ಮಹಿಳಾ ಕಾರ್ಮಿಕರ ಅವಶ್ಯಕ ಸೌಲಭ್ಯಗಳು ಮತ್ತು ಕೌಟುಂಬಿಕ ಹಿನ್ನಲೆ– ಒಂದು ಸಾಮಾಜಿಕ ಅಧ್ಯಯನ
- The Social Science Dialogue TSSD

- Nov 24
- 7 min read
Updated: 6 days ago
ಸಂದೀಪ ಆರ್, ಸಂಶೋಧಕರು, ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ ಶಂಕರಘಟ್ಟ, ಶಿವಮೊಗ್ಗ ಜಿಲ್ಲೆ-577451
Mob:- 8971642892, Mail: sandeep21.jlr@gmail.com
ಶ್ರಮವು ಉತ್ಪಾದನೆಯ ಪ್ರಮುಖ ಘಟಕವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದ ಬಹುಭಾಗವನ್ನು ದುಡಿಮೆಯಲ್ಲಿಯೇ ಕಳೆಯುತ್ತಿರುತ್ತಾರೆ. ಶೇಕಡಾ೮೦ ರಷ್ಟು ಆದಾಯವು ದುಡಿಮೆಯ ಫಲವಾಗಿ ದೊರೆಯುತ್ತದೆ. ಆರ್ಥಿಕ ವ್ಯವಸ್ಥೆಯನ್ನು ಬಂಡವಾಳ ಪ್ರಧಾನ ಪದ್ಧತಿಯೆಂದು ಕರೆಯಬಹುದು, ಉತ್ಪಾದನೆಯ ಪ್ರಮಾಣ ಮನುಷ್ಯ ಬಲದ ಗಾತ್ರ ಮತ್ತು ಅದರ ಕಾರ್ಯಕ್ಷಮತೆಯನ್ನು ಅವಲಂಭಿಸಿದೆ. ದುಡಿಯುವವರ ಸಂಖ್ಯೆ ಆ ದೇಶದ ಜನಸಂಖ್ಯೆಗೆ ಸೀಮಿತವಾಗಿದೆ. ಉತ್ಪಾದನೆ ಎಂದರೆ ಕೇವಲ ಲಾಭದ ದೃಷ್ಠಿಯಿಂದ ನೋಡುವುದಲ್ಲ, ಅದರಿಂದ ಒಂದು ದೇಶದ ಪ್ರಗತಿ, ಜನರ ಅಭಿವೃದ್ದಿಯಂತಹ ಅಂಶಗಳು ಇರುತ್ತವೆ. ಉತ್ಪಾದನೆಗೆ ಪ್ರಮುಖವಾಗಿ ಬೇಕಾಗುವುದು ಕಚ್ಚಾವಸ್ತು ಹಾಗೂ ಕಾರ್ಮಿಕರ ಶ್ರಮ. ನಗರಗಳು ಹೆಚ್ಚಾದಂತೆ, ಕೈಗಾರಿಕೆಗಳು ಬೆಳೆಯುತ್ತಿವೆ. ದಿನದಿಂದ ದಿನಕ್ಕೆ ಇವುಗಳ ಸಂಖ್ಯೆ ಅಧಿಕವಾಗುತ್ತಿದ್ದರೂ ಇಲ್ಲಿ ದುಡಿಯುವಂತಹ ಕಾರ್ಮಿಕರ ಸ್ಥಿತಿಯ ಅಧ್ಯಯನ ಪ್ರಮುಖ ಅಂಶವಾಗಿದೆ. ಏಕೆಂದರೆ, ಮಹಿಳಾ ಕಾರ್ಮಿಕರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಿಳಾ ಕಾರ್ಮಿಕರ ಹಿತಾಸಕ್ತಿಯಲ್ಲಿ ಸರ್ಕಾರ ಹೆಚ್ಚಿನ ಹಿತಾಸಕ್ತಿವಹಿಸುತ್ತಿಲ್ಲ, ಏಕೆಂದರೆ, ಇಲ್ಲಿ ದುಡಿಯುತ್ತಿರುವ ಮಹಿಳೆಯರು ಹೆಚ್ಚಾಗಿ ಹಳ್ಳಿಗಳಿಗೆ ಸೇರಿದವರಾಗಿರುತ್ತಾರೆ. ಇನ್ನು ಕೆಲವರು ಕೆಲಸಗಳಿಗಾಗಿ ಹುಡುಕೊಂಡು ಒಂದು ನಗರದ ಯಾವುದೋ ಮೂಲೆಯಲ್ಲಿ ವಾಸಮಾಡುತ್ತಾ ಇಲ್ಲಿ ದುಡಿಯುತ್ತಿದ್ದಾರೆ. ಹೀಗೆ ದೂರ ದೂರದಿಂದ ವಲಸೆ ಬಂದು ಇಲ್ಲಿ ದುಡಿಯುತ್ತಿರುವಂತಹ ಮಹಿಳಾ ಕಾರ್ಮಿಕರಿಗೆ ವಸತಿ ಸಮಸ್ಯೆ, ಆಹಾರ, ನೀರು, ಆರೋಗ್ಯ ಹೀಗೆ ಎಲ್ಲಾ ತರಹದ ಸಮಸ್ಯೆಗಳಲ್ಲಿ ತೊಳಲಾಡುತ್ತಿರುತ್ತಾರೆ. ಕೂಲಿ ಕಡಿಮೆಯಾದ್ದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವಂತಹ ಮಹಿಳಾ ಕಾರ್ಮಿಕರಿಗಿಂತ ಈ ಕ್ಷೇತ್ರಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸ್ಥಿತಿ ಬಹಳ ಶೋಚನೀಯವಾಗಿದೆ. ಹಾಗಾಗಿ ಅವರಿಗೆ ದೊರಯ ಬೇಕಾದ ಸೌಲಭ್ಯಗಳು ಹಾಗೂ ಪರಿಹಾರ ಕ್ರಮಗಳು ಸೂಕ್ತವಾದ ರೀತಿಯಲ್ಲಿ ದೊರಯದಿರುವುದು ಶೋಚನೀಯ ಈ ಹಿನ್ನಲೆಯಲ್ಲಿ ಅಂತಹ ಅಂಶಗಳನ್ನಿಟ್ಟುಕೊAದು ಅಧ್ಯಯನ ನಡೆಸುವುದು ಅವರುಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ಈ ಅಧ್ಯಯನ ಪ್ರಮುಖ ಪಾತ್ರ ವಹಿಸುತ್ತದೆ.
