top of page

ಅಭಿವೃದ್ಧಿ ಸಂವಹನದಲ್ಲಿ ಕನ್ನಡ ಚಲನಚಿತ್ರಗಳು: ಪುಟ್ಟಕ್ಕನ ಹೈವೆ ಸಿನಿಮಾದ ಒಂದು ವಿಶ್ಲೇಷಣೆ

ಸಚಿನ್ ಎನ್.ಜೆ. ಸಂಶೋಧನಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-೫೭೭ ೪೫೧ ಶಿವಮೊಗ್ಗ, ಕರ್ನಾಟಕ. Email: sachinnj06@gmail.com


ಪ್ರೊ. ಸತೀಶ್ ಕುಮಾರ್, ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-೫೭೭ ೪೫೧ ಶಿವಮೊಗ್ಗ, ಕರ್ನಾಟಕ. Email: sathishandinje@gmail.com


ಸಾರಾಂಶ: ಭಾರತೀಯ ಚಲನಚಿತ್ರರಂಗದಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರಾಮುಖ್ಯತೆ ಮಹತ್ವದ್ದು, ಈ ನಿಟ್ಟಿನಲ್ಲಿ ಮರಾಠಿ, ಗುಜರಾತಿ, ಬೆಂಗಾಳಿ, ಮಲಯಾಳಂ ಮತ್ತು ಕನ್ನಡ ಚಲನಚಿತ್ರರಂಗಗಳು ಅತೀ ಹೆಚ್ಚು ಕಲಾತ್ಮಕ ಚಲನಚಿತ್ರಗಳನ್ನು ಹೊರತಂದು ರಾಷ್ಟಿçÃಯ ಮನ್ನಣೆಯನ್ನು ಗಳಿಸಿವೆ. ಕನ್ನಡ ಚಲನಚಿತ್ರರಂಗವು ತಮ್ಮ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದಲ್ಲದೆ, ಆಯಾ ಕಾಲಘಟ್ಟಕ್ಕೆ ತಕ್ಕಂತಹ ಅಭಿವೃದ್ಧಿ ಆಯಾಮಗಳನ್ನು ಚಲನಚಿತ್ರದ ಮೂಲಕ ನೀಡಿ ಜನರನ್ನು ಮುಟ್ಟುವ ಕಾರ್ಯವನ್ನು ನಿರ್ದೇಶಕರು ಮಾಡುತ್ತಾ ಬಂದಿದ್ದಾರೆ. ಇಂತಹ ಅಭಿವೃದ್ಧಿ ಪೂರಕ ಚಲನಚಿತ್ರಗಳು ಕನ್ನಡದಲ್ಲಿ ಹಲವಾರು ತೆರೆಕಂಡಿದ್ದು, ೨೦೧೧ರಲ್ಲಿ ತೆರೆಕಂಡ ಬಿ. ಸುರೇಶ್ ನಿರ್ದೇಶನದ ಪುಟ್ಟಕ್ಕನ ಹೈವೆ ಪ್ರಮುಖವಾದದು. ಈ ಚಲನಚಿತ್ರದಲ್ಲಿ ಅಭಿವೃದ್ಧಿಯು ಸಾಮಾನ್ಯ ಜನರ ಮೇಲೆ ಯಾವ ರೀತಿಯಲ್ಲಿ ಪರಿಣಾಮಗಳನ್ನು ಬೀರಲಿದೆ ಎಂಬುದನ್ನುಚಿತ್ರಿಸಿದ್ದು, ಅದನ್ನು ವಿಶ್ಲೇಷಿಸುವುದು ಈ ಸಂಶೋಧನಾ ಪತ್ರಿಕೆಯ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಅಭಿವೃದ್ಧಿಯು ವೈಯಕ್ತಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಂತಗಳಲ್ಲಿ ತಂದಿರುವ ಬದಲಾವಣೆಯ ಆಯಾಮಗಳನ್ನು ಗುಣಾತ್ಮಕ ವಿಷಯ ವಿಶ್ಲೇಷಣೆ ವಿಧಾನದ ಮೂಲಕ ಅಧ್ಯಯನಿಸಿ ಫಲಿತಾಂಶಗಳನ್ನು ದಾಖಲಿಸಲಾಗಿದೆ.


ಪ್ರಮುಖ ಪರಿಕಲ್ಪನೆಗಳು: ಕನ್ನಡ ಚಲನಚಿತ್ರರಂಗ, ಅಭಿವೃದ್ಧಿ ಸಂವಹನ, ಕಲಾತ್ಮಕ ಚಲನಚಿತ್ರ, ವಿಷಯ ವಿಶ್ಲೇಷಣೆ.


ಪೀಠಿಕೆ

ಚಲನಚಿತ್ರ ಮಾಧ್ಯಮ ಏಕವ್ಯಕ್ತಿ ಸೃಷ್ಟಿಯಲ್ಲ, ಅದು ಸಮೂಹ ಸೃಷ್ಟಿ. ಜನಪದ ಕಲೆಯೊಂದರ ಸಮೂಹದ ದುಡಿಮೆಯಾಗಿ ಚಲನಚಿತ್ರ ಕಂಡುಬರುತ್ತದೆ. ಚಲನಚಿತ್ರದಲ್ಲಿ ಛಾಯಾಗ್ರಹಣ, ಬೆಳಕಿನ ಸಂಯೋಜನೆ, ಕಲಾ ನಿರ್ದೇಶನ, ಪರಿಸರ ನಿರ್ಮಾಣ, ಅಭಿನಯ ಹೀಗೆ ವಿವಿಧ ಕಲಾವಿಭಾಗಗಳಲ್ಲಿ ಶ್ರಮ ಮತ್ತು ಸೃಜನಶೀಲತೆಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಜನಪದಕಲೆಯಂತೆ ಚಲನಚಿತ್ರ ನಿರ್ಮಾಣವೂ ಒಂದು ಸಾಮೂಹಿಕ ಕಲೆಯೆಂದು ಭಾವಿಸುತ್ತಾರೆ (ಬರಗೂರು ೨೦೦೪).


ದುರಂತಗಳನ್ನು ಒಟ್ಟೊಟ್ಟಿಗೆ ಹೆಣೆಯುತ್ತಾ ವೈರುಧ್ಯಗಳನ್ನೇ ಮುಖಾಮುಖಿಯಾಗಿಸಿ ನೋಡುಗರಲ್ಲಿ ಸಿಟ್ಟು ಆಕ್ರೋಶಗಳನ್ನು ಹುಟ್ಟಿಸುತ್ತಾ ಒಮ್ಮೊಮ್ಮೆ ನಮ್ಮ ಅಸಹಾಯಕತೆಯ ಬಗ್ಗೆ ನಮಗೇ ಅಸಹನೆ ಬೆಳೆಯುವಂತೆ ಮಾಡುತ್ತಾ, ಕೆಲವೊಮ್ಮೆ ವ್ಯಂಗ್ಯದ ಮೂಲಕ ಚುಚ್ಚುತ್ತಾ ಸಾಗುವ ಚಿತ್ರದ ಸಾಂದ್ರವಾಗಿ ಚಿಂತನೆಗೆ ಹಚ್ಚುವಂಹ ಚಲನಚಿತ್ರಗಳೇ ಅಭಿವೃದ್ಧಿಯಿಂದಾದ ತೊಂದರೆಗಳನ್ನು ಸಹ ಬಿಂಬಿಸುತ್ತವೆ ಎಂದು ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.


