನೆ ಸಹಜವೆಂಬAತಾಗಿದೆ.
ಅಮೇರಿಕಾದ ತತ್ವಜ್ಞಾನಿ ಹಾಗೂ ಮಾಜಿ ಅಧ್ಯಕ್ಷ ಥಾಮಸ್ ಜ¥s಼Àರ್‌ಸನ್ ಪತ್ರಿಕೆಗಳನ್ನು ಓದುವ ಕುರಿತು ಹೀಗೆ ಹೇಳಿದ್ದಾರೆ: ಪತ್ರಿಕೆಯು ಮನುಷ್ಯ ಬುದ್ಧಿಶಕ್ತಿಯನ್ನು ಬೆಳಗಿಸುವ ಅತ್ಯುತ್ತಮ ಸಾಧನ ಮತ್ತು ಅವನನ್ನು ವಿಚಾರಶೀಲ, ನೈತಿಕ ಹಾಗೂ ಸಾಮಾಜಿಕ ವ್ಯಕ್ತಿತ್ವವಾಗಿ ರೂಪಿಸುತ್ತದೆ. ಪತ್ರಿಕೆಗಳ ಪ್ರಕಟಣೆಗಳಲ್ಲಿ ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಮತ್ತು ಸಾಹಿತ್ಯಿಕ ಎಂಬ ನಾಲ್ಕು ಬಗೆಯ ಉದ್ದೇಶಗಳನ್ನು ಕಾಣಬಹುದು. ಪಾಶ್ಚಾತ್ಯ ಸಂಪರ್ಕದಿAದ ಬೆಳಕಿಗೆ ಬಂದ ಅನೇಕ ವಿಷಯಗಳನ್ನು, ಸ್ವದೇಶದಲ್ಲಿಯ ವ್ಯಕ್ತಿ ಸಂಗತಿಗಳನ್ನು ಪರಿಚಯ ಮಾಡಿಕೊಡುವುದೇ ಶೈಕ್ಷಣಿಕ ಮುಖವೆಂದು ತಿಳಿಯಬೇಕು ಎಂದು ಹತ್ತೊಂಬತ್ತನೆಯ ಶತಮಾನದ ಪತ್ರಿಕೆಗಳ ಕುರಿತು ಶ್ರೀನಿವಾಸ ಹಾವನೂರರು ಅಭಿಪ್ರಾಯಪಟ್ಟಿದ್ದರು. (ಚಂದ್ರಶೇಖರ್, ೨೦೦೩). ಪತ್ರಿಕೆಗಳನ್ನು ದೇಶ-ವಿದೇಶಗಳ ವಿಶ್ವಾಸಾರ್ಹ, ನಿಖರ ಮಾಹಿತಿ ಮತ್ತು ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳುವ ಶೈಕ್ಷಣಿಕ ಪ್ರಕ್ರಿಯೆ ಸಲುವಾಗಿ ಬಳಸುತ್ತಿರುವುದು ಬಹುತೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಉಪಯುಕ್ತ ಮಾಹಿತಿ ಮತ್ತು ಸಾಮಾನ್ಯ ಜ್ಞಾನ ಒದಗಿಸುವ ಪತ್ರಿಕೆಗಳು ಯಾವ ಹಂತದವರೆಗೂ ಈ ಉದ್ದೇಶ ಪೂರೈಸುವಲ್ಲಿ ಯಶಸ್ಸು ಕಂಡಿವೆ ಎಂಬುದನ್ನು ಕಂಡುಕೊಳ್ಳುವುದು ಪತ್ರಿಕೆಗಳ ರಚನೆ, ಓದುವಿಕೆ, ಜಾಗೃತ ನಾಗರೀಕನ ಸೃಷ್ಟಿಸುವುದು ಹಾಗೂ ಸಮಾಜವೊಂದರ ಸ್ಥಿತಿಗತಿಯನ್ನು ಅರ್ಥೈಸಿಕೊಳ್ಳುವಲ್ಲಿ ಸಹಾಯಕವಾಗುವ ದೃಷ್ಟಿಯಿಂದ ಅಧ್ಯಯನ ಕೈಗೊಳ್ಳುವುದು ಮಹತ್ವವನ್ನು ಪಡೆದುಕೊಳ್ಳುತ್ತದೆ.
ಅಧ್ಯಯನದ ಉದ್ದೇಶಗಳು
ಅಧ್ಯಯನವು ದಿನಪತ್ರಿಕೆಗಳು ಓದುಗರಿಗೆ ಸಾಮಾನ್ಯ ಜ್ಞಾನವನ್ನು ನೀಡುವ ಮೂಲಕ ಶೈಕ್ಷಣಿಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ವಿಶ್ಲೇಷಿಸುವುದಾಗಿದೆ.
ದಿನಪತ್ರಿಕೆಗಳನ್ನು ಓದುವುದರಿಂದ ಪ್ರಚಲಿತ ವಿದ್ಯಮಾನಗಳ ಕುರಿತ ಜ್ಞಾನ ವಿಸ್ತರಿಸುತ್ತದೆಯೇ ಎಂದು ತಿಳಿಯುವುದು.
ಆಯ್ದ ಸಂವಾದಿಗಳ ಸಾಮಾನ್ಯ ಜ್ಞಾನ ಗಳಿಕೆಯಲ್ಲಿರಬಹುದಾದ ವ್ಯತ್ಯಾಸಗಳನ್ನು ಅಳೆಯುವುದು.
ದಿನಪತ್ರಿಕೆ ಓದುವ ಗಂಡು ಮತ್ತು ಹೆಣ್ಣುಮಕ್ಕಳ ನಡುವಿನ ಪ್ರಚಲಿತ ವಿದ್ಯಮಾನಗಳ ಅರಿವಿನ ಮಟ್ಟವನ್ನು ಗುರುತಿಸುವುದು.
