top of page

ಬೇಡ ಸಮುದಾಯದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ: ಚಿತ್ರದುರ್ಗ ಜಿಲ್ಲೆಯ ಅಧ್ಯಯನ

ನೇತ್ರಾವತಿ ಬಿ.

ಸಂಶೋಧನಾರ್ಥಿ

ಮಾನವಶಾಸ್ತç ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ, ಕರ್ನಾಟಕ


ಸಾರಾಂಶ:

ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕ ಸಮುದಾಯದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪ್ರಸ್ತುತ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಬೇಡ ನಾಯಕ ಸಮುದಾಯದ ಶೈಕ್ಷಣಿಕ ಮಟ್ಟ, ಸಾಕ್ಷರತಾ ಪ್ರಮಾಣ, ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅಡ್ಡಿಯಾಗಿರುವ ಅಂಶಗಳನ್ನು ಪತ್ತೆಮಾಡುವುದು ಅಧ್ಯಯನದ ಪ್ರಮುಖ ಉದ್ದೇಶಗಳಾಗಿದೆ. ಈ ಅಧ್ಯಯನಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿನ ೩ ತಾಲ್ಲೂಕುಗಳಿಂದ ತಲಾ ೧೦೦ ಶಾಲೆಗಳಂತೆ, ಒಟ್ಟು ೩೦೦ ಶಾಲೆಗಳನ್ನು ಆಯ್ದುಕೊಂಡಿದ್ದು, ಪ್ರತಿಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ಒಬ್ಬರು ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಧ್ಯಯನದ ಮಾಹಿತಿ ಸಂಗ್ರಹಕ್ಕಾಗಿ ಅನುಸೂಚಿಯನ್ನು ಬಳಸಿಕೊಳ್ಳಲಾಗಿದೆ. ಬೇಡ ನಾಯಕ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಬಡತನ, ಆರೋಗ್ಯ ಪ್ರಮುಖ ಸಮಸ್ಯೆಗಳಾಗಿ ಪರಿಣಮಿಸಿರುವುದು ಅಧ್ಯಯನದಿಂದ ದೃಢಪಟ್ಟಿದೆ. ಸಮುದಾಯದ ವಿದ್ಯಾರ್ಥಿಗಳು ಬಾಲ್ಯ ವಿವಾಹ, ಅನಾರೋಗ್ಯ, ವಾಹನ ಸೌಲಭ್ಯದ ಕೊರತೆ, ಜೀವನ ನಿರ್ವಹಣೆ ಹಾಗೂ ಮನೆಯ ಕೆಲಸಕ್ಕಾಗಿ ಶಾಲೆಯನ್ನು ಬಿಟ್ಟಿರುವುದು ಬೆಳಕಿಗೆ ಬಂದಿದೆ.


ಮುಖ್ಯ ಪದಗಳು: ಬೇಡ ನಾಯಕ, ಬೇಡ ನಾಯಕ ಮಕ್ಕಳು, ಬೇಡ ನಾಯಕ ವಿದ್ಯಾರ್ಥಿಗಳು, ಚಿತ್ರದುರ್ಗ, ಶೈಕ್ಷಣಿಕ ಸ್ಥಿತಿಗತಿ, ಹಿಂದುಳಿದಿರುವಿಕೆ, ಸಾಕ್ಷರತಾ ಪ್ರಮಾಣ, ಶೈಕ್ಷಣಿಕ ಮಟ್ಟಪಿಠೀಕೆ:

ಪ್ರಪಂಚದಲ್ಲಿ ಅನೇಕ ಬುಡಕಟ್ಟು ಸಮುದಾಯಗಳಿವೆ. ಪ್ರತಿಯೊಂದು ದೇಶದಲ್ಲಿನ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಹಿನ್ನೆಲೆಯನ್ನು ಹೊಂದಿವೆ. ಪ್ರಾಗೈತಿಹಾಸಿಕ ಕಾಲದಿಂದಲೂ ಜಗತ್ತಿನ ವಿವಿಧ ಜನಾಂಗ, ಸಮುದಾಯಗಳು ವಿಕಾಸಗೊಳ್ಳುತ್ತಾ ಬಂದಿವೆ. ಇವು ಹಂತ-ಹAತವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಅಳವಡಿಸಿಕೊಳ್ಳುತ್ತಾ ಇಂದಿನ ಆಧುನಿಕ ಕಾಲದಲ್ಲಿಯೂ ವಿಕಾಸಗೊಳ್ಳುತ್ತಿವೆ. ಇತಿಹಾಸದ ಮತ್ತು ಪ್ರಸ್ತುತ ಕಾಲಘಟ್ಟದ ಆಧುನಿಕತೆಯ ಅಭಿವೃದ್ಧಿಯನ್ನು ಮೀರಿ ಪ್ರಪಂಚದಲ್ಲಿನ ಬುಡಕಟ್ಟು ಸಮುದಾಯಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿವೆ. ಸಿಂಧೂ ಬಯಲಿನ ನಾಗರೀಕತೆ, ಈಜಿಪ್ಟ್ ನಾಗರೀಕತೆ, ಬ್ಯಾಬಿಲೋನಿಯನ್ ನಾಗರೀಕತೆ, ಚೀನಾ ನಾಗರೀಕತೆ ಇತ್ಯಾದಿಯಾಗಿ ಹಿಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದಾಖಲಿಸಬಹುದಾದರೂ ಬುಡಕಟ್ಟು ಸಮುದಾಯಗಳ ಪಾರಂಪರಿಕ ಜ್ಞಾನವನ್ನು ಇನ್ನೂ ಸಂಪೂರ್ಣವಾಗಿ ದಾಖಲಿಸಲು ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ ಜಗತ್ತಿನ ಬುಡಕಟ್ಟು ಸಮುದಾಯಗಳು ತಮ್ಮ ಅನನ್ಯತೆಯನ್ನು ಕಾಯ್ದುಕೊಂಡಿವೆ.


ಭಾರತ ದೇಶದಲ್ಲಿ ಬುಡಕಟ್ಟು ಸಮುದಾಯಗಳ ಬಗ್ಗೆ ಅಧ್ಯಯನ ಪ್ರಾರಂಭವಾಗಿದ್ದು ಮೂಲತಃವಾಗಿ ಬ್ರಿಟಿಷರು ಆಳ್ವಿಕೆ ಮಾಡುವಂತಹ ಸಂದರ್ಭದಲ್ಲಿ ಈ ದೇಶದ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವುದು ಅಗತ್ಯವಾಯಿತು. ಆದರೆ ಬುಡಕಟ್ಟುಗಳ ಸಂಸ್ಕೃತಿಯನ್ನು ತಿಳಿಯಲು ಮುದ್ರಿತವಾದ ಬರಹಗಳಿರಲಿಲ್ಲ. ಇದರಿಂದಾಗಿ ವಿವಿಧ ಪಂಗಡಗಳ ಸಾಮಾಜಿಕ ಮತ್ತು ಸಾಂಸಕೃತಿಕ ಅಧ್ಯಯನಕ್ಕೆ ಬ್ರಿಟಿಷ್ ಸರ್ಕಾರ ಪ್ರೋತ್ಸಾಹ ನೀಡಿ ಮಾನವ ವಿಜ್ಞಾನಿಗಳು ಮಾನವಶಾಸ್ತçಜ್ಞ (ಂಟಿಣhಡಿoಠಿoಟogisಣ) ರನ್ನು ಈ ಕಾರ್ಯಕ್ಕೆ ನಿಯೋಜಿಸಲಾಯಿತು. ಪ್ರತಿಯೊಂದು ರಾಜ್ಯಗಳಲ್ಲಿಯೂ ಇರುವ ಎಲ್ಲಾ ಬುಡಕಟ್ಟುಗಳ ಬಗ್ಗೆಯೂ ಸ್ಥೂಲವಾದ ಅಧ್ಯಯನವನ್ನು ಕೈಗೊಳ್ಳಲಾಯಿತು. ಬುಡಕಟ್ಟುಗಳ ಅಧ್ಯಯನದೊಂದಿಗೆ ವಿವಿಧ ಜಾತಿಗಳ ಅಧ್ಯಯನವೂ ನಡೆಯಿತು. ಇದರಿಂದಾಗಿ ಭಾರತ ದೇಶದ ಅಗೋಚರವಾದ ಬುಡಕಟ್ಟು ಸಮುದಾಯಗಳ ಪರಿಚಯವಾಯಿತು. ಮುದ್ರಣ ರೂಪದಲ್ಲಿ ಮಾಹಿತಿಯನ್ನು ಲಭ್ಯವಾಗಿ ಬುಡಕಟ್ಟು ಸಮುದಾಯಗಳ ವಿಸ್ತೃತ ಅಧ್ಯಯನ ಕೈಗೊಳ್ಳಲು ಸಾಧ್ಯವಾಯಿತು.