ಅಭಿವೃದ್ಧಿಯಿಂದಾದ ತೊಂದರೆಗಳನ್ನು ತೆರೆಯ ಮೇಲೆ ತಂದಾಗ ಒಂದು ಅರ್ಥದಲ್ಲಿನ ನಮ್ಮ ಇತಿಹಾಸದ ಒಂದು ನಿರ್ದಿಷ್ಟ ಕಾಲದ ದುರಾದೃಷ್ಟ ಅಧ್ಯಯನವಾಗಿ ಉಳಿಯುವುದಕ್ಕೆ ಸರಿಯಾದದ್ದೇ. ಇನ್ನು ೫೦ ವರ್ಷಗಳ ನಂತರವೂ ಸಹ ಸಿನಿಮಾ ನೋಡಿದಾಗ ನಮ್ಮ ಹಿರಿಯರು ಎಂಥ ನತದೃಷ್ಟರಾಗಿದ್ದರು ಎಂದು ಖಿನ್ನಮನಸ್ಸಿನಲ್ಲಿ ಉದ್ಗರಿಸುವ ಸಿನಿಮಾಗಳೇ ಈ ಅಭಿವೃದ್ಧಿ ಚಲನಚಿತ್ರಗಳು ಎಂದು ಜಿ.ಕೆ. ಗೋವಿಂದರಾವ್ ಅಭಿಪ್ರಾಯಪಟ್ಟಿದ್ದಾರೆ.


ಒಬ್ಬ ವ್ಯಕ್ತಿಯಿಂದ ತಲಾ ಆದಾಯದ ಮೂಲಕ ದೇಶದ ಆರ್ಥಿಕತೆಯನ್ನು ಹೇಗೆ ಅಳೆಯಲಾಗುತ್ತದೆಯೋ, ಹಾಗೆಯೇ ‘ಅಭಿವೃದ್ಧಿಗಾಗಿ ಸಿನಿಮಾ’ ಎಂಬ ಕೃತಿಯಲ್ಲಿ ನಿಜವಾದ ಅಭಿವೃದ್ಧಿ ಕಲ್ಪನೆಯನ್ನ ಒಬ್ಬ ವ್ಯಕ್ತಿ ಆತನೇ ಸಾಧಿಸಿಕೊಳ್ಳುವಂಥಹದ್ದು ಎಂಬುದಾಗಿ ವಿವರಿಸುತ್ತಾರೆ. ಪುಸ್ತಕ ರಚನೆಯಾದ ಕಾಲದಲ್ಲಿ ಅಭಿವೃದ್ಧಿಗೆ ಸಂಬAಧಿಸಿದAತಹಾ ಸಿನಿಮಾಗಳು ವಿರಳವಾಗಿ ತೆರೆಕಾಣುತ್ತಿದ್ದವು. ಆದರೆ ಇಂದಿನ ಕಾಲಘಟ್ಟಕ್ಕೆ ಹೋಲಿಸಿಕೊಂಡರೆ ಅಭಿವೃದ್ಧಿಗೆ ಸಂಬAಧಿಸಿದAತಹಾ ಕನ್ನಡ ಸಿನಿಮಾಗಳು ತೆರೆ ಕಂಡಿವೆ ಹಾಗೂ ತೆರೆ ಕಾಣುತ್ತಿವೆ (ಕೆ. ವಿ ಸುಬ್ಬಣ್ಣ, ೧೯೮೩).


ಅಭಿವೃದ್ಧಿ ಸಂವಹನ


ಅಭಿವೃದ್ಧಿ


ಪ್ರಕ್ರಿಯೆಯಲ್ಲಿ ಸಂವಹನ ಪ್ರಮುಖ ಪಾತ್ರವಹಿಸುತ್ತದೆ. ಸಂವಹನದ ನೆರವಿಲ್ಲದೆ ಅಭಿವೃದ್ಧಿ ವಿಚಾರಧಾರೆಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳು ಜನರನ್ನು ತಲುಪುವುದು ಸಾಧ್ಯವಿಲ್ಲ. ಸ್ಥಳೀಯ, ರಾಷ್ಟಿçÃಯ, ಪ್ರಾದೇಶಿಕ ಮತ್ತು ಅಂತರರಾಷ್ಟಿçÃಯ ಮಟ್ಟಗಳಲ್ಲಿ ಎಲ್ಲ ಬಗೆಯ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಪರಿಣಾಮಕಾರಿ ಸಂವಹನ


ನೆರವು ಅತ್ಯವಶ್ಯಕ. ಸಂವಹನ ತಜ್ಞರು ವಿಶ್ವದ ಎಲ್ಲೆಡೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂವಹನದ ಪಾತ್ರವನ್ನು ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ ಬಹುತೇಕ ಅಭಿವೃದ್ಧಿ ಯೋಜನೆಗಳು ಸಂವಹನದ ಸಹಾಯವಿಲ್ಲದೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲ್ಪಟ್ಟಿಲ್ಲ. ಸಂವಹನ ಮಾಧ್ಯಮಗಳೂ ಸಹ ಅಭಿವೃದ್ಧಿ ಕಾರ್ಯಚಟು




ವಟಿಕೆಗಳಿಗೆ ವಿಶೇಷ ಆದ್ಯತೆ ನೀಡಿಲ್ಲವೆಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ (ಗುರು, ೨೦೧೪).

ಕೆ. ಸಿಂಗ್ ಅವರು (೧೯೮೫) ಅಭಿವೃದ್ಧಿ ಸಂವಹನವನ್ನು ಬಹಳ ಸರಳವಾಗಿ, “ಸರ್ಕಾರ ಹಾಗೂ ಜನತೆಯನ್ನು ಪರಸ್ಪರ ಹತ್ತಿರ ತರುವ ವ್ಯಾಪಕ ಶೈಕ್ಷಣಿಕ ಪ್ರಕ್ರಿಯೆ” ಎಂದು ಪರಿಭಾಷಿದರು. ಆದರೆ ದುರಂತವೆAದರೆ ಸರಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಈ ಪರಿಕಲ್ಪನೆ ಒಳಗೊಂಡAತೆ ತೋರುವುದಿಲ್ಲ. ಈಗಲೂ ಸರಕಾರದ ಅನೇಕ ಅಭಿವೃದ್ಧಿ ಯೋಜನೆಗಳು ಉದ್ದೇಶಿತ ಜನರಿಗೆ ಮಾಹಿತಿಯನ್ನು ಮುಟ್ಟಿಸುವುದನ್ನೇ ತಮ್ಮ ಕೆಲಸ, ಅವರಿಂದ ತಾವು ಕಲಿಯುವುದಲ್ಲ ಎಂದೇ ಭಾವಿಸಿವೆ. ಅಭಿವೃದ್ಧಿಯ ಇಡೀ ಪ್ರಕ್ರಿಯೆಯಲ್ಲಿ ಸಂವಹನದ ಮಹತ್ವವನ್ನು ಗೌಣವಾಗಿ ಕಾಣುತ್ತವೆ ಎಂಬುದಾಗಿ ತಿಳಿಸುತ್ತಾರೆ.