ಮುಖ್ಯ ಪದಗಳು: ಮಹಿಳೆ, ಕಾರ್ಮಿಕರು, ಆದಾಯ, ಉತ್ಪಾದನೆ, ಕೂಲಿ

ಪೀಠಿಕೆ: ಮಹಿಳಾ ಕಾರ್ಮಿಕರ ಬೆಳವಣೆಗೆಯಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಸ್ಥಿತಿ ಹಾಗೂ ಇಂದಿನ ಸ್ಥಿತಿಯಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತೇವೆ. ಪ್ರಸಕ್ತ ದಿನಗಳಲ್ಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ, ಇಂತಹ ಮಹಿಳಾ ಕಾರ್ಮಿಕರ ಜೀವನಕ್ಕೆ ಸಂಬಂದಿಸಿದಂತೆ ಸರ್ಕಾರ ಅಥವಾ ಸಂಘ ಸಂಸ್ಥೆಗಳು ಪೂರಕ ಸೌಲಭ್ಯಗಳನ್ನು ಒದಗಿಸುವಲ್ಲಿ ಹಿನ್ನಡೆ ಸಾಧಿಸುತ್ತಿವೆ. ಇಂತಹ ಸ್ಥಿತಿ ಅತ್ಯಂತ ಚಿಂತಾಜನಕ, ಪ್ರತಿಯೊಂದು ಸೌಲಭ್ಯಗಳಿಂದ ವಂಚಿತರಾಗಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲದಿರುವುದನ್ನು ಗಮನಿಸಬಹುದು. ಆದರೂ ಕೂಡ ವಿವಿಧ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾರಣ ತನ್ನ ಜೀವನೋಪಾಯಕ್ಕಾಗಿಯೇ ಹೊರತು ಬೇರೇನಿಲ್ಲ. ತಮ್ಮ ಕುಟುಂಬವನ್ನು ಸುಲಲಿತವಾಗಿ ನಡೆಸಲು ಸಾಧ್ಯವಾಗದಿದ್ದರೂ ಒಂದೊತ್ತಿನ ಊಟಕ್ಕಾಗಿ ಮಹಿಳಾ ಕಾರ್ಮಿಕರು ಇಲ್ಲಿ ದುಡಿಯಲೇಬೇಕು. ಅನಕ್ಷರಸ್ಥರಾಗಿರುವುದರಿಂದ ಅವರು ಇಂತಹ ಕೆಲಸಗಳನ್ನು ಅನಿವಾರ್ಯವಾಗಿ ಮಾಡಲೆಬೇಕು. ಏಕೆಂದರೆ, ಪುರುಷನೊಬ್ಬನ ಕೂಲಿಯಿಂದ ಮನೆಯ ದಿನನಿತ್ಯದ ಖರ್ಚಿಗೆ ಸಾಕಾಗುವುದಿಲ್ಲ. ಆದ್ದರಿಂದ ಜೊತೆಯಾಗಿ ಮಹಿಳೆಯೂ ಕೂಡ ಹಗಲು ಇಲ್ಲಿ ದುಡಿಯುತ್ತಿದ್ದಾಳೆ. ಮಹಿಳಾ ಪ್ರಪಂಚವೆನಿದ್ದರೂ ಮನೆಯ ನಾಲ್ಕು ಗೋಡೆಯಾಳಗೆ, ಅವಳು ಹೊಸ್ತಿಲನ್ನು ದಾಟಿ ಹೊರಗೆ ಹೋದರೆ, ಅವಮಾನ, ಅಪವಾದ ಎಂಬ ನಂಬಿಕೆಗಿಂತ ಭಿನ್ನವಾಗಿ ಇಂತಹ ಸ್ಥಳಗಳಲ್ಲ್ಲಿ ಪುರುಷರು ಜೊತೆಗೆ ಸರಿಸಮಾನಳಾಗಿ ದುಡಿಯುತ್ತಿದ್ದಾಳೆ. ಹಿಂದೆ ಮನೆಯಲ್ಲಿ ಒಬ್ಬರು ದುಡಿದರೂ ಸಾಕಿತ್ತು. ಮಹಿಳಾ ಹೊರಗೆ ದುಡಿಯುವ ಅವಶ್ಯಕತೆ ಏನಿರಲಿಲ್ಲ. ಆದರೆ ಕಾಲ ಸರಿದಂತೆ ಆದ ಬದಲಾವಣೆಗಳು, ಒಬ್ಬ ವ್ಯಕ್ತಿ ದುಡಿದು ತಂದ ಹಣದಿಂದ ಸಂಸಾರ ಪೂರೈಸುವುದು ಇಂದು ಬಹಳ ಕಷ್ಟವಾಗಿದೆ. ಪರಿಸರದ ಒತ್ತಡದಿಂದ ಅವರಿಗೆ ಇಷ್ಟ ಇರಲಿ ಇಲ್ಲದೇ ಇರಲಿ, ಆಸಕ್ತಿ ಇರಲಿ ಇಲ್ಲವೇ ಇರಲಿ ಅನಿವಾರ್ಯವಾಗಿ ಇಬ್ಬರೂ ದುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಹಿತ್ಯಾವಲೋಕನ
Rehana- Ghadially, (1988) Women in India Society, sage publications, New Delhi. ಎಂಬ ಗ್ರಂಥವು ಭಾರತೀಯ ಸಮಾಜದಲ್ಲಿ ಮಹಿಳೆ ಎಂಬ ವಿಷಯ ಮೇಲೆ ಬೆಳಕು ಚೆಲ್ಲುತ್ತದೆ. ಭಾರತೀಯ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ಉಂಟಾಗುತ್ತಿರುವ ದೌರ್ಜನ್ಯಗಳ ಮೇಲೆ ಹೆಚ್ಚು ವಿವರಗಳನ್ನು ಈ ಗ್ರಂಥವು ನೀಡುತ್ತದೆ ಸಂಪ್ರದಾಯಸ್ಥ ಭಾರತೀಯ ಮಹಿಳೆ, ಮಹಿಳಾ ಕಾರ್ಮಿಕರು, ಕೌಟುಂಬಿಕ ಮಟ್ಟದಲ್ಲಿ ಮಹಿಳೆಯರ ಮೇಲೆ ಉಂಟಾಗುವ ದೌರ್ಜನ್ಯ, ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಲಿಂಗ ಅಸಮಾನತೆ, ಸ್ತ್ರೀ ಭೂಣ ಹತ್ಯೆ, ಗಂಡು ಪುತ್ರನ ವ್ಯಾಮೋಹ ಮುಂತಾದ ವಿಷಯಗಳ ಮೇಲೆ ಹೆಚ್ಚು ಗಮನವನ್ನು ಈ ಗ್ರಂಥವು ಹರಿಸಿದೆ, ಈ ಗ್ರಂಥದ ಲೇಖಕರು ಪ್ರಮುಖವಾಗಿ ಭಾರತದಲ್ಲಿ ಮಹಿಳೆಯರು ಕುಟುಂಬದ ಒಳಗೆ ಮತ್ತು ಹೊರಗೆ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ದೌರ್ಜನ್ಯಗಳ ಮೇಲೆ ಹೆಚ್ಚು ಬೆಳಕನ್ನು ಚೆಲ್ಲುತ್ತದೆ.