ಡಾಲ್ಸನ್ ಅವರು ಬಂಗಾಳದ ಬುಡಕಟ್ಟುಗಳ ಬಗ್ಗೆ ಅಧ್ಯಯನ ಮಾಡಿದರು. ಜೆ.ಎಫ್ ಮೇಟ್ಸ್ ಅವರು ೮೬೪೧ರಲ್ಲಿ ನೀಲಗಿರಿಯ ಬುಡಕಟ್ಟುಗಳ ಬಗ್ಗೆ ಅಧ್ಯಯನ ಮಾಡಿದರು ಡಾಲ್ಸನ್ ನಂತರ ಬಂಗಾಳದಲ್ಲಿ ರೆಸ್ಲೆ ಅವರು ೧೮೯೧ರಲ್ಲಿ ವಿಸ್ತೃತವಾದ ಅಧ್ಯಯನ ನಡೆಸಿದರು. ನಂತರ ಅನೇಕ ಮಾನವ ಶಾಸ್ತçಜ್ಞರು ಮತ್ತು ಸಮಾಜ ಶಾಸ್ತçಜ್ಞರು ಬುಡಕಟ್ಟುಗಳ ಸಂಶೋಧನಾ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು.


ಭಾರತದ ಸಂಸ್ಕೃತಿಕ ಪರಂಪರೆ ಬಹಳ ಪ್ರಾಚೀನವಾದುದು, ದೀರ್ಘವಾದುದು ವ್ಯಾಪಕವಾದುದು ಆಗಿದೆ. ಭಾರತೀಯ ಸಂಸಕೃತಿಯ ಆಳ-ಎತ್ತರಗಳನ್ನು ಮತ್ತು ಉದ್ದ-ಅಗಲಗಳನ್ನು ಪರಿವೀಕ್ಷಿಸುವುದು ಸುಲಭವೇನೂ ಅಲ್ಲ ಭಾರತದ ಸಂಸ್ಕೃತಿಯಲ್ಲಿ ಅದರ ಪ್ರಾಚೀನತೆಯೊಂದಿಗೆ ಹಲವಾರು ಸಮೂಹಗಳ ಪಂಥಗಳ ಪಂಗಡಗಳ ಮತ ಸಮೂಹಗಳ ಜೀವನ ಕ್ರಮಗಳು ಸಮಾವೇಶಗೊಂಡಿರುವುದನ್ನು ಕಾಣಬಹುದು. ಜೊತೆಗೆ ನೂರಾರು ವರ್ಷಗಳ ದಾಸ್ಯತೆಯ ಮತ್ತು ಇತ್ತೀಚಿನ ಆಧುನೀಕತೆಯ ಪ್ರಭಾವಗಳು ಅದರ ಮೂಲ ಸ್ವರೂಪವನ್ನು ಬದಲಿಸಲಿವಿಯೇ ಎನ್ನುವಂತಹ ಪ್ರಶ್ನೆಯೂ ಈಗ ಕಾಡದಿರದು. ಈಗ ಕಾಣುವ ಸಂಸ್ಕೃತಿಯನ್ನು ನಮ್ಮ ಈ ಹಿಂದಿನ ಸಾಂಸ್ಕೃತಿಕ ಸಂಪರ್ಕ ಸಾಂಸ್ಕೃತಿಕ ಪ್ರಸರಣ. ಸಾಂಸ್ಕೃತಿಕ ಸಂಘರ್ಷ ಹಾಗೂ ಸಾಂಸ್ಕೃತಿಕ ಸಮರತೆಗಳ ಫಲಶೃತಿ ಎಂದೆನ್ನಬಹುದು.


ಒAದು ಜನಾಂಗ ತನ್ನ ಇತಿಹಾಸವನ್ನು ಮರೆಯುವುದೆಂದರೆ ಅದು ತನ್ನ ಸಾಮಾಜಿಕ ಅಸ್ತಿತ್ವದ ವಿಶಿಷ್ಟತೆಯನ್ನು ಮರೆತಂತೆಯೇ ಇತಿಹಾಸವನ್ನು ನೆನಪಿಸಿಕೊಳ್ಳುವುದೆಂದರೆ ಒಂದು ಜನಸಮುದಾಯ ತಾನು ನಡೆದು ಬಂದ ರೀತಿಯನ್ನು ತನ್ನ ಹಿಂದಿನ ಜೀವನ ವಿಧಾನವನ್ನು ಅರ್ಥಾತ್ ತನ್ನ ಈ ಹಿಂದಿನ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳುವ ಯತ್ನದಿಂದಾಗಿಯೇ ಒಂದು ಸಮುದಾಯಕ್ಕೆ ತನ್ನ ತನದ ಅರಿವು ತನ್ನ ವಿಶಿಷ್ಟತೆಯ ತಿಳುವಳಿಕೆ ಮೂಡುವುದು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಪ್ರತಿಯೊಬ್ಬ ವ್ಯಕ್ತಿಗೆ ಮಾತ್ರವಲ್ಲ ಪ್ರತಿಯೊಂದು ದೇಶಕ್ಕೂ ಕೂಡ ಅಂತಹ ‘ತನ’ ಅಥವಾ ‘ಅಸ್ಮಿತೆ’ ಅಥವಾ ರಾಷ್ಟಿçÃಯ ಸ್ವಭಾವ ಎಂಬುದಿದೆ. ಭಾರತದ ‘ರಾಷ್ಠಿçÃಯ ಸ್ವಭಾವ’ವನ್ನು ಅರಿಯುವುದೆಂದರೆ ಭಾರತದ ಸಾಂಸ್ಕೃತಿಕ ಪರಂಪರೆಯ ತಿಳುವಳಿಕೆ ಮೂಡಿಸಿಕೊಳ್ಳುವುದು. ಒಂದು ನಿರ್ದಿಷ್ಟ ಪ್ರದೇಶದ, ಒಂದು ಸಮುದಾಯದ ಜೀವನ ಶೈಲಿ, ಶಿಕ್ಷಣ, ಸಂಸ್ಕೃತಿ, ಸಾಮಾಜಿಕತೆ ಇವೇಲ್ಲವುಗಳನ್ನು ಸಹ ತಿಳಿಯುವುದು ಅಗತ್ಯವಾಗಿದೆ.


ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯೂ ಕೂಡ ಐತಿಹಾಸಿಕವಾದ ಬುಡಕಟ್ಟು ಸಮುದಾಯವನ್ನು ಒಳಗೊಂಡ ಸಮುದಾಯವಾಗಿದೆ. ಈ ಹಿನ್ನೆಯಲ್ಲಿ ಆಧುನಿಕತೆಯ ಕಾಲಘಟ್ಟಕ್ಕೆ ಇಲ್ಲಿ ನಿರ್ದಿಷ್ಟ ಬುಡಕಟ್ಟಿನ ಸ್ಥಿತಿಗತಿಯನ್ನು ಅಧ್ಯಯನ ಮಾಡಲುÀ ಉದ್ದೇಶಿಸಲಾಗಿದೆ. ಜಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಶೇ.೧೮.೩೩ ಮತ್ತು ಇತರರು ಶೇ.೫೮.೩೨ ಇದ್ದಾರೆ. ತಾಲ್ಲೂಕು ಜನಸಂಖ್ಯೆಯನ್ನು ವರ್ಗೀಕರಿಸುವಾಗ ಜಿಲ್ಲೆಯ ಬೇಡಸಮುದಾಯದ ಜನಸಂಖ್ಯೆಯು ೨೦೧೧ರಲ್ಲಿ ಒಟ್ಟು ಜನಸಂಖ್ಯೆಯ ಶೇ.೧೮.೨೩ರಷ್ಟಿದೆ. ತಾಲ್ಲೂಕುವಾರು ಬೇಡ ಸಮುದಾಯ ಹಂಚಿಕೆಗೆ ಸಂಬAಧಿಸಿದAತೆ ಮೊಳಕಾಲ್ಮೂರು ತಾಲ್ಲೂಕು ೩೭.೪೫ರಷ್ಟು ಜನಸಂಖ್ಯೆಯನ್ನು ಹೊಂದಿದ್ದು ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆಯೆನ್ನಬಹುದು. ಜಿಲ್ಲೆಯ ಚಳ್ಳಕೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳು ಕ್ರಮವಾಗಿ ೨೯.೪೩ ಮತ್ತು ಶೇ.೧೬.೪೩ ಜನಸಂಖ್ಯೆಯನ್ನು ಹೊಂದಿದೆ ಹಾಗೂ ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳು ಕ್ರಮವಾಗಿ ಶೇ.೯.೮ ಮತ್ತು ಶೇ.೮.೦೬ ಜನಸಂಖ್ಯೆಯನ್ನು ಹೊಂದಿವೆ. ಈ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯು ೨೦೧೧ರ ಜನಗಣತಿಯಲ್ಲಿ ಶೇ.೫೮.೩೨ರಷ್ಟು ಕಂಡುಬAದಿದೆ. ಅದರ ಪೈಕಿ ತಾಲ್ಲೂಕುಗಳ ಭಾಗವು ಹೀಗಿದೆ. ಹೊಸದುರ್ಗ ತಾಲ್ಲೂಕು ಶೇ.೭೧.೪೧ರಷ್ಟು ಹಿರಿಯೂರು ತಾಲ್ಲೂಕು ಶೇ.೬೫.೧೪, ಹೊಳಲ್ಕೆರೆ ತಾಲ್ಲೂಕು ಶೇ.೬೦.೩೭, ಚಿತ್ರದುರ್ಗ ತಾಲ್ಲೂಕು ಶೇ.೫೯.೬೨ ಚಳ್ಳಕೆರೆ ತಾಲ್ಲೂಕು ಶೇ.೪೭.೯೧ ಮತ್ತು ಮೊಳಕಾಲ್ಮೂರು ತಾಲ್ಲೂಕು ಶೆ.೪೨.೭೭ರಷ್ಟಿರುವುದು ಕಂಡುಬರುತ್ತದೆ. ಈ ಮಾಹಿತಿಯ ಎಲ್ಲ ಅಂಶಗಳನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಬೇಡನಾಯಕ ಸಮುದಾಯದ ಮಕ್ಕಳ, ಶೈಕ್ಷಣಿಕ ಹಿಂದುಳಿಯುವಿಕೆಗೆ ಬುಡಕಟ್ಟು ಸಮುದಾಯಗಳನ್ನು ಸಂಶೋಧನಾ ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಸಾಮಾಜಿಕ ಅಧ್ಯಯನ ದೃಷ್ಠಿಕೋನದಿಂದ ಅಧ್ಯಯನವನ್ನು ಕೈಗೊಳ್ಳುವುದಾಗಿದೆ.


ಅಧ್ಯಯನದ ಅಗತ್ಯತೆ ಮತ್ತು ಮಹತ್ವ:

ಶಿಕ್ಷಣವು ಮಾನವನ ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ. ಶಿಕ್ಷಣವು ಕೇವಲ ಶ್ರೀಮಂತರ ಸ್ವತ್ತು ಎಂಬ ಭಾವನೆಯನ್ನು ತೊಡೆದುಹಾಕಿ ಎಲ್ಲರೂ ಸಮಾನ ರೀತಿಯಲ್ಲಿ ಪಡೆಯುವಂತಾಗಬೇಕೆAದು ಅನುಗುಣವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಶಿಕ್ಷಣ ನೀಡಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ರಾಷ್ಟçದ ಉತ್ತಮ ನಾಯಕನ ಆಯ್ಕೆಯಲ್ಲಿ ಶಿಕ್ಷಣ ಮಹತ್ತರ ಪಾತ್ರವಹಿಸುತ್ತದೆ. ಆದ್ದರಿಂದ ಸರ್ವರಿಗೂ ಶಿಕ್ಷಣ ಬೇಕಿದೆ. ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯನ್ನು ಉಂಟುಮಾಡುತ್ತದೆ. ಶಿಕ್ಷಣವು ಸಮಾಜದ ಹಾಗೂ ರಾಷ್ಟಾçಭಿವೃದ್ಧಿ ಕಾರ್ಯಾಚರಣೆಗಳ ಬಗ್ಗೆ ತಿಳವಳಿಕೆ ನೀಡುತ್ತಿದೆ. ಸಮಾಜದ ವಿವಿಧ ಭಾಗಗಳಿಂದ ಬಂದ ಮಕ್ಕಳನ್ನು ಭವಿಷ್ಯದ ಹಾಗೂ ಉತ್ತಮ ಸಮಾಜಗಳ ರಚನಾಕಾರರನ್ನಾಗಿ ತಯಾರಿಸುತ್ತಿದೆ. ವೈಯಕ್ತಿಕ ಬೇಡಿಕೆಗಳೊಂದಿಗೆ ಸಮಾಜದ ರೀತಿಯಲ್ಲಿ ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸಹಾಯಕವಾಗುತ್ತದೆ. ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಪ್ರಗತಿಯಾಗಬೇಕಾದರೆ ಶಿಕ್ಷಣ ಅಗತ್ಯವಾಗಿದೆ.


ವಿವಿಧ ವಿಷಯ ಹಾಗೂ ವಿವಿಧ ದೇಶ ವಿದೇಶಕ್ಕೆ ಆಗು ಹೋಗುಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ, ಇಂತಹ ಶಿಕ್ಷಣವು ಎಲ್ಲರಿಗೂ ಕೂಡ ನಮ್ಮ ಸಂವಿಧಾನದ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯವಾಗಿ ನೀಡಲಾಗುತ್ತದೆ. ಇದರ ಅಡಿಯಲ್ಲಿ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯಾವುದೇ ಮಗುವೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಸರ್ವ ಪ್ರಯತ್ನಗಳನ್ನು ಕೂಡ ಮಾಡುತ್ತಿದೆ. ಆದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಅಲ್ಪಸಂಖ್ಯಾತರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದರೂ ಕೂಡ ಇವರಲ್ಲಿ ಶೈಕ್ಷಣಿಕ ಹಿಂದುಳಿಯುವಿಕೆಯು ಕಂಡು ಬರುತ್ತಿದೆ. ಪರಿಶಿಷ್ಟ ಪಂಗಡದ ನಾಯಕ ಸಮುದಾಯದ ಶೇ ೮೦ ಕ್ಕೂ ಹೆಚ್ಚಿನ ಅನಕ್ಷರಸ್ಥರಾಗಿದ್ದಾರೆ. ಈ ಸಮೂಹದಲ್ಲಿ ಶಿಕ್ಷಣದ ಪ್ರಚಾರಕ್ಕಾಗಿ ಸರ್ಕಾರವು ವಿಶೇಷ ಅವಕಾಶಗಳನ್ನು ನೀಡಿದೆ. ಅವರಿಗೆ ಉಚಿತವಾದ ವಿದ್ಯಾರ್ಥಿನಿಲಯ, ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನಗಳು, ಮಧ್ಯಾಹ್ನದ ಉಪಹಾರ, ಪಠ್ಯ ಪುಸ್ತಕಗಳು, ಮುಂತಾದ ಅನುಕೂಲಗಳನ್ನು ನೀಡಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಆಶ್ರಮ ಶಾಲೆಗಳನ್ನು ಮತ್ತು ತಾಂತ್ರಿಕ ತರಬೇತಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಬೇಡ ನಾಯಕ ಸಮುದಾಯದ ವಿದ್ಯಾರ್ಥಿಗಳಲ್ಲಿ ಕಲಿಕಾ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತವೆ.