“ಅಭಿವೃದ್ಧಿ ಸಂವಹನ ಅಂದರೆ ಒಂದು ದೇಶದ ಜನತೆಯಲ್ಲಿ ಹೆಚ್ಚಿನ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ತರುವ ಮತ್ತು ಮಾನವ ಸಂಪನ್ಮೂಲದ ಪರಿಪೂರ್ಣವಾದ ಬಳಕೆಯ ಮೂಲಕ ದೇಶವನ್ನು ಬಡತನದ ಗತಿಯಿಂದ ಸಶಕ್ತ ಆರ್ಥಿಕ ಪ್ರಗತಿಯ ಸ್ಥಿತಿಯ ಕಡೆಗೆ ಶೀಘ್ರಗತಿಯಲ್ಲಿ ಪರಿವರ್ತಿಸುವುದಕ್ಕಾಗಿ ಬಳಸುವ ಮಾನವ ಸಂವಹನದ ಒಂದು ಕಲೆ ಮತ್ತು ವಿಜ್ಞಾನ” ಎಂದು ನೋರಾ ಸಿ. ಕ್ಯುಬ್ರಾಲ್ (೧೯೬೨) ಎಂಬುವರು ಪರಿಭಾಷೆಯನ್ನು ನೀಡಿದ್ದಾರೆ (ಕಾಕಡೆ ಮತ್ತು ಪಾಷ, ೨೦೧೭).





ಸಾಹಿತ್ಯ ವಿಮರ್ಶೆ

ಮಿಲ್ಲರ್ ಅವರ ‘ಸೋವಿಯತ್ ಸಿನಿಮಾ, ೧೯೨೯-೪೧: ದಿ ಡೆವೆಲಪಮೆಂಟ್ ಆಫ್ ಇಂಡಸ್ಟಿç ಆ್ಯಂಡ್ ಇನ್ಫಾçಸ್ರö್ಟಕ್ಚರ್’ ಎಂಬ ಸಂಶೋಧನಾ ಲೇಖನದಲ್ಲಿ ೧೯೨೯ರಿಂದ ೪೧ರ ವರೆಗೆ ಬಂದAತಹ ಸೋವಿಯತ್ ಚಲನಚಿತ್ರದಿಂದ ಉದ್ಯಮ ಮತ್ತು ಮೂಲ ಸೌಕರ್ಯ ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದರ ಬಗ್ಗೆ ತಿಳಿಸಿದ್ದಾರೆ (ಮಿಲ್ಲರ್, ೨೦೦೬).


‘ಸಿನಿಮಾ, ಹ್ಯೂಮನ್ ರೈಟ್ಸ್ ಆ್ಯಂಡ್ ಡೆವಲಪ್‌ಮೆಂಟ್: ದಿ ಸಿನಿಮಾ ಆ್ಯಸ್ ಎ ಪೆಡಗಾಜಿಕಲ್ ಪ್ರಾಕ್ಟಿಸ್’ ಲೇಖನದಲ್ಲಿ ಚಲನಚಿತ್ರ, ಸಂಗೀತ ಮತ್ತು ಸಾಹಿತ್ಯದಂತಹ ಬೋಧನೆ, ಕಲಿಕೆಗೆ ವಿವಿಧ ವಿಧಾನಗಳ ಮಹತ್ವದ ಬಗ್ಗೆ ಹೆಚ್ಚು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಆದರೆ ಅದು ಏಕೆ ಮಹತ್ವದ್ದಾಗಿದೆ ಎಂದು ಈ ಲೇಖನದಲ್ಲಿ ತಿಳಿಸಲಾಗಿಲ್ಲ (ಗ್ರುಬ್ಬ ಮತ್ತು ಮೆರಿಡಿಯೋನಲ್, ೨೦೨೦).


‘ಸಿನಿಮಾ ಆ್ಯಂಡ್ ಟೆಕ್ನಾಲಜೀಸ್: ದಿ ಡೆವಲಪ್‌ಮೆಂಟ್ ಆಫ್ ಡಿಜಿಟಲ್ ವಿಡಿಯೊ ಫಿಲ್ಮ್ ಮೇಕಿಂಗ್ ಇನ್ ವೆಸ್ಟ್ ಆಫ್ರಿಕಾ’ ಈ ಸಂಶೋಧನೆಯು ಡಿಜಿಟಲ್ ಚಲನಚಿತ್ರ ಬೆಳವಣಿಗೆ, ಚಲನಚಿತ್ರ ಉದ್ಯಮದ ಅಭಿವೃದ್ಧಿಗೆ ಪೂರಕವಾಗುವುದರ ಬಗ್ಗೆ ಹಾಗೂ ಅದರ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಡಿಜಿಟಲ್ ತಂತ್ರಜ್ಞಾನಗಳು ಅನೇಕ ಜನರಿಗೆ ಚಲನಚಿತ್ರಗಳನ್ನು ಮಾಡುವ ಅವಕಾಶವನ್ನು ನೀಡುತ್ತಿದ್ದು, ಈ ತಂತ್ರಜ್ಞಾನದಿAದ ಚಲನಚಿತ್ರ ಉದ್ಯಮದಲ್ಲಿನ ಅಭಿವೃದ್ಧಿ ಕಂಡಿದೆ ಎಂದು ವಿವರಿಸಿದ್ದಾರೆ (ಬೆಂಗ್ರ್, ೨೦೧೨).


‘ದಿ ರೋಲ್ ಆಫ್ ಫಿಲ್ಮ್ ಇನ್ ಡೆವೆಲಪ್‌ಮೆಂಟ್’ ಎಂಬ ಲೇಖನದಲ್ಲಿ ಚಲನಚಿತ್ರದ ಇತಿಹಾಸದ ಜೊತೆ ಜೊತೆಗೆ ಬೆಳೆದು ಬಂದ ಹಾದಿಯನ್ನು, ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಸಿನಿ ಕ್ಷೇತ್ರ ಅಭಿವೃದ್ಧಿ ಹೊಂದುತ್ತಾ ಬಂದುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ (ಹಾಪ್‌ಕಿನ್‌ಸನ್, ೧೯೭೧).


ಮೇಲಿನ ಕೃತಿಗಳಲ್ಲಿ ವಿವರಿಸಿದಂತೆ ಅಭಿವೃದ್ಧಿ ಸಂವಹನದಲ್ಲಿ ಚಲನಚಿತ್ರದ ಪಾತ್ರ ಮುಖ್ಯವಾಗಿ ಕನ್ನಡ ಚಲನಚಿತ್ರಗಳ ಕುರಿತು ಅಧ್ಯಯನಗಳು ನಡೆದಿರುವುದು ತುಂಬಾ ವಿರಳ. ಅದಕ್ಕಾಗಿ ಈ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕನ್ನಡ ಚಲನಚಿತ್ರ ‘ಪುಟ್ಟಕ್ಕನ ಹೈವೆ’ಗೆ ಆದ್ಯತೆ ನೀಡಿ ಅಭಿವೃದ್ಧಿ ಸಂವಹನದಲ್ಲಿ ಕನ್ನಡ ಚಲನಚಿತ್ರಗಳ ಪಾತ್ರವನ್ನು ವಿಶ್ಲೇಷಣೆ ಮಾಡಲಾಗಿದೆ.