A.k. Pandey- (2002) “Emerging Issues in Empowerment of Women” Anmal Phblications pvt,Ltd, New Delhi, ಎಂಬ ಗ್ರಂಥದಲ್ಲಿ ಗ್ರಂಥದಲ್ಲಿ ಮಹಿಳೆಯರ ಸಬಲೀಕರಣದಲ್ಲಿ ಹಲವಾರು ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಪಾತ್ರವನ್ನು ಹಾಗೂ ಅವರು ಮಹಿಳಾ ಸಬಲೀಕರಣಕ್ಕೆ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಸಮಸ್ಯೆಗಳು ಬಗ್ಗೆ ವಿವರವನ್ನು ನೀಡಲಾಗಿದೆ, ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಈ ಗ್ರಂಥದಲ್ಲಿ ವಿವರಿಸಲಾಗಿದೆ, ಮಹಿಳಾ ಸಬಲೀಕರಣದ ಅವಶ್ಯಕತೆಯ ಬಗ್ಗೆ ವಿವರವಾಗಿ ತಿಳಿಸಲಾಗಿದೆ, ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಮತ್ತು ಅವರ ಮಕ್ಕಳ ಸ್ಥಿತಿಗಳನ್ನು ವಿವರಿಸಲಾಗಿದೆ, ಮಹಿಳೆಯರ ಸಬಲೀಕರಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರವನ್ನು ಕುರಿತು ಈ ಗ್ರಂಥದಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದೆ.
ಅಧ್ಯಯನದ ಉದ್ದೇಶ
• ಮಹಿಳಾ ಕಾರ್ಮಿಕರ ಅವಶ್ಯಕ ಸೌಲಭ್ಯಗಳ ಬಗ್ಗೆ ತಿಳಿಯುವುದು.
• ಮಹಿಳಾ ಕಾರ್ಮಿಕರ ಕೌಟುಂಬಿಕ ಹಿನ್ನಲೆಯನ್ನು ತಿಳಿಯುವುದು.
ಸಂಶೋಧನಾ ಸಮಸ್ಯೆಯ ಹೇಳಿಕೆ:- ಭಾರತೀಯ ಸಮಾಜದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿದ್ದು ಅವುಗಳಿಗೆ ಪರಿಹಾರ ಹುಡುಕುವ ದಿಸೆಯಲ್ಲಿ ಪ್ರಸ್ತುತ ಸಂಶೋಧನೆಯು ಮಹಿಳಾ ಕಾರ್ಮಿಕರ ಅವಶ್ಯಕ ಸೌಲಭ್ಯಗಳು ಮತ್ತು ಕೌಟುಂಬಿಕ ಹಿನ್ನಲೆಯ ಬಗ್ಗೆ ತಿಳಿಯುವುದುದಾಗಿದೆ.
ಅಧ್ಯಯನ ಮಾದರಿ
ಪ್ರಸ್ತುತ ಸಂಶೋಧನಾ ಅಧ್ಯಯನಕ್ಕಾಗಿ ದಾವಣಗೆರೆ ನಗರದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮಹಿಳಾ ಕಾರ್ಮಿಕರನ್ನು ನೇರವಾಗಿ ಭೇಟಿ ಮಾಡಿ ಸರಳ ಯಾದೃಚ್ಚಿಕ ಮಾದರಿಯಿಂದ ಆಯ್ಕೆ ಮಾಡಿದ ೫೦ ಮಹಿಳಾ ಕಾರ್ಮಿಕರನ್ನು ಸಂದರ್ಶನ ಅನುಸೂಚಿ, ಅವಲೋಕನದ ಸಹಾಯದಿಂದ ಮುಕ್ತವಾಗಿ ಭೇಟಿಮಾಡಿ ಮಾಹಿತಿ ಸಂಗ್ರಹಿಸಲಾಗಿದೆ.
ಸಂಶೋಧನಾ ತಂತ್ರಗಳು:
೧. ಸಂದರ್ಶನ:- ಸಂದರ್ಶನ ಅನುಸೂಚಿಯನ್ನು ಬಳಸಿ ಸಂಶೋಧನಾ ಅಧ್ಯಯನದ ಮಾದರಿಯಿಂದ ೫೦ ಜನ ಸೂಚನಾದಾರರನ್ನು ಆಯ್ಕೆ ಮಾಡಿಕೊಂಡು. ದಾವಣಗೆರೆ ನಗರದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸಾಮಾಜಿಕ ಸ್ಥಿತಿಗಳ ಕುರಿತು ವೈಯಕ್ತಿಕವಾಗಿ ಸಂದರ್ಶಿಸಲಾಗಿದೆ.