ಸಾಹಿತ್ಯಾವಲೋಕನ

ವಿರೂಪಾಕ್ಷಿ ಪೂಜಾರಹಳ್ಳಿ (೨೦೦೭ ರವರ ‘ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು’ ಎನ್ನುವ ಕೃತಿಯಲ್ಲಿ ನಾಯಕ ಸಮುದಾಯದ ಸಂಸ್ಕೃತಿ, ಜೀವನ ವಿಧಾನ, ಹಬ್ಬಹರಿದಿನಗಳು, ಆಚರಣೆ ಮುಂತಾದವುಗಳ ಕುರಿತು ಚರ್ಚಿಸಿದ್ದಾರೆ. ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಮ್ಯಾಸನಾಯಕರ ಕುರಿತಂತೆ ಪ್ರಮುಖವಾಘಿ ವಿಧಿ ವಿಧಾನಗಳು, ಪರಂಪರೆ, ಇನ್ನಿತರ ವಿಶಿಷ್ಟ ಆಚರಣೆಗಳ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ. ನಾಯಕ ಸಮುದಾಯದ ವೈವಾಹಿಕ ಪದ್ದತಿ, ಆಚರಣೆ, ನಾಮಕರಣ, ಹಬ್ಬಹರಿದಿನಗಳ ಆಚರಣೆಗಳ ಬಗೆಗೆ ಈ ಕೃತಿಯು ಮಾಹಿತಿಯನ್ನು ಒದಗಿಸುತ್ತದೆ. ಜಾಗತೀಕರಣ, ಆಧುನಿಕರಣ ಇಂತಹ ಸಂದರ್ಭದಲ್ಲಿ ಬುಡಕಟ್ಟುಗಳು ಹೇಗೆ ತಲ್ಲಣಗಳನ್ನು ಎದುರಿಸುತ್ತಿವೆ ಎನ್ನುವುದು ಕುರಿತು ಲೇಖಕರು ಈ ಕೃತಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಅಮರೇಶ ಯತಗಲ್ (೨೦೦೮) ರವರ ’ವಾಲ್ಮೀಕಿ ಸಮುದಾಯ ಮತ್ತು ಚರಿತ್ರೆ’ ಎಂಬ ಕೃತಿಯಲ್ಲಿ ನಾಯಕ ಸಮುದಾಯದ ಇತಿಹಾಸ ಮತ್ತು ಚರಿತ್ರೆಯನ್ನು ಸಮಗ್ರವಾಗಿ ತಿಳಿಸಿದ್ದಾರೆ. ವಾಲ್ಮೀಕಿ ನಾಯಕ ಸಮುದಾಯದ ಇತಿಹಾಸ ಬೆಳೆದು ಬಂದ ಬಗೆ ಮತ್ತು ಪುರಾತನ ಕಾಳದಿಂದಲೂ ತನ್ನ ಅಸ್ತಿತ್ವವನ್ನು ಇತಿಹಾಸದೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬವುದಾಗಿ ಲೇಖಕರು ಚರ್ಚಿಸಿರುವುದು ಕಾಣಸಿಗತ್ತದೆ.


ಭಾಗ್ಯಮ್ಮ ಎನ್ ಇವರ ವಿಧ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ಯೋಜನೆಯ ಪ್ರಭಾವ ಒಂದು ಸಮಾಜಶಾಸ್ತಿçÃಯ ಅಧ್ಯಾಯನ ಮಹಾಪ್ರಬಂದ ಕುವೆಂಪು ವಿಶ್ವವಿದ್ಯಾನಿಲಯ (೨೦೧೪). ಪ್ರಸ್ತುತ ಅಧ್ಯಾಯನ ವಿಷಯ ವಿಧಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ಯೋಜನೆ ಪ್ರಭಾವಿ ಈ ಶೀರ್ಷಿಕೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಗಳನ್ನು ಒಟ್ಟು ವಿಧ್ಯಾರ್ಥಿಗಳ ಸಂಖ್ಯೆ, ಹಾಜರಾತಿ, ಕಲಿಕೆಯ ಪ್ರಗತಿಯನ್ನು ವಿಧ್ಯಾರ್ಥಿಗಳ ಅಪವ್ಯಯ ಶಿಸ್ತು ಕಲಿಕೆಯಲ್ಲಿ ಹಿಂದುಳಿವಿಕೆಗೆ ಕಾರಣ ಶಾಲೆಯಿಂದಹೊರಗುಳಿದ ಮಕ್ಕಳನ್ನು ಆಕರ್ಷಿಸುವ ಯೋಜನೆಗಳು ಶೈಕ್ಷಣಿಕವಾಗಿ ಆದಂತಹ ಪ್ರಗತಿ ಪೋಷಕ ವರ್ಗದವರು ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಹೊಂದಿರುವ ಕಾಳಜಿ ಶಿಕ್ಷಕರು ಬಿಸಿಯೂಟ ಜವಬ್ದಾರಿಯನ್ನು ಹೊತ್ತಿದ್ದರೂ ತಮ್ಮನ್ನು ತಾವು ಕ್ರಿಯಾಶೀಲತೆಯಿಂದ ಪಠ್ಯದಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಮುಂತಾದ ಅಂಶಗಲ ಬಗ್ಗೆ ತಿಳಿಯದ ಸಲುವಾಗಿ ಈ ಅಧ್ಯಾಯನ ಮಾಡಿದರೆ ಬಹುಮುಖ್ಯವಾಗಿ ಶಾಲೆ ಆರಂಭವಾಗಿ ಎಷ್ಟೋ ವರ್ಷ ಕಳೆದಿದ್ದರೂ ಸೂಕ್ತ ಕಟ್ಟಡ ಇಲ್ಲದೆ ಮರದ ಕೆಳಹೆ ತರಗತಿಗಳು ನಡೆಯುತ್ತಿರುವುದು ಹಾಗೆಯೇ ಶೌಚಾಲಯ ಕುಡುಯುವ ನೀರಿನ ಸಮಸ್ಯೆ ಶಿಕ್ಷಕರ ಕೊರತೆ ಅದರಲ್ಲೂ ಬಿಸಿಯೂಟ ಯೋಜನೆಯ ವಿಧ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಈ ಅಧ್ಯಯನ ತಿಳಿಸುತ್ತದೆ.


ಅಧ್ಯಯನದ ಉದ್ದೇಶಗಳು:

• ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಪಂಗಡ ಜನಸಂಖ್ಯೆಯ ಸಾಕ್ಷರತಾ ಪ್ರಮಾಣವನ್ನು ಅಧ್ಯಯನ ಮಾಡುವುದು.

• ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಅಧ್ಯಯನ ಮಾಡುವುದು.

• ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕ ವಿದ್ಯಾರ್ಥಿಗಳ ಶಿಕ್ಷಣದಲ್ಲಿರುವ ನಿರ್ಬಂಧಗಳನ್ನು ಅಧ್ಯಯನ ಮಾಡುವುದು.

• ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕÀ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿಂದುಳಿಯುವಿಕೆಗೆ ಕಾರಣಗಳನ್ನು ಅಧ್ಯಯನ ಮಾಡುವುದು.


ಅಧ್ಯಯನದ ವಿಧಾನ


ಬೇಡನಾಯಕ ಸಮುದಾಯದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ವಿವರಣಾತ್ಮಕ ವಿಧಾನ, ಪ್ರಶ್ನಾವಳಿ ಆಧಾರಿತ ಸಮೀಕ್ಷೆ, ಸಂದರ್ಶನ ಹಾಗೂ ಅವಲೋಕನ ತಂತ್ರಗಳನ್ನು ಬಳಸಿಕೊಳ್ಳಲಾಗಿದೆ.

ಪ್ರಶ್ನಾವಳಿ: ಬೇಡನಾಯಕ ಸಮುದಾಯದ ಮಕ್ಕಳ ಶೈಕ್ಷಣಿಕ ಹಿಂದುಳಿಯುವಿಕೆ ಅಧ್ಯಯನ ಎನ್ನುವ ಸಂಶೋಧನಾ ಅಧ್ಯಯನಕ್ಕೆ ಸಂಬAಧಿಸಿದAತೆ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಮೂರು ತಾಲ್ಲೂಕುಗಳಲ್ಲಿ ಶೈಕ್ಷಣಿಕೆ ಸ್ಥಿತಿಗತಿಯನ್ನು ಅರಿತುಕೊಳ್ಳಲು ಅಧ್ಯಯನದ ಉದ್ದೇಶಗಳಿಗನುಗುಣವಾಗಿ ಸೂಕ್ತವಾದ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ದತ್ತಾಂಶ ಸಂಗ್ರಹಿಸಲಾಗಿದೆ.

ಸಂದರ್ಶನ ವಿಧಾನ: ಪ್ರಸ್ತುತ ಸಂಶೋಧನಾ ಅಧ್ಯಯನದ ವ್ಯಾಪ್ತಿಯು ಚಿತ್ರದುರ್ಗ ಜಿಲ್ಲೆಯಾಗಿರುವುದರಿಂದ ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿಯೂ ಕ್ಷೇತ್ರಕಾರ್ಯವನ್ನು ಮಾಡಲಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಶಿಕ್ಷಣ ಇಲಾಖೆಗಳು ಶಾಲೆಗಳಿಗೆ ಭೇಟಿ ನೀಡಿ ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಮಕ್ಕಳ ಪೋಷಕರುಗಳಿಗೆ ಸಂಬಧಿಸಿದAತೆ ಸಾಂದರ್ಭಿಕವಾಗಿ ಸಂದರ್ಶನ ಮಾಡಲಾಗಿದೆ.

