top of page

ಗಾಣಿಗ ಸಮುದಾಯದ ಮಹಿಳೆಯರ ಸ್ಥಿತಿಗತಿ: ವಿಜಯನಗರ ಜಿಲ್ಲೆಯ ಅಧ್ಯಯನ


ಮೇಘನ

ಸಂಶೋಧನಾ ವಿದ್ಯಾರ್ಥಿನಿ

ಸಮಾಜಶಾಸ್ತç ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ


ಸಾರಾoಶ

ವೃತ್ತಿ ಮೂಲ ಸಮುದಾಯವಾದ ಗಾಣಿಗ ಸಮುದಾಯವು ಜಾತಿಯಿಂದ ಗುರುತಿಸಿಕೊಂಡ ಸಮುದಾಯವಲ್ಲ, ಬದಲಿಗೆ ವೃತ್ತಿಯಿಂದ ಗುರುತಿಸಿಕೊಂಡ ಸಮುದಾಯವಾಗಿದೆ. ಸಮುದಾಯವು ತನ್ನದೇ ಆದಂತಹ ವೃತ್ತಿ ಜೀವನ ಕಟ್ಟಿಕೊಂಡು ಅವುಗಳೊಂದಿಗೆ ಹೆಜ್ಜೆ ಹಾಕುತ್ತಾ ಇಂದಿಗೂ ತನ್ನ ಅನನ್ಯತೆಯನ್ನು ಉಳಿಸಿಕೊಂಡು ಬಂದಿದೆ. ಅದರಲ್ಲೂ ಈ ಸಮುದಾಯಕ್ಕೆ ಸಮುದಾಯದ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು ಅವರು ತಮ್ಮ ವೃತ್ತಿಯಲ್ಲಿ ಸಾಕಷ್ಟು ಶ್ರಮಿಸಿರುವುದನ್ನು ಕಾಣಬಹುದು. ಇಂತಹ ವೃತ್ತಿ ತಮ್ಮಿಂದ ದೂರವಾಗಿ ಆಧುನಿಕತೆಯಲ್ಲಿ ಮಿಂದೆದ್ದು ಗಾಣಗಳನ್ನು ಪೂಜೆಗೆ ಸೀಮಿತಗೊಳಿಸಿಕೊಂಡಾಗ ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ವಾತಾವರಣ ಮತ್ತು ಪರ್ಯಾಯ ವೃತ್ತಿ ಅನುಸರಿಸುವಲ್ಲಿ ಮಹಿಳೆ ಪಾತ್ರ ಹೇಗಿತ್ತು ಎಂಬುದನ್ನು ಕಂಡುಕೊಳ್ಳಬೇಕಿದೆ. ಮಹಿಳೆಯರು ತಮ್ಮ ನಿತ್ಯದ ಜೀವನದಲ್ಲಿ ಈ ಹಿಂದೆ ರೂಢಿಸಿಕೊಂಡಿದ್ದ ತಮ್ಮ ಬದುಕಿನ ದಿನಚರಿಗಳು ಕಾಲ ಕಳೆದಂತೆ ಹೇಗೆ ಬದಲಾದವು ಅಥವಾ ಅವರ ಜೀವನದ ಹಿಂದಿನ ಸ್ಥಿತಿ ಹೇಗಿತ್ತು ಮತ್ತು ಈಗ ಹೇಗಿದೆ ಎಂಬುದನ್ನು ಆಧುನಿಕತೆಯೊಂದಿಗೆ ಮುಖಾಮುಖಿಯಾಗಿಸುವ ಉದ್ದೇಶವನ್ನು ಈ ಅಧ್ಯಯನವು ಹೊಂದಿದೆ.


ಮುಖ್ಯ ಪದಗಳು: ಗಾಣಿಗ ಸಮುದಾಯ, ಸಾಂಪ್ರದಾಯಿಕತೆ, ಆಧುನಿಕತೆ, ಮಹಿಳೆಯರು, ವಿಜಯನಗರ, ಕೂಡ್ಲಿಗಿ, ಶೈಕ್ಷಣಿಕ ಸ್ಥಿತಿಗತಿ, ಸಾಮಾಜಿಕ ಸ್ಥಿತಿಗತಿ, ರಾಜಕೀಯ ಸ್ಥಿತಿಗತಿ


ಪೀಠಿಕೆ

ಭಾರತೀಯ ಸಮಾಜವು ಬಹು ಸಂಸ್ಕೃತಿಗಳ ನಾಡು. ತನ್ನದೇ ಇತಿಹಾಸದೊಂದಿಗೆ ಸಮಾಜವು ಮುನ್ನಡೆಯುತ್ತಿದೆ ಅದಕ್ಕೆ ಕಾರಣ ಅನೇಕ ಸಮುದಾಯಗಳು ಭಾರತೀಯ ಸಮಾಜದ ಒಡಲಿನಲ್ಲಿ ಜನನಿತವಾಗಿರುವುದು. ರೂಢಿಗತ ಸಮಾಜದಲ್ಲಿ ಇಂದಿಗೂ ಅನೇಕ ಸಮುದಾಯಗಳು ತನ್ನ ಚಹರೆಯನ್ನು ಉಳಿಸಿಕೊಂಡು, ಮುಂದುವರೆಸಿಕೊAಡು ಹೋಗುತ್ತಿರುವುದನ್ನು ಕಾಣಬಹುದು. ಆದರೆ ಅಂತಹ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆಗಳಲ್ಲಿ ಅನೇಕ ಸಮುದಾಯಗಳು ಇಂದಿಗೂ ಅವುಗಳನ್ನು ಅನುಸರಿಸುತ್ತಿರುವುದನ್ನು ಕಾಣಬಹುದು ಮಾತ್ರವಲ್ಲದೆ ಆಧುನಿಕತೆಗೊಳಪಟ್ಟ ಸಮಾಜವು ಇಂದು ಅಂತಹ ಅನೇಕ ಸಾಂಪ್ರದಾಯಿಕತೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಅನಿವಾರ್ಯವಾಗಿ ಹೊಂದುವAತೆ ಮಾಡಿದೆ. ಅಂತಹ ಉಳಿವು ಮತ್ತು ಅಳಿವುಗಳ ಚಹರೆಗಳಲ್ಲಿ ಗಾಣಿಗ ಸಮುದಾಯವು ಒಂದು. ಇಂತಹ ವೃತ್ತಿ ಮೂಲ ಸಮುದಾಯಗಳ ಹೆಜ್ಜೆ ಗುರುತುಗಳನ್ನು ಗುರುತಿಸಲು ಇಂತಹ ಅಧ್ಯಯನಗಳು ನಡೆಯಬೇಕಿದೆ. ಈ ಸಮುದಾಯದ ಮಹಿಳೆಯರು ಈ ಹಿಂದೆ ಹೇಗಿದ್ದರು ಪ್ರಸ್ತುತ ಹೇಗಿದ್ದಾರೆ ಎಂಬುದನ್ನು ಅರಿಯುವುದರ ಜೊತೆಗೆ ಇಂತಹ ವೃತ್ತಿ ಮೂಲ ಸಮುದಾಯಗಳು ಬದುಕಿದ ಬದುಕಿನ ಕಥೆಯನ್ನು ಎಣೆದು ಇಂತಹದೊAದು ಸಮುದಾಯವಿತ್ತು ಎಂಬುದನ್ನು ಮತ್ತೆ ಮೆಲುಕು ಹಾಕುವ ಅನಿವಾರ್ಯತೆ ನಮ್ಮೆದುರಿಗಿದೆ. ಏಕೆಂದರೆ ಇಡೀ ಸಮಾಜಕ್ಕೆ ಬೇಕಾದ ಅಡುಗೆ ಎಣ್ಣೆಯನ್ನು ಒದಗಿಸುವ ಸಲುವಾಗಿ ಇಡೀ ದಿನ ಗಾಣದ ಎತ್ತುಗಳ ಜೊತೆ ಜೊತೆಗೆ ಹೆಜ್ಜೆ ಹಾಕಿ ಎಣ್ಣೆ ತೆಗೆದು ಅದರ ಪರಿಶುಧ್ದತೆ ಕಾಯ್ದು ಇಡೀ ಸಮಾಜದ ಆರೋಗ್ಯದ ಹಿತ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಶುದ್ಧತೆಗೆ ಆದ್ಯತೆ ನೀಡಿ ತಾವೂ ಬದುಕುವುದರೊಂದಿಗೆ ಜನರಿಗೆ ಅಗತ್ಯವಾಗಿ ಬೇಕಾಗಿದ್ದ ಅಮೂಲ್ಯವಾದ ಎಣ್ಣೆ ಒದಗಿಸುವ ಕಾಯಕ ಮಾಡುವ ಶ್ರೀಮಂತ ವೃತ್ತಿಯಿಂದ ಹೊರನಡೆದಾಗ ಈ ಸಮುದಾಯ ಹೇಗೆ ತಮ್ಮ ಸಮುದಾಯದ ಅಸ್ತಿತ್ವ ಉಳಿಸಿಕೊಂಡಿತು ಎಂಬುದನ್ನು ಆಧುನಿಕತೆಯೊಂದಿಗೆ ಮುಖಾಮುಖಿಯಾಗಿಸುವ ಉದ್ದೇಶವನ್ನು ಈ ಅಧ್ಯಯನವು ಹೊಂದಿದೆ.