೨. ಅವಲೋಕನ:- ಅಧ್ಯಯನದ ಸಂದರ್ಶನದಲ್ಲಿ ದಾವಣಗೆರೆ ನಗರದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾರ್ಮಿಕರ ಮನೋಭಾವನೆಯನ್ನು ಸಮಾಜಶಾಸ್ತಿçÃಯ ದೃಷ್ಟಿಕೋನದಿಂದ ಸಾಮಾಜಿಕ ಸ್ಥಿತಿಗಳನ್ನು ಅವಲೋಕಿಸಲಾಗಿದೆ.
ಮಾಹಿತಿ ಸಂಗ್ರಹಣೆಯ ಮೂಲಗಳು:
ಮಾಹಿತಿಯನ್ನು ಪ್ರಸ್ತುತ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲು ಪ್ರಮುಖವಾಗಿ ಎರಡು ರೀತಿಯ ವಿಧಾನವನ್ನು ಬಳಸಿಕೊಳ್ಳಲಾಗಿದೆ.
೧.ಪ್ರಾಥಮಿಕ ಆಕರಗಳು:- ಪ್ರಾಥಮಿಕ ಆಕರಗಳ ಸಹಾಯದಿಂದ ಸಂದರ್ಶನ ಅನುಸೂಚಿಯನ್ನು ಬಳಸಿಕೊಂಡು ಸರಳ ಯಾದೃಚ್ಚಿಕ ನಮೂನೆಯಿಂದ ಆಯ್ಕೆ ಮಾಡಿದ ದಾವಣಗೆರೆ ನಗರದ ಮಹಿಳಾ ಕಾರ್ಮಿಕರನ್ನು ವೈಯಕ್ತಿಕವಾಗಿ ಸಂದರ್ಶಿಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವಲೋಕನ ಸಹಾಯದಿಂದ ಮತ್ತು ಕ್ಯಾಮರಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
೨.ಮಾಧ್ಯಮಿಕ ಆಕರಗಳು:- ಪ್ರಾಥಮಿಕ ಆಕರಗಳು ಮೂಲಕ ಮಾತ್ರವೇ ಅಲ್ಲದೆ ಮಾಧ್ಯಮಿಕ ಆಕರಗಳು ಮೂಲಕವು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮಾಧ್ಯಮಿಕ ಆಕರಗಳಾದ ಗ್ರಂಥಾಲಯದಲ್ಲಿ ದೊರೆಯುವ ವಿವಿಧ ಲೇಖಕರು ಬರೆದಿರುವಂತಹ ಗ್ರಂಥಗಳು, ಲೇಖನಗಳು, ದಿನಪತ್ರಿಕೆಗಳು, ಯೋಜನಾ ಪುಸ್ತಕಗಳು, ವಿಶ್ವಕೋಶಗಳು ಹಾಗೂ ಸಮೀಕ್ಷಾ ಗ್ರಂಥಗಳು, ಸಂಶೋಧನಾ ಮಹಾ ಪ್ರಬಂಧಗಳಲ್ಲಿ ದೊರೆಯುವಂತಹ ಮಾಹಿತಿಯನ್ನು ಆಧರಿಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಮಾಹಿತಿ ವಿಶ್ಲೇಷಣೆ:
ಈ ಮೇಲೆ ತಿಳಿಸಿದ ಎಲ್ಲಾ ಸಂಶೋಧನಾ ವಿಧಾನಗಳು ಹಾಗೂ ಹಲವಾರು ಮೂಲಗಳಿಂದ ಸಂಗ್ರಹಿಸಿದ ಸಂಶೋಧನಾ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಸೂಚೀಕರಣ ಮತ್ತು ಅಗತ್ಯವೆನಿಸಿದಷ್ಟು ಸಂಖ್ಯಾಶಾಸ್ತ್ರೀ \ಯ ವಿಧಾನಗಳಿಂದ ಮಾಹಿತಿಯನ್ನು ವಿಶ್ಲೇಷಿಸುವುದರ ಮೂಲಕ ಅಧ್ಯಯನ ನಡೆಸಲಾಗಿದೆ. ಅಲ್ಲದೆ ಎಲ್ಲಾ ಅಂಶಗಳನ್ನು ನಮೂದಿಸಿ ಅದರ ಶೇಕಡವಾರುಗಳನ್ನು ತಿಳಿಸಲಾಗಿದೆ. ಈ ರೀತಿಯಾಗಿ ಸಂಶೋಧನಾ ಮಾಹಿತಿಯನ್ನು ಸಮಾಜಶಾಸ್ತ್ರೀಯ ಚೌಕಟ್ಟಿನಲ್ಲಿ ವಿಶ್ಲೇಷಿಸಿ ವರದಿಯನ್ನು ತಯಾರಿಸಲಾಗಿದೆ.
ಸಾಲದ ವಿವರ
ಮಹಿಳಾ ಕಾರ್ಮಿಕರ ಸಾಲ ವಿವಿಧ ರೂಪದಲ್ಲಿರುವುದನ್ನು ಕಾಣಬಹುದು. ಇವರ ಆದಾಯ ಅಲ್ಪ ಪ್ರಮಾಣದಲ್ಲಿದ್ದು, ಇವರ ಬೇಡಿಕೆಗಳು ಹಲವಾರು ಇರುವುದರಿಂದ ಇವರು ದುಡಿದಂತಹ ಆದಾಯವು ಯಾವುದಕ್ಕೂ ಸಾಲುವುದಿಲ್ಲ. ಇವರು ಯಾವುದೇ ರೀತಿಯ ಉಳಿತಾಯದಲ್ಲಿ ತೊಡಗರುವುದಿಲ್ಲ ಕಾರಣ ಕೌಟುಂಬಿಕ ತೊಂದರೆಗಳು, ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಇವರ ಆದಾಯ ಸಾಲುವುದಿಲ್ಲ. ಸೂಚನಾ ದಾರರ ಸಾಲದ ವಿವರವನ್ನು ಈ ಕೆಳಗಿನ ಕೋಷ್ಟಕದಿಂದ ತಿಳಿಯಬಹುದಾಗಿದೆ.