ಅವಲೋಕನ ವಿಧಾನ: ಪ್ರಸ್ತುತ ಅಧ್ಯಯನಲ್ಲಿ ಅವಲೋಕನ ವಿಧಾನವನ್ನೂ ಸಹ ಅಳವಡಿಸಿಕೊಳ್ಳಲಾಗಿದೆ. ಬೇಡ ಸಮುದಾಯದ ಮಕ್ಕಳ ಶೈಕ್ಷಣಿಕ ಮಟ್ಟ ಮತ್ತು ಶಾಲೆಗಳ ಶಿಕ್ಷಕರ ಸ್ಥಿತಿಗತಿಗಳನ್ನು ಸೂಕ್ಷö್ಮವಾಗಿ ಅವಲೋಕಿಸಲಾಗಿದೆ. ಪ್ರಸ್ತುತ ಅಧ್ಯಯನದಲ್ಲಿ ಸಹಭಾಗಿತ್ವ ಅವಲೋಕನ ಮತ್ತು ಕ್ಷೇತ್ರಕಾರ್ಯ ಅನುಭವವನ್ನು ಬಳಸಿಕೊಳ್ಳಲಾಗಿದೆ. ಕ್ಷೇತ್ರಕಾರ್ಯದಲ್ಲಿ ಬೇಡನಾಯಕ ಮಕ್ಕಳು ಮತ್ತು ಅವರ ಶಿಕ್ಷಕರು ಪೋಷಕರೊಂದಿಗೆ ಅವರ ಸುತ್ತಲು ಇರುವ ಜನರೊಂದಿಗೆ ಒಡನಾಟವನ್ನು ಹೊಂದಿ ಅಧ್ಯಯನ ಮಾಡಲಾಗಿದೆ. ಇವರನ್ನು ಹೊರತುಪಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಿಗಳು, ಮುಖ್ಯಸ್ಥರು, ಶಿಕ್ಷಣ ತಜ್ಞರನ್ನು ಒಳಗೊಂಡAತೆ ಕ್ಷೇತ್ರಕಾರ್ಯದ ಮಾಹಿತಿಯನ್ನು ಈ ಅಧ್ಯಯನದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ.


ಸಂವಾದಿಗಳ ಆಯ್ಕೆ: ಚಿತ್ರದುರ್ಗ ಜಿಲ್ಲೆಯ ಬೇಡ ಸಮುದಾಯದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನಕ್ಕೆ, ಚಿತ್ರದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಆಯ್ದುಕೊಳ್ಳಲಾಗಿದ್ದು, ಶಾಲೆಗಳನ್ನು ಸರಳ ಯಾದೃಚ್ಛಿಕ ಪ್ರತಿಚಯನ ವಿಧಾನದಿಂದ ಒಟ್ಟು ೩೦೦ ಶಾಲೆಗಳು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ೧೦೦ ಪ್ರಾಥಮಿಕ ಶಾಲೆ, ೧೦೦ ಹಿರಿಯ ಪ್ರಾಥಮಿಕ ಹಾಗೂ ೧೦೦ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.


ದತ್ತಾಂಶಗಳ ಸಂಗ್ರಹಣಾ ಸಾಧನಗಳು:

ಪ್ರಸ್ತುತ ಅಧ್ಯಯನಕ್ಕೆ ಸ್ವರಚಿತ ಪ್ರಶ್ನಾವಳಿಗಳನ್ನು ಬಳಸಿ ದತ್ತಾಂಶ ಸಂಗ್ರಹಿಸಲಾಗಿದೆ. ೧. ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿ (ವಿದ್ಯಾರ್ಥಿಗಳಿಗೆ), ೨. ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿ (ಶಿಕ್ಷಕರಿಗೆÀ) ಹಾಗೂ ೩. ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿ (ಪೋಷಕರಿಂದ), ಈ ಮೂರು ಸಾಧನಗಳನ್ನು ಬಳಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ೩ ತಾಲ್ಲೂಕುಗಳಾದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳನ್ನು ಮತ್ತು ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಂಡಿದ್ದೇನೆ. ಇದರಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿನ ೩ ತಾಲ್ಲೂಕುಗಳು ಈ ತಾಲ್ಲೂಕುಗಳಲ್ಲಿ ಪ್ರತಿಯೊಂದು ತಾಲ್ಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ ಒಟ್ಟು ೩೦೦ ಶಾಲೆಗಳನ್ನು ಪ್ರತಿ ಶಾಲೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹಾಗೆಯೇ ಪ್ರತಿ ಅಧ್ಯಯನ ಕ್ಷೇತ್ರದಲ್ಲಿ ಪೋಷಕರನ್ನು ಮತ್ತು ಶಾಲೆಯ ಶಿಕ್ಷಕರನ್ನು ಆಯ್ಕೆಮಾಡಿಕೊಂಡು ಪ್ರಶ್ನಾವಳಿಯ ಹಾಗೂ ಸಂದರ್ಶನ ಅನುಸೂಚಿಯ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ.


ದತ್ತಾಂಶ ವಿಶ್ಲೇಷಣೆ


ಉದ್ದೇಶ: ೧. ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಪಂಗಡದ ಜನಸಂಖ್ಯೆಯ ಸಾಕ್ಷರತಾ ಪ್ರಮಾಣವನ್ನು ಅಧ್ಯಯನ ಮಾಡುವುದು.

ಪ್ರಸ್ತುತ ವರದಿಯು ಪರಿಶಿಷ್ಟ ಪಂಗಡದವg ಜನಸಂಖ್ಯೆಯನ್ನು ಆಧÀರಿಸಿ ವಿಶೇಷವಾಗಿ ಪರಿಶಿಷ್ಟ ಪಂಗಡಗಳ ಸಾಕ್ಷರತಾ ಮಟ್ಟವು ಒಟ್ಟಾರೆ ಶಾಲಾ ದಾಖಲಾತಿ, ಭೂ ಹಿಡುವಳಿಯ ಗಾತ್ರ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧಿತ್ವ, ನಿವೇಶನ ಮತ್ತು ವಸತಿರಹಿತ ಕುಟುಂಬಗಳು ಅವರ ಅಭಿವೃದ್ಧಿಯ ಆಯಾಮಗಳನ್ನು ಕುರಿತು ಚರ್ಚಿಸುತ್ತದೆ. ಪರಿಶಿಷ್ಟ ಪಂಗಡಗಳು ಭಾರತೀಯ ಸಮಾಜದಲ್ಲಿನ ಹಿಂದುಳಿದ ಗುಂಪುಗಳೆAದು ಪರಿಗಣಿಸಲಾಗಿದೆ.


ಪರಿಶಿಷ್ಟ ಪಂಗಡಗಳೆAದರೆ ಗುಡ್ಡಗಾಡುಗಳಲ್ಲಿ ಮತ್ತು ಅರಣ್ಯ ಪ್ರದೇಶಗಳಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಹೆಚ್ಚು ಕಡಿಮೆ ಆಧುನಿಕ ಸೌಲಭ್ಯಗಳಿಂದ ದೂರವೇ ಉಳಿದಿರುವ ಜಾತಿಯಾಗಿದೆ.ಪರಿಶಿಷ್ಟ ಪಂಗಡಗಳು ಒಟ್ಟಾರೆ ಜನಸಂಖ್ಯೆ ಸೂಚ್ಯಾಂಕ ಶೇಕ ೭.೫ ರಷ್ಟಿದೆ.