ಅಧ್ಯಯನದ ವಿಧಾನ
ವೃತ್ತಪತ್ರಿಕೆಗಳು ಸಾಮಾನ್ಯ ಜ್ಞಾನ ಒದಗಿಸುವ ಶೈಕ್ಷಣಿಕ ಸಾಧನಗಳೇ ಎಂದು ಅರಿಯಲು ೨೦೧೯ರ ಮೇ, ಜೂನ್ ಮತ್ತು ಜುಲೈ ತಿಂಗಳುಗಳ ಅವಧಿಯಲ್ಲಿ ಪ್ರಯೋಗಾತ್ಮಕ ವಿಧಾನವನ್ನು ಬಳಸಿ ಅಧ್ಯಯನ ಕೈಗೊಳ್ಳಲಾಯಿತು.
ಪ್ರಾಯೋಗಿಕ ಅಧ್ಯಯನದ ವಿನ್ಯಾಸ: ಕುವೆಂಪು ವಿಶ್ವವಿದ್ಯಾಲಯದ ಹತ್ತು ಸ್ನಾತಕೋತ್ತರ ವಿಭಾಗಗಳಿಂದ ತಲಾ ಎರಡರಂತೆ ಒಟ್ಟು ೨೦ ಸಂವಾದಿಯನ್ನು ಆರಿಸಲಾಗಿದೆ. ಸಮಸಂಖ್ಯೆಯ ಗಂಡು ಮತ್ತು ಹೆಣ್ಣುಮಕ್ಕಳು ಗುಂಪಿನಲ್ಲಿರುವAತೆ ಗಮನವಹಿಸಿ, ಪ್ರಾಯೋಗಿಕ ಮತ್ತು ನಿಯಂತ್ರಿತ ಗುಂಪು ಎಂಬ ಎರಡು ಗುಂಪುಗಳನ್ನು ರಚಿಸಲಾಗಿದೆ. ಎರಡೂ ಗುಂಪಿನಲ್ಲಿ ತಲಾ ೧೦ ಸದಸ್ಯರು ಇದ್ದರು. ಸಮಾನ ಗುಣಲಕ್ಷಣ ಹೊಂದಿರುವ ಸದಸ್ಯರನ್ನು ಎರಡೂ ಗುಂಪಿನಲ್ಲಿರುವ ಹಾಗೆ ಗಮನಹರಿಸಲಾಯಿತು. ಉದಾಹರಣೆಗೆ; ವಯಸ್ಸು, ಶೈಕ್ಷಣಿಕ ಅರ್ಹತೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಇಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಎರಡು ಗುಂಪುಗಳನ್ನು ಸಮಾನ ರೂಪದಲ್ಲಿ ರಚಿಸಲಾಗಿದೆ.
ಪ್ರಾಯೋಗಿಕ ಗುಂಪಿನ ಸದಸ್ಯರಿಗೆ ಹದಿನೈದು ದಿನಗಳ ಕಾಲ ಪ್ರತಿನಿತ್ಯ ಕನ್ನಡ ದಿನಪತ್ರಿಕೆಗಳನ್ನು ನೀಡಿ ಓದಲು ತಿಳಿಸಲಾಗಿತ್ತು ಹಾಗೂ ನಿಯಂತ್ರಿತ ಗುಂಪಿನ ಸಂವಾದಿಗಳಿಗೆ ಯಾವುದೇ ಪತ್ರಿಕೆಯನ್ನು ಓದದಿರುವಂತೆ ಸೂಚಿಸಲಾಗಿತ್ತು. ಅಧ್ಯಯನದ ಅವಧಿಯ ಸಂದರ್ಭದಲ್ಲಿ ಘಟಿಸಿದ, ವರದಿಯಾದ ವಿದ್ಯಮಾನಗಳನ್ನು ಆಧರಿಸಿ ತಯಾರಿಸಿದ ಪ್ರಶ್ನಾವಳಿಯೊಂದನ್ನು ಅಧ್ಯಯನಾವಧಿ ಮುಗಿದ ನಂತರ ಎರಡು ಗುಂಪಿನ ಸಂವಾದಿಗಳಿಗೆ ನೀಡಿ ಉತ್ತರ ಪಡೆಯಲಾಗಿದೆ. ದತ್ತಾಂಶಗಳನ್ನು ‘ಖಿ’ ಟೆಸ್ಟ್ ವಿಧಾನ ಬಳಸಿ ವಿಶ್ಲೇಷಣೆಗೊಳಪಡಿಸಲಾಗಿದೆ.