ಗಾಣಿಗ ಪದದ ವ್ಯುತ್ಪತ್ತಿ

ಗಾಣಿಗ ಎಂಬ ಪದವು ಗಾಣ+ಇಗ ಎಂಬೆರೆಡು ಜೋಡಿ ಪದಗಳಿಂದ ಕೂಡಿದೆ. ‘ಗಾಣಿಗ’ ಎಂಬ ನಾಮಪದಕ್ಕೆ ‘ಇಗ’ ಪ್ರತ್ಯಯ ಸೇರಿ ‘ಗಾಣಿಗ’ ಎಂದಾಗಿದೆ. ಇದೊಂದು ವೃತ್ತಿಯಲ್ಲಿ ತೊಡಗಿರುವವರನ್ನು ಒಂದೊAದು ಹೆಸರಿನಿಂದ ಕರೆಯುವುದು ವಾಡಿಕೆ. ಗಾಣದಿಂದ ಎಣ್ಣೆ ತೆಗೆಯುವವರನ್ನು ‘ಗಾಣಿಗರಾಗಿರುತ್ತಾನೆ. ಗಾಣಿಗರು ತಾವು ಸೂರ್ಯವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಈ ರೀತಿಯಿಂದ ಗುರುತಿಸಿಕೊಳ್ಳುವ ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗಗಳÀಲ್ಲಿ ಕಂಡು ಬರುತ್ತಾರೆ.


ಅಧ್ಯಯನದ ಉದ್ದೇಶಗಳು

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಭಾಗಗಳಲ್ಲಿ ಕಂಡುಬರುವ ಸಜ್ಜನಗಾಣಿಗ, ಜ್ಯೋತಿಗಾಣಿಗ, ಕರಿಗಾಣಿಗ, ಎಣ್ಣೆಗಾಣಿಗ, ಸಮುದಾಯದ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ವಿಷಯ ಮಂಡನೆ ಮಾಡುವ ಉದ್ದೇಶ ಈ ಪತ್ರಿಕೆಯದ್ದಾಗಿದೆ.


• ಗಾಣಿಗ ಸಮುದಾಯದ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ಗುರುತಿಸಿ ಸಮಕಾಲಿನ ಸಾಮಾಜಿಕ ಸಂದರ್ಭದೊAದಿಗೆ ಮುಖಾಮುಖಿಯಾಗಿಸುವ ಪ್ರಮುಖ ಉದ್ದೇಶವನ್ನು ಇಟ್ಟುಕೊಂಡಿದೆ.

• ಆಧುನಿಕರಣ ಪ್ರಭಾವದಲ್ಲಿಯೂ ಗಾಣಿಗ ಸಮುದಾಯದ ಮಹಿಳೆಯರು ಸಬಲೀಕರಣಗೊಳ್ಳುವಲ್ಲಿ ಅಡ್ಡಿಪಡಿಸುವ ಅಂಶಗಳನ್ನು ಪತ್ತೆಹಚ್ಚುವುದು.


ಅಧ್ಯಯನದ ವಿಧಾನ

ಮಾಹಿತಿ ಪಡೆಯಲು ಸಂದರ್ಶನ, ಹಾಗೂ ಸಹಭಾಗಿತ್ವ ವಿಧಾನ ಮತ್ತು ಪ್ರಶ್ನಾವಳಿಯ ವಿಧಾನಗಳನ್ನು ಅನುಸರಿಸಲಾಗಿದೆ, ಮೂಲಭೂತವಾಗಿ ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕವಾಗಿದ್ದು ಮಾಹಿತಿಯ ಅವಶ್ಯಕತೆಗೆ ಅನುಗುಣವಾಗಿ ಇಲ್ಲಿ ದ್ವೀತಿಯ ಮೂಲಗಳಿಂದ ತೆಗೆದುಕೊಳ್ಳಲಾಗಿದೆ.

ಗಾಣಿಗ ಸಮುದಾಯದ ಮಹಿಳೆಯರ ಸ್ಥಿತಿಗತಿ

ಗಾಣಿಗ ಸಮುದಾಯದ ಮಹಿಳೆಯರು ಮನೆಗೆಲಸ ಮಾತ್ರವಲ್ಲದೆ ಮನೆಗೆ ಆಧಾರವಾಗಿದ್ದ ಗಾಣದ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅಂತಹ ವೃತ್ತಿ ತೊರೆದಾಗ ಈ ಸಮುದಾಯದ ಮಹಿಳೆಯರು ಯಾವ ವೃತ್ತಿ ಅನುಸರಿಸುತ್ತಿದ್ದಾರೆ. ಕುಟುಂಬದಲ್ಲಿ ಇವರ ಪಾತ್ರವೇನು, ಸಮಾಜದಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಂಡಿದ್ದಾರೆ ಹಾಗೂ ಈ ಸಮುದಾಯದ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿ ಹೇಗಿದೆ ಎಂಬುದನ್ನು ನೋಡುವುದರ ಅಗತ್ಯವಿದೆ.