ಅಧ್ಯಯನದ ಉದ್ದೇಶಗಳು


ಸಾಮಾನ್ಯ ಉದ್ದೇಶ

ಪುಟ್ಟಕ್ಕನ ಹೈವೆ ಚಲನಚಿತ್ರಕ್ಕೆ ಆದ್ಯತೆ ನೀಡಿ ಅಭಿವೃದ್ಧಿ ಸಂವಹನದಲ್ಲಿ ಕನ್ನಡ ಚಲನಚಿತ್ರಗಳ ಪಾತ್ರವನ್ನು ವಿಶ್ಲೇಷಣೆ ಮಾಡುವುದು ಈ ಸಂಶೋಧನಾ ಲೇಖನದ ಸಾಮಾನ್ಯ ಉದ್ದೇಶವಾಗಿದೆ.


ನಿರ್ದಿಷ್ಟ ಉದ್ದೇಶಗಳು

೧. ಪುಟ್ಟಕ್ಕನ ಹೈವೆ ಚಲನಚಿತ್ರದಲ್ಲಿ ಅಭಿವೃದ್ಧಿಯ ಸಂದೇಶವನ್ನು ಚಿತ್ರಿಸಿರುವ ಬಗೆಯನ್ನು ತಿಳಿಯುವುದು

೨. ಆಯ್ದ ಚಲನಚಿತ್ರದಲ್ಲಿ ಸಮಕಾಲೀನ ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳು ಬಿಂಬಿತವಾದ ಬಗೆಯನ್ನು ವಿಶ್ಲೇಷಿಸುವುದು.

೩. ಆಯ್ದ ಚಲನಚಿತ್ರದ ಮೇಲೆ ಪ್ರಭಾವ ಬೀರಿದ ಅಂಶಗಳನ್ನು ಗುರುತಿಸುವುದು.


ಅಧ್ಯಯನದ ಪ್ರಾಮುಖ್ಯತೆ: ಕನ್ನಡ ಚಲನಚಿತ್ರರಂಗದಲ್ಲಿ ವರ್ಷಕ್ಕೆ ನೂರಾರು ಚಲನಚಿತ್ರಗಳು ತೆರೆಕಾಣುತ್ತವೆ. ಒಂದು ಚಲನಚಿತ್ರರಂಗ ಬೆಳೆದಂತೆ ಚಲನಚಿತ್ರಗಳ ಮೇಲಿನ ಸಂಶೋಧನೆಗಳು ಆಯಾ ಕಾಲಘಟ್ಟಕ್ಕೆ ನಡೆಯಬೇಕಿರುತ್ತದೆ. ಆದರೆ ಕನ್ನಡ ಚಲನಚಿತ್ರಗಳ ಮೇಲಿನ ಅದರಲ್ಲೂ ತೀರಾ ವಿರಳವಾಗಿ ತೆರೆ ಕಾಣುತ್ತಿರುವ ಅಭಿವೃದ್ಧಿ ಆಧಾರಿತ ಚಲನಚಿತ್ರಗಳ ಮೇಲೆ ಸಂಶೋಧನೆಗಳು ವಿರಳದಲ್ಲೇ ವಿರಳ. ಆದ್ದರಿಂದ ಅಭಿವೃದ್ಧಿಯಾಧಾರಿತ ಚಲನಚಿತ್ರಗಳ ಮೂಲಕ ಸ್ಥಳೀಯ ಜನರ ಕಷ್ಟ ನಷ್ಟಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ, ಇಂತಹ ಚಲನಚಿತ್ರವನ್ನು ಕಲೆಹಾಕಿ ಅಧ್ಯಯನಕ್ಕೆ ಒಳಪಡಿಸುವುದು ಪ್ರಸ್ತುತ ದಿನಗಳಲ್ಲಿ ತುಂಬ ಅವಶ್ಯವೆನಿಸುತ್ತದೆ.


ಅಧ್ಯಯನದ ವ್ಯಾಪ್ತಿ; ಕನ್ನಡದ ಅಭಿವೃದ್ಧಿಯಾಧಾರಿತ ಆಯ್ದ ಒಂದು ಚಲನಚಿತ್ರವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ೨೦೧೦ ರಿಂದ ೨೦೨೨ರ ವರೆಗಿನ ಕಾಲಘಟ್ಟದಲ್ಲಿ ಅಥವಾ ೨೦೧೦ ಇಸವಿಯ ಹಿಂದೆಯೂ ಕೂಡ ಹಲವಾರು ಚಲನಚಿತ್ರಗಳು ಅಭಿವೃದ್ಧಿ ಸಂದೇಶವನ್ನಿಟ್ಟುಕೊAಡು ತೆರೆಕಂಡಿವೆಯಾದರೂ, ಅಂದಿನ ಕಾಲಘಟ್ಟದ ಪ್ರಸ್ತುತತೆಗೆ ತಕ್ಕಂತಹಾ ವಿಚಾರದಾರೆಗಳನ್ನು ಚಿತ್ರಗಳ ಮೂಲಕ ಪ್ರದರ್ಶಿಸಲಾಗಿದೆ. ಆದರೆ ಪ್ರಸ್ತುತ ದಿನಮಾನಗಳಿಗೆ ಚಿರಪರಿಚಿತವಿರುವ ಚಿತ್ರಗಳ ಆಯ್ಕೆ ಈ ಅಧ್ಯಯನಕ್ಕೆ ಮುಖ್ಯವೆನಿಸಿ, ೨೦೧೧ರಲ್ಲಿ ತೆರೆ ಕಂಡ ಪುಟ್ಟಕ್ಕನ ಹೈವೆ ಸಿನಿಮಾವನ್ನು ಮಾತ್ರ ಅಧ್ಯಯನಕ್ಕೆ ಒಳಪಡಸಲಾಗಿದೆ.


ಅಧ್ಯಯನದ ವಿಧಾನ

ಒಂದು ಸಂಶೋಧನೆಗೆ ಪ್ರಾಥಮಿಕ ಮೂಲ ಬಹಳ ಅವಶ್ಯಕ. ಪ್ರಾಥಮಿಕ ಮೂಲ ಹೆಚ್ಚು ವಿಶ್ವಾಸಾರ್ಹ ಮಾಹಿತಿ ಎಂದು ರೈಮೋ ಸ್ಕಿçÃಫ್‌ಕೆರ್ಕ್ (೨೦೨೧) ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ಪ್ರಮುಖವಾಗಿ ಪ್ರಾಥಮಿಕ ಮಾಹಿತಿಯನ್ನು ಚಲನಚಿತ್ರಗಳ ವಿಷಯ ವಿಶ್ಲೇಷಣೆಯ ಮೂಲಕ ಪಡೆದುಕೊಳ್ಳಲಾಗಿದೆ.