ಕೋಷ್ಟಕ:೦೧
ಸೂಚನಾದಾರರ ಸಾಲದ ವಿವರ
ಸಾಲ ಪಡೆದವರು ೩೭೭೪.೦೦
ಸಾಲ ಇಲ್ಲದವರು ೧೩೨೬.೦೦
ಒಟ್ಟು-೫೦೧೦೦.೦೦
ಈ ಮೇಲಿನ ಕೋಷ್ಟಕದಿಂದ ತಿಳಿದು ಬರುವುದೇನೆಂದರೆ ಮಾಹಿತಿದಾರರಲ್ಲಿ ಸಾಲವನ್ನು ಹೊಂದಿರುವವರ ಪ್ರಮಾಣ ಶೇ.೭೪ರಷ್ಟು ಮತ್ತು ಸಾಲವನ್ನು ಹೊಂದದೇ ಇರುವವರು ಶೇ.೨೬ರಷ್ಟಿದಾರೆ. ಇದರಿಂದ ತಿಳಿಯುವುದೇನೆಂದರೆ ಸಾಲ ಇರದವರ ಸಂಖ್ಯೆಗಿAತ ಸಾಲವಿರುವವರ ಸಂಖ್ಯೆ ಹೆಚ್ಚಾಗಿದೆ. ಇವರು ದುಡಿಯುವಂತಹ ಆದಾಯದಲ್ಲಿಯೇ ತಮ್ಮೆಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಅ ನಿವಾರ್ಯವಾಗಿ ಸಾಲದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇವರು ಸಾಲವನ್ನು ಪಡೆಯುವ ಉದ್ದೇಶವೆಂದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಾಹಕ್ಕೆ, ಹಬ್ಬ ಹರಿದಿನಗಳಿಗೆ, ಆನಾರೋಗ್ಯಕ್ಕೆ, ತುತ್ತಾದಾಗ ಮನೆಯ ದಿನನಿತ್ಯ ಖರ್ಚಿಗಾಗಿ ಹೀಗೆ ಇನ್ನೂ ಹಲವಾರು ಕಾರಣಗಳಿಂದ ಸಾಲವಾಗಿ ಪಡೆಯುತ್ತಾರೆ. ಮಹಿಳಾ ಕಾರ್ಮಿಕರಿಗೆ ತಾವು ದುಡಿಯುವ ಸ್ಥಳದಲ್ಲಿಯೇ ಮುಖ್ಯ ಆದಾಯದ ಮೂಲಂಶವಾಗಿರುವುದು, ಇವರಿಗೆ ಯಾವುದೇ ಬೇರೆ ಮೂಲದಿಂದ ಆದಾಯ ಇರುವುದಿಲ್ಲ ಇವರು ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಈ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಕೆಲಸದ ಸ್ವರೂಪ :
ಕಾರ್ಮಿಕರಾಗಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರ ಉದ್ಯೋಗದ ಸ್ವರೂಪವು ತಾತ್ಕಾಲಿಕವಾದದು ಇದೇ ಉದ್ಯೋಗವನ್ನೇ ನಂಬಿಕೊAಡು ಇವರ ಕುಟುಂಬಗಳು ಬದುಕುತ್ತಿವೆ. ತಾವು ಕೆಲಸವಿರದಿದ್ದರೆ ಅಥವಾ ಮಾಲೀಕರು ಬೇಡವೆಂದರೆ ಬೇರೆಡೆಗೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಇದರಿಂದ ಮಹಿಳಾ ಕಾರ್ಮಿಕರು ಕಂಗಾಲಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಕೆಲಸವೇ ಇರದೆ ಮನೆಗೆ ವಾಪಾಸು ಹೋಗುವಂತಹ ಪರಿಸ್ಥಿತಿ ಬರುತ್ತದೆ. ಈ ರೀತಿಯಾದಂತಹ ಉದ್ಯೋಗದ ಸ್ವರೂಪವನ್ನು ಕಾರ್ಮಿಕರಾಗಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು ಹೊಂದಿದ್ದಾರೆ.
ಹಣವನ್ನು ಖರ್ಚು ಮಾಡುವುದರ ಬಗ್ಗೆ
ಭಾರತದಂತಹ ಬಹುಪಾಲು ಸಮುದಾಯಗಳಲ್ಲಿ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಕಾಣಬಹುದು. ಪಿತೃ ಪ್ರಧಾನ ಕುಟುಂಬದಲ್ಲಿ ಪುರುಷ ಮೌಲ್ಯಗಳಿಗೆ ಹೆಚ್ಚು ಪ್ರಾಧ್ಯನ್ಯತೆ ಕುಟುಂಬದಲ್ಲಿ ಹಿರಿಯ ಪುರುಷನೇ ಮನೆಯ ಯಜಮಾನನಾಗಿರುತ್ತಾನೆ. ಇಡೀ ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಆದರೆ ಕೆಲವರು ತೀರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಹೆಂಡತಿಯ ಅಥವಾ ಮಹಿಳೆಯು ಹೊರಗಡೆ ಬಂದು ದುಡಿದು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿರುತ್ತಾಳೆ. ಈ ಕೆಳಗಿನ ಕೋಷ್ಟಕದಿಂದ ಕುಟುಂಬಕ್ಕಾಗಿ ಯಾರು ಹೆಚ್ಚು ಖರ್ಚು ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಸಲಾಗಿದೆ.
ಕೋಷ್ಟಕ:೦೨
ಸೂಚನಾದಾರರು ಹಣವನ್ನು ಖರ್ಚು ಮಡುವುದರ ವಿವರ
ಖರ್ಚಿನ ವಿವರ ಆವೃತ್ತಿ
ಶೇಕಡವಾರು
ಕುಟುಂಬದ ಯಜಮಾನ ೧೨೨೪.೦೦
ಪತಿ/ಗಂಡ ೦೫ ೧೦.೦೦
ಸ್ವಂತಃ ೩೩೬೬.೦೦
ಒಟ್ಟು ೫೦೧೦೦.೦೦
ಈ ಮೇಲ್ಕಂಡ ಕೋಷ್ಟಕದಿಂದ ತಿಳಿದು ಬರುವುದೇನೆಂದರೆ, ಹಣವನ್ನು ಖರ್ಚು ಮಾಡುವವರಲ್ಲಿ ಕುಟುಂಬದ ಯಜಮಾನ ಶೇ.೨೪ ರಷ್ಟು, ತಾವೇ ಸ್ವತಃ ಮಾಡುವವರು ಶೇ.೧೦, ರಷ್ಟು ಮತ್ತು ಗಂಡ ಶೇ೬೬ ರಷ್ಟು ಎಂದು ತಿಳಿದು ಬಂದಿದೆ. ಆಂದರೆ ಕೆಲಸ ನಿರ್ವಹಿಸುವಂತಹ ಮಹಿಳೆಯೇ ತಮ್ಮ ಗಂಡದಿರು ಹೆಚ್ಚು ಖರ್ಚು ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಖರ್ಚಿನ ವಿವರವನ್ನು ನೊಡಿದಾಗ ವ್ಯಕ್ತಿಯೊಬ್ಬನ ಆದಾಯ ಮತ್ತು ಖರ್ಚಿನ ವಿವರನ್ನು ತಿಳಿದಾಗ ಮಾತ್ರ ಸಾಮಾನ್ಯವಾಗಿ ಆ ಕುಟುಂಬದ ಸಾಮಾಜಿಕ, ಆರ್ಥಿಕ, ಸ್ಥಾನವನ್ನು ನಿರ್ಧರಿಸಬಹುದು. ಕಾರ್ಖಾನೆಗಳಲ್ಲಿ ಅಥವಾ ಗಿರಣಿಗಳಲ್ಲಿ ಮಹಿಳಾ ಕಾರ್ಮಿಕರ ಖರ್ಚಿನ ವಿವರವನ್ನು ಈ ಕೆಳಗಿನ ಕೋಷ್ಟಕವನ್ನು ಗಮನಿಸಿದಾಗ ತಿಳಿಯಬಹುದು.
ಕೋಷ್ಟಕ:೦೩
ಮಾಹಿತಿದಾರರ ಖರ್ಚಿನ ವಿವರ
ಖರ್ಚಿನ ವಿವರ ಆವೃತ್ತಿ (೫೦)
ಶೇಕಡವಾರು(೧೦೦.೦೦%)
ಮಕ್ಕಳ ವಿದ್ಯಾಭ್ಯಾಸ ೧೮೩೬.೦೦
ದಿನನಿತ್ಯದ ಖರ್ಚು ೫೦೧೦೦.೦೦
ವಿವಾಹ ೨೦೪೦.೦೦
ಹಬ್ಬ ೫೦೧೦೦.೦
ಬಟ್ಟೆ ೫೦೧೦೦.೦೦
ಆಸ್ಪತ್ರೆ ೩೧೩೨.೦೦
ಈ ಮೇಲ್ಕಂಡ ಕೋಷ್ಟಕದಿಂದ ತಿಳಿದುಬರುವ ಅಂಶವೆನೆಂದರೆ, ಮಹಿಳೆಯರು ತಾವು ದುಡಿದಂತಹ ಆದಾಯವನ್ನು ಯಾವ ಯಾವ ಕಾರಣಕ್ಕೆ ಖರ್ಚು ಮಾಡುತ್ತಾರೆ ಎಂಬುದು ತಿಳಿದು ಬರುತ್ತದೆ. ಒಟ್ಟು ೫೦ ಮಾಹಿತಿದಾರರಲ್ಲಿ ಮುಖ್ಯವಾಗಿ ಮಕ್ಕಳ ವಿದ್ಯಾಬ್ಯಾಸಕ್ಕೆ ಶೇ.೩೬ ರಷ್ಟು, ದಿನನಿತ್ಯದ ಖರ್ಚಿಗೆ ಶೇ.೧೦೦ ರಷ್ಟು, ವಿವಾಹಕ್ಕೆ ಶೇ.೪೦ ರಷ್ಟು, ಹಬ್ಬಕ್ಕೆ ಶೇ. ೧೦೦ ರಷ್ಟು, ಒಟ್ಟಿಗೆ ಶೇ. ೧೦೦ ರಷ್ಟು ಆಸ್ಪತ್ರೆಗೆ ಶೇ. ೬೨ ರಷ್ಟು ಹೀಗೆ ಮಹಿಳಾ ಕಾರ್ಮಿಕರು ಸಹಜವಾಗಿ ಎಲ್ಲರು ಖರ್ಚು ಮಾಡುವ ರೀತಿಯಲ್ಲಿಯೇ ಅವರು ದುಡಿದಂತಹ ಆದಾಯವನ್ನು ಮಿತವ್ಯಯದ ರೀತಿಯಲ್ಲಿ ಖರ್ಚು ಮಾಡುತ್ತಾರೆ ಎಂಬುದು ವ್ಯಕ್ತವಾಗಿದೆ.
ವಿರಾಮದ ವೇಳೆಯ ಚಟುವಟಿಕೆಗಳು
ಭಾರತೀಯ ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಿಗೆ ವಿರಾಮ, ರಜೆ ಎನ್ನುವ ಶಬ್ದಗಳಿಗೆ ಆರ್ಥವೇ ಗೊತ್ತಿಲ್ಲ. ಕಾರಣ ಮಹಿಳಾ ಕಾರ್ಮಿಕರು ತಾವು ದುಡಿಯುವ ಸ್ಥಳಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ರಾತ್ರಿಯಿಂದ ಬೆಳಗಿನವರೆಗೆ ದುಡಿಯುತ್ತಿರುತ್ತಾರೆ. ಮಹಿಳಾ ಕಾರ್ಮಿಕರಿಗೆ ರಜಾ ದಿನಗಳು, ಅನಾರೋಗ್ಯದ ದಿನಗಳು, ಸಾರ್ವಜನಿಕ ರಜಾ ದಿನಗಳು, ಕೂಲಿ ರಹಿತ ರಜಾ ದಿನಗಳಾಗಿರುತ್ತದೆ. ಆದ್ದರಿಂದ ಇವರು ಯಾವ ದಿನ ಕೆಲಸ ಮಾಡುತ್ತಾರೆಯೋ ಆ ದಿನ ಅವರಿಗೆ ಕೂಲಿ ಸಿಗುತ್ತದೆ. ಸಿಗುವಷ್ಟೇ ವಿರಾಮ ವೇಳೆಯಲ್ಲಿ ಯಾವ ಚುಟವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಈ ಕೆಳಗಿನ ಕೋಷ್ಟಕದಿಂದ ತಿಳಿಯಬಹುದಾಗಿದೆ.