ಜಿಲ್ಲೆಯ ಪರಿಶಿಷ್ಟ ಪಂಗಡದ ಜನಸಂಖ್ಯೆಯು ೨೦೧೧ ರಲ್ಲಿ ಒಟ್ಟು ಜನಸಂಖ್ಯೆ ೧೮.೨೩ ರಷ್ಟಿದೆ. ತಾಲ್ಲೂಕುವಾರು ಪರಿಶಿಷ್ಟ ಪಂಗಡ ಹಂಚಿಕೆಗೆ ಸಂಬAಧಿಸಿದAತೆ, ಮೊಳಕಾಲ್ಮೂರು ತಾಲ್ಲೂಕು ೩೭.೪೫ ರಷ್ಟುಜನ ಸಂಖ್ಯೆಯನ್ನು ಹೊಂದಿದ್ದು, ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆಯನ್ನಬಹುದು. ನಂತರ ಚಳ್ಳಕೆರೆ ಮತ್ತು ಚಿತ್ರದುರ್ಗ ತಾಲ್ಲೂಕು ಕ್ರಮವಾಗಿ ೨೯.೪೩ ಮತ್ತು ೧೬.೪೩ಜನಸಂಖ್ಯೆಯನ್ನು ಹೊಂದಿವೆ. ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳು ಕ್ರಮವಾಗಿ ಶೇ. ೯.೮ ಮತ್ತು ಶೇ. ೮.೦೬ ರಷ್ಟು ಜನಸಂಖ್ಯೆಯು ಏಕರೂಪವಾಗಿಲ್ಲ ಎಂಬ ಅಂಶವು ಗೋಚರವಾಗುತ್ತದೆ. ಇತರ ಸಮುದಾಯಗಳ ಜನಸಂಖ್ಯೆಯು (ಜಿಲ್ಲೆಯಲ್ಲಿನ ಓಬಿಸಿ-ಎ, ಓಬಿಸಿ-ಬಿ ಮತ್ತು ಸಾಮಾನ್ಯ ವರ್ಗದ ಜನಸಂಖ್ಯೆ) ೨೦೧೧ರ ಜನಗಣತಿಯಲ್ಲಿ ಶೇಕಡ ೫೮.೩೨ ರಷ್ಟು ಕಂಡುಬAದಿದೆ. ಅದರ ಪೈಕಿ ತಾಲ್ಲೂಕುಗಳ ಭಾಗವು ಹೀಗಿದೆ: ಹೊಸದುರ್ಗ ತಾಲ್ಲೂಕು, ಶೇ. ೭೧.೪೧ ರಷ್ಟು ಹಿರಿಯೂರು ತಾಲ್ಲೂಕು ಶೇ. ೬೫.೧೪ ರಷ್ಟು, ಹೊಳಲ್ಕೆರೆ ತಾಲ್ಲೂಕು ಶೇ. ೬೦.೩೭, ಚಿತ್ರದುರ್ಗ ತಾಲ್ಲೂಕು ಶೇ. ೫೯.೬೨, ಚಳ್ಳಕೆರೆ ತಾಲ್ಲೂಕು ಶೇ. ೪೭.೯೧ ರಷ್ಟು ಮತ್ತು ಮೊಳಕಾಲ್ಮೂರು ತಾಲ್ಲೂಕು ಶೇ. ೪೨.೭೭ ರಷ್ಟಿರುವುದು ಕಂಡು ಬರುತ್ತದೆ.


ಜಿಲ್ಲೆಯ ಪರಿಶಿಷ್ಟ ಪಂಗಡಗಳ ಸಾಕ್ಷರತೆಯ ಚಿತ್ರಣ


ಪರಿಶಿಷ್ಟ ಪಂಗಡಗಳ ಜಿಲ್ಲಾ ಸಾಕ್ಷರತಾ ಪ್ರಮಾಣ ಶೇ. ೫೫.೮೬ ರಷ್ಟಿದ್ದು, ಪುರುಷರ ಸಾಕ್ಷರತಾ ಪ್ರಮಾಣ ಶೇ. ೬೬.೩೦ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ ಶೇ. ೪೫.೫೦ ಇದ್ದು, ಜಿಲ್ಲಾ ಪರಿಶಿಷ್ಟ ಪಂಗಡಗಳ ಗ್ರಾಮೀಣ ಪ್ರದೇಶದ ಪುರುಷ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣವು ಕ್ರಮವಾಗಿ ಶೇ. ೬೪.೧೩ ಮತ್ತು ಶೇ. ೪೨.೩೫ ರಷ್ಟಿದೆ. ನಗರ ಪ್ರದೇಶದ ಪರಿಶಿಷ್ಟ ಪಂಗಡಗಳ ಪುರುಷ ಮತ್ತು ಮಹಿಳಾ ಸಾಕ್ಷರತ ಪ್ರಮಾಣಕ್ರಮವಾಗಿ ಶೇ. ೭೨.೫೪ ಮತ್ತು ಶೇ. ೫೪.೨೩ ರಷ್ಟಿದೆ. ಹಾಗೆಯೇ ಮಹಿಳಾ ಸಾಕ್ಷರತಾ ಪ್ರಮಾಣ ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆ ಎಂಬುವುದು ಮೇಲಿನ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.


ಕೋಷ್ಠಕ ೧: ಜಿಲ್ಲೆಯ ಪರಿಶಿಷ್ಟ ಪಂಗಡಗಳ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಕ್ಷರತೆ

ಗ್ರಾಮೀಣ ನಗರ ಜಿಲ್ಲೆ


ವರ್ಗ ಪುರುಷ ಮಹಿಳೆ ಜಿಲ್ಲೆ ಪುರುಷ ಮಹಿಳೆ ಜಿಲ್ಲೆ ಪುರುಷ ಮಹಿಳೆ ಜಿಲ್ಲೆ

ಶೇ. ೬೪.೧೩ ೪೨.೩೫ ೫೩.೨೬ ೭೨.೫೪ ೫೪.೨೩ ೬೩.೨೧ ೬೬.೩೦ ೪೫.೫೦ ೫೫.೮೦


ಲಿಂಗವಾರು ದಾಖಲಾತಿ ಪ್ರಮಾಣ: ಪಾಥಮಿಕ ಶಾಲೆಗಳಲ್ಲಿನ ಪರಿಶಿಷ್ಟ ಪಂಗಡಗಳ ಒಟ್ಟಾರೆ ದಾಖಲಾತಿ ಪ್ರಮಾಣವನ್ನು ಸೂಚಿಸಲಾಗಿದೆ. ಪ್ರಾಥಮಿಕ ಶಾಲೆಗಳ ಪೈಕಿ ಅತೀ ಹೆಚ್ಚು ದಾಖಲಾತಿಯು ೧೧.೪.೨೪ ರಷ್ಟು ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಮತ್ತು ಅತಿಕಡಿಮೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಶೇ. ೮೬.೭೩ ದಾಖಲಾಗಿದೆ. ಪ್ರಾಥಮಿಕ ಶಾಲಾ ಹುಡುಗರ ಪೈಕಿ ಅತೀ ಹೆಚ್ಚಿನ ಜಿ.ಇ.ಆರ್ ಮತ್ತೊಮ್ಮೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ದಾಖಲಾಗಿದೆ. ಶೇ. ೧೧೭.೦೭ ಮತ್ತು ಕನಿಷ್ಟ ಜಿ.ಇ.ಆ. ನಲ್ಲಿ ೮೫.೦೭ ಚಿತ್ರದುರ್ಗದಲ್ಲಿ ದಾಖಲಾಗಿದೆ.

ಮೂಲ: ಡಿಡಿಪಿಐಕಛೇರಿ, ಚಿತ್ರದುರ್ಗ, ೨೦೧೧


ಹುಡುಗರಲ್ಲಿ ಒಟ್ಟಾರೆ ಜಿ. ಇ.ಆರ್. ಶೇ. ೧೦೨.೮೫ ಹುಡುಗಿಯರಲ್ಲಿ ಒಟ್ಟಾರೆ ಜಿ.ಇ.ಆರ್.ಕೇವಲ ಶೇ. ೧೦೦ ರಷ್ಟುಕಂಡು ಬರುತ್ತದೆ. ಪ್ರಾಥಮಿಕ ಶಾಲಾ ಹುಡುಗಿಯರ ಅತ್ಯಂತ ಹೆಚ್ಚಿನ ಜಿ.ಇ.ಆರ್.ನಲ್ಲಿ ೧೧೧.೨೭ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ದಾಖಲಾಗಿದೆ ಜಿಲ್ಲಾ ಕೇಂದ್ರ ಕಛೇರಿಯನ್ನು ಬಳಗೊಂಡಿರುವ ಚಿತ್ರದುರ್ಗ ತಾಲ್ಲೂಕಿನಲ್ಲಿಯು ಪ್ರಾಥಮಿಕ ಶಾಲೆಯ ಹುಡುಗಿಯರ ದಾಖಲಾತಿಯು ಇಷ್ಟು ಕಡಿಮೆಯಾಗಿರುವುದು ಯೋಚಿಸುವ ಅಂಶವಾಗಿದೆ.


ಉದ್ದೇಶ: ೨. ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಅಧ್ಯಯನ ಮಾಡುವುದು.