ಅಭಿವೃದ್ಧಿ ಸಂವಹನಕ್ಕೆ ಪೂರಕವೆನಿಸುವಂತೆ ಕನ್ನಡದ ಚಲನಚಿತ್ರೋದ್ಯಮದಲ್ಲಿ ೨೦೧೦ರಿಂದ ಈಚೆಗೆ ತೆರೆಕಂಡ ‘ಪುಟ್ಟಕ್ಕನ ಹೈವೆ’ ಚಲನಚಿತ್ರವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ೧೨ ವರ್ಷಗಳ ಅವಧಿಯಲ್ಲಿ ಹೆಚ್ಚು ಪರಿಣಾಮವನ್ನುಂಟುಮಾಡಿದ ಚಲನಚಿತ್ರವನ್ನು ‘ಗುಣಾತ್ಮಕ ವಿಷಯ ವಿಶ್ಲೇಷಣೆ’ ವಿಧಾನದ ಮೂಲಕ ವಿಶ್ಲೇಷಣೆ ನಡೆಸಲಾಗಿದೆ. ಆನುಷಂಗಿಕ ಮಾಹಿತಿಯನ್ನು ಪುಸ್ತಕಗಳು, ವಿಡಿಯೋಗಳು, ಸಂಶೋಧನಾ ಲೇಖನಗಳು, ಅಂತರ್ಜಾಲದ ಮೂಲಕ ಕಲೆಹಾಕಿ ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಲಾಗಿದೆ.


ಈ ಚಲನಚಿತ್ರದಲ್ಲಿ ‘ಹೈವೆ’ ನಿರ್ಮಾಣದಿಂದಾಗಿ ಗುಳೆ (ವಲಸೆ) ಹೋಗುವ ಕುಟುಂಬಗಳು ಪರಿಹಾರೋಪಾಯದಲ್ಲಿ, ಇನ್ನೊಂದೆಡೆ ಭೂಮಿ ಪಡೆದು ಕೃಷಿಕರಾಗಲು ಬಯಸುವಂಥದ್ದು ಗಮನಾರ್ಹವಾಗಿ ಚಿತ್ರಿಸಿದ್ದಾರೆ. ಆದರೆ ಅಲ್ಲಿಯೂ ತಳ ಊರಲಾಗದೆ ಹೈವೆ ನಿರ್ಮಾಣದ ಪ್ರಭಾವಕ್ಕೆ ಇನ್ನೊಮ್ಮೆ ನೆಲೆ ಕಳೆದುಕೊಳ್ಳುವ ಪರಿ ವಿಭಿನ್ನವಾಗಿ ಚಿತ್ರಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳ ಹಿಂದೆ ಹೆಣ್ಣಿನ ಸಹನೆಯ ಗುಣಗಳನ್ನು ಪುಟ್ಟಕ್ಕನ ಪಾತ್ರ ಮುಖೇನ ಮನಮುಟ್ಟುವಂತೆ ಅಭಿವ್ಯಕ್ತಿಸಿದ್ದಾರೆ. ಇಲ್ಲಿ ಹೆಣ್ಣಿನ ಪಾತ್ರದಲ್ಲೇ ಪುಟ್ಟಕ್ಕನನ್ನು ಚಿತ್ರಿಸುವುದು ಒಂದು ಬಗೆ ಆದರೆ, ಇನ್ನೊಂದೆಡೆ ಒಂದು ಹೆಣ್ಣು ಸಮಾಜದಲ್ಲಿ ಅನುಭವಿಸುವ ಕಷ್ಟಗಳನ್ನು ಚಿತ್ರಿಸಿದ್ದಾರೆ. ಎಲ್ಲ ಸನ್ನಿವೇಶಗಳನ್ನು ಅತ್ಯಂತ ಧೈರ್ಯದಿಂದ ಎದುರಿಸುತ್ತಾ ಬರುವ ಪುಟ್ಟಕ್ಕ, ಅಂತಿಮವಾಗಿ ಆಕೆ ಹಾಗೂ ಇಡೀ ಊರು ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ.


೧. ಸಮಕಾಲೀನ ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳು

ಪುಟ್ಟಕ್ಕನ ಹೈವೆ ಚಲನಚಿತ್ರವನ್ನು ಅಧ್ಯಯನಕ್ಕೆ ಒಳಪಡಿಸಿರುವ ಮೂಲ ಉದ್ದೇಶಮೂಲ ಕಥೆಯೊಂದು ಸಮಕಾಲಿನ ಸಮಸ್ಯೆಗಳೊಂದಿಗೆ ಹೋಲಿಕೆ ಮಾಡಿ ನೋಡಿರುವ ನೋಟದಿಂದ. ಅದನ್ನು ಸೃಜನಶೀಲ ನಿದೇರ್ಶಕ ಬಿ ಸುರೇಶ್ ಕ್ರಿಯಾಶೀಲವಾಗಿ ಚಿತ್ರಿಸಿದ್ದಾರೆ.


ಈ ಚಲನಚಿತ್ರದಲ್ಲಿ ಸಮಕಾಲೀನ ಆರ್ಥಿಕ ಸಮಸ್ಯೆಯನ್ನು ಗುರುತಿಸುವುದಾದರೆ, ಹಳ್ಳಿಯ ತೀರಾ ಬಡ ಕುಟುಂಬಗಳ ಸಂವೇದನೆಯನ್ನು ಚಿತ್ರಿಸಲಾಗಿದೆ. ಚಲನಚಿತ್ರದಲ್ಲಿ ಪಿಂಚಾಲಯ್ಯ ಎಂಬ ರೈತ ಗೇಣಿಗೆ ಭೂಮಿಯನ್ನು ಪಡೆದುಕೊಂಡು ಕೃಷಿಯನ್ನು ಮಾಡಿ, ಜೀವನ ಸಾಗಿಸುತ್ತಿರುತ್ತಾನೆ. ಆದರೆ ಆತ ಗೇಣಿ ಪಡೆದುಕೊಂಡ ಭೂಮಿಯನ್ನು ಕೂಡ ಹೈವೆ ನಿರ್ಮಾಣಕ್ಕೆ ಬಳಸಿಕೊಂಡು ಕೊನೆಗೆ ಆತ ಅದೇ ಹೈವೆ ಕೆಲಸವನ್ನು ಅವಲಂಬನೆ ಮಾಡಿಕೊಳ್ಳುವ ಪರಿಯನ್ನು ನಿರ್ದೇಶಕರು ಬಹುಮುಖ್ಯವಾಗಿ ಚಿತ್ರಿಸಿದ್ದಾರೆ.


ಒಂದು ಸಮಾಜದಲ್ಲಿ ಕೃಷಿ ಭೂಮಿಯನ್ನು ಕಳೆದುಕೊಂಡು ಭೂಮಿಗಾಗಿ ಕಾನೂನಾತ್ಮಕವಾಗಿ ಹೋರಾಡಲು ಪರಿತಪಿಸುವ ಹೆಣ್ಣನ್ನು ಸಮಾಜನೋಡುವಪರಿ ಬಹಳ ನಿಕೃಷ್ಟವಾಗಿ ಚಿತ್ರಿಸಲಾಗಿದೆ. ಆಕೆಯನ್ನು ಕೇವಲ ಗಂಡಿನ ಆಸೆಯನ್ನು ಪೂರೈಸುವ ಒಂದು ಗೊಂಬೆಯಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ಶ್ರೀಮಂತರಿಗಾಗಿ ಸರ್ಕಾರ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳುತ್ತದೆಎಂಬುದನ್ನು ನಿಕಟಪೂರ್ವಕವಾಗಿ ಚಿತ್ರಿಸಿದ್ದಾರೆ. ಹೈವೆ ನಿರ್ಮಾಣದಲ್ಲಿ ಶ್ರೀಮಂತರ ಭೂಮಿಯನ್ನು ಬಿಟ್ಟು ಕೇವಲ ಸಣ್ಣ ಕೃಷಿಕರ ಭೂಮಿಯನ್ನು ವಶಪಡಿಸಿಕೊಂಡು ಅಲ್ಲಿ ಹೈವೆ ನಿರ್ಮಾಣ ಮಾಡುವ ಪರಿಯನ್ನು ತಿಳಿಸಿದ್ದಾರೆ.