ಸಾಮಾಜಿಕ ಸ್ಥಿತಿಗತಿ

ಮಾನವ ಸಮಾಜಜೀವಿ ಮತ್ತು ಸಂಘ ಜೀವಿ. ಅವನು ಸಮಾಜದಲ್ಲಿ ಬದುಕುವಾಗ ಸಮಾಜದ ರೀತಿ ನೀತಿಗಳೊಂದಿಗೆ ಬದುಕುತ್ತಾನೆ. ತನ್ನ ಕುಟುಂಬದಲ್ಲಿಯೂ ಸಮಾಜದ ರೀತಿ ನೀತಿಗಳಿರುವಂತೆ ಅವುಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಪರಿಪಾಠವಿದೆ.


ಕೋಷ್ಠಕ: ೧.೧. ಗಾಣಿಗರ ಕೌಟುಂಬಿಕ ಪದ್ದತಿ

ಕ್ರ.ಸಂ ಒಳಪAಗಡಗಳು ಕುಟುAಬಗಳು ಪಿತೃಪ್ರಧಾನ ಮಾತೃಪ್ರಧಾನ ಶೇಕಡ

೦೧ ಸಜ್ಜನಗಾಣಿಗ ೩೦ ೨೫ ೦೫ ೬೩.೮೩

೦೨ ಜ್ಯೋತಿಗಾಣಿಗ ೧೧ ೦೯ ೦೨ ೨೩.೪೧

೦೩ ಕರೆಗಾಣಿಗ ೦೨ ೦೨ - ೪.೨೫

೦೪ ಎಣ್ಣೆಗಾಣಿಗ ೦೪ ೦೪ - ೮.೫೧

೦೫ ಒಟ್ಟು ೪೭ ೪೦ ೦೭

ಒಟ್ಟು ಶೇಕಡ ೮೫.೧೦ ೧೪.೯೦ ೧೦೦%


ಗಾಣಿಗರ ಕೌಟುಂಬಿಕ ಹಂಚಿಕೆ

ಗಾಣಿಗರಲ್ಲಿ ಪಿತೃಪ್ರಧಾನ (ಒಡೆಯ) ಕುಟುಂಬ ಪದ್ಧತಿಯೇ ಹೆಚ್ಚಾಗಿ ರೂಢಿಯಲ್ಲಿದ್ದು, ಒಳಪಂಗಡಗಳಲ್ಲಿಯೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯೇ ಕಂಡುಬರುತ್ತದೆ. ಮೇಲಿನ ಕೊಷ್ಠಕವನ್ನು ಗಮನಿಸಿದಾಗ, ಸಜ್ಜಣಗಾಣಿಗರಲ್ಲಿ ೨೫ ಕುಟುಂಬದ ಸದಸ್ಯರು ಪಿತೃಪ್ರಧಾನ ವ್ಯವಸ್ಥೆ ಇದೆ ಎಂದರೆ, ೦೫ ಕುಟುಂಬಗಳು ಮಾತ್ರ ಮಾತೃಪ್ರಧಾನ (ಒಡತಿ) ವ್ಯವಸ್ಥೆಯನ್ನು ರೂಢಿಸಿಕೊಂಡಿವೆ. ಮಾತೃಪ್ರಧಾನ ಕುಟುಂಬಗಳು ಆಗುವುದಕ್ಕಿಂತ ಮುಂಚೆ ಪುರುಷರೇ ಒಡೆತನವನ್ನು ನಿಭಾಯಿಸುತ್ತಿದ್ದರು. ಒಡೆತನವನ್ನು ನಿಭಾಯಿಸುವ ವ್ಯಕ್ತಿ ತೀರಿ ಹೋದ ನಂತರ ಅನಿವರ‍್ಯವಾಗಿ ಕುಟುಂಬದ ಜವಬ್ದಾರಿಯನ್ನು ಮಹಿಳೆ ಹೋರಬೇಕಾಯಿತು. “ಮಾತೃ ಪ್ರಧಾನ ಕುಟುಂಬದಲ್ಲಿ ತಾಯಿಯು ಕುಟುಂಬದ ಒಡತಿ. ಕುಟುಂಬದ ಎಲ್ಲ ವಿಷಯ ವ್ಯವಹಾರಗಳಲ್ಲಿಯೂ ಸ್ತಿçÃಗೆ ಪ್ರಾಮುಖ್ಯ ದೊರೆಯುತ್ತದೆ (ಕವಿತಾ ರೈ:೨೦೦೭:೨೮). ಅಲ್ಲದೇ “ಮಗುವಿನ ಜನನ, ಪಾಲನೆ ಪೋಷಣೆಯಲ್ಲಿ ತಾಯಿಯೇ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದ ಕಾರಣ ಅವುಗಳನ್ನು ಮಾತೃಪ್ರಧಾನ ಕುಟುಂಬ ಪದ್ಧತಿ ಎಂದು ಸ್ಪೆನ್ಸರ್, ಟೈಲರ್, ಮಾರ್ಗನ್, ಭ್ರೀಪಾಲ್ಟ್ ಮುಂತಾದ ಸಮಾಜವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ” (ಹೀರೆಮಠ ಎಸ್ ಜೆ:೧೯೯೫-೯೬:೩೧-೩೨) ಜ್ಯೋತಿಗಾಣಿಗರಲ್ಲಿ ೦೯ ಕುಟುಂಬಗಳು ಪಿತೃಪ್ರಧಾನ ಕುಟುಂಬವನ್ನು ಅವಲಂಬಿಸಿವೆ, ಇನ್ನೂ ೦೨ ಕುಟುಂಬಗಳು ಮಾತೃಪ್ರಧಾನ ವ್ಯವಸ್ಥೆಯನ್ನು ಹೊಂದಿವೆ. ಅದೇ ರೀತಿಯಾಗಿ ಕರೆಗಾಣಿಗ ಹಾಗೂ ಎಣ್ಣೆಗಾಣಿಗರಲ್ಲಿಯೂ ಇರುವ ಕುಟುಂಬಗಳೆಲ್ಲವು ಪಿತೃಪ್ರಧಾನ ಕುಟುಂಬವನ್ನು ಹೊಂದಿವೆ. ಗಾಣಿಗರಲ್ಲಿ ಮಾತೃಪ್ರಧಾನ ವ್ಯವಸ್ಥೆ ಕಡಿಮೆ. ಮನೆಯ ಒಡೆತನವನ್ನು ಪುರುಷನೇ ನಿರ್ವಹಿಸುತ್ತಾನೆ. ಇವರಲ್ಲಿ ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬ ವ್ಯವಸ್ಥೆ ಇದೆ. ಗಾಣಿಗರಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು.