ಅಧ್ಯಯನ ಮಿತಿಗಳು: ಅಧ್ಯಯನಕ್ಕೆ ಆಯ್ದುಕೊಂಡ ಸಂವಾದಿಗಳು ವಯಸ್ಸು ಮತ್ತು ಶಿಕ್ಷಾರ್ಹತೆ ಎಂಬ ಮಾನದಂಡಗಳ ಆಧಾರದ ಮೇಲೆ ಸಮಾನ ಹಿನ್ನೆಲೆಯುಳ್ಳವರಾಗಿದ್ದರೂ ಸಹ, ಅವರ ಮನಸ್ಥಿತಿ, ಭೌದ್ಧಿಕತೆಯ ಮಟ್ಟ ಹಾಗೂ ಆಸಕ್ತಿಗಳಲ್ಲಿ ಭಿನ್ನತೆಗಳಿರುವ ಸಾಧ್ಯತೆಗಳಿರುತ್ತವೆ. ಜೊತೆಗೆ ಸಂವಾದಿಗಳ ಮೇಲೆ ವಿವಿಧ ಬಾಹ್ಯ ಚಲಕಗಳು ಪ್ರಭಾವ ಬೀರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ದತ್ತಾ0ಶ ವಿಶ್ಲೇಷಣೆ
ಅತ್ಯಂತ ಹಳೆಯ ಮತ್ತು ಶಿಷ್ಟ ಮಾಧ್ಯಮವಾದ ದಿನಪತ್ರಿಕೆಗಳು ಓದುಗರಿಗೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಮಾಹಿತಿ ನೀಡುತ್ತಾ ಸಾಮಾನ್ಯ ಜ್ಞಾನದ ಜಾಗೃತಿ ಮೂಡಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿವೆ ಎಂಬ ವಿಷಯವನ್ನು ಶೋಧಿಸಲು ಅಧ್ಯಯನ ನಡೆಸಲಾಗಿದೆ. ಪ್ರಯೋಗಾತ್ಮಕ ಅಧ್ಯಯನ ವಿಧಾನದಡಿ ಪ್ರಾಯೋಗಿಕ ಹಾಗೂ ನಿಯಂತ್ರಿತ ಗುಂಪುಗಳನ್ನು ರಚಿಸಿ, ಮೊದಲ ಗುಂಪಿಗೆ ಹದಿನೈದು ದಿನಗಳ ಕಾಲ ಪ್ರತಿನಿತ್ಯ ಪತ್ರಿಕೆಗಳನ್ನು ಓದಲು ಹಾಗೂ ಎರಡನೇ ಗುಂಪಿಗೆ ಓದದಿರುವಂತೆ ಸೂಚಿಸಿ ಅಧ್ಯಯನ ಕೈಗೊಳ್ಳಲಾಗಿತ್ತು. ಅನಂತರ ಸಂವಾದಿಗಳ ಸಾಮಾನ್ಯ ಜಾಗೃತಿ ಮಟ್ಟವನ್ನು ಪ್ರಶ್ನಾವಳಿ ಮೂಲಕ ಅಳೆಯಲು ಪ್ರಯತ್ನಿಸಲಾಗಿದೆ. ಅಧ್ಯಯನದಲ್ಲಿ ಕಂಡುಕೊAಡ ದತ್ತಾಂಶಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.
ಕೋಷ್ಠಕ ೧: ಪ್ರಾಯೋಗಿಕ ಗುಂಪಿನ ಸಂವಾದಿಗಳ ಪ್ರಚಲಿತ ವಿದ್ಯಮಾನಗಳ ಕುರಿತ ಸಾಮಾನ್ಯ ಜಾಗೃತಿಯ ಮಟ್ಟದ ವಿವರ
ಮೂಲ: ಕ್ಷೇತ್ರ ಸಮೀಕ್ಷೆ
ಕೋಷ್ಠಕ ೨: ನಿಯಂತಿತ ಗುಂಪುಗಳ ಸಂವಾದಿಗಳ ಪ್ರಚಲಿತ ವಿದ್ಯಮಾನಗಳ ಕುರಿತ ಸಾಮಾನ್ಯ ಜಾಗೃತಿಯ ಮಟ್ಟದ ವಿವರ
ಮೂಲ: ಕ್ಷೇತ್ರ ಸಮೀಕ್ಷೆ
ಹದಿನೈದು ದಿನಗಳ ಕಾಲ ಪ್ರಾಯೋಗಿಕ ಸಮೂಹಕ್ಕೆ ಪತ್ರಿಕೆಗಳನ್ನು ನೀಡಿರುವುದರಿಂದ ಹಾಗೂ ಅದರ ಓದುವಿಕೆಯಿಂದಾಗಿ ಈ ಸಮೂಹದಲ್ಲಾದ ಬದಲಾವಣೆಗಳನ್ನು ತಿಳಿಯುವ ಸಲುವಾಗಿ ಪ್ರಚಲಿತ ವಿದ್ಯಮಾನಗಳ ಕುರಿತ ೧೫ ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯನ್ನು ರಚಿಸಿ ಎರಡೂ ಸಮೂಹಗಳ ಸಂವಾದಿಗಳಿಗೆ ನೀಡಿ ಪ್ರತಿಕ್ರಿಯೆ ಪಡೆಯಲಾಯಿತು. ಕೋಷ್ಠಕದ ಮಾಹಿತಿಯಂತೆ ಪ್ರಾಯೋಗಿಕ ಸಮೂಹದ ಸರಾಸರಿಯು ಸರಾಸರಿಯು ೧೦.೮ ಮತ್ತು ನಿಯಂತ್ರಿತ ಸಮೂಹದ ಸರಾಸರಿಯು ೭.೫ ಆಗಿದೆ.
೧೮ ಡಿಗ್ರೀಸ್ ಆಫ್ ಫ್ರೀಕ್ವೆನ್ಸಿಯನ್ನು ೦.೦೫ ಮಟ್ಟದ ಮಹತ್ವದಲ್ಲಿ ಪರೀಕ್ಷಿಸಿದಾಗ ಕ್ರಿಟಿಕಲ್ ವ್ಯಾಲ್ಯೂ ಅಥವಾ ಟೇಬಲ್ ಮೊತ್ತವು ೨.೧೦೧ ಆಗಿರುತ್ತದೆ. ಪ್ರಸ್ತುತ ಕ್ಯಾಲ್ಕುಲೇಟೆಡ್ ಮೊತ್ತ ೩.೧೩೦ ಟೇಬಲ್ ಮೊತ್ತಕ್ಕಿಂತ ಹೆಚ್ಚಾಗಿದ್ದು ಪ್ರಾಯೋಗಿಕ ಸಮೂಹ ಮತ್ತು ನಿಯಂತ್ರಿತ ಸಮೂಹಗಳು ಹೊಂದಿರುವ ಪ್ರಚಲಿತ ವಿದ್ಯಮಾನಗಳ ಕುರಿತ ಹೊಂದಿರುವ ಅರಿವಿನ ಮಟ್ಟದಲ್ಲಿ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. ಅಂದರೆ ಪ್ರಾಯೋಗಿಕ ಸಮೂಹ ಮತ್ತು ನಿಯಂತ್ರಿತ ಸಮೂಹಗಳೆರಡೂ ಪ್ರಚಲಿತ ವಿದ್ಯಮಾನಗಳ ಕುರಿತು ಹೊಂದಿರುವ ಜಾಗೃತಿಯ ಮಟ್ಟದಲ್ಲಿ ಭಿನ್ನತೆಯಿದ್ದು, ಪ್ರಾಯೋಗಿಕ ಸಮೂಹವು ನಿಯಂತ್ರಿತ ಸಮೂಹಕ್ಕಿಂತ ಹೆಚ್ಚಿನ ಜಾಗೃತಿಯನ್ನು ಹೊಂದಿರುವುದು ಕಂಡುಬರುತ್ತದೆ.