ಹೆಣ್ಣಿಗೆ ಗಂಡಿನ ಆಶ್ರಯ ಬೇಕೆ ಬೇಕು ಎಂದು ಕೇವಲ ಗಂಡಿನ ಆಸೆಯನ್ನು ತೀರಿಸಿಕೊಳ್ಳಲು ಹೆಣ್ಣಿನ ಹಿಂದೆ ಅಲೆದಾಡುವ ಪಾತ್ರವನ್ನು ಸೃಷ್ಟಿಸಿದ್ದಾರೆ. ಆದರೂ ಕೂಡ ಒಂದು ಹೆಣ್ಣಿಗೆ ಗಂಡಿನ ಹಂಗಿಲ್ಲದೆ ಸಮಾಜದಲ್ಲಿ ವಾಸಿಸಬಲ್ಲಳು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಳು ಎಂಬುದನ್ನು ಬಹುಮುಖ್ಯವಾಗಿ ಚಿತ್ರಿಸಿದ್ದಾರೆ.


ಹೈವೆ ಪಕ್ಕದ ಹಳ್ಳಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪುಟ್ಟಕ್ಕನ ಮಗಳು ವೇಶ್ಯಾವಾಟಿಕೆಗೆ ಬದಲಾದ ಪರಿಯಂತೂ ನೈಜತೆಯ ಪಕ್ವತೆಯನ್ನು ಕಾಣುವಂತೆ ಚಿತ್ರದಲ್ಲಿ ಬಿತ್ತರಿಸಲಾಗಿದೆ. ಇದು ನೇರವಾಗಿ ಸಮಾಜದಲ್ಲಿ ವಾಸಿಸುವ ಒಂದು ಹೆಣ್ಣು ವೇಶ್ಯಾವಾಟಿಕೆಗೆ ಯಾವೆಲ್ಲಾ ಕಾರಣಕ್ಕೆ ಇಳಿಯುತ್ತಾಳೆ ಎಂಬುದನ್ನು ಚಿತ್ರಿಸಲಾಗಿದೆ.


ಹಾಗೆಯೇ ಹೈವೆ ನಿರ್ಮಾಣದ ಪೂರ್ವದಲ್ಲಿ ಶನಿ ಕಥೆಯನ್ನು ಕೇಳುತ್ತಾ ಇದ್ದ ಹಳ್ಳಿಗರು, ಹೈವೆ ನಿರ್ಮಾಣದ ನಂತರ ಶನಿ ಕಥೆ ಹೇಳುವ ವ್ಯಕ್ತಿ ಅದೇ ಹೈವೆ ಕೆಲಸವನ್ನು ಮಾಡುವುದು, ಒಂದು ಕಡೆ ಜಾನಪದಕ್ಕೂ ಕೂಡ ಹೈವೆ ಎಂಬ ಅಭಿವೃದ್ಧಿಯ ಕಲ್ಪನೆ ಪ್ರಭಾವ ಬೀರಿದೆ ಎಂಬುದನ್ನು ಚಿತ್ರಿಸಲಾಗಿದ್ದು, ಸಂಸ್ಕೃತಿಯ ಮೇಲೆ ನೇರವಾಗಿ ಪರಿಣಾಮ ಬೀರಬಲ್ಲ ಅಂಶವಾಗಿ ನೋಡಬಹುದಾಗಿದೆ.


೨. ಚಲನಚಿತ್ರದಲ್ಲಿ ಅಭಿವೃದ್ಧಿಯ ಸಂದೇಶ

ಚಲನಚಿತ್ರ ನೇರವಾಗಿ ಪುಟ್ಟಕ್ಕ ಎಂಬ ಪಾತ್ರದ ಅಥವಾ ಒಬ್ಬ ಸಾಮಾನ್ಯ ಮಹಿಳೆಯೊಬ್ಬಳು ಅಭಿವೃದ್ಧಿಯ ಪ್ರಭಾವಕ್ಕೆ ಪರಿತಪಿಸುವ ಬಗೆಯನ್ನು ಚಿತ್ರಿಸಿದೆ. ಆದರೂ ಹೈವೆ ನಿರ್ಮಾಣ ಎಂಬ ಅಭಿವೃದ್ಧಿಯ ಸಂದೇಶವನ್ನು ಇಟ್ಟುಕೊಂಡು. ಕೃಷಿಯನ್ನು ನಂಬಿಕೊAಡಿದ್ದ ಹಲವಾರು ಕುಟುಂಬಗಳಿಗೆ ಪರ್ಯಾಯ ಮಾರ್ಗವಾಗಿ ಸರ್ಕಾರ ಪರಿಹಾರ ನೀಡಿ, ಬೇರೆ ಭೂಮಿಯನ್ನು ನೀಡಿ ಅಲ್ಲಿ ಕೃಷಿ ಚಟುವಟಿಕೆಯಲ್ಲಿ ಕೈಗೊಳ್ಳುವ ಅಂಶಗಳನ್ನು ಬಿತ್ತರಿಸಿದ್ದಾರೆ.


ಹೈವೆ ನಿರ್ಮಾಣ ಎಂಬ ಅಭಿವೃದ್ಧಿ ಸಂದೇಶವನ್ನು ಇಟ್ಟುಕೊಂಡು, ಅಭಿವೃದ್ಧಿ ಸಾಧಿಸಲು ಸಾಮಾನ್ಯ ಜನರ ಮೇಲೆ ಯಾವ ರೀತಿಯಾಗಿ ಪ್ರಭಾವ ಬೀರುತ್ತದೆ ಎಂಬುದು ಬಹುಮುಖ್ಯವಾಗಿದೆ.ಅಭಿವೃದ್ಧಿ ಎಂದರೆ ಕೇವಲ ಭೌದ್ಧಿಕ ವಿಷಯವೆಂದು ಭಾವಿಸಲಾಗುತ್ತದೆ, ಆದರೆ ಅಭಿವೃದ್ಧಿಯು ವ್ಯಕ್ತಿಯ ಸರ್ವೋತೋಮುಖ ಬೆಳವಣಿಗೆಯು ಕೂಡ ಇಲ್ಲಿ ಮುಖ್ಯವಾಗಬೇಕು. ಮುಂದುವರಿಯುತ್ತಿರುವ ರಾಷ್ಟçಗಳಲ್ಲಿ ಅಭಿವೃದ್ಧಿಯಿಂದ ಗ್ರಾಮೀಣ ಪ್ರದೇಶದ ಜನರ ಬದುಕು ಬಲಿಯಾಗುವ ಪರಿಯನ್ನು ಕೂಡ ಚಲನಚಿತ್ರದಲ್ಲಿ ತಿಳಿಸಲಾಗಿದೆ.