ಶೈಕ್ಷಣಿಕ ಸ್ಥಿತಿಗತಿ

ಕೋಷ್ಟಕ: ೧.೨. ಸಮೀಕ್ಷೆಗೊಳಪಡಿಸಿದ ಕೂಡ್ಲಿಗಿ ತಾಲೂಕಿನ ಗಾಣಿಗ ಸಮುದಾಯದ ಲಿಂಗವಾರು


ಶೈಕ್ಷಣಿಕ ಮಟ್ಟ

ಕ್ರ.ಸಂ ಶೈಕ್ಷಣಿಕ ಹಂತ ಗAಡು ಹೆಣ್ಣು ಒಟ್ಟು ಒಟ್ಟು ಪ್ರತಿಶತ %

೧ ಮಾಧ್ಯಮಿಕ ೩೫ ೨೮ ೬೩ ೩೮.೬೬

೩ ಪ್ರೌಢಶಾಲೆ ೨೫ ೨೨ ೪೭ ೨೮.೮೪

೪ ಪದವಿಪೂರ್ವ ೧೨ ೦೭ ೧೯ ೧೧.೬೫

೫ ಪದವಿ ೦೮ ೦೭ ೧೫ ೯.೨೦

೬ ಸ್ನಾತಕೋತ್ತರ ೦೫ ೦೩ ೦೮ ೪.೯೦

೭ ಐಟಿಐ ೦೮ ೦೩ ೧೧ ೬.೭೫

ಒಟ್ಟು ೯೩ ೭೦ ೧೬೩

ಒಟ್ಟು ಶೇಕಡ ೫೭.೦೫ ೪೨.೯೫ ೧೦೦



ಕೂಡ್ಲಿಗಿ ತಾಲೂಕಿನ ಗಾಣಿಗ ಸಮುದಾಯದ ಲಿಂಗವಾರು ಶೈಕ್ಷಣಿಕ ಹಂಚಿಕೆ



೬ರಿAದ ೮ನೇ ತರಗತಿವರೆಗೆ ಮಾಧ್ಯಮಿಕವೆಂದೂ, ೯ರಿಂದ ೧೦ನೇ (ಪಿಯುಸಿ) ಪ್ರೌಢ ಹಾಗೂ ಪಿಯುಸಿ ಶಿಕ್ಷಣವೆಂದು ಪರಿಗಣಿಸಲಾಗಿದೆ. ಅದರಾಚೆಗೆ ಪದವಿ, ಸ್ನಾತಕೋತ್ತರಗಳೆಂದು ಪರಿಗಣಿಸಲಾಗಿದ್ದು ಐಟಿಐ ತಾಂತ್ರಿಕ ಶಿಕ್ಷಣವೆಂದು ಪರಿಗಣಿಸಲಾಗಿದೆ. ಕೂಡ್ಲಿಗಿ ತಾಲೂಕಿನ ಏಳು ಗ್ರಾಮಗಳಲ್ಲಿ ಸಮೀಕ್ಷೆ ಮಾಡಲಾದ ಗಾಣಿಗ ಸಮುದಾಯದ ಮಕ್ಕಳಲ್ಲಿ ಮಾಧ್ಯಮಿಕ ತರಗತಿಗಳಲ್ಲಿ ಒಟ್ಟು ೬೩ ಮಕ್ಕಳಿವೆ. ಇದರಲ್ಲಿ ಗಂಡು ೩೫ ಹಾಗೂ ಹೆಣ್ಣು ೨೮ ಇವೆ. ಪ್ರೌಢಶಾಲೆಯಲ್ಲಿ ೮ರಿಂದ ೧೦ನೇ ತರಗತಿಯವರೆಗೆ ಓದುವ ಮಕ್ಕಳು ೪೭ ಇವೆ. ಇದರಲ್ಲಿ ಗಂಡು ೨೫ ಹಾಗೂ ಹೆಣ್ಣು ೨೨ ಇವೆ. ಪದವಿಪೂರ್ವದಲ್ಲಿ ಒಟ್ಟು ಮಕ್ಕಳು ೧೯ ಇವೆ, ೧೨ ಗಂಡುಮಕ್ಕಳು ಹಾಗೂ ೦೭ ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿರುವರು. ಬಿಎ, ಬಿಕಾಂ, ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ೧೫ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ೮ ಪುರುಷರು ಹಾಗೂ ೭ ಮಹಿಳೆಯರು ವ್ಯಾಸಂಗ ಮಾಡುವರು. ಸ್ನಾತಕೋತ್ತರ ತರಗತಿಗಳಲ್ಲಿ ಕೇವಲ ೮ ವಿದ್ಯಾರ್ಥಿಗಳು ಮಾತ್ರ ಓದುತ್ತಿರುವರು. ೫ ಜನ ಪುರುಷರು ಓದುತ್ತಿದ್ದರೆ. ಕೇವಲ ೩ ವಿದ್ಯಾರ್ಥಿನಿಯರು ಮಾತ್ರ ಇರುವರು. ಐಟಿಐ ತಾಂತ್ರಿಕ ಶಿಕ್ಷಣ ಪಡೆಯುವ ಪುರುಷರು ೮ ಇದ್ದರೆ, ಮಹಿಳೆಯರ ಸಂಖ್ಯೆ ೩ ಮಾತ್ರ. ಒಟ್ಟಾರೆಯಾಗಿ ಸಮೀಕ್ಷೆ ಮಾಡಿದ ಕುಟುಂಬಗಳಲ್ಲಿ ೧೬೩ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ನಿರತವಾಗಿರುವರು. ಇದರಲ್ಲಿ ಪುರುಷರು ೯೩ ಹಾಗೂ ಮಹಿಳೆಯರು ೭೩ ಜನರಿದ್ದಾರೆ. ಒಟ್ಟಾರೆಯಾಗಿ ನೋಡಿದರೆ, ಶೇಕಡ ಪ್ರಮಾಣ ೫೭.೦೫ರಷ್ಟು ಪುರುಷರು ಹಾಗೂ ೪೨.೯೫ರಷ್ಟು ಮಹಿಳೆಯರು ವ್ಯಾಸಂಗ ಮಾಡುತ್ತಿದ್ದಾರೆ.