ಫಲಿತಾAಶವು ಪ್ರಚಲಿತ ವಿದ್ಯಮಾನಗಳ ಕುರಿತ ಸಾಮಾನ್ಯ ಜ್ಞಾನವು ಪತ್ರಿಕೆಗಳ ನಿರಂತರ ಓದುಗರಲ್ಲಿ ಅಂದರೆ, ಪ್ರಾಯೋಗಿಕ ಸಮೂಹದಲ್ಲಿ ಓದುಗರೇತರರಿಗಿಂತ ಅಂದರೆ ನಿಯಂತ್ರಿತ ಸಮೂಹಕ್ಕಿಂತ ಹೆಚ್ಚಾಗಿರುವುದು ತಿಳಿದು ಬರುತ್ತದೆ. ಆದ್ದರಿಂದ ಪತ್ರಿಕೆಗಳ ನಿರಂತರ ಓದುವಿಕೆಯು ಸಂವಾದಿಗಳ ಪ್ರಚಲಿತ ವಿದ್ಯಮಾನಗಳ ಜ್ಞಾನ ಮಟ್ಟದ ಮೇಲೆ ಪರಿಣಾಮ ಬೀರಿರುವುದು ಕಂಡುಬರುತ್ತದೆ.
ವೈಯುಕ್ತಿತ ಭಿನ್ನತೆಗಳು: ಪ್ರಾಯೋಗಿಕ ಮತ್ತು ನಿಯಂತ್ರಿತ ಗುಂಪುಗಳೆರಡರಲ್ಲೂ ಸಾಕಷ್ಟು ವೈಯುಕ್ತಿಕ ಭಿನ್ನತೆಗಳಿದ್ದು, ಅದನ್ನು ಪ್ರತಿ ಸಮೂಹದ ಗರಿಷ್ಠ ಮತ್ತು ಕನಿಷ್ಠಗಳ ನಡುವಿನ ಅಂತರದಿAದ ಮಾಪನ ಮಾಡಿ ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ. ಸಂವಾದಿಗಳ ಸಸಾಮಾನ್ಯ ಜ್ಞಾನ ಕುರಿತು ವಿಭಿನ್ನ ಜಾಗೃತಿಯ ಮಟ್ಟವನ್ನು ಹೊಂದಿದ್ದಾರೆ.
ಪ್ರಚಲಿತ ವಿದ್ಯಮಾನಗಳ ಕುರಿತ ಜಾಗೃತಿಯ ಮಟ್ಟದಲ್ಲಿ ಪ್ರಾಯೋಗಿಕ ಸಮೂಹದ ಸಂವಾದಿಯಾದ, ಎ೧ ಹಾಗೂ ಎ೩ ಗರಿಷ್ಟ ೧೩ ಅಂಕಗಳಿಸಿದ್ದು, ಎ೫ ಸಂವಾದಿಯು ಕನಿಷ್ಟ ೮ ಅಂಕಗಳಿಸಿದ್ದಾರೆ. ಇಲ್ಲಿ ಅಂತರವು ೦೫ ಆಗಿದೆ. ಹಾಗೆಯೇ ನಿಯಂತ್ರಿತ ಅಂದರೆ ಓದುಗೇತರರ ಸಮೂಹದ ಸಂವಾದಿ ಬಿ೧೦ ಗರಿಷ್ಟ ೧೧ ಮತ್ತು ಸಂವಾದಿ ಬಿ೬ ಕನಿಷ್ಟ ೩ ಅಂಕಗಳನ್ನು ಗಳಿಸಿದ್ದು ಅಂತರವು ೮ ಆಗಿದೆ. ಇದರಿಂದಾಗಿ ಒಂದೇ ಸಮೂಹದೊಳಗಿನ ಸಂವಾದಿಗಳಲ್ಲಿ ವೈಯುಕ್ತಿಕ ಭಿನ್ನತೆಗಳಿರುವುದು ಕಾಣಸಿಗುತ್ತವೆ. ಸಂವಾದಿಗಳು ಸಾಮಾನ್ಯ ಜ್ಞಾನದಲ್ಲಿ ವಿಭಿನ್ನ ಜಾಗೃತಿಯ ಮಟ್ಟವನ್ನು ಹೊಂದಿದ್ದಾರೆ.
ಲಿAಗ ಭಿನ್ನತೆಗಳು: ಪ್ರಸ್ತುತ ಅಧ್ಯಯನಕ್ಕೆ ತಲಾ ೧೦ ಮಂದಿ ಪುರುಷರು ಮತ್ತು ೧೦ ಮಂದಿ ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ. ನಿಯಮಿತ ಓದುಗರ ಗುಂಪಿನ ಪುರುಷ ಮತ್ತು ಮಹಿಳಾ ಸಂವಾದಿಗಳ ಸಾಮಾನ್ಯ ಜಾಗೃತಿಯನ್ನು ಅರಿಯಲು ಪ್ರಯತ್ನಿಸಲಾಗಿದೆ.