ಅಭಿವೃದ್ಧಿ ಎನ್ನುವ ಸಂದೇಶವನ್ನು ಇಟ್ಟುಕೊಂಡು ನಿರ್ದೇಶಕರು ಬಹು ಆಯಾಮಗಳನ್ನು ಋಣಾತ್ಮಕವಾಗಿ ಚಿತ್ರಿಸಿದ್ದಾರೆ. ಅಭಿವೃದ್ಧಿ ಎಂದರೆ ಅದು ಸಾಮಾನ್ಯ ಜನರ ನರಳಾಟ ಗೋಳಾಟ ಎನ್ನುವ ರೀತಿಯಲ್ಲಿ ತೋರಿಸಲಾಗಿದೆ. ಅಭಿವೃದ್ಧಿಯ ಮೂಲ ಸಂದೇಶವನ್ನು ಇಟ್ಟುಕೊಂಡು ಗ್ರಾಮೀಣ ಪ್ರದೇಶದ ಜನರು ಕೃಷಿ ಭೂಮಿಯನ್ನು ವಾಣಿಜ್ಯೀಕರಿಸಿ ಮತ್ತು ಲಾಭಕ್ಕಾಗಿ ರೈತರೇ ಕೃಷಿಯನ್ನು ಬಿಟ್ಟು ಬೇರೆ ಕೆಲಸಗಳಿಗೆ ತೆರಳುವ ಪರಿಯನ್ನು ತಿಳಿಸುತ್ತಾರೆ.ಮುಖ್ಯವಾಗಿ ಗ್ರಾಮೀಣ ಸೊಗಡು ವಿನಾಶದತ್ತ ಸಾಗುತ್ತದೆ. ಗ್ರಾಮಗಳಲ್ಲಿ ವಾಸಿಸುವ ಜನರು ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎನ್ನುವುದು ಕೆಲವರ ವಾದವಾದರೆ, ಅಲ್ಲಿ ವಾಸಿಸುವ ಜನರಿಗೆ ಇಡಿ ಜೀವನವೇ ನಾಶವಾದಂತೆ. ಆರ್ಥಿಕ ಮೂಲವಾದ ಆಸ್ತಿಗಳು ನಾಶವಾದರೆ ಅವರ ಮೂಲ ಸೌಕರ್ಯಗಳಿಂದ ವಂಚಿತರಾದAತೆ ಭಾವಿಸುತ್ತಾರೆ. ಆ ಮಟ್ಟಕ್ಕೆ ಫಲ ನೀಡುವ ಭೂಮಿ ಮತ್ತು ಆ ಜನರು ಪೂರಕವಾಗಿ ಹೊಂದಿಕೊAಡಿರುತ್ತಾರೆ. ಇಂತಹ ಅಭಿವೃದ್ಧಿ ಯೋಜನೆಗಳಿಂದ ಕೃಷಿ ಭೂಮಿಯನ್ನು ರೈತರಿಂದ ಬೇರ್ಪಡಿಸುವಂತಹ ಕಾರ್ಯಗಳು ಆಗುತ್ತಿವೆ.


೩. ಚಲನಚಿತ್ರದ ಮೇಲೆ ಪ್ರಭಾವ ಬೀರಿದ ಅಂಶಗಳು

ಸಿನಿಮಾದ ಮೇಲೆ ನೇರವಾಗಿ ಪ್ರಭಾವ ಬೀರಿದ ಅಂಶವೆAದರೆ ಅಭಿವೃದ್ಧಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು. ಒಂಟಿ ಹೆಣ್ಣನ್ನು ಸಮಾಜ ನೋಡುವ ದೃಷ್ಟಿಕೋನ, ಪುರುಷ ಸಮಾನವಾಗಿ ದುಡಿವ ಮಹಿಳೆ, ರಾಜಕೀಯ, ರಾಜಕಾರಣಿಗಳು, ಉಳ್ಳವರ ತಿಕ್ಕಾಟದಿಂದ ಸಾಮಾನ್ಯ ಜನರ ಮೇಲೆ ಬೀಳುವ ಪ್ರಭಾವ, ಆಧುನೀಕರಣಕ್ಕೆ ಸಿಲುಕಿ ಗ್ರಾಮೀಣ ಸೊಗಡನ್ನು ಕಳೆದುಕೊಳ್ಳುವ ಹಳ್ಳಿಗಳು ಒಂದು ಕಡೆ ಋಣಾತ್ಮಕ ಅಂಶಗಳಾದರೆ. ಆ ಅಭಿವೃದ್ಧಿಯಿಂದಾಗಿ ಹೈವೆ ಪಕ್ಕದ ಜನರು ಭೂಮಿಯನ್ನು ವಾಣಿಜ್ಯೀಕರಿಸಿ ಹೋಟೆಲ್‌ಗಳ ನಿರ್ಮಾಣ, ಅಂಗಡಿಗಳ ನಿರ್ಮಾಣ ಮಾಡಿಕೊಂಡು. ವ್ಯಾಪಾರ ವಹಿವಾಟು ಚಟುವಟಿಕೆಯನ್ನು ಅವಲಂಬಿಸುವುದು ಈ ತೊಳಲಾಟ ಚಿತ್ರಕಥೆಗೆ ಸ್ಪೂರ್ತಿಯಾಗಿದೆ. ಹಾಗೆಯೇ ಚಿತ್ರದಲ್ಲಿ ತಿಳಿಸಿದ ಹಾಗೆ ರಸ್ತೆಯಿಂದಾಗಿ ವೇಗವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವ ಪ್ರಯಾಣಿಕರು. ಜೊತೆಗೆ ಹೈವೆ ನಿರ್ಮಾಣ ಕೆಲಸದಲ್ಲಿ ಉದ್ಯೋಗ ಅವಕಾಶಗಳು. ಇವೆಲ್ಲಾ ಅಂಶಗಳು ಕೂಡಾ ಧನಾತ್ಮಕವಾಗಿ ಚಲನಚಿತ್ರದ ಮೇಲೆ ಪ್ರಭಾವ ಭೀರಿದ ಅಂಶಗಳಾದರೂ ಸಹಾ, ಈ ಅಂಶಗಳ ಹಿನ್ನೆಲೆ ಋಣಾತ್ಮಕತೆಯಾಗಿ ಚಿತ್ರಿಸಿದ್ದಾರೆ ನಿರ್ದೇಶಕರು.