ಇಲ್ಲಿ ಗಮನಿಸಬೇಕಾದ ಅಂಶವೆAದರೆ, ಪ್ರಾಥಮಿಕ ಹಂತದಲ್ಲಿ ೦-೫ ವರ್ಷದ ಗಂಡು ೨೫ ಹೆಣ್ಣು ೧೮ ಒಟ್ಟು ೪೩ ಮಕ್ಕಳು ಕಲಿಯುತ್ತಿದ್ದರೂ ಸಾಕ್ಷರತೆಗೆ ಅರ್ಹರಲ್ಲ. (ಭಾರತ ಸರಕಾರದ ಅಭಿಪ್ರಾಯ) ಅದೇ ರೀತಿಯಾಗಿ ಇನ್ನುಳಿದ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಿದ ಹಾಗೂ ಓದಲು ಬರೆಯಲಿಕ್ಕೆ ಬರುವವರು ಸಾಕ್ಷರತೆಗೆ ಅರ್ಹರಾದವರು ಒಟ್ಟು ೨೪ ಇದ್ದು ಅದನ್ನು ಕೊಷ್ಟಕದಲ್ಲಿ ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ.


ಆರ್ಥಿಕ ಸ್ಥಿತಿಗತಿ

ಕೋಷ್ಟಕ: ೧.೩. ಸಮೀಕ್ಷೆಗೊಳಪಡಿಸಿದ ಕೂಡ್ಲಿಗಿ ತಾಲೂಕಿನ ಗಾಣಿಗ ಸಮುದಾಯದ ಲಿಂಗವಾರು ಕಸುಬುಗಳು


ಕ್ರ.ಸಂ ಕಸುಬುಗಳು ಗAಡು ಹೆಣ್ಣು ಒಟ್ಟು ಒಟ್ಟು ಪ್ರತಿಶತ %

೧ ಕೃಷಿ ೨೨ ೨೦ ೪೨ ೫೧.೮೫

೨ ಕೃಷಿಕೂಲಿ ೦೪ ೦೩ ೦೭ ೮.೬೫

೩ ಸರ್ಕಾರಿ ೦೬ ೦೨ ೦೮ ೯.೮೮

೪ ಖಾಸಗಿ ೧೦ ೦೩ ೧೩ ೧೬.೦೪

೫ ಇತರೆ ೦೮ ೦೩ ೧೧ ೧೩.೫೮

ಒಟ್ಟು ೫೦ ೩೧ ೮೧

ಒಟ್ಟು ಶೇಕಡ ೬೧.೭೩ ೩೮.೨೭ ೧೦೦


ಕೋಷ್ಟಕ ೧.೩ರಲ್ಲಿ ತಿಳಿಸಿದಂತೆ. ಕೂಡ್ಲಿಗಿ ತಾಲೂಕಿನ ಗಾಣಿಗ ಸಮುದಾಯವನ್ನು ಅಧ್ಯಯನಕ್ಕೆ ಸೀಮಿತ ಮಾಡಿಕೊಂಡು, ತಾಲೂಕಿನ ಏಳು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದೆ. ಪ್ರತಿಯೊಂದು ಗ್ರಾಮದಲ್ಲಿ ಕುಟುಂಬಗಳನ್ನು ಪ್ರಶ್ನಾವಳಿ ಮೂಲಕ ಸಂದರ್ಶನÀ ಮಾಡಿ, ಏಳು ಹಳ್ಳಿಗಳಿಂದ ಒಟ್ಟು ೪೭ ಕುಟುಂಬಗಳಿAದ ಮಾಹಿತಿಯನ್ನು ಸಂಗ್ರಹಿಸಿಲಾಗಿದೆ. ಅದರಲ್ಲಿ ಈ ಸಮುದಾಯವು ತಮ್ಮ ಕುಟುಂಬದ ಮೂಲ ವೃತ್ತಿ ಕೃಷಿಯನ್ನಾಗಿಸಿಕೊಂಡವರ ಪುರುಷರ ಪ್ರಮಾಣ ಶೇ. ೪೪ರಷ್ಟು, ಮಹಿಳೆಯರ ಪ್ರಮಾಣ ಶೇ. ೬೪.೫೧ರಷ್ಟು, ಒಟ್ಟು ಗಂಡು ಮತ್ತು ಹೆಣ್ಣು ಇಬ್ಬರ ಪ್ರಮಾಣ ಶೇ. ೫೧.೮೫ರಷ್ಟು ಇರುವುದು ಕಂಡುಬAದಿದೆ. ಕೃಷಿಕೂಲಿಯನ್ನು ತಮ್ಮ ಕುಟುಂಬದ ಮೂಲ ವೃತ್ತಿಯನ್ನಾಗಿಸಿಕೊಂಡವರ ಪುರುಷರ ಪ್ರಮಾಣ ಶೇ. ೮ರಷ್ಟು, ಮಹಿಳೆಯರ ಪ್ರಮಾಣ ಶೇ. ೯.೬೭ರಷ್ಟು, ಒಟ್ಟು ಗಂಡು ಮತ್ತು ಹೆಣ್ಣು ಇಬ್ಬರ ಪ್ರಮಾಣ ಶೇ. ೮.೬೫ರಷ್ಟು ಇರುವುದು ಕಂಡುಬAದಿದೆ. ಸರ್ಕಾರಿ ವೃತ್ತಿಯಲ್ಲಿ ಇರುವ ಪುರುಷರ ಪ್ರಮಾಣ ಶೇ. ೧೨ರಷ್ಟು, ಮಹಿಳೆಯರ ಪ್ರಮಾಣ ಶೇ. ೬.೪೫ರಷ್ಟು, ಒಟ್ಟು ಗಂಡು ಮತ್ತು ಹೆಣ್ಣು ಇಬ್ಬರ ಪ್ರಮಾಣ ಶೇ. ೯.೮೮ರಷ್ಟು ಇರುವುದನ್ನು ನೋಡಬಹುದು. ಖಾಸಗಿ ವೃತ್ತಿಯನ್ನು ಮಾಡುತ್ತಿರುವ ಪುರುಷರ ಪ್ರಮಾಣ ಶೇ. ೨೦ರಷ್ಟು, ಮಹಿಳೆಯರ ಪ್ರಮಾಣ ಶೇ. ೯.೬೭ರಷ್ಟು, ಒಟ್ಟು ಗಂಡು ಮತ್ತು ಹೆಣ್ಣು ಇಬ್ಬರ ಪ್ರಮಾಣ ಶೇ. ೧೬.೦೪ರಷ್ಟು ಇರುವುದನ್ನು ತಿಳಿದುಕೊಳ್ಳಬಹುದು.