ಕೋಷ್ಠಕ ೦೩: ಪ್ರಾಯೋಗಿಕ ಗುಂಪಿನ ಸಾಮಾನ್ಯ ವಿದ್ಯಮಾನಗಳ ಜಾಗೃತಿಯಲ್ಲಿ ಲಿಂಗಾಧರಿತ ಮಾಹಿತಿ.
ಮೂಲ: ಕ್ಷೇತ್ರ ಸಮೀಕ್ಷೆ
ಮೇಲಿನ ಕೋಷ್ಠಕದ ಮಾಹಿತಿಯಂತೆ ಪ್ರಾಯೋಗಿಕ ಸಮೂಹದ ಪುರುಷ ಸಂವಾದಿಗಳ ಸರಾಸರಿಯು ೧೧.೪ ಮತ್ತು ಮಹಿಳಾ ಸಂವಾದಿಗಳ ಸರಾಸರಿಯು ೧೦.೨ ಆಗಿದೆ. ೮ ಡಿಗ್ರೀಸ್ ಆಫ್ ಫ್ರೀಕ್ವೆನ್ಸಿಯನ್ನು ೦.೦೫ ಮಟ್ಟದ ಮಹತ್ವದಲ್ಲಿ ಪರೀಕ್ಷಿಸಿದಾಗ ಕ್ರಿಟಿಕಲ್ ವ್ಯಾಲ್ಯೂ ಅಥವಾ ಟೇಬಲ್ ಮೊತ್ತವು ೨.೩೦೬ ಆಗಿರುತ್ತದೆ. ಪ್ರಸ್ತುತ ಕ್ಯಾಲ್ಕುಲೇಟೆಡ್ ಮೊತ್ತ ೧.೦೯೫೮ ಟೇಬಲ್ ಮೊತ್ತಕ್ಕಿಂತ ಕಡಿಮೆಯಾಗಿರುವುದು ಪುರುಷ ಮತ್ತು ಮಹಿಳಾ ಸಂವಾದಿಗಳು ಪ್ರಚಲಿತ ವಿದ್ಯಮಾನಗಳ ಕುರಿತ ಹೊಂದಿರುವ ಅರಿವಿನಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳಿಲ್ಲದಿರುವುದು ಕಂಡುಬರುತ್ತದೆ. ಅಂದರೆ ದಿನಪತ್ರಿಕೆಗಳ ನಿರಂತರ ಓದುವಿಕೆಯು ಪುgಷ ಹಾಗೂ ಮಹಿಳೆಯರ ಮೇಲೆ ಸಮಾನ ಪ್ರಭಾವವನ್ನು ಬೀರುತ್ತದೆ.
ಭಿನ್ನ ವಿಷಯಗಳ ಆಸಕ್ತಿ: ಪ್ರಾಯೋಗಿಕ ಹಂತದ ಅವಲೋಕನ ಮತ್ತು ಫಲಿತಾಂಶದಿAದ ತಿಳಿದು ಬರುವ ಮತ್ತೊಂದು ಪ್ರಮುಖ ಅಂಶವೆAದರೆ, ಪ್ರಚಲಿತ ವಿದ್ಯಮಾನಗಳಲ್ಲಿ ವಿವಿಧ ಸಂವಾದಿಗಳು ವಿಭಿನ್ನ ವಿಚಾರಗಳಲ್ಲಿ ಆಸಕ್ತಿ ಮತ್ತು ಜಾಗೃತಿ ಹೊಂದಿದವರಾಗಿದ್ದಾರೆ. ಬಹುತೇಕ ಎಲ್ಲಾ ಸಂವಾದಿಗಳು ಸಾಮಾನ್ಯ ರಾಜಕೀಯ ಜಾಗೃತಿಯನ್ನು ಹೊಂದಿದವರಾಗಿದ್ದರೆ, ಕೆಲವೇ ಕಲವು ಸಂವಾದಿಗಳು ಮಾತ್ರ ಆರ್ಥಿಕ ಮತ್ತು ವಾಣಿಜ್ಯ ವಿಷಯದ ಬಗೆಗಿನ ಸಾಮಾನ್ಯ ಜಾಗೃತಿಯನ್ನು ಹೊಂದಿದ್ದಾರೆ. ಇನ್ನೂ ಕ್ರೀಡಾ ವಿಚಾರದ ಕುರಿತ ಸಾಮಾನ್ಯ ಜಾಗೃತಿಯ ಮಟ್ಟವು ಸ್ತಿçà ಸಂವಾದಿಗಳಿಗಿAತ ಪುರುಷ ಸಂವಾದಿಗಳಲ್ಲಿಯೆ ಹೆಚ್ಚಿರುವುದು ಅಧ್ಯಯನದ ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಹಾಗೂ ಪಡೆದ ಅಂಕಗಳಿAದ ಕಂಡುಬರುತ್ತದೆ.