ಉಪಸಂಹಾರ

ಪುಟ್ಟಕ್ಕನ ಹೈವೆ ಚಲನಚಿತ್ರದಲ್ಲಿ ಒಂದು ಹೆಣ್ಣಿನ ತಾಳ್ಮೆ, ಸಹನೆ ಪಾಲನೆ-ಪೋಷಣೆ, ಕರುಣೆ, ಅರ್ಪಣೆ, ಕ್ಷಮೆ ಸಂವೇದನೆಗಳ ಪ್ರತಿಬಿಂಬವಾಗಿ ಚಿತ್ರಿಸಲಾಗಿದೆ. ಚಲನಚಿತ್ರದಲ್ಲಿ ಚಿತ್ರಿಸಿರುವಂತೆ ಅಭಿವೃದ್ಧಿಯ ಎರಡು ಮುಖಗಳನ್ನು ಬಿತ್ತರಿಸಿದ್ದಾರೆ. ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಜನರ ಆಕ್ರಂದನದ ಕಥೆಯನ್ನು ಈ ಚಿತ್ರ ಸಾರಿದೆ. ಅಂತೆಯೇ ಅಭಿವೃದ್ಧಿಯ ನಂತರದಲ್ಲಿ ಯೋಜನೆಗಳೇ ಸಾವಿರಾರು ಜನರು ಅದರಿಂದ ಜೀವನ ನಡೆಸುವ ಪರಿಕಲ್ಪನೆ ಸಾಮಾನ್ಯವಾಗಿದೆ. ಈ ರೀತಿಯಾದಂತಹ ರೈತರ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿಯನ್ನು ಸಾಧಿಸುವ ಸರ್ಕಾರಗಳು ಒಂದು ಕಡೆಯಾದರೆ ಹೈವೆ ಪಕ್ಕದ ಜನರೂ ಕೂಡ ತಮ್ಮ ಭೂಮಿಯನ್ನು ಹೋಟೆಲ್ ನಿರ್ಮಿಸಲೋ ಅಥವಾ ಇನ್ನಾವುದೋ ಕಾರಣಕ್ಕೆ ವಾಣಿಜ್ಯೀಕರಿಸುವುದು ನೇರವಾಗಿ ಕೃಷಿ ಚಟುವಟಿಕೆಗಳಿಗೆ ಅತೀವವಾಗಿ ಪೆಟ್ಟು ಬೀಳುತ್ತಿದೆ. ಹೀಗೆ ಹೆಣ್ಣು-ಮಣ್ಣುಗಳೆರಡೂ ಏಕಕಾಲಕ್ಕೆ ಆಧುನಿಕ ರೋಡ್ ರೋಲರ್‌ಗಳ ಹಲ್ಲುಗಳಿಗೆ ಸಿಕ್ಕು ನಾಶವಾಗುವ ಪ್ರಕ್ರಿಯೆಯಿದೆಯಲ್ಲ ಇದು ಅಭಿವೃದ್ಧಿ ಮತ್ತು ಪ್ರಗತಿಗಳ ಹೆಸರಿನಲ್ಲಿ ಗ್ರಾಮಿಣ ಬದುಕನ್ನು ಛಿದ್ರಗೊಳಿಸುವ ಯಂತ್ರರಾಕ್ಷಸನ ಅಪಾಯದ ಸಂಕೇತವಾಗಿ ನಮ್ಮನ್ನು ತಟ್ಟುತ್ತದೆ.


ಪುಟ್ಟಕ್ಕನ ಹೈವೆಯಂತಹಾ ಸಿನಿಮಾಗಳು ಅಂದಿನ ಕಾಲಘಟ್ಟಕ್ಕೆ ತಕ್ಕಂತಹಾ ಅಭಿವೃದ್ಧಿಯ ಎರಡೂ ದೃಷ್ಟಿಕೋನಗಳನ್ನು ಇಟ್ಟುಕೊಂಡು ಚಿತ್ರವನ್ನು ತಯಾರಿಸಿ ಸರ್ಕಾರ ಮತ್ತು ಜನರನ್ನು ಎಚ್ಚರಿಸುವ ಕೆಲಸಗಳು ಆಗಿವೆ, ಅಂತೆಯೇ ಆಗುತ್ತಿವೆ. ಇದಕ್ಕೆ ಪೂರಕವಾಗಿ ಚಿಲ್ಲರೆ ಉದ್ಯಮದ ಮೇಲೆ ವಿದೇಶಿ ನೇರ ಹೂಡಿಕೆ ಬೀರಿದ ಪ್ರಭಾವವನ್ನು ಚಿತ್ರಿಸುವ ೨೦೧೩ರಲ್ಲಿ ತೆರೆ ಕಂಡ ಭಾರತ್ ಸ್ಟೊರ‍್ಸ್ ಕೂಡ ಸೇರುತ್ತದೆ. ಆದರೆ ಇಂತಹಾ ಸಿನಿಮಾಗಳ ಮೇಲಿನ ಸಂಶೋಧನೆಗಳು ಕೂಡ ಪೂರಕವಾಗಿ ಅಂದಿನ ಕಾಲಘಟ್ಟಕ್ಕೆ ನಡೆದರೆ ಇನ್ನಷ್ಟು ಚಲನಚಿತ್ರಗಳಿಗೆ ಮತ್ತು ಸಾಮಾಜಿಕ ಚಿಂತನೆಗಳಿಗೆ ಪುಷ್ಟಿಕೊಡುವಂತಾಗುತ್ತದೆ.



ಪರಾಮರ್ಶನ


ಸುಬ್ಬಣ್ಣ, ಕೆ.ವಿ. (೧೯೮೩). ಅಭಿವೃದ್ಧಿಗಾಗಿ ಸಿನೆಮಾ, ಸಾಗರ: ಅಕ್ಷರ ಪ್ರಕಾಶನ.

ಸುರೇಶ್, ಬಿ. (೨೦೧೫). ಪುಟ್ಟಕ್ಕನ ಹೈವೇ, ಮಣಿಪಾಲ: ಮಣಿಪಾಲ ಯುನಿರ್ವಸಿಟಿ ಪ್ರೆಸ್.

ಮಹೇಶ್ ಚಂದ್ರ ಗುರು, ಬಿ. ಪಿ. (೨೦೧೪). ಅಭಿವೃದ್ಧಿ ಸಂವಹನ ಮತ್ತು ಪತ್ರಿಕೋದ್ಯಮ, ಬೆಂಗಳೂರು: ಕರ್ನಾಟಕ ಮಾಧ್ಯ್ಯಮ ಅಕಾಡೆಮಿ.

ಕಾಕಡೆ, ಓ. & ಪಾಷ, ಎ. ಆರ್. (೨೦೧೭). ಅಭಿವೃದ್ಧಿ ಪತ್ರಿಕೋದ್ಯಮ, ಹಂಪಿ: ದೂರ ಶಿಕ್ಷಣ ನಿರ್ದೇಶನಾಲಯ.

ರಾಮಚಂದ್ರಪ್ಪ, ಬಿ, (೨೦೦೪). ಸಿನಿಮಾ ಒಂದು ಜನಪದ ಕಲೆ, ಬೆಂಗಳೂರು: ಜೈ ಪ್ರಿಂರ‍್ಸ್.

Grubba, L. S. & Meridional, F. (2020). Cinema, Human Rights And Development: The Cinema As A Pedagogical Practice. CINEJ Cinema Journal, 8(1). 88-123.

Hopkinson, P. (1971). The Role of Film in Development. Paris: United Educational, Scientific and Cultural Organization, 17(64).

Miller, J. (2006). Soviet Cinema, 1929-41: The Development of Industry and Infrastructure. Europe-Asia Studies, 58(1), 103–124. http://www.jstor.org/stable/20451166

Benagr, S. (2012). Cinema and New Technologies: The development of digital video filmmaking in West Africa. Luton: University of Bedfordshire.https://uobrep.openrepository.com/browse?value=University+of+Bedfordshire&type=publisher





Comments


bottom of page