ಇತರೆ ವೃತ್ತಿಗಳೆಂದರೆ ಸಣ್ಣ ವ್ಯಾಪಾರಗಳನ್ನು ನಿರ್ವಹಿಸುವ ಪುರುಷರ ಪ್ರಮಾಣ ಶೇ. ೧೬ರಷ್ಟು, ಮಹಿಳೆಯರ ಪ್ರಮಾಣ ಶೇಕಡ ೯.೬೭ರಷ್ಟು, ಒಟ್ಟು ಗಂಡು ಮತ್ತು ಹೆಣ್ಣು ಇಬ್ಬರ ಪ್ರಮಾಣ ಶೇ. ೧೩.೫೮ರಷ್ಟು ಇದೆ. ಈ ಸಮುದಾಯ ಕಾಲಬದಲಾದಂತೆ ವ್ಯವಸಾಯವನ್ನು ವೃತ್ತಿಯನ್ನಾಗಿಸಿಕೊಂಡಿದ್ದು ಹೆಚ್ಚಾಗಿ ಕಂಡು ಬರುತ್ತಿದೆ. ಇತ್ತೀಚೆಗೆ ಶಿಕ್ಷಣ ಪಡೆದ ವಿದ್ಯಾವಂತರು ಅಲ್ಪಸ್ವಲ್ಪ ಸರ್ಕಾರಿ ನೌಕರಿಯನ್ನು ಹೊಂದುತ್ತಿದ್ದಾರೆ. ಸ್ತಿçÃಯರಲ್ಲಿ ಶಿಕ್ಷಣ ಮಟ್ಟ ಕಡಿಮೆ ಇದ್ದು ಮನೆಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. ಮುಖ್ಯವಾಗಿ ಗಮನಿಸಬೇಕಾದ ಅಂಶವೆAದರೆ, ೬ ರಿಂದ ೧೭ ವರ್ಷದೊಳಗಿನವರು ಮಕ್ಕಳಾಗುವುದರಿಂದ ಅವರನ್ನು ವೃತ್ತಿಯಿಂದ ಬೇರ್ಪಡಿಸಲಾಗಿದ್ದು, ಅವರನ್ನು ಇಲ್ಲಿ ಪರಿಗಣಿಸಿಲ್ಲ.


ರಾಜಕೀಯ ಸ್ಥಿತಿಗತಿ

ಕೋಷ್ಠಕ : ೧.೪. ‘ಗಾಣಿಗರಿಗೆ ಇರುವ ಮೀಸಲಾತಿ ಅನುಕೂಲತೆಯ ಬಗೆ

ಕ್ರ.ಸಂ ಒಳ

ಪAಗಡಗಳು ಕುಟುAಬಗಳು ದೊರಕುತ್ತಿದೆ ದೊರಕುತ್ತಿಲ್ಲ ಪರವಾಗಿಲ್ಲ ಒಟ್ಟು ಪ್ರತಿಶತ %

೧ ಸಜ್ಜನಗಾಣಿಗ ೩೦ ೧೪ ೧೦ ೦೬ ೬೩.೮೩

೨ ಜ್ಯೋತಿಗಾಣಿಗ ೧೧ ೦೫ ೦೩ ೦೩ ೨೩.೪೧

೩ ಕರೆಗಾಣಿಗ ೦೨ ೦೧ ೦೧ - ೪.೨೫

೪ ಎಣ್ಣೆಗಾಣಿಗ ೦೪ - ೦೪ - ೮.೫೧

ಒಟ್ಟು ೪೭ ೨೦ ೧೮ ೦೯

ಒಟ್ಟು ಶೇಕಡ ೪೨.೫೫ ೩೮.೩೦ ೧೯.೧೫ ೧೦೦


ಗಾಣಿಗರಿಗೆ ಕೊಡಮಾಡಿರುವ ೨ಎ ಮೀಸಲಾತಿಯನ್ನು ಪಡೆದು ಕೊಳ್ಳುವಲ್ಲಿ ಸಜ್ಜನಗಾಣಿಗರು ಹೇಳುವ ಹಾಗೇ ಸರಕಾರ ನಮಗೆ ಮೀಸಲಾತಿ ದೊರಕಿಸಿಕೊಟ್ಟಿದೆ. ಆದರೆ ಮೀಸಲಾತಿಗಳನ್ನು ಪಡೆದುಕೊಳ್ಳಲು ಮುಖ್ಯವಾಗಿ ಜಾತಿ/ಆದಾಯ ಪ್ರಮಾಣ ಪತ್ರ ಬೇಕು. ಆದರೆ ಅದೇ ನಮಗೆ ಸರಿಯಾಗಿ ದೊರಕುತ್ತಿಲ್ಲ. ಎಂದು ೧೦ ಕುಟುಂಬದವರು ಹೇಳಿದ್ದಾರೆ, ಹೀಗಿರುವಾಗ ಯಾವ ಮೀಸಲಾತಿ ಪಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ೧೪ ಸಜ್ಜನ ಕುಟುಂಬದ ಸದಸ್ಯರು ಶಿಕ್ಷಣ, ಉದ್ಯೋಗ ಮೀಸಲಾತಿಯಿಂದ ಸಣ್ಣ ಪುಟ್ಟ ವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೂ ೦೬ ಕುಟುಂಬದ ಸದಸ್ಯರು ಸಾಕಷ್ಟು ಮೀಸಲಾತಿಗಳಿವೆ. ಅವುಗಳನ್ನು ಪಡೆದುಕೊಳ್ಳಲು ನಾವು ಪ್ರಯತ್ನ ಪಡಬೇಕಿದೆ. ಜೊತೆಗೆ ಕೆಲವು ಬೇರೆ


ಬೇರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಮೀಸಲಾತಿ ಸಹಾಯಕವಾಗಿದೆ, ಪರವಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜ್ಯೋತಿಗಾಣಿಗರಲ್ಲಿ ಮೀಸಲಾತಿ ಸೌಲಭ್ಯವನ್ನು ೦೫ ಕುಟುಂಬದ ಸದಸ್ಯರು ಪಡೆದುಕೊಂಡರೆ, ೦೩ ಕುಟುಂಬದ ಸದಸ್ಯರು ಮೀಸಲಾತಿಯಿಂದ ನಮಗೆ ಎನೂ ದೊರಕುತ್ತಿಲ್ಲ. ಇನ್ನುಳಿದ ೦೩ ಕುಟುಂಬದ ಸದಸ್ಯರು ಪರವಾಗಿಲ್ಲ. ಕೆಲವೊಂದು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಕರೆಗಾಣಿಗರಲ್ಲಿ ಮೀಸಲಾತಿ ೦೧ ಕುಟುಂಬ ದೊರಕಿದೆ ಎಂದರೆ, ಇನ್ನೊಂದು ಯಾವುದೇ ಸೌಲಭ್ಯಗಳು ಇಂದಿನವರೆಗೂ ದೊರಕಿಲ್ಲ ಪಡೆದುಕೊಂಡಿಲ್ಲ ಎಂದಿದೆ. ಅದೇ ರೀತಿಯಲ್ಲಿ ೦೪ ಕುಟುಂಬದ ಎಣ್ಣೆಗಾಣಿಗರನ್ನು ಕೇಳಿದಾಗ ಇಲ್ಲಿಯವರೆಗೂ ನಾವು ಯಾವುದೇ ಒಂದು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡಿಲ್ಲ. ನಮಗೆ ಪಡಿತರ ಚೀಟಿ


, ಹಾಗೂ ಆದಾಯ ಪ್ರಮಾಣ ಪತ್ರ ಇಲ್ಲಿಯವರೆಗೂ ನೀಡಿಲ್ಲ. ಗಾಣಿಗ ಎಂದು ಶಾಲಾ ದಾಖಲಾತಿಯಲ್ಲಿ ಇದ್ದರೂ ಸಹ ನಮಗೆ ಗಾಣಿಗ ಎಂದು ಜಾತಿ ಆದಾಯ ಪ್ರಮಾಣಪತ್ರ ನೀಡುತ್ತಿಲ್ಲ ಕಾರಣ ಹಿಂದೆ ನಾವು ಗಾಣ ಹೊಡೆಯುತ್ತಿದ್ದ ಸಂಧರ್ಭದಲ್ಲಿ ನಮ್ಮನ್ನು ಗಾಣಿಗರೆಂದೇ ಕರೆಯುತ್ತಿದ್ದರು. ನಂತರ ಗಾಣದ ವೃತ್ತಿ ಬಿಟ್ಟಮೇಲೆ ಕೆಲವರು ಪ್ರತಿಷ್ಟೆಗಾಗಿ ಲಿಂಗಾಯಿತಗಾಣಿಗರೆAದು ಕರೆದುಕೊಂಡ ಸಲುವಾಗಿ ನಮ್ಮನ್ನು ನಮ್ಮ ತಂದೆತಾಯಿಗಳು ಓದಿಲ್ಲದ ಕಾರಣ ಶಾಲೆಯಲ್ಲಿ ಲಿಂಗಾಯಿತ ಎಂದು ಸೇರಿಸಿದ್ದಾರೆ.

ನಾವು ನಿಜವಾಗಲೂ ಗಾಣಿಗರಾಗಿದ್ದು. ನಮಗೆ ಗಾಣಿಗ ಎಂದು ನೀಡುತ್ತಿಲ್ಲ. ಹಾಗಾಗಿ ಗಾಣಿಗರಿಗಿರುವ ಮೀಸಲಾತಿ ಸಿಗುತ್ತಿಲ್ಲ. ಆದರೂ ಹೊದರೆ ಹೋಗಲಿ ನಮ್ಮ ಮಕ್ಕಳು ಶಾಲೆಗೆ ಸೇರುವಾಗ ಗಾಣಿಗ ಎಂದು ಸೇರಿಸಿದ್ದೇವೆ ನಮ್ಮ ಮಕ್ಕಳಿಗಾದರೂ ಗಾಣಿಗ ಎಂದು ನೀಡುತ್ತಿಲ್ಲ. ಇದರಿಂದ ನಮಗೆ ಎಷ್ಟೇ ಸೌಲಭ್ಯಗಳಿದ್ದರೂ, ದೊರಕುವಲ್ಲಿ ವಿಫಲವಾಗುತ್ತಿದೆ. ಎಂದು ಅಭಿಪ್ರಾಯಪಟ್ಟರು. “ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ವಿಶೇಷವಾಗಿ ಹಿಂದೆ ಉಳಿದಿದ್ದನ್ನು ಕಂಡು, ಸರ್ವ ರಾಜ್ಯ ಸರಕಾರದವರು ಇವರನ್ನು ಹಿಂದುಳಿದ ವರ್ಗದವರೆಂದು ತೀರ್ಮಾನಿಸಿದ್ದಾರೆ. ಇವರೆಲ್ಲರ ಜನಸಂಖ್ಯೆ ಇನ್ನುಳಿದ ಹಿಂದುಳಿದ ಯಾವುದೇ ಒಂದು ವರ್ಗಕ್ಕಿಂತ ಹೆಚ್ಚು ಇದೆ. ಜನಗಣತಿಯಲ್ಲಿ ಇಂಥ ಸಂಖ್ಯೆಯ ಉಲ್ಲೇಖ ಆಗಬೇಕು. ಆಗ ನಮ್ಮ ಜಾತಿ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೀಸಲಾತಿ ಸ್ಥಾನಗಳು ದೊರಕುತ್ತವೆ.”(ಜಯಬಸವ ಸ್ವಾಮಿಗಳು:೨೦೧೫ :೨೫೮).


ಅಧ್ಯಯನದ ಫಲಿತಾಂಶಗಳು

• ಗಾಣಿಗರು ಕೂಡ್ಲಿಗಿ ತಾಲೂಕಿನಲ್ಲಿ ಹರಿದು ಹಂಚಿ ಹೋಗಿದ್ದಾರೆ. ತಾಲೂಕಿನ ನಾಲ್ಕು-ಐದು ಗ್ರಾಮಗಳಂತೆ ಒಂದೆರೆಡು ಗಾಣಿಗ ಕುಟುಂಬಗಳು ಕಾಣಸಿಗುತ್ತವೆ. ಈ ನೆಲೆಸುವಿಕೆ ವೈಜ್ಞಾನಿಕ ಕ್ರಮದಂತೆ ಕಾಣಿಸುತ್ತದೆ. ಅಂದರೆ ನಾಲ್ಕೆöÊದು ಗ್ರಾಮಕ್ಕೆ ಬೇಕಾದ ಎಣ್ಣೆಯನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವುದಕ್ಕೆ ಅನುಕೂಲವಾಗುವಂತೆ ನೆಲೆಸಿದ್ದಾರೆ.

• ಕೂಡ್ಲಿಗಿ ತಾಲೂಕಿನ ಗಾಣಿಗರು ಪಾರಂಪ


ರಿಕ ವೃತ್ತಿ ಗಾಣದ ವೃತ್ತಿಯನ್ನು ಕೈಬಿಟ್ಟಿದ್ದಾರೆ. ಶಿಕ್ಷಣವಂತರು ಇದನ್ನು ಇಷ್ಟಪಡುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಅಂತವುಗಳಲ್ಲಿ ಯಾಂತ್ರಿಕ ಜಗತ್ತಿನೊಂದಿಗೆ ಸ್ಪರ್ದೆ ಮಾಡುವಷ್ಟು ಶಕ್ತಿ ಇವರಿಗಿಲ್ಲದಿರುವುದು. ಹಾಗಾಗಿ ಇದು ಅಪರೂಪದ ವೃತ್ತಿಯಾಗಿದೆ.

• ಗಾಣಿಗರಲ್ಲಿ ಮಾತೃಪ್ರಧಾನ ವ್ಯವಸ್ಥೆ ಕಡಿಮೆ. ಮನೆಯ ಒಡೆತನವನ್ನು ಪುರುಷನೇ ನಿರ್ವಹಿಸುತ್ತಾನೆ. ಇವರಲ್ಲಿ ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬ ವ್ಯವಸ್ಥೆ ಇದೆ. ಗಾಣಿಗರಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು.