ಬಾಹ್ಯ ಚಲಕಗಳ ಪರಿಣಾಮ: ಒಟ್ಟಾರೆ ಫಲಿತಾಂಶವನ್ನು ಗಮನಿಸಿದಾಗ, ಪ್ರಚಲಿತ ವಿದ್ಯಮಾನಗಳ ಕುರಿತ ಅರಿವಿನ ಮಟ್ಟದಲ್ಲಿ ನಿಯಂತ್ರಿತ ಸಮೂಹವು ಸಮಾಧಾನಕರ ಎಂಬAತಹ ಅಂಕಗಳನ್ನು ಪಡೆದಿದೆ. ಓದುಗ ಮತ್ತು ಓದುಗೇತರ ಸಮೂಹಗಳ ಜಾಗೃತಿ ಮಟ್ಟದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಮಾತ್ರ ಕಂಡುಬAದಿದ್ದು, ಮಹತ್ವಪೂರ್ಣ ವ್ಯತ್ಯಾಸಗಳಿಲ್ಲ ಇದರಿಂದಾಗಿ ನಿಯಂತ್ರಿತ (ಓದುಗೇತರ) ಸಮೂಹದ ಮೇಲೆ ಪತ್ರಿಕೆಗಳ ನಿರಂತರ ಓದುವಿಕೆ ಎಂಬ ಸ್ವತಂತ್ರ ಪರಿವರ್ತಕದ ಹೊರತಾಗಿಯೂ ಇತರೆ ಬಾಹ್ಯ ಚಲಕಗಳು ಪ್ರಭಾವ ಬೀರಿರುವ ಸಾಧ್ಯತೆಗಳಿರುವುದನ್ನು ಗಮನಿಸಬಹುದು. ಅವುಗಳಲ್ಲಿ ಪ್ರಮುಖವಾದವೆಂದರೆ, ಮೊದಲನೆಯದಾಗಿ ಇತರೆ ಮಾಧ್ಯಮಗಳು.
ಇತರೆ ಮಾಧ್ಯಮಗಳು: ಪ್ರಸ್ತುತ ಅಧ್ಯಯನದಲ್ಲಿ ನಿಯಂತ್ರಿತ ಸಮೂಹಕ್ಕೆ ದಿನಪತ್ರಿಕೆಗಳ ಓದುವಿಕೆಯನ್ನು ಮಾತ್ರ ನಿರ್ಭಂಧಿಸಲಾಗಿತ್ತೆ ಹೊರತು ಇತರ ಮಾಧ್ಯಮಗಳ ಬಳಕೆಯನ್ನಲ್ಲ. ಹಾಗಾಗಿ ಆ ಸಮೂಹದ ಸಂವಾದಿಗಳು ಟೆಲಿವಿಷನ್, ರೇಡಿಯೋನಂತಹ ಶಿಷ್ಟ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಿರುವ ಸಾಧ್ಯತೆಗಳಿವೆ. ಅಧ್ಯಯನಕ್ಕೊಳಪಟ್ಟ ಸಂವಾದಿಗಳೆಲ್ಲರೂ ಸಹ ಯುವಜನರಾಗಿದ್ದು, ಸಹಜವಾಗಿಯೇ ನವಮಾಧ್ಯಮಗಳ ಬಳಕೆಯಲ್ಲಿ ಮುಂದಿದ್ದರು. ಸಾಮಾಜಿಕ ಜಾಲತಾಣಗಳ ಬಳಕೆಯು ಸಹ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನಕ್ಕೆ ಕೊಡುಗೆ ನೀಡಿರಬಹುದಾಗಿದ್ದು, ಅಧ್ಯಯನದ ಫಲಿತಾಂಶದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿವೆ.
ಪ್ರಚಲಿತ ವಿದ್ಯಮಾನಗಳ ಕುರಿತಾದ ಆಸಕ್ತಿ: ನಿಯಂತ್ರಿತ ಸಮೂಹದ ಕೆಲ ಸಂವಾದಿಗಳಿಗೆ ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಸಹಜವಾಗಿಯೆ ಪತ್ರಿಕೆಗಳ ಓದುವಿಕೆಯ ಹೊರತಾಗಿ ವಿವಿಧ ಮಾಧ್ಯಮಗಳಿಂದ ಅಥವಾ ಸ್ನೇಹಿತರು, ಕುಟುಂಬ ಸದಸ್ಯರಿಂದ ವಿಷಯಗಳನ್ನು ಕೇಳಿ ತಿಳಿಯುವ ಮೂಲಕವೋ ಮಾಹಿತಿಯನ್ನು ಗ್ರಹಿಸುತ್ತಾರೆ. ಇದು ಸಹ ಫಲಿತಾಂಶದ ಮೇಲೆ ಪ್ರಭಾವವನ್ನ ಬೀರಿರುವ ಸಾಧ್ಯತೆಗಳಿವೆ.
ಅಧ್ಯಯನ ಸಂಬAಧಿ ಸೂಚನೆಗಳ ಪರಿಣಾಮ: ನಿಯಂತ್ರಿತ ಸಮೂಹಕ್ಕೆ ಅಧ್ಯಯನಾವಧಿಯಲ್ಲಿ ಪತ್ರಿಕೆಗಳನ್ನು ಓದದಿರಲು ಮುಂಚಿತವಾಗಿ ಸೂಚಿಸಿದ್ದು, ಪರೀಕ್ಷೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿವೆ. ಅಧ್ಯಯನೋತ್ತರ ಪರೀಕ್ಷೆಗಳ ನಿರೀಕ್ಷೆಯಲ್ಲಿ ಅವರು ವಿವಿಧ ಮೂಲಗಳಿಂದ, ಮಾಧ್ಯಮಗಳಿಂದ ಮಾಹಿತಿ ಸಂಗ್ರಹಿಸಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ಈ ಎಲ್ಲ ಕಾರಣಗಳಿಂದಗಿ ನಿಯಂತ್ರಿತ ಸಮೂಹದ ಫಲಿತಾಂಶದ ಮೇಲೆ ಈ ಮೇಲಿನ ಎಲ್ಲಾ ಅಂಶಗಳು ಸಹ ಪ್ರಭಾವ ಬೀರಿರಬಹುದು ಅಥವಾ, ಇವುಗಳಲ್ಲಿ ಒಂದು ಅಥವಾ ಕೆಲವು ಅಂಶಗಳು ಪ್ರಭಾವ ಬೀರಿರಬಹುದು. ಇಲ್ಲವೇ ಈ ಎಲ್ಲಾ ಅಂಶಗಳಿಗೂ ಹೊರತಾದ ಮತ್ತಾವುದೋ ಬಾಹ್ಯ ಚಲಕವು ಸಹ ಪ್ರಭಾವ ಬೀರಿರುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಪ್ರಸ್ತುತ ಪ್ರಯೋಗದ ಫಲಿತಾಂಶವು ವಿವರಿಸುವಂತೆ ಪತ್ರಿಕೆಗಳ ನಿರಂತರ ಓದುವಿಕೆಯು ಓದುಗರ ಪ್ರಚಲಿತ ವಿದ್ಯಮಾನಗಳ ಕುರಿತ ಜಾಗೃತಿಯ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ ಎಂಬ ಅಂಶ ಸ್ಪಷ್ಟವಾಗಿದೆ. ಆದರೂ ಸಹ ಈ ಪ್ರಯೋಗದ, ಪ್ರಾಯೋಗಿಕ ವಿನ್ಯಾಸ ಮತ್ತು ಬಾಹ್ಯ ಚಲಕಗಳ ಪರಿಣಾಮವಿರುವುದರಿಂದ ಇದರ ಫಲಿತಾಂಶವನ್ನು ಸಾಮಾನ್ಯೀಕರಿಸಿ, ಪ್ರಸ್ತುತ ಫಲಿತಾಂಶಕ್ಕೆ ಪತ್ರಿಕೆಗಳ ನಿರಂತರ ಓದುವಿಕೆಯೆಂಬ ಸ್ವತಂತ್ರ ಚಲಕವೇ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ.
ಸಂಕ್ಷಿಪ್ತ ಫಲಿತಾಂಶಗಳು ಮತ್ತು ಉಪಸಂಹಾರ
ಪ್ರಸ್ತುತ ನಾವಿಂದು ಮಾಹಿತಿಯ ಯುಗದಲ್ಲಿದ್ದು, ನಮ್ಮ ಸಮಾಜವು ಸಾಂಪ್ರದಾಯಿಕ ಸಮಾಜಕ್ಕಿಂತ ಭಿನ್ನವಾದುದಾಗಿದೆ. ಇಲ್ಲಿ ಮಾಹಿತಿಯೇ ಸರ್ವಸ್ವವೂ ಆಗಿದ್ದು, ಪ್ರತಿಯೊಬ್ಬರೂ ಯಾವುದೇ ವಿಷಯದ ಕುರಿತಾದ ಮಾಹಿತಿ ಪಡೆಯಲು ತುಡಿಯುತ್ತಾರೆ ಮತ್ತು ಭಿನ್ನ ವಿಭಿನ್ನ ಮಾಧ್ಯಮಗಳಿಂದ ಮಾಹಿತಿಯನ್ನು ಪಡೆಯಲು ನಿರಂತರ ಶ್ರಮಿಸುತ್ತಾರೆ. ಅಂತೆಯೇ ಈ ಅಧ್ಯಯನವು ದಿನಪತ್ರಿಕೆಗಳು ಓದುಗರಿಗೆ ಮಾಹಿತಿ ಒದಗಿಸುವಲ್ಲಿ ಎಷ್ಟು ಪ್ರಸ್ತುತ ಎಂಬ ವಿಚಾರವನ್ನು ಪ್ರಾಯೋಗಿಕ ವಿಧಾನದ ಮೂಲಕ ಶೋಧಿಸಿದೆ. ಅಧ್ಯಯನ ಫಲಿತಾಂಶ ತಿಳಿಸುವಂತೆ, ಸದ್ಯದ ದಿನಗಳಲ್ಲಿ ಪತ್ರಿಕೆಗಳ ನಿರಂತರ ಓದುವಿಕೆಯು ಓದುಗರ ಪ್ರಚಲಿತ ವಿದ್ಯಮಾನಗಳ ಮೇಲಿನ ಸಾಮಾನ್ಯ ಜಾಗೃತಿಯನ್ನು ಎತ್ತರಿಸುತ್ತದೆ.
ಸಂವಾದಿಗಳು ಹೊಂದಿರುವ ದಿನನಿತ್ಯದ ಆಗುಹೋಗುಗಳ ಕುರಿತಾದ ಜಾಗೃತಿಯ ಮಟ್ಟದಲಿ ವೈಯುಕ್ತಿಕ ಭಿನ್ನತೆಗಳಿದ್ದು, ಅವರ ಅರಿವಿನ ಮಟ್ಟದಲ್ಲಿ ವ್ಯತ್ಯಾಸಗಳಿರುವುದು ಸ್ಪಷ್ಟವಾಗಿದೆ. ಆದರೆ ಅದು ಲಿಂಗಾಧಾರಿತವಾಗಿಲ್ಲ. ನಿಯಮಿತ ಪುರುಷ ಮತ್ತು ಮಹಿಳಾ ಓದುಗರ ಸಾಮಾನ್ಯ ಜ್ಞಾನ ವಿಸ್ತರಣೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲದಿರುವುದು ಕಂಡುಬAದಿದೆ. ವಿವಿಧ ಸಂವಾದಿಗಳು ಭಿನ್ನ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದು, ರಾಜಕೀಯ, ಆರ್ಥಿಕ, ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿನ ಜಾಗೃತಿಯ ಮಟ್ಟವು ವಿಭಿನ್ನವಾಗಿದೆ. ಪ್ರಯೋಗದ ಫಲಿತಾಂಶದ ಮೇಲೆ ಬಾಹ್ಯ ಚಲಕಗಳು ಪ್ರಭಾವ ಬೀರಿರುವ ಸಾಧ್ಯತೆಗಳನ್ನು ಅಧ್ಯಯನ ತಿಳಿಸಿದೆ.
ಎಲ್ಲಾ ಸುದ್ದಿಮಾಧ್ಯಮಗಳು ಸಹ ಎಲ್ಲರಿಂದ ಉತ್ತಮ ಮಾಧ್ಯಮಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಪ್ರತೀ ಮಾಧ್ಯಮವು ಸಹ ತನ್ನದೇ ಆದ ಸುದ್ದಿ ನೀಡುವ ಶೈಲಿಯನ್ನು ರೂಢಿಸಿಕೊಂಡಿರುತ್ತವೆ ಮತ್ತು ಮಿತಿಗಳನ್ನು ಹೊಂದಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಭಿನ್ನ ಮಾಧ್ಯಮಗಳಡೆಗೆ ಬಳಕೆ ಮತ್ತು ಸಂತೃಪ್ತಿಯನ್ನು ಹೊಂದಿರುತ್ತಾರೆ. ಎಲೆಕ್ಟಾçನಿಕ್ ಹಾಗೂ ನವಮಾಧ್ಯಮಗಳು ವ್ಯಾಪಿಸಿರುವ ದಿನಮಾನಗಳಲ್ಲೂ ದಿನಪತ್ರಿಕೆಗಳು ತನ್ನ ನಿರಂತರ ಮತ್ತು ನಿಷ್ಠ ಓದುಗರಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ಸ್ಪಷ್ಟವಾದ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಪ್ರಾದೇಶಿಕ ಹಂತದಿAದ ಅಂತಾರಾಷ್ಟಿçÃಯ ಮಟ್ಟದವರೆಗೆ ಸುದ್ದಿ, ಲೇಖನ, ಅಂಕಣಗಳಿತ್ಯಾದಿ ಮಾದರಿ ಮೂಲಕ ಸಮಗ್ರ ಮಾಹಿತಿ ನೀಡುವ ಪತ್ರಿಕೆಗಳನ್ನು ಪ್ರತಿನಿತ್ಯ ಓದುವುದು ಸಾಮಾನ್ಯ ಜ್ಞಾನ ವೃದ್ಧಿಗೆ ಪೂರಕವಾಗಿದೆ ಎಂದು ಅಧ್ಯಯನ ನಿರೂಪಿಸಿದೆ. ಸಮಾಜದ, ದೇಶದ ಆಗುಹೋಗುಗಳ ಬಗ್ಗೆ ಮಾಹಿತಿಯಿರುವ ಪ್ರಜೆಯು ತನ್ನ ಸಾಮಾಜಿಕ ಅಭಿಪ್ರಾಯ, ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಗಳಲ್ಲಿ ಜಾಣತನದ ನಡೆಯನ್ನು ಅನುಸರಿಸಬಲ್ಲ. ಇಂತಹ ಜಾಗೃತ ಪ್ರಜೆಯು ದೇಶವೊಂದರ ಆಸ್ತಿಯಾಗಿದ್ದು, ಪ್ರಜ್ಞಾಪ್ರಭುತ್ವ ವ್ಯವಸ್ಥೆಯ ಯಶಸ್ಸಿಗೂ ಕಾರಣನಾಗುತ್ತಾನೆ.
* * * * * *
References
Banu, A. M., Malini, R., &Sreerangam, G. (2015). A Study on customer satisfaction towards dailies news paper with special reference to Daily Thanti in Thiruchirapalli. Asia Pacific Journal of Research, 1 (26), 19-24.
Kavitha, A. K. (2017). Influence of new media on reading behavior and consumption patterns among college students in Coimbatore. International Journal of Library Science and Research, 7 (2), 39-44.
Mallik, A. D. M. & Govind. (2018). Reader’s perception on Shivamogga Times newspaper in Shivamogga city: An empirical study. International Journal of Management Studies, 5(4.2), 61-74. doi: http://dx.doi.org/10.18843/ijms/v5i4(2)/07
Mathews, J. (200). Role of print media in education division in south africa. PMIE division. Retrieved from http://pmg-assets.s3-website-eu-west-1.amazonaws.com/docs/2000/appendi ces/000912PrintMedia.htm
Mohsin, S. F., & Sonwane, S. (2013). Reading habit of Indian youth in digital environment. Multidisciplinary International Education Research Journal, 1 (5), 20-28.
Pande, S. K. (2019). The Trend of Reading Newspapers among the Youth in 21st Century
(A study based on Youth and Daily Hindi Newspapers of Varanasi). International Journal of Advanced and Innovative Research. doi: 10.1598/rrq.39.2.2.
Segall, A. & Schmidt, S. (2006). Reading the newspaper as a social text. The Social Studies, May-June, 2006, 91-99.
Sharma, C., & Saini, R. (2019). Newspaper reading habit among the students of university college Kurukshetra: A case study. Library Philosophy and Practice. 2241. Retrieved from https://digitalcommons.unl.edu/libphilprac/2241
Sivakumar, N. & Tamilselvan, N. (2015). Newspaper reading habits of college students: A case study of Kalaignar karunanidhi institute of technology. International Journal of Library Science and Research, 5 (2), 31-26.
Vinay G. P. & Sathyaprakash M. R. (2019). Science education through print media: An analysis of two leading kannada newspapers. International Journal of Research and Analytical Reviews, special issue, 565-572.
ಚಂದ್ರಶೇಖರ್, ಬಿ. ಎಸ್. (೨೦೦೩). ಸಂವಹನ ಮಾಧ್ಯಮಗಳು. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಪೂರ್ಣಿಮಾ, ಟಿ. ಸಿ. (೨೦೦೩). ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
* * * * * *
Commentaires