ಕೋಷ್ಟಕ:೩.೦೪
ಮಹಿಳಾ ಕಾರ್ಮಿಕರ ವಿರಾಮ ವೇಳೆಯ ಚುಟವಟಿಕೆಗಳ ವಿವರ
ವಿರಾಮ ವೇಳೆಯ ಚಟುವಟಿಕೆಗಳು ಆವೃತ್ತಿ (೫೦)
ಶೇಕಡವಾರು(೧೦೦.೦೦%)
ಸ್ನೆಹಿತರೊಂದಿಗೆ ೧೨೨೪.೦೦
ಸಿನಿಮಾಕ್ಕೆ ಹೋಗುವುದು ೧೦೨೦.೦೦
ಟಿ.ವಿ.ನೋಡುವುದು ೩೦೬೦.೦೦
ಇತರೆ ೫೦೧೦೦.೦೦
ಈ ಮೇಲ್ಕಂಡ ಕೋಷ್ಟಕದಿಂದ ತಿಳಿದುಬರುವ ಅಂಶಗಳೆAದರೆ, ಮಾಹಿತಿದಾರರು ಕೆಲಸ ಮುಗಿಸಿಕೊಂಡು ಬಂದನAತರ ಅಥವಾ ಆ ದಿನ ಕೆಲಸವಿಲ್ಲದ್ದಾಗ ಸ್ನೇಹಿತರೊಂದಿಗೆ ಕಾಲಕಳೆಯುವುದು ಶೇ.೨೪ ರಷ್ಟು ಸಿನಿಮಾಕ್ಕೆ ಹೋಗುವುದು ಶೇ.೨೦ರಷ್ಟು ಮನೆಯಲ್ಲಿ ಇತರೆ ಕೆಲಸದಲ್ಲಿ ತೊಡಗಿರುವವರು ಶೇ.೧೦೦ ರಷ್ಟು ಮಾತ್ತು ಟಿ.ವಿ ನೋಡುವುದು ಶೇ.೬೦ ರಷ್ಟು, ಮತ್ತು ಇತರೆ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಇಲ್ಲಿ ಕಾರ್ಮಿಕರು ಕೆಲಸ ಮುಗಿದ ನಂತರ ಮನೆಗೆ ಬಂದು ಮನೆಕೆಲಸದಲ್ಲಿ ತೊಡಗುತ್ತಾರೆ ಎಂಬುದನ್ನು ಗಮನಿಸಿದಾಗ ಅವರ ಜೀವನದ ಸಾಮಾಜಿಕ ಸ್ಥಿತಿಯ ಬಗ್ಗೆ ಅರಿವಾಗುತ್ತದೆ. ಮುಂದುವರೆದು ಮಹಿಳಾ ಕಾರ್ಮಿಕರು ಹೆಚ್ಚು ಮಧ್ಯಪಾನ ಸೇವಿಸುವುದು ಅಧ್ಯಯನದಿಂದ ತಿಳಿದುಬಂದ ಅಂಶವಾಗಿದೆ. ಅದಕ್ಕೆ ಅವರು ಬೆಳಗ್ಗೆಯಿಂದ ಸಾಯಂಕಾಲದ ವರೆಗೂ ದುಡಿದು ಬಂದಾಗ ಮೈ-ಕೈ ನೋವು ಮರೆಯಲು ಈ ಚಟ ಕಲಿತ್ತಿದ್ದೇವೆ ಎಂಬುದಾಗಿ. ಜೊತೆಗೆ ಕೂಲಿ ಹೆಚ್ಚಾಗಿಲ್ಲ. ಇದು ಅವರಿಗೆ ನುಂಗಲಾರದ ತುತ್ತಗಿ ಪರಿಣಮಿಸಿದೆ. ಅನೇಕ ಮಹಿಳಾ ಕಾರ್ಮಿಕರು ಆರೋಗ್ಯದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇವರಿಗೆ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ ಮಾಲೀಕರು ಮಹಿಳಾ ಕಾರ್ಮಿಕರಿಗೆ ಯಾವುದೇ ರೀತಿಯ ಕಷ್ಟಗಳಿಗೆ ಸ್ಪಂದಿಸುವುದಿಲ್ಲ. ಇದರಿಂದ ಮಾಲೀಕರು ಮತ್ತು ಮಹಿಳಾ ಕಾರ್ಮಿಕರ ಸಂಬAಧಗಳ ಮಧ್ಯೆ ಅಂತರ ಏರ್ಪಟ್ಟಿದೆ. ಅನೇಕ ಕಾರ್ಮಿಕರ ಸಂಘಟನೆಗಳಿದ್ದರೂ ಮಹಿಳಾ ಕಾರ್ಮಿಕರು ಅದರ ಬಗ್ಗೆ ಗಮನಹರಿಸುತ್ತಿಲ್ಲ ಮತ್ತು ಅದರ ಸದಸ್ಯತ್ವ ಪಡೆಯಲು ನಿರಾಕರಿಸುವುದು ಕಾರ್ಮಿಕ ಸಂಘಟನೆಗಳು ಇವರ ಕಷ್ಟಗಳಿಗೆ ಸ್ಪಂದಿಸದೆ ಸುಮ್ಮನಿರುವುದು ಇದಕ್ಕೆ ಮುಖ್ಯ ಕಾರಣ. ಇವರು ದುಡಿದಂತಹ ಆದಾಯ ಕುಟುಂಬದ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಾಹಕ್ಕೆ ಹಬ್ಬ ಹರಿದಿನಗಳಿಗೆ ಆರೋಗ್ಯ ತಪಾಸಣೆಗೆ ಇನ್ನೂ ಮುಂತಾದವುಗಳನ್ನು ಪೂರೈಸಿಕೊಳ್ಳಲು ವೆಚ್ಚ ಮಾಡುತ್ತಾರೆ. ತಾವು ದುಡಿದಂತಹ ಆದಾಯವು ಕಡಿಮೆಯಾಗಿ ಅವರು ಕೆಲಸ ಮಾಡುವ ಮಾಲೀಕರ ಹತ್ತಿರ ಸಾಲ ಕೇಳಿದರೆ ಅವರು ನೀಡಲು ನಿರಾಕರಿಸುತ್ತಿದ್ದಾರೆ.