• ಕೂಡ್ಲಿಗಿ ತಾಲೂಕಿನಲ್ಲಿ ಸಜ್ಜನಗಾಣಿಗ ಹಾಗೂ ಜ್ಯೋತಿಗಾಣಿಗ ಮಹಿಳೆಯರು ಹೆಚ್ಚಾಗಿ ವ್ಯವಸಾಯವನ್ನೇ ಅವಲಂಭಿಸಿದ್ದರೆ, ಕರೆಗಾಣಿಗ ಮಹಿಳೆಯರು ಸಣ್ಣವ್ಯಾಪಾರ ಮಾಡುವಿಕೆಯಲ್ಲಿ ಮತ್ತು ಎಣ್ಣೆಗಾಣಿಗ ಮಹಿಳೆಯರು ಇಂದಿಗೂ ಎಣ್ಣೆ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

• ಕೂಡ್ಲಿಗಿ ತಾಲೂಕಿನಲ್ಲಿ ಗಾಣಿಗರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗಾಣಿಗ ೨ಎ ಎಂದು ಪ್ರಮಾಣ ಪತ್ರ ಪಡೆದುಕೊಳ್ಳಲು ಪರಿತಪಿಸುತ್ತಿರುವುದರಿಂದ ರಾಜಕೀಯ ಮುಲೆಗೆ ಬರಲು ಮಹಿಳೆಯರು ಸಾಧ್ಯವಾಗುತ್ತಿಲ್ಲ.


ಉಪಸಂಹಾರ

ಒಟ್ಟಾರೆಯಾಗಿ ಗಾಣಿಗ ಸಮುದಾಯದ ಮಹಿಳೆಯರು ಇಷ್ಟೆಲ್ಲಾ ಸಮಸ್ಯೆ ಸವಾಲುಗಳ ನಡುವೆ ಮತ್ತೆ ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಹರಸಾಹಸ ನಡೆಸುತ್ತಿದ್ದು, ಇಂದು ಉನ್ನತ ಶಿಕ್ಷಣ ಪಡೆಯಲು ಹೆಣಗಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಸಣ್ಣ ಪುಟ್ಟ ವ್ಯಾಪಾರ, ವ್ಯವಹಾರಗಳಲ್ಲೂ ತೊಡಗಿಸಿಕೊಂಡಿದ್ದು, ಗಾಣದ ವೃತ್ತಿಯಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಸಣ್ಣ ಪುಟ್ಟದಾದ ಖರ್ಚುಗಳಿಗೂ ಪುರುಷರ ಬಳಿ ಕೇಳುವ ಪರಿಸ್ಥಿತಿಯಿಂದ ಹೊರಬರಲು ಶ್ರಮಿಸುತ್ತಿದ್ದಾರೆ. ರಾಜಕೀಯವಾಗಿ ತೊಡಗಿಸಿಕೊಳ್ಳಲು ಕುಟುಂಬದ ಸಹಕಾರ ಬಯಸುತ್ತಿದ್ದಾರೆ. ಇದೆಲ್ಲದರ ನಡುವೆ ಗಾಣಿಗ ಸಮುದಾಯದ ಮಹಿಳೆ ತನ್ನ ಇರುವಿಕೆಯ ಗುರುತಿಗಾಗಿ ಮುಂದೆ ಗಾಣದ ವೃತ್ತಿಯಲ್ಲಿಯೂ ತೊಡಗಿಸಿಕೊಳ್ಳುತ್ತಿರುವುದು ಕಾಣಬಹುದು. ಗಾಣಿಗ ಸಮುದಾಯದ ಮಹಿಳೆಯರು ರಾಜಕೀಯವಾಗಿ ಗುರುತಿಸಿಕೊಳ್ಳಲು ಮೀಸಲಾತಿ ಪ್ರಮಾಣ ಹೆಚ್ಚಿಸಿ ಅವರು ರಾಜಕೀಯವಾಗಿ ಸ್ಪರ್ಧಿಸಲು ಉತ್ತೇಜನ ನೀಡುವುದು. ಗೃಹ ಕೈಗಾರಿಕೆಯಡಿಯಲ್ಲಿ ದುಡಿಯಲು ಆರ್ಥಿಕ ಸಹಾಯ ನೀಡುವುದು ಮತ್ತು ಇವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಡುವುದು. ಸಮುದಾಯದ ಮಹಿಳೆಯರ ಬೌದ್ಧಿಕ ಪ್ರಗತಿಗೆ ಒಳಗೊಂಡAತೆ ಉನ್ನತ ಶಿಕ್ಷಣಕ್ಕೆ ಪ್ರೇರಪಿಸುವುದು, ಹೀಗೆ ಕೆಲವು ಕ್ರಮಗಳನ್ನು ಕೈಗೊಂಡರೆ ಈ ಭಾಗದ ಗಾಣಿಗ ಸಮುದಾಯದ ಮಹಿಳೆಯರು ಸಬಲೀಕರಣದತ್ತ ಹೆಜ್ಜೆಯಿಡುವುದರಲ್ಲಿ ಸಂಶಯವಿಲ್ಲ.





ಅರವಿಂದ ಮಾಲಗತ್ತಿ (ಪ್ರಸಂ), ೨೦೦೬, ‘ಜಾನಪದ’ ಕನ್ನಡ ವಿಷಯ ವಿಶ್ವಕೋಶ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಕವಿತಾ ರೈ, ೨೦೦೭, ವಿವಾಹ ಮತ್ತು ಕುಟುಂಬ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ,

ಜಯಬಸವ ಸ್ವಾಮಿಗಳು (ಪ್ರಸಂ) ೨೦೧೫, ‘ಜೋಳಿಗೆ ಇಲ್ಲದ ಜಂಗಮ’ ಪೂಜ್ಯ ಶ್ರೀ ಜಯದೇವ ಜಗದ್ಗುರುಗಳ ಅಮೃತ ಮಹೋತ್ಸವ ಅಭಿನಂದನ ಗ್ರಂಥ ಮತ್ತು ನೂತನ ಪಟ್ಟಾಧಿಕಾರ ಮಹೋತ್ಸವ ಸಮಿತಿ, ವನಶ್ರೀ ಸಂಸ್ಥಾನ ಮಠ, ವಿಜಯಪುರ

ಲೋಕೇಶ ಟಿ, ೨೦೧೫, ‘ಕೂಡ್ಲಿಗಿ ಹೋಬಳಿ ಪರಿಸರದ ಸಾಂಸ್ಕೃತಿಕ ಅಧ್ಯಯನ, (ಕನ್ನಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ ಎಂಫಿಲ್ ಅಪ್ರಕಟಿತ ನಿಬಂಧ)

ಹಂದ್ರಾಳ ಮಾರ್ಕಾಂಡೇಯ. ೨೦೦೮, “ಬಳ್ಳಾರಿ ಜಿಲ್ಲಾ ಗಾಣಿಗರು : ಒಂದು ಅಧ್ಯಯನ” (ಕನ್ನಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ ಪಿಎಚ್.ಡಿ ಅಪ್ರಕಟಿತ ಮಹಾಪ್ರಬಂಧ)

hಣಣಠಿs://ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/bಛಿತಿ/Pಚಿges/Poಟiಛಿies.ಚಿsಠಿx


Σχόλια


bottom of page