ಸಮುದಾಯದ ಮಕ್ಕಳ ಶೈಕ್ಷಣಿಕ ಅಂಕಿ ಅಂಶಗಳು: ಪ್ರಸ್ತುತ ವರದಿಯು ಪರಿಶಿಷ್ಟ ಪಂಗಡದವರ ಜನಸಂಖ್ಯೆಯನ್ನು ಆದರಿಸಿ ವಿಶೇಷವಾಗಿ ಪರಿಶಿಷ್ಟ ಪಂಗಡಗಳ ಸಾಕ್ಷರತಾ ಮಟ್ಟಒಟ್ಟಾರೆ ಶಾಲಾ ದಾಖಲಾತಿ, ಭೂ ಹಿಡುವಳಿಯ ಗಾತ್ರ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧಿತ್ವ ನಿವೇಶನ ಮತ್ತು ವಸತಿರಹಿತ ಕುಟುಂಬಗಳು ಅವರ ಅಭಿವೃದ್ಧಿಯ ಆಯಾಮಗಳನ್ನು ಕುರಿತು ಚರ್ಚಿಸುತ್ತದೆ. ಪರಿಶಿಷ್ಟ ಪಂಗಡಗಳು ಭಾರತೀಯ ಸಮಾಜದಲ್ಲಿನ ಹಿಂದುಳಿದ ಗುಂಪುಗಳೆAದು ಪರಿಗಣಿಸಲಾಗಿದೆ.ಪರಿಶಿಷ್ಟ ಪಂಗಡಗಳೆAದರೆ ಗುಡ್ಡಗಾಡುಗಳಲ್ಲಿ ಮತ್ತುಅರಣ್ಯ ಪ್ರದೇಶಗಳಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಹೆಚ್ಚು ಕಡಿಮೆಆಧುನಿಕ ಸೌಲಭ್ಯಗಳಿಂದ ದೂರವೇ ಉಳಿದಿರುವ ಜಾತಿಯಾಗಿದೆ.ಪರಿಶಿಷ್ಟ ಪಂಗಡಗಳು ಒಟ್ಟಾರೆ ಜನಸಂಖ್ಯೆ ಸೂಚ್ಯಾಂಕ ಶೇಕ ೭.೫ ರಷ್ಟಿದೆ.

ತಾಲ್ಲೂಕುಗಳಲ್ಲಿನ ಪರಿಶಿಷ್ಟ ಪಂಗಡದ ಜನಸಂಖ್ಯೆ (೨೦೧೧): ಜಿಲ್ಲೆಯ ಪರಿಶಿಷ್ಟ ಪಂಗಡದ ಜನಸಂಖ್ಯೆಯು ೨೦೧೧ ರಲ್ಲಿ ಒಟ್ಟು ಜನಸಂಖ್ಯೆ ೧೮.೨೩ ರಷ್ಟಿದೆ. ತಾಲ್ಲೂಕುವಾರು ಪರಿಶಿಷ್ಟ ಪಂಗಡ ಹಂಚಿಕೆಗೆ ಸಂಬAಧಿಸಿದAತೆ, ಮೊಳಕಾಲ್ಮೂರು ತಾಲ್ಲೂಕು ೩೭.೪೫ ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆಯನ್ನಬಹುದು. ನಂತರ ಚಳ್ಳಕೆರೆ ಮತ್ತು ಚಿತ್ರದುರ್ಗತಾಲ್ಲೂಕು ಕ್ರಮವಾಗಿ ೨೯.೪೩ ಮತ್ತು ೧೬.೪೩ ಜನಸಂಖ್ಯೆಯನ್ನು ಹೊಂದಿವೆ. ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳು ಕ್ರಮವಾಗಿ ಶೇ.೯.೮ ಮತ್ತು ಶೇ.೮.೦೬ ರಷ್ಟು ಜನಸಂಖ್ಯೆಯು ಏಕರೂಪವಾಗಿಲ್ಲ ಎಂಬ ಅಂಶವು ಗೋಚರವಾಗುತ್ತದೆ. ಇತರ ಸಮುದಾಯಗಳ ಜನಸಂಖ್ಯೆಯು (ಜಿಲ್ಲೆಯಲ್ಲಿನ ಓಬಿಸಿ-ಎ, ಓಬಿಸಿ-ಬಿ ಮತ್ತು ಸಾಮಾನ್ಯ ವರ್ಗದಜನಸಂಖ್ಯೆ) ೨೦೧೧ರ ಜನಗಣತಿಯಲ್ಲಿ ಶೇಕಡ ೫೮.೩೨ ರಷ್ಟು ಕಂಡುಬAದಿದೆ. ಅದರ ಪೈಕಿ ತಾಲ್ಲೂಕುಗಳ ಭಾಗವು ಹೀಗಿದೆ: ಹೊಸದುರ್ಗ ತಾಲ್ಲೂಕು, ಶೇ. ೭೧.೪೧ ರಷ್ಟು ಹಿರಿಯೂರು ತಾಲ್ಲೂಕು ಶೇ.೬೫.೧೪ ರಷ್ಟು, ಹೊಳಲ್ಕೆರೆ ತಾಲ್ಲೂಕು ಶೇ.೬೦.೩೭, ಚಿತ್ರದುರ್ಗ ತಾಲ್ಲೂಕು ಶೇ.೫೯.೬೨, ಚಳ್ಳಕೆರೆ ತಾಲ್ಲೂಕು ಶೇ.೪೭.೯೧ ರಷ್ಟು ಮತ್ತು ಮೊಳಕಾಲ್ಮೂರು ತಾಲ್ಲೂಕು ಶೇ.೪೨.೭೭ ರಷ್ಟಿರುವುದು ಕಂಡು ಬರುತ್ತದೆ.


ಉದ್ದೇಶ: ೩. ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕ ವಿದ್ಯಾರ್ಥಿಗಳ ಶಿಕ್ಷಣದಲ್ಲಿರುವ ನಿರ್ಬಂಧಗಳನ್ನು ಅಧ್ಯಯನ ಮಾಡುವುದು.


ಕೋಷ್ಠಕ ೨: ಬೇಡ ನಾಯಕ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿರುವ ಅಂಶಗಳ ವಿವರ:

ಕ್ರ.ಸಂ. ಅಭ್ಯಾಸಕ್ಕಿರುವ ತೊಂದರೆಗಳು ಆವೃತ್ತಿ ಶೇಕಡವಾರು


೦೧ ಯಾವುದೇ ತೊಂದರೆಯಿಲ್ಲ ೮೬ ೧೪.೩೩

೦೨ ಬಡತನ ೪೪೦ ೭೩.೩೩

೦೩ ಆರ್ಥಿಕ ಸಮಸ್ಯೆ ೩೪ ೫.೬೮

೦೪ ಆರೋಗ್ಯ ಸಮಸ್ಯೆ ೦೪ ೦.೬೬

೦೫ ಇತರೇ ೩೬ ೬.೦

ಒಟ್ಟು ೬೦೦ ೧೦೦


ಈ ಮೇಲಿನ ಕೋಷ್ಠಕ-೫.೧೨ ರಲ್ಲಿ ಕಂಡು ಬಂದಿರುವAತೆ ಬೇಡ ನಾಯಕ ಸಮುದಾಯದ ಮಕ್ಕಳವಿದ್ಯಾಭ್ಯಾಸಕ್ಕೆಅಡ್ಡಿಯಾಗಿರುವ ಅಂಶಗಳಲ್ಲಿ ೧೪.೩೩% ರಷ್ಟು ಯಾವುದೇ ತೊಂದರೆ ಇಲ್ಲವೆಂಬುದು ಕಂಡುಬAದಿದ್ದು, ೩.೩೩% ರಷ್ಟು ಬಡತನ, ೫.೬೮% ರಷ್ಟು ಆರ್ಥಿಕ ಸಮಸ್ಯೆ, ೦.೬೬% ರಷ್ಟು ಆರೋಗ್ಯ ಸಮಸ್ಯೆ ಹಾಗೂ ೬.೦% ರಷ್ಟು ಇತರೇ ಸಮಸ್ಯೆಗಳು ತಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿವೆ ಎಂದು ವಿದ್ಯಾರ್ಥಿಗಳಿಂದ ತಿಳಿದುಬಂದ ಸಮಸ್ಯೆಗಳಾಗಿವೆ.


ಉದೇಶ: ೪. ಚಿತ್ರದುರ್ಗ ಜಿಲ್ಲೆಯ ಬೇಡ ನಾಯಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿಂದುಳಿಯುವಿಕೆಗೆ ಕಾರಣಗಳನ್ನು ಕಂಡುಹಿಡಿಯುವುದು.


ಕೋಷ್ಠಕ ೩: ಬೇಡ ನಾಯಕ ಸಮುದಾಯದ ವಿದ್ಯಾರ್ಥಿಗಳ ಮನೆಯಲ್ಲಿನ ಸದಸ್ಯರು ವಿದ್ಯಾಭ್ಯಾಸದ ಮಧ್ಯದಲ್ಲಿ ಶಾಲೆ ಬಿಟ್ಟಿರುವ ಕಾರಣಗಳ ವಿವರ:


ಕ್ರ.ಸಂ. ಶಾಲೆ ಬಿಟ್ಟಿರುವುದರ ಕಾರಣ ಆವೃತ್ತಿ ಶೇಕಡವಾರು

೦೧ ವಿವಾಹ ನಿಮಿತ್ತ ೨೩ ೩.೮೩

೦೨ ಅನಾರೋಗ್ಯದಿಂದ ೦೯ ೧.೫

೦೩ ವಾಹನ ಸೌಲಭ್ಯ ಇಲ್ಲದೇ ಇರುವುದು ೧೮ ೩.೦

೦೪ ಜೀವನ ನಿರ್ವಹಣೆಗಾಗಿ ೩೨ ೫.೩೩

೦೫ ಮಕ್ಕಳನ್ನು ನೋಡಿಕೊಳ್ಳಲು ೦೫ ೦.೮೩

೦೬ ಮನೆಯ ಕೆಲಸಕ್ಕಾಗಿ ೪೮ ೮.೦

೦೭ ಇತರೇ ಕಾರಣಗಳು ೦೭ ೧.೧೭

೦೮ ಯಾರೂ ಶಾಲೆ ಬಿಟ್ಟುರುವುದಿಲ್ಲ ೪೫೮ ೭೬.೩೩

ಒಟ್ಟು ೬೦೦ ೧೦೦


ಈ ಮೇಲಿನ ಕೋಷ್ಠಕ ೩ರಲ್ಲಿ ಕಂಡು ಬಂದಿರುವAತೆ ಬೇಡ ನಾಯಕ ಸಮುದಾಯದ ಮಕ್ಕಳ ಮನೆಯಲ್ಲಿನ ಸದಸ್ಯರು ವಿದ್ಯಾಭ್ಯಾಸದ ಅವಧಿಯಲ್ಲಿಯೇ ಮಧ್ಯದಲ್ಲಿ ಶಾಲೆ ಬಿಡಲು ಪ್ರಮಖವಾದ ಕಾರಣಗಳಲ್ಲಿ ವಿವಾಹ ನಿಮಿತ್ತವಾಗಿ ೩.೮೩% ರಷ್ಟು, ಅನಾರೋಗ್ಯದಿಂದ ೧.೫% ರಷ್ಟು, ವಾಹನ ಸೌಲಭ್ಯ ಇಲ್ಲದೇ ಇರುವುದು ೩& ರಷ್ಟು, ಜೀವನ ನಿರ್ವಹಣೆಗಾಗಿ ೫.೩೩% ರಷ್ಟು, ಮಕ್ಕಳನ್ನು ನೋಡಿಕೊಳ್ಳಲು ೦.೮೩% ರಷ್ಟು, ಮನೆಯ ಕೆಲಸಕ್ಕಾಗಿ ೮% ರಷ್ಟು, ಇತರೇ ಕಾರಣದಿಂದಾಗಿ ೧.೧೭% ಶಾಲೆಯನ್ನು ತಮ್ಮ ವಿದ್ಯಾಭ್ಯಾಸದ ಮಧ್ಯದಲ್ಲಿಯೇ ಬಿಟ್ಟಿರುತ್ತಾರೆ, ಹಾಗೂ ೭೬.೩೩% ರಷ್ಟು ಶಾಲೆಯನ್ನು ಬಿಡದೇ ಇರುವುದು ತಿಳಿದುಬಂದಿದೆ.


ಉಪ ಸಂಹಾರ:


ಬೇಡನಾಯಕ ಸಮುದಾಯದ ಸಾಕ್ಷರತಾ ಪ್ರಮಾಣವು ಒಟ್ಟಾರೆ ಇತರೆ ಸಮುದಾಯದ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆ ಕಂಡುಬರುತ್ತದೆ. ಅದರಲ್ಲಿಯೂ ಮಹಿಳೆಯರ ಸಾಕ್ಷರತಾ ಪ್ರಮಾಣ ಪುರುಷರಿಗಿಂತ ಕಡಿಮೆ ಇದೆ. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ಬಡತನ, ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆಗಳು ದೊಡ್ಡ ಅಡ್ಡಿಯಾಗಿರುವುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಇನ್ನು ವಿದ್ಯಾರ್ಥಿಗಳು ಬಾಲ್ಯವಿವಾಹ, ಅನಾರೋಗ್ಯ, ವಾಹನ ಸೌಲಭ್ಯದ ಕೊರತೆ, ಜೀವನ ನಿರ್ವಹಣೆ, ಮತ್ತು ಮನೆಗೆಲಸಕ್ಕೆ ನೆರವು ಪಡೆಯುವುವಂಥಹ ಕಾರಣಗಳಿಗೆ ಶಾಲೆಯನ್ನು ಅರ್ಧಕ್ಕೆ ಬಿಟ್ಟಿರುವುದು ಕಂಡುಬರುತ್ತದೆ. ಒಟ್ಟಾರೆ ಈ ಅಧ್ಯಯನಕ್ಕೆ ಒಳಪಟ್ಟ ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿನ ಬೇಡ ಸಮುದಾಯದ ಬಾಲಕರು ಮತ್ತು ಬಾಲಕಿಯರು ಇತರೆ ಸಮುದಾಯದ ಮಕ್ಕಳಿಗಿಂತ ಸಾಕ್ಷರತಾ ಪ್ರಮಾಣ, ಶೈಕ್ಷಣಿಕ ಮಟ್ಟದಲ್ಲಿ ಹಿಂದುಳಿದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಸಮುದಾಯದ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಅಧ್ಯಯನದಲ್ಲಿ ಗುರುತಿಸಲಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದರತ್ತ ಗಮನಹರಿಸಬೇಕಿದೆ.
* * * * * *

ಪರಾಮರ್ಶನಗಳು:
ಅನಂತರಾಮು ಬಿ. ಸಿ. (೨೦೧೧) ಕರ್ನಾಟಕ ರಾಜ್ಯದ ಅನುದಾನಿತ ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ಪ್ರಭಾವ ಬೀರುವ ಅಂಶಗಳ ಅಧ್ಯಯನ, ಪಿ.ಹೆಚ್.ಡಿ ಮಹಾ ಪ್ರಬಂಧ ಸಮಾಜಶಾಸ್ತç ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ.

ಅಶೋಕ ಜಿ.ಎನ್. (೨೦೧೧) ಸಂಶೋಧನಾ ವಿಧಾನ, ಮಿಂಚು ಪ್ರಕಾಶನ, ಗದಗ ಕರ್ನಾಟಕ,

ಭಾಗ್ಯಮ್ಮ ಎನ್ (೨೦೧೪) ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಬಿಸಿಯೂಟ ಯೋಜನೆಯ ಪ್ರಭಾವ ಒಂದು ಸಮಾಜಶಾಸ್ತಿçÃಯ ಅಧ್ಯಯನ ಮಹಾಪ್ರಬಂದ ಕುವೆಂಪು ವಿಶ್ವವಿದ್ಯಾನಿಲಯ (೨೦೧೪).

ಚ. ನ. ಶಂಕರ್ ರಾವ್. (೧೯೯೪) ಭಾರತೀಯ ಸಮಾಜ, ಜೈ ಭಾರತ್ ಪ್ರಕಾಶನ, ಮಂಗಳೂರು, ಕರ್ನಾಟಕ.

ಚಂದ್ರಚಾರ್ (೨೦೦೩) ಶೈಕ್ಷಣಿಕ ಚಿಂತನೆಗಳು, ಅಶ್ವಿನಿ ಪ್ರಕಾಶನ, ಹಾವೇರಿ, ಕರ್ನಾಟಕ.

ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು (೨೦೦೧) ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.

ಕರ್ನಾಟಕ ಸರ್ಕಾರ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಕಿರು ಪರಿಚಯದ ಸಂಚಿಕೆ ೨೦೧೦.

ಕರ್ನಾಟಕ ಸರ್ಕಾರ: ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಜಿಲ್ಲಾ ಅಂಕಿ ಅಂಶಗಳ ನೋಟ, ಜಿಲ್ಲಾ ಅಂಕಿ-ಅAಶಗಳ ಇಲಾಖೆ ಚಿತ್ರದುರ್ಗ, ಬೆಂಗಳೂರು, ೨೦೧೦-೧೧.

ಪದ್ಮಪ್ರಸಾದ್ ಎಸ್.ಪಿ. (೨೦೦೫) ಶೈಕ್ಷಣಿಕ ಸಂಶೋಧನೆ, ಸುಮಖ ಪ್ರಕಾಶನ ಬೆಳಗಳೂರು, ಕರ್ನಾಟಕ.

ಲಕ್ಷಿö್ಮÃ (೨೦೧೧) ಶೈಕ್ಷಣಿಕ ಸಂಶೋಧನೆ, ವಿದ್ಯಾನಿಧಿ ಪ್ರಕಾಶನ, ಗದಗ ಕರ್ನಾಟಕ.


Comments


bottom of page