ಅಧ್ಯಯನದಿಂದ ವ್ಯಕ್ತವಾದ ಅಂಶಗಳು
• ಮಾಹಿತಿದಾರರಲ್ಲಿ ಸಾಲವನ್ನು ಹೊಂದಿರುವವರ ಪ್ರಮಾಣ ಶೇ. ೭೪ರಷ್ಟು ಮತ್ತು ಸಾಲವನ್ನು ಹೊಂದದೇ ಇರುವವರು ಶೇ. ೨೬ರಷ್ಟಿದಾರೆ. ಇದರಿಂದ ತಿಳಿಯುವುದೇನೆಂದರೆ ಸಾಲ ಇರದವರ ಸಂಖ್ಯೆಗಿAತ ಸಾಲವಿರುವವರ ಸಂಖ್ಯೆ ಹೆಚ್ಚಾಗಿದೆ. ಇದ್ದರು ದುಡಿಯುವಂತಹ ಆದಾಯದಲ್ಲಿಯೇ ತಮ್ಮೆಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಅನಿವಾರ್ಯವಾಗಿ ಸಾಲದ ಸಂಕೋಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಸಾಲ ಎನ್ನುವುದು ಒಂದು ಚಕ್ರ ಇದ್ದ ಹಾಗೆ. ಅಂದರೆ ಅದು ಯಾವಾಗಲೂ ವೃತ್ತಾಕಾರದ ರೀತಿಯಲ್ಲಿ ಸುತ್ತುತ್ತಿರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಇವರು ಸಾಲವನ್ನು ಪಡೆಯುವ ಉದ್ದೇಶವೆಂದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಾಹಕ್ಕೆ, ಹಬ್ಬಹರಿದಿನಗಳಿಗೆ, ಆನಾರೋಗ್ಯಕ್ಕೆ, ತುತ್ತಾದಾಗ ಮನೆಯ ದಿನನಿತ್ಯ ಖರ್ಚಿಗಾಗಿ ಹೀಗೆ ಇನ್ನೂ ಹಲವಾರು ಕಾರಣಗಳಿಂದ ಸಾಲವಾಗಿ ಪಡೆಯುತ್ತಾರೆ.
• ಒಂದು ದಿನ ಒಂದು ಕಡೆ ದುಡಿದೆರೆ ಮತ್ತೊಂದು ದಿನ ಅಲ್ಲಿ ಕೆಲಸವಿರದಿದ್ದರೆ ಅಥವಾ ಮಾಲೀಕರು ಬೇಡವೆಂದರೆ ಬೇರೆ ಕಡೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಇದರಿಂದ ಮಹಿಳಾ ಕಾರ್ಮಿಕರು ಕಂಗಾಲಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
• ಹಣವನ್ನು ಖರ್ಚು ಮಾಡುವವರಲ್ಲಿ ಕುಟುಂಬದ ಯಜಮಾನ ಶೇ.೨೪ ರಷ್ಟು ತಾವೇ ಸ್ವತಃ ಮಾಡುವವರು ಶೇ.೧೦ ರಷ್ಟು ಮತ್ತು ಗಂಡ ಶೇ೬೬ ರಷ್ಟು ಎಂದು ತಿಳಿದು ಬಂದಿದೆ. ಆಂದರೆ ಇಲ್ಲಿ ಕೆಲಸ ನಿರ್ವಹಿಸುವಂತಹ ಮಹಿಳೆಯೇ ತಮ್ಮ ಗಂಡದಿರು ಹೆಚ್ಚು ಖರ್ಚು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಉಪಸಂಹಾರ
ಒಟ್ಟಿನಲ್ಲಿ ಮಹಿಳಾ ಕಾರ್ಮಿಕರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತುಂಬಾ ಕಷ್ಟಕರ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ತಮ್ಮ ದೈನಂದಿನ ಖರ್ಚುಗಳಿಗೆ ಸಾಲವಾಗಿ ಪಡೆದು ಈ ಸಾಲವನ್ನು ತಮ್ಮ ಕೆಲಸದ ಸಮಯದಲ್ಲಿ ಇಂತಿಷ್ಟು ಎಂಬAತೆ ಕೂಲಿಯಲ್ಲಿ ಸಾಲವನ್ನು ತೀರಿಸುತ್ತಾ, ಜೀವನ ಸಾಗಿಸುತ್ತಾರೆ. ಈ ರೀತಿಯಾಗಿ ಮಹಿಳಾ ಕಾರ್ಮಿಕರ ಸ್ಥಿತಿ ಬಹಳ ಶೋಚನೀಯವಾಗಿರುವುದನ್ನು ಸೂಕ್ಷö್ಮವಾಗಿ ತಿಳಿಯಬಹುದು.
ಆಧಾರ ಗ್ರಂಥಗಳು
Kasulis, K. (2017). The 2,500-year-old roots of gender inequality. The Boston Globe. Published on Mar 04, 2017.
Sasikala, R., Radha, G., &Thangaraja, K. (2013). A study on the problems faced by women journalists. Asian Review of Social Sciences, 2 (1), 32-35.
Greenslade, R. (2011). Men Still Dominate National Newspaper Journalism. Published on Mar 4 th , 2011.
Rai, U. (2004). Women in Journalism – Then and Now. The Hoot. Article published on July 17, 2004. Retrieved from The Hoot website.
Safa, M. N., &Akter. T. (2015). Challenges of female journalists in Bangladesh. Humanities and Social Sciences, 3(5), 207-214.
Saroja, K. (2010). Women and Mass media, Hampi: Prasaranga, Kannada University. (in Kannada)
Singh, N. (2016). Analyzing status of women journalists in Indian TV news channels. Abhinav national monthly Refereed Journal of Research in Arts & Education, 5 (5), 1-6.
The Hindu (2019). Female labour force participation in India fell to 26 % in 2018: Report. Published on Mar 08, 2019.
Tomar, R. (2011). Gender and media: Status of women journalist in Hindi print media in India.Presented atRethinking development in an Age of Scarcity and Uncertainty on University of York, 19-22 sep, 2011.
Vaggi, Y. S. & Vittoba, B. (2010). Women and Media in Globalization, Yojana (Kannada), 25 (04). (in Kannada)